Jul 11, 2023, 12:40 PM IST
ಮೈಸೂರು: ಟಿ. ನರಸೀಪುರದ (T Narasipur) ಯುವ ಬ್ರಿಗೇಡ್ ಕಾರ್ಯಕರ್ತ (Yuva Brigade Activist) ವೇಣುಗೋಪಾಲ್ ನಾಯಕ್ ಹತ್ಯೆಗೆ ಸಂಬಂಧಿಸಿದಂತೆ ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ( ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಣಿಕಂಠ, ಸಂದೇಶ್, ಅನಿಲ್, ಶಂಕರ್, ಮಂಜು, ಹ್ಯಾರಿಸ್ ಆರೋಪಿಗಳು ಎಂದು ಪರಿಗಣಿಸಲಾಗಿದೆ. ನಾನು ಬೆಂಗಳೂರಿಗೆ ಹೋಗುತ್ತಿರುವಾಗ ಈ ವಿಷಯದ ಬಗ್ಗೆ ನನಗೆ ಮಾಹಿತಿ ಸಿಕ್ಕಿತ್ತು. ಆತನೊಬ್ಬ ದಲಿತ(Dalit) ಕಾರ್ಯಕರ್ತನಾಗಿದ್ದು, ಆತನ ಸಾಮರ್ಥ್ಯದಿಂದ ತುಂಬಾ ಹೆಸರು ಮಾಡಿದ್ದ. ಆತ ಬೆಳೆದ ಎಂಬ ಕಾರಣಕ್ಕೆ ತುಂಬಾ ತೊಂದರೆ ಕೊಡಲು ಆರಂಭಿಸಿದ್ರು ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ. ಪುನೀತ್ ರಾಜ್‌ಕುಮಾರ್(Puneeth Rajkumar) ಫೋಟೋವೊಂದು ಈ ಕೊಲೆಗೆ ಕಾರಣನೇ ಅಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ವೀಕ್ಷಿಸಿ: ಬಸ್ ಡ್ರೈವರ್ ಆತ್ಮಹತ್ಯೆ ಪ್ರಕರಣ: ಕೆಎಸ್‌ಆರ್‌ಟಿಸಿ ಡಿಪೋ, ಕ್ರಿಮಿನಾಶಕ ಅಂಗಡಿಗೆ ಸಿಐಡಿ ತಂಡ ಭೇಟಿ