ನಾನು ನಂದಿನಿ ಬೆಂಗಳೂರಿಗೆ ಬಂದೀನಿ.. ಗಂಡನ್ನ ಕೊಲೆ ಮಾಡಿ, ಜೈಲಿಗೆ ಹೋಗ್ತೀನಿ!

ನಾನು ನಂದಿನಿ ಬೆಂಗಳೂರಿಗೆ ಬಂದೀನಿ.. ಗಂಡನ್ನ ಕೊಲೆ ಮಾಡಿ, ಜೈಲಿಗೆ ಹೋಗ್ತೀನಿ!

Published : Jan 13, 2024, 02:35 PM IST

ಆಂಧ್ರದಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿದ್ದ ನಂದಿನಿ ಗಂಡನಿಲ್ಲದ ವೇಳೆ ಪ್ರಿಯಕರನೊಂದಿಗೆ ರಾಸಲೀಲೆ ಆಡುವಾಗ ಸಿಕ್ಕಿಬಿದ್ದಿದ್ದು, ನೋಡಿದ ಗಂಡನನ್ನೇ ಕೊಲೆ ಮಾಡಿದ್ದಾಳೆ.

ಬೆಂಗಳೂರು (ಜ.12): ಆಂಧ್ರದಿಂದ ಬಂದು ಬೆಂಗಳೂರಿನಲ್ಲಿ ಗಂಡನೊಂದಿಗೆ ನೆಲೆಸಿದ್ದ ನಂದಿನಿ, ತನ್ನ ಪ್ರಿಯಕರನೊಂದಿಗೆ ರಾಸಲೀಲೆ ಆಡುವಾಗ ಸಿಕ್ಕಿಬಿದ್ದು ಪತಿಯನ್ನೇ ಕೊಲೆ ಮಾಡಿರುವ ದುರ್ಘಟನೆ ನಡೆದಿದೆ. ವೆಂಕಟರಾಮಣ (30) ಕೊಲೆಯಾದ ದುರ್ದೈವಿಯಾಗಿದ್ದಾನೆ. ಸ್ವತಃ ಈತನ ಹೆಂಡತಿ ನಂದಿನಿ ಪ್ರಿಯಕರನೊಂದಿಗೆ ಸೇರಿಕೊಂಡು ಗಂಡನ ಮೇಲೆ ಮೇಲೆ ಕಲ್ಲು ಎತ್ತು ಹಾಕಿ ಕೊಲೆ ಮಾಡಿದ್ದಾಳೆ. ನಂತರ ಹೃದಯಘಾತ ಅಂತ ಪೊಲೀಸ್‌ ಸಹಾಯವಾಣಿ 112 ಕರೆ ಮಾಡಿದ್ದಾಳೆ. 

ಗಂಡ ಮನೆಯಲ್ಲಿಲ್ಲ ನೀನು ಬೇಗ ಬಾ ಮಜಾ ಮಾಡೋಣ ಎಂದು ನಂದಿನಿ ಆಕೆಯ ಪ್ರಿಕಯಕರ ನಿತೇಶನನ್ನ  ಜನವರಿ‌ 6 ರಂದು  ಮನೆಗೆ ಕರೆಸಿಕೊಂಡಿದ್ದಳು. ಈ ವೇಳೆ  ಗಂಡ ವೆಂಕಟರಾಮಣ ದಿಡೀರ್ ಮನೆಗೆ ಬಂದಿದ್ದನು. ಈ ವೇಳೆ ಇಬ್ಬರು ರೂಮ್ ನಲ್ಲಿದ್ದನ್ನ ಕಂಡು ಗಂಡ ಶಾಕ್ ಆಗಿದ್ದನು. ಈ ವೇಳೆ ಇಬ್ಬರು ಸೇರಿ ವೆಂಕಟರಾಮಣ ತಲೆ ಮೇಲೆ ಕಲ್ಲು ಎತ್ತಾಕಿ ಕೊಲೆ ಮಾಡಿದ್ದಾರೆ. ಮೃತ ದೇಹವನ್ನು ಮನೆಯ ಹೊರಗೆ ಶೌಚಾಲಯದ ಬಳಿ ಇಟ್ಟು ಅಸಹಜ ಸಾವು ಎಂದು ಸೀನ್ ಕ್ರಿಯೇಟ್ ಮಾಡಿದ್ದರು. 

ಚೂಪಾದ ಕಲ್ಲು ಇಟ್ಟು ಕಲ್ಲಿನ ಮೇಲೆ ಬಿದ್ದಿದ್ದಾನೆ ಎಂದು ಸೀನ್ ಕ್ರೀಯೆಟ್ ಮಾಡಿದ್ದರು. ಬಳಿಕ ಬೆಳಗ್ಗೆ ಗಂಡ ಸಾವನ್ನಪ್ಪಿದ್ದಾನೆ ಎಂದು ನಂದಿನಿ ಪೊಲೀಸರಿಗೆ ಕರೆ ಮಾಡಿದ್ದಳು. ಸ್ಥಳಕ್ಕೆ ಬಂದ ಪೊಲೀಸರಿಗೆ  ಆರಂಭದಲ್ಲಿ ಅಸಹಜ ಸಾವು ಎಂದು ಪ್ರಕರಣ ದಾಖಲು ಮಾಡಿಕೊಂಡಿದ್ದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆ ಮಾಡಿದಾಗ ಕೊಲೆ ಎಂಬುದು ಪತ್ತೆಯಾಗಿದೆ. ಪೊಲೀಸರಿಗೂ ಸ್ಥಳ ಪರಿಶೀಲನೆ ವೇಳೆ ಕೊಲೆ ಎಂಬುದಾಗಿ ಅನುಮಾನ ಬಂದಿತ್ತು. ಪೊಲೀಸರ ಪತ್ನಿ ನಂದಿನಿ ಮೇಲೆ ಅನುಮಾನ ವ್ಯಕ್ತಪಡಿಸಿ ನಿಗಾ ಇಟ್ಟಿದ್ದರು.

ಹಾವೇರಿಯಲ್ಲಿ ನಡೆದಿದ್ದು ನೈತಿಕ ಪೊಲೀಸ್‌ಗಿರಿಯಲ್ಲ, ಸಾಮೂಹಿಕ ಅತ್ಯಾಚಾರ; ಇಲ್ಲಿದ್ದಾರೆ ನೋಡಿ ಗ್ಯಾಂಗ್ ರೇಪಿಸ್ಟ್‌?

ಮರಣೋತ್ತರ ವರದಿ ಬಂದ ಬಳಿಕ ಪತ್ನಿ ನಂದಿನಿಯನ್ನ ವಿಚಾರಿಸಿದಾಗ ಗಂಡನನ್ನು ಕಳೆದಕೊಂಡು ದುಃಖದಲ್ಲಿರು ನನ್ನ ಮೇಲೆಯೇ ಅನುಮಾನ ಪಡ್ತೀರಾ ಅಂತ ನಾಟಕ ಮಾಡಿದ್ದಳು. ಪೊಲೀಸರ ತಮ್ಮ ಸ್ಟೈಲ್ ನಲ್ಲಿ‌ವಿಚಾರಣೆ ನಡೆಸಿದಾಗ ಅಸಲಿ ವಿಚಾರ ಬಯಲಿಗೆ ಬಂದಿದೆ. ಪ್ರಿಯಕರ ನಿತೀಶ್ ಕುಮಾರ್ ಜೊತೆ ಸೇರಿ ಕೊಲೆ ಮಾಡಿರುವುದಾಗಿ ಹೇಳಿದ್ದಾಳೆ. ನಿತೀಶ್ ಹಾಗೂ ನಂದಿನಿ ಇಬ್ಬರು ಆಂಧ್ರಪ್ರದೇಶ ಸತ್ಯ ಸಾಯಿ ತಾಲ್ಲೂಕಿನವರು. ಬಾಲ್ಯದಿಂದ ಸ್ನೇಹಿತರಾಗಿದ್ದವರು ಬಳಿಕ ಇಬ್ಬರು ಪ್ರೀತಿಸಿದ್ದರು. ಮದುವೆ ನಂತರ ನಂದಿನಿ ಕುಟುಂಬ ಬೆಂಗಳೂರಿಗೆ ಬಂದು ನೆಲೆಸಿತ್ತು. 

ಹಾಸನ: ಪ್ರೀತಿಸುವಂತೆ ಕಿರುಕುಳ, ಯುವಕನ ಕಾಟಕ್ಕೆ ಬೇಸತ್ತು ಯುವತಿ ಆತ್ಮಹತ್ಯೆ

ಮದುವೆಯಾಗಿ ದೂರದ ಬೆಂಗಳೂರಿಗೆ ಬಂದು ವಾಸವಾಗಿದ್ದರೂ ನಂದಿಗೆ ತನ್ನ ಹಳೆಯ ಪ್ರಿಯಕರನ ಸಹವಾಸ ಬಿಡುವ ಮನಸ್ಸಾಗಿರಲಿಲ್ಲ. ಆದ್ದರಿಂದ ಗಂಡ ವೆಂಕಟರಾಮಣ ಮನೆಯಲ್ಲಿ ಇಲ್ಲದಿರುವಾಗ ಪ್ರಿಯಕರನನ್ನು ಮನೆಗೆ ಕರೆಸಿಕೊಂಡು ಮಜಾ ಮಾಡುತ್ತಿದ್ದಳು. ಆರೋಪಿ ನಿತೀಶ್‌ ಪ್ರೇಯಸಿಗಾಗಿ ಆಂಧ್ರದಿಂದ ಬೆಂಗಳೂರಿನ ಹೆಚ್ಎಸ್ಆರ್ ಲೇಔಟ್ ಮನೆಗೆ ಬಂದು ಹೋಗುತ್ತಿದ್ದನು. ಈಗ ಸಿಕ್ಕಿ ಹಾಕಿಕೊಂಡಿದ್ದರಿಂದ ಗಂಡನನ್ನೇ ಕೊಲೆ ಮಾಡಿದ್ದಾರೆ. ಸದ್ಯ ಹೆಚ್ ಎಸ್ ಆರ್ ಲೇಔಟ್ ಪೊಲೀಸರು ಇಬ್ಬರನ್ನೂ ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!
26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
Read more