Crime News: ಕರ್ನಾಟಕದಲ್ಲೂ ಶುರುವಾಯಿತಾ ಹೊಡಿಬಡಿ ಪಾಲಿಟಿಕ್ಸ್‌..! ಬೆಂಗಳೂರು ಗ್ರಾಮಾಂತರದಲ್ಲಿ ಟಾರ್ಗೆಟ್ ಅಟ್ಯಾಕ್..!

Crime News: ಕರ್ನಾಟಕದಲ್ಲೂ ಶುರುವಾಯಿತಾ ಹೊಡಿಬಡಿ ಪಾಲಿಟಿಕ್ಸ್‌..! ಬೆಂಗಳೂರು ಗ್ರಾಮಾಂತರದಲ್ಲಿ ಟಾರ್ಗೆಟ್ ಅಟ್ಯಾಕ್..!

Published : Apr 12, 2024, 06:30 PM IST

ಬೆಂಗಳೂರು ಗ್ರಾಮಾಂತರದಲ್ಲಿ ಟಾರ್ಗೆಟ್ ಅಟ್ಯಾಕ್..!
ಕಾರ್ಯಕರ್ತರನ್ನ ಪಕ್ಷಕ್ಕೆ ಕರೆತಂದಿದ್ದೇ ತಪ್ಪಾಯ್ತು..!
ಶುರುವಾಯ್ತಾ ಪಶ್ಚಿಮ ಬಂಗಾಳ ಮಾದರಿ ರಾಜಕೀಯ..!

ದೇಶದಲ್ಲಿ ಪ್ರಜಾಪ್ರಭುತ್ವದ ಹಬ್ಬ ಜೋರಾಗಿ ನಡೆಯುತ್ತಿದೆ. ಕರ್ನಾಟಕದಲ್ಲೂ(Karnataka) ಮೂರು ಪಕ್ಷಗಳು ಮತಬೇಟೆಗೆ ಇಳಿದಿವೆ. ಆದ್ರೆ ನಮ್ಮ ರಾಜ್ಯದಲ್ಲಿ ಅತೀ ಹೆಚ್ಚು ಕ್ರೇಜ್ ಹುಟ್ಟಿಸಿರೋದು ಬೆಂಗಳೂರು ಗ್ರಾಮಾಂತರ(Bengaluru rural) ಕ್ಷೇತ್ರ. ಘಟಾನುಘಟಿಗಳೇ ಈ ಕ್ಷೇತ್ರದಲ್ಲಿ ಅಭ್ಯರ್ಥಿಗಳಾಗಿದ್ದಾರೆ. ಹೈವೋಲ್ಟೇಜ್ ಕ್ಷೇತ್ರವೆನ್ನಿಸಿಕೊಂಡಿರೋ ಈ ಬೆಂಗಳೂರು ಗ್ರಾಮಾಂತರದಲ್ಲಿ ಈಗ ಗೂಂಡಾ ಪಾಲಿಟಿಕ್ಸ್ ಶುರುವಾಗಿದೆ ಅನಿಸ್ತಿದೆ. ಕಾರಣ ಇದೇ ಕ್ಷೇತ್ರದಲ್ಲಿ ಕಾರ್ಯಕರ್ತರುಗಳ ಮೇಲೆ ಆಗುತ್ತಿರುವ ಹಲ್ಲೆಗಳು. ಇನ್ನೂ ಎಲೆಕ್ಷನ್ ಹೊತ್ತಲ್ಲಿ, ಹೈವೋಲ್ಟೇಜ್ ಕ್ಷೇತ್ರದಲ್ಲಿ ಗೂಂಡಾ ಪೊಲಿಟಿಕ್ಸ್‌ ನಡೆಯುತ್ತಿದೆ. ಎದುರಾಳಿಗಳ ಪರ ಪ್ರಚಾರ ಮಾಡಿದ ಅನ್ನೋ ಒಂದೇ ಕಾರಣಕ್ಕೆ ಕಾಂಗ್ರೆಸ್(Congress) ಕಾರ್ಯಕರ್ತ ಜೆಡಿಎಸ್(JDS) ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿದ್ದಾನೆ. ಇನ್ನೂ ಇದೇ ರೀತಿ ಇದೇ ಕ್ಷೇತ್ರದಲ್ಲಿ ಮತ್ತೊಬ್ಬ ಜೆಡಿಎಸ್ ಕಾರ್ಯಕರ್ತನ ಮೇಲೆ ಪುಂಡರು ದಾಳಿ ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರ ಲೋಕಸಭಾ(Loksabha) ಕ್ಷೇತ್ರದಲ್ಲಿ ಹೊಡಿ ಬಡಿ ರಾಜಕಾರಣ ನಿಲ್ಲೋ ಲಕ್ಷಣ ಕಾಣ್ತಿಲ್ಲ. ಮೊನ್ನೆ ಮಂಜುನಾಥನ ಮೇಲೆ ಅಟ್ಯಾಕ್ ಮಾಡಿದ್ರೆ ನಿನ್ನೆ ಮತ್ತೊಬ್ಬ ಜೆಡಿಎಸ್ ಕಾರ್ಯಕರ್ತನ ಮೇಲೆ ಅಟ್ಯಾಕ್ ಆಗಿದೆ. ಕಾಂಗ್ರೆಸ್ ನಿಂದ ಜೆಡಿಎಸ್ ಗೆ ಕಾರ್ಯಕರ್ತರನ್ನ ವಾಪಸ್ ಕರೆತಂದಿದ್ದಕ್ಕೆ ಜೆಡಿಎಸ್ ಮುಖಂಡ ಮೇಲೆ ಮನಸೋ ಇಚ್ಛೆ ಥಳಿಸಲಾಗಿದೆ. ಸದ್ಯ ಹಲ್ಲೆ ಮಾಡಿದವರ ಮೇಲೆ ಎಫ್.ಐ.ಆರ್ ದಾಖಲಾಗಿದೆ. ಆದ್ರೆ  ದೂರು ದಾಖಲಾಗ್ತಿದ್ದಂತೆ ಅವರೆಲ್ಲಾ ಎಸ್ಕೇಪ್ ಆಗಿದ್ದಾರೆ. ಅದ್ರೆ ಇವತ್ತಲ್ಲ ನಾಳೆ ಅವರು ಜೈಲಿಗೆ ಹೋಗ್ತಾರೆ. ಇನ್ನೂ ಇವರುಗಳ ಈ ಶ್ರಮದಿಂದ ಗೆಲುವು ಸಾಧಿಸುವವರು ಗೆದ್ದು ಡೆಲ್ಲಿಗೆ ಹೋಗ್ತಾರೆ. ಆದ್ರೆ ಕೋರ್ಟು ಕೇಸು ಅಂತ ಅನುಭವಿಸುವವರು ಕಾರ್ಯಕರ್ತರೇ.

ಇದನ್ನೂ ವೀಕ್ಷಿಸಿ:  BK Hariprasad: ಏನೇ ಭಿನ್ನಾಭಿಪ್ರಾಯ ಇದ್ರೂ ಪೆನ್‌ಡ್ರೈವ್‌ನಲ್ಲಿಟ್ಟು ಚುನಾವಣೆ ಬಳಿಕ ಹೇಳ್ತೀನಿ: ಬಿ.ಕೆ. ಹರಿಪ್ರಸಾದ್

23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
Read more