Murder news: ಅದು ಹಿಂದೂ-ಮುಸ್ಲಿಂ ಲವ್ ಸ್ಟೋರಿ..! ತಂಗಿಯ ಪ್ರೀತಿಗೆ ಅಣ್ಣನೇ ವಿಲನ್..!

Murder news: ಅದು ಹಿಂದೂ-ಮುಸ್ಲಿಂ ಲವ್ ಸ್ಟೋರಿ..! ತಂಗಿಯ ಪ್ರೀತಿಗೆ ಅಣ್ಣನೇ ವಿಲನ್..!

Published : Jan 27, 2024, 03:40 PM ISTUpdated : Jan 27, 2024, 03:41 PM IST

ತಂಗಿ ಮೇಲೆ ಕೋಪ ಅಮ್ಮನನ್ನೂ ಸೇರಿಸಿ ಕೆರೆಗೆ ತಳ್ಳಿದ..!
ಕೆರೆಗೆ ನೂಕಿ ಮನೆಗೆ ಬಂದು ಅಪ್ಪನಿಗೆ ವಿಷಯ ಹೇಳಿದ್ದ..!
ಅನ್ಯಕೋಮಿನ ಹುಡುಗನನ್ನ ಪ್ರೀತಿಸಿದಕ್ಕೆ ಅಣ್ಣ ಗರಂ..!

ಅದೊಂದು ಸುಂದರ ಕುಟುಂಬ. ಗಂಡ ಹೆಂಡತಿ ಮತ್ತು ಇಬ್ಬರು ಮಕ್ಕಳು. ಮಗ ಕೂಲಿ ಮಾಡ್ತಿದ್ರೆ ಮಗಳು ಕಾಲೇಜಿಗೆ ಹೋಗ್ತಿದ್ದಳು. ಆದ್ರೆ ಆವತ್ತೊಂದು ದಿನ ಸಂಬಂಧಿಕರ ಮನೆಗೆ ಅಂತ ಹೋದ ತಾಯಿ(Mother) ಮತ್ತು ತಂಗಿಗೆ (Sister) ಅಣ್ಣನೇ ಸಾರಥಿಯಾಗಿದ್ದ. ತನ್ನದೇ ಬೈಕ್‌ನಲ್ಲಿ ಅಮ್ಮ ಮತ್ತು ತಂಗಿಯನ್ನ ಕೂರಿಸಿಕೊಂಡು ಪಕ್ಕದ ಊರಿಗೆ ಹೊರಟಿದ್ದ. ಆದ್ರೆ ಹೋಗಿ ಕೆಲವೇ ನಿಮಿಷಗಳಲ್ಲಿ ಮನೆಗೆ ಬಂದು ತಂದೆಯ ಬಳಿ ತಾಯಿ ಮತ್ತು ತಂಗಿಯನ್ನ ಕೊಂದ ವಿಷಯ ಹೇಳಿದ್ದ. ಅಣ್ಣನೇ ತಂಗಿ ಮತ್ತು ತಾಯಿಯ ಹೆಣ ಹಾಕಿದ್ದ. ಅದೂ ಕೂಡ ಕೆರೆಗೆ ತಳ್ಳಿ. ಇನ್ನೂ ಮನೆ ಮಗನೇ ಹೀಗ್ಯಾಕೆ ಮಾಡಿದ ಅಂತ ನೋಡಿದ್ರೆ ಅಲ್ಲಿ ಬಂದಿದ್ದು ತಂಗಿಯ ಲವ್(Love) ಸ್ಟೋರಿ. ಬಿ.ಕಾಂ ಓದುತ್ತಿದ್ದ ಧನುಶ್ರೀ ಅದೇಗೋ ಲವ್‌ನಲ್ಲಿ ಬಿದ್ದುಬಿಟ್ಟಿದ್ದಳು. ಆದ್ರೆ ಆಕೆ ಯಾರನ್ನೇ ಲವ್ ಮಾಡಿದ್ದಿದ್ರೂ ಆಕೆಯ ಅಣ್ಣ ಅಷ್ಟು ತಲೆಕೆಡಸಿಕೊಳ್ಳುತ್ತಿರಲಿಲ್ಲವೋ ಏನೋ.. ಆದ್ರೆ ತಂಗಿ ಲವ್ ಮಾಡಿದ್ದು ಒಬ್ಬ ಮುಸ್ಲಿಂನನ್ನ(Muslim). ಇದು ಆಕೆಯ ಅಣ್ಣನ ಪಿತ್ತ ನೆತ್ತಿಗೇರುವಂತೆ ಮಾಡಿತ್ತು. ಇದೇ ಲವ್ ವಿಚಾರವಾಗಿ ಆಗ್ಗಾಗೆ ಜಗಳ ಕೂಡ ಆಗ್ತಿತ್ತು. ಹೆತ್ತವರು ಇಬ್ಬರೂ ಮಕ್ಕಳಿಗೆ ಬುದ್ಧಿವಾದ ಹೇಳಿ ಸುಮ್ಮನಿರುಸುತ್ತಿದ್ದರು. ಆದ್ರೆ ಆವತ್ತು ಸಂಬಂಧಿಕರ ಮನೆಗೆ ಹೋಗಿ ಬರುವಾಗ. ದಾರಿ ಮಧ್ಯದಲ್ಲೇ ಅದರಲ್ಲೂ ಕೆರೆಯ ಏರಿ ಮೇಲೇ ಅಣ್ಣ ತಂಗಿ ನಡುವೆ ಜಗಳ ಶುರುವಾಗಿದೆ. ಜಗಳ ವಿಕೋಪಕ್ಕೆ ಹೋಗ್ತಿದ್ದಂತೆ ಅಣ್ಣ ತಂಗಿಯನ್ನ ಕೆರೆಗೆ ತಳ್ಳೇಬಿಟ್ಟ. ಇನ್ನೂ ಮಗಳು ಕೆರೆಗೆ ಬಿದ್ದಿದ್ದನ್ನ ಗಮನಿಸಿದ ಅಮ್ಮ ಆಕೆಯನ್ನ ರಕ್ಷಿಸಲು ಮುಂದಾದ್ಲು. ಆದರೆ ಆಕೆ ಕೂಡ ಮಗಳ ಜೊತೆಯಲ್ಲೇ ಕೆರೆಯಪಾಲಾದಳು. ಇನ್ನೂ ಅಮ್ಮ, ತಂಗಿಯ ಕಥೆ ಮುಗಿಸಿದವನು ಮನೆಗೆ ಬಂದು ತಂದೆಗೆ ವಿಷಯಮುಟ್ಟಿಸಿದ್ದ.

ಇದನ್ನೂ ವೀಕ್ಷಿಸಿ: ಇದು ಕಾಂತಾರ ಸಿನಿಮಾ ನೆನಪಿಸುವ ದೃಶ್ಯ ! ತಂದೆ ಸಾವಿನ ನಂತರ ಮಕ್ಕಳಿಗೆ ದೈವನರ್ತಕನ ಹೊಣೆ!

23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
Read more