ದಾರಿ ತಪ್ಪಿದ ಹೆಂಡತಿ ಮಾಡಿದ್ದೇನು..!ಮಗನ ಸಾವಿಗೆ ರಸ್ತೆಯಲ್ಲಿ ನಿಂತು ನ್ಯಾಯ ಕೇಳುತ್ತಿರುವ ತಾಯಿ..!

ದಾರಿ ತಪ್ಪಿದ ಹೆಂಡತಿ ಮಾಡಿದ್ದೇನು..!ಮಗನ ಸಾವಿಗೆ ರಸ್ತೆಯಲ್ಲಿ ನಿಂತು ನ್ಯಾಯ ಕೇಳುತ್ತಿರುವ ತಾಯಿ..!

Published : Mar 28, 2024, 05:41 PM ISTUpdated : Mar 28, 2024, 05:42 PM IST

ಹೆಂಡತಿಯ ಕಾಟ ತಾಳಲಾರದೇ ಗಂಡ ಆತ್ಮಹತ್ಯೆ..!
ಸಾಯುವ ಮೊದಲು ಹೆಂಡತಿ ಹೆಸರು ಬರೆದಿಟ್ಟಿದ್ದ..!
ಗೋಡೆಯ ಮೇಲೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ!

ಆತ ಪ್ರತಿಷ್ಠಿತ ಕಂಪನಿಯಲ್ಲಿ ಟೆಕ್ಕಿಯಾಗಿದ್ದ. ಕೈ ತುಂಬ ಸಂಬಳ ಕೂಡ ಇತ್ತು. 8 ವರ್ಷದ ಹಿಂದೆ ಹೆತ್ತವರು ತೋರಿಸಿದ ಹುಡುಗಿಯನ್ನ ಮದುವೆಯಾಗಿದ್ದ. ಇಬ್ಬರು ಮಕ್ಕಳೂ ಕೂಡ ಆದ್ವು. ಆದ್ರೆ ಮಕ್ಕಳಾದ ಬಳಿಕ ವೈವಾಹಿಕ ಜೀವನ ಹಳಿ ತಪ್ಪಿತ್ತು. ಮನೆಯಲ್ಲಿ ಪ್ರತೀ ನಿತ್ಯ ಜಗಳ. ಒಂದು ತಿಂಗಳ ಹಿಂದಷ್ಟೇ ಹೆಂಡತಿ ಮನೆಯನ್ನೂ ಬಿಟ್ಟು ಹೋಗಿದ್ಲು. ಆದ್ರೆ ಹೆಂಡತಿ (Wife) ಹೋದ ಒಂದು ತಿಂಗಳಿಗೆ ಗಂಡ ನೇಣು ಬಿಗಿದುಕೊಂಡಿದ್ದ. ಹೆತ್ತ ಕರಳು ಎಷ್ಟೇ ಕರೆ ಮಾಡಿದ್ರು ಮಗ ಕರೆ ಸ್ವೀಕರಿಸಿರ್ಲಿಲ್ಲ. ಏನಾಗಿದೆ ಅಂತಾ ಆತನ ಮನೆಗೆ ಹೋಗಿ ನೋಡಿದ್ರೆ ಆತ ನೇಣಿಗೆ(Suicide) ಕೊರಳೊಡಿದ್ದ. ಸಯೈದ್ ಅಕ್ಮಲ್ ಸಾಯೋದಕ್ಕೂ ಮೊದಲು ಗೋಡೆಯ ಮೇಲೆ ತನ್ನ ಹೆಂಡತಿ ಮತ್ತು ಆಕೆಯ ಫ್ಯಾಮಿಲಿಯ ಹೆಸರು ಬರೆದಿದ್ದ. ಅರೆಂಜ್ ಮ್ಯಾರೇಜ್ ಆಗಿದ್ದ ಅಕ್ಮಲ್ ಮತ್ತು ಕುಬ್ರಾ ಇಬ್ಬರೂ ಚೆನ್ನಾಗೇ ಜೀವನ ಮಾಡ್ತಿರುತ್ತಾರೆ. ಇಬ್ಬರು ಮಕ್ಕಳು ಕೂಡ ಆಗುತ್ವೆ, ಆದ್ರೆ ಮಕ್ಕಳಾದಮೇಲೆ, ಕುಬ್ರಾ ಮತ್ತು ಅಕ್ಮಲ್ ನಡುವಿನ ಜಗಳ ಹೆಚ್ಚಾಗುತ್ತೆ. ಅಕ್ಮಲ್ ಹೆಂಡತಿ ಬೇರೊಬ್ಬನ ಸಹವಾಸ ಮಾಡ್ತಿದ್ದಾಳೆ ಅನ್ನೋದನ್ನ ಕಂಡುಹಿಡಿದು ಬಿಟ್ಟಿರುತ್ತಾನೆ. ಇದೇ ವಿಷಯಕ್ಕೆ ಮತ್ತೆ ಜಗಳಗಳಾಗುತ್ತಲೇ ಇರುತ್ತವೆ. ಇನ್ನೂ ಕುಬ್ರಾಗೆ ಆಕೆಯ ತವರು ಮನೆಯವರೂ ಸಪೋರ್ಟ್ ಮಾಡುತ್ತಿರುತ್ತಾರೆ. ಗಂಡ(Husband) ಹೆಂಡತಿ ಜಗಳ ಪೊಲೀಸ್ ಠಾಣೆ ಮೆಟ್ಟಿಲು ಕೂಡ ಹತ್ತುತ್ತೆ. ಇಷ್ಟೆಲ್ಲಾ ಆದಮೇಲೆ ಒಂದುವರೆ ತಿಂಗಳ ಹಿಂದಷ್ಟೇ ಕುಬ್ರಾ ಗಂಡನನ್ನ ಬಿಟ್ಟು ತವರು ಮನೆ ಸೇರಿರುತ್ತಾಳೆ. ಸದ್ಯ ಮನೆ ಮಗನನ್ನ ಕಳೆದುಕೊಂಡ ಆ ತಾಯಿ ಮತ್ತು ತಮ್ಮ ಕಣ್ಣೀರು ಹಾಕುತ್ತಿದ್ದಾರೆ. ನಮಗೆ ನ್ಯಾಯ ಕೊಡಿಸಿ ಅಂತ ಅಂಗಲಾಚುತ್ತಿದ್ದಾರೆ.

ಇದನ್ನೂ ವೀಕ್ಷಿಸಿ: Loksabha Eection 2024: ಸುಡುವ ಕೆಂಡವಾದ ಕೋಲಾರ ಟಿಕೆಟ್ ಫೈಟ್! ಈ ಫೈಟ್‌ನಲ್ಲಿ ಗೆಲ್ಲೋರು ಯಾರು? ಹೈಕಮಾಂಡ್ ತೀರ್ಮಾನವೇನು ?

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
24:482.5 ಲಕ್ಷ ಸಂಬಳ, 1 ಕೋಟಿ ಸಾಲ: ಸುಳಿವೇ ಇಲ್ಲದ ಟೆಕ್ಕಿ ಮರ್ಡರ್​​ ಕೇಸ್ ಟ್ರೇಸ್​​ ಆಗಿದ್ದೇ ರೋಚಕ!
24:37ಚಿಕ್ಕೇಜಮಾನನ ಸಾವಿನ ಸುತ್ತ ಅನುಮಾನದ ಹುತ್ತ: ಲವರ್‌ಗಾಗಿ ಗಂಡನ ಕತೆ ಮುಗಿಸಿದ 2 ಮಕ್ಕಳ ತಾಯಿ
06:05ಟೆರೆರಿಸ್ಟ್, ರೇಪಿಸ್ಟ್, ರೌಡಿಗಳಿಗೆ ಜೈಲಲ್ಲಿ ರಾಜಾತಿಥ್ಯ, ದರ್ಶನ್‌ಗೆ ಮಾತ್ರ ಸಿಕ್ತಿಲ್ಲ ದಿಂಬು, ಹಾಸಿಗೆಯ ಭಾಗ್ಯ!
Read more