ಬೆಂಗಳೂರು; ಕುಡಿದ ಮತ್ತಿನಲ್ಲಿ ಹಾಕಿ ಸ್ಟಿಕ್ ಹಿಡಿದು ಎರಗಿದ ಪುಂಡರು!

Aug 29, 2021, 5:51 PM IST

ಬೆಂಗಳೂರು(ಆ. 29)  ಪುಂಡರ ಹುಚ್ಚಾಟಕ್ಕೆ ಬೆಂಗಳೂರಿನ ಜನ ಬೆಚ್ಚಿ ಬಿದ್ದಿದ್ದಾರೆ. ಪುಂಡರು ಯುವಕರ ಮೇಲೆ ಸಿನಿಮಾ ಶೈಲಿಯಲ್ಲಿ ದಾಳಿ ಮಾಡಿದ್ದಾರೆ.   ಹಾಕಿ ಸ್ಟಿಕ್ ಗಳನ್ನು ಬಳಸಿ ಯುವಕರನ್ನು ಥಳಿಸಲಾಗಿದೆ.

ಬಸ್ ಟಿಕೆಟ್ ಕೊಟ್ಟ ಸುಳಿವು... ರೇಪಿಸ್ಟ್ ಗಳ ಸೆರೆಹಿಡಿದ ಕಾರ್ಯಾಚರಣೆ ಹೇಗಿತ್ತು? 

ಬೆಂಗಳೂರಿನ ಅಮೃತ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ  ಬೀಸಿದ್ದಾರೆ.  ಕುಡಿದ ಮತ್ತಿನಲ್ಲಿ ಯುವಕರ ಮೇಲೆ ಏಕಾಏಕಿ ದಾಳಿ ಮಾಡಿದ್ದಾರೆ. ಕೊರೋನಾ ಆತಂಕದ ನಡುವೆಯೂ ಇಂಥ ಪ್ರಕರಣಗಳು ಏರಿಕೆಯಾಗುತ್ತಿವೆ.