Feb 9, 2023, 1:45 PM IST
ಅದೊಂದು ಸುಂದರ ಕುಟುಂಬ, ಅಪ್ಪ ಅಮ್ಮ ಮಗ ಸೊಸೆ. ಮಗನಿಗೆ ಮದುವೆಯಾಗಿ 8 ತಿಂಗಳಾಗಿತ್ತು ಅಷ್ಟೇ. ಕಾಸಿಗೇನೂ ಬರವಿರಲಿಲ್ಲ. ಈತನೇ ಎಷ್ಟೋ ಮಂದಿಗೆ ಸಾಲ ಕೊಟ್ಟಿದ್ದ. ಎಲ್ಲವೂ ಅಂದುಕೊಂಡಂತೆ ನಡೆಯುತ್ತಿತ್ತು. ಆದ್ರೆ ಅವತ್ತೊಂದು ದಿನ ಮಗ ಇದ್ದಕ್ಕಿದಂತೆ ನಾಪತ್ತೆಯಾಗಿಬಿಡ್ತಾನೆ. ಎಲ್ಲಿ ಹುಡುಕಿದ್ರೂ ಸಿಗಲ್ಲ. ಆದ್ರೆ ಯಾವಾಗ ಸಿಸಿ ಟಿವಿ ದೃಶ್ಯಗಳನ್ನ ನೋಡಿದ್ರೋ ಆತ ಕಿಡ್ನಾಪ್ ಆಗಿರೋದು ಕನ್ಫರ್ಮ್ ಆಗುತ್ತೆ. ಇನ್ನೂ ಕಿಡ್ನಾಪ್ ಮಾಡಿದವರೇನೂ ಬೇರೆಯವರಾಗಿರಲಿಲ್ಲ.. ಅವನನ್ನ ಅವನ ಸ್ನೇಹಿತರೇ ಎತ್ತಾಕೊಂಡು ಹೋಗಿದ್ರು. ಆದ್ರೆ ಯಾವಾಗ ರಾತ್ರಿ ಕಳೆದು ಬೆಳಗಾದ್ರೂ ಮನೆಮಗ ಬರಲಿಲ್ವೋ ಹೆತ್ತವರು ಪೊಲೀಸ್ ಕಂಪ್ಲೆಂಟ್ ಕೊಡ್ತಾರೆ. ಪೊಲೀಸರು ಫೀಲ್ಡ್ಗೆ ಇಳಿತಾರೆ.. ಕಿಡ್ನಾಪ್ ಆದ ಯುವಕನ ಬಗ್ಗೆ ಒಂದೊಂದೇ ಮಾಹಿತಿಗಳನ್ನ ಕಲೆ ಹಾಕ್ತಾರೆ. ಈ ಕುರಿತು ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.