Social Media Fake News: 'ಯಾಕೆ  ಇಂಥ ಕೆಲಸ ಮಾಡ್ತಾರೆ' ಅವಿನಾಶ್ ಬೇಸರ

Jan 5, 2022, 6:27 PM IST

ಬೆಂಗಳೂರು(ಜ. 05)   ಈ ಸೋಶಿಯಲ್ ಮೀಡಿಯಾ (Social Media) ಬಹಳಷ್ಟು ಸಂದರ್ಭದಲ್ಲಿ ಸುಳ್ಳು ಸುದ್ದಿ (Fake News) ಮತ್ತು ವದಂತಿಗಳ ಹಂಚುವ  ಮಾಧ್ಯಮವಾಗುತ್ತಿರುವುದನ್ನು ಹಲವು ಸಂದರ್ಭ ನೋಡಿದ್ದೇವೆ. ಅದಕ್ಕೆ ಇನ್ನೊಂದು ಉದಾಹರಣೆ ಸೇರ್ಪಡೆಯಾಗಿದೆ.

Fact Check: ಸೀಕ್ರೆಟ್ ಆಗಿ ದಂಗಲ್‌ ಕೋಸ್ಟಾರ್‌ನ ಮದುವೆಯಾದ್ರಾ ಆಮೀರ್‌ ಖಾನ್‌?

ಕಿಡಿಗೇಡಿಗಳು (Sandalwood) ಹಿರಿಯ ನಟ ಅವಿನಾಶ್ (Avinash) ಇನ್ನಿಲ್ಲ ಎಂದು ಸುಳ್ಳು ಸುದ್ದಿ ಹಬ್ಬಿಸಿಬಿಟ್ಟಿದ್ದರು. ಈ ಬಗ್ಗೆ ಅವಿನಾಶ್ ಬೇಸರ ವ್ಯಕ್ತಪಡಿಸಿದ್ದಾರೆ. ನಾನು ಆರಾಮಾಗಿದ್ದಿನಿ ಬೆಳಿಗ್ಗೆ ವರ್ಕೌಟ್ ಮಾಡಿದ್ದೀನಿ. ಹಲವು ಸಿನಿಮಾಗಳಲ್ಲಿ‌ ನಟಿಸೋದಕ್ಕೆ‌ ಸಿದ್ಧತೆ ಮಾಡಿಕೊಂಡಿದ್ದೇನೆ ನನ್ನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ  ಸೈಬರ್ ಕ್ರೈಂ‌ಗೆ ದೂರು ಕೊಟ್ಟಿದ್ದೇನೆ. ಯಾರೆ ಆಗಲಿ ಒಬ್ಬ ವ್ಯಕ್ತಿ ಬದುಕಿರುವಾಗಲೇ ಇಂತಹ ಕೆಲಸ ಮಾಡಬೇಡಿ ಎಂದು ಕೇಳಿಕೊಂಡಿದ್ದಾರೆ.