May 26, 2023, 12:58 PM IST
ಬೆಳಗಾವಿ: ಆತ ಇನ್ನೂ 24 ವರ್ಷದ ಯುವಕ, ಐಟಿಐ ಮುಗಿಸಿ ಕೆಲಸಕ್ಕೆ ಹೋಗ್ತಿದ್ದ. ಬೆಳಗ್ಗೆ ಮನೆಯಿಂದ ಹೊರಟರೆ ರಾತ್ರಿ ವಾಪಸ್ ಆಗುತ್ತಿದ್ದ. ಆದ್ರೆ ಆವತ್ತು ಆತ ರಾತ್ರಿ ಎಷ್ಟೇ ಹೊತ್ತಾದ್ರೂ ಮನೆಗೆ ವಾಪಸ್ ಆಗೇ ಇರಲಿಲ್ಲ. ಎಲ್ಲೋ ಫ್ರೆಂಡ್ಸ್ ಜೊತೆ ಹೋಗಿರಬೇಕು ಅಂತ ಮನೆಯವರು ನಿದ್ರೆಗೆ ಜಾರಿಬಿಟ್ಟಿದ್ರು. ಆದ್ರೆ ಬೆಳಗಾಗ್ತಿದ್ದಂತೆ ಒಂದು ಶಾಕಿಂಗ್ ನ್ಯೂಸ್ ಸಿಕ್ಕಿತ್ತು. ಕೆಲಸಕ್ಕೆ ಅಂತ ಹೋದವನು ಅದೇ ಗ್ರಾಮದ ಶಾಲೆಯ ಬಾಗಿಲ ಮುಂದೆ ಹೆಣವಾಗಿ ಬಿದ್ದಿದ್ದ. ಇನ್ನೂ ಇದೇ ಕೊಲೆಯ ಬೆನ್ನು ಬಿದ್ದ ಪೊಲೀಸರಿಗೆ ಆರಂಭದಲ್ಲಿ ಸರಿಯಾದ ಕ್ಲೂಗಳು ಸಿಕ್ಕಿರಲಿಲ್ಲ. ಆದ್ರೆ ನಂತರ ಇದೇ ಗ್ರಾಮದಲ್ಲಿ ಮೂರು ದಿನಗಳ ಹಿಂದೆ ನಡೆದ ಘಟನೆ ಗೊತ್ತಾದ ಮೇಲೆ ತಡಮಾಡದೇ ಪೊಲೀಸರು ಹಂತಕರ ಎದುರು ನಿಂತಿದ್ರು. ರಾತ್ರಿ 8 ಗಂಟೆಗೆ ಫೋನ್ ರಿಸೀವ್ ಮಾಡಿ ಮಾತನ್ನಾಡಿದವನು ಬೆಳಗ್ಗೆಯಾಗುವಷ್ಟರಲ್ಲಿ ಮಹಾಂತೇಶ ಕೊಲೆಯಾಗಿದ್ದಾನೆ. 18 ವರ್ಷದ ಹಿಂದೆ ತಂದೆಯನ್ನ ಕೊಂದವರು ಇವತ್ತು ಮಹಾಂತೇಶನ ಕಥೆ ಮುಗಿಸಿದ್ದಾರೆ ಅಂತ ಆ ಮನೆಯವರು ಆರೋಪಿಸಿದ್ದಾರೆ. ಸದ್ಯ ಧಮ್ಕಿ ಹಾಕಿದ ಎಂಬ ಒಂದೇ ಒಂದು ಕಾರಣಕ್ಕೆ ಮಹಾಂತೇಶನನ್ನು ಬರ್ಬರ ಹತ್ಯೆ ಮಾಡಿದ ರಾಜೇಸಾಬ್, ಅಕ್ಷಯಕುಮಾರ್ ಜೈಲು ಪಾಲಾಗಿದ್ದಾರೆ.
ಇದನ್ನೂ ವೀಕ್ಷಿಸಿ: ಡಿಕೆಶಿ Vs ಎಂ.ಬಿ ಪಾಟೀಲ್ ಜಿದ್ದಾಜಿದ್ದಿ ಶುರುವಾಗಿದ್ದು ಎಲ್ಲಿ ಗೊತ್ತಾ ?: ಮದಗಜ ಘರ್ಷಣೆ ಹಿಂದಿರೋ ಅಸಲಿ ಗುಟ್ಟೇನು ?