'ಟಾಕ್ಸಿಕ್'ನಲ್ಲಿ ಯಶ್ ಅಕ್ಕ ಆಗೋದು ಯಾರು?: ಲೀಸ್ಟ್​ನಲ್ಲಿ ಸ್ಟಾರ್ ನಟಿಯರ ಹೆಸರು!

'ಟಾಕ್ಸಿಕ್'ನಲ್ಲಿ ಯಶ್ ಅಕ್ಕ ಆಗೋದು ಯಾರು?: ಲೀಸ್ಟ್​ನಲ್ಲಿ ಸ್ಟಾರ್ ನಟಿಯರ ಹೆಸರು!

Published : May 12, 2024, 11:43 AM IST

ರಾಕಿಂಗ್ ಸ್ಟಾರ್​ ಯಶ್​​​ ನಟನೆಯ ಟಾಕ್ಸಿಕ್​ ಸಿನಿಮಾ ಈಗ ಟಾಕ್​ ಆಫ್ ದಿ ಟೌನ್. ಈ ಮೂವಿ ಬಗ್ಗೆ ದಿನಕ್ಕೊಂದು ಸುದ್ದಿಗಳು ಬಿಚ್ಚಿಕೊಳ್ಳುತ್ತಿವೆ. ಆ ಎಲ್ಲಾ ವಿಷಯಗಳಲ್ಲಿ ಹೆಚ್ಚು ಕುತೂಹಲ ಹುಟ್ಟಿಸುತ್ತಿರೋದು, ಹತ್ತಾರು ಹೆಸರುಗಳು ಹುಟ್ಟಿಕೊಂಡಿರೋದು ಟಾಕ್ಸಿಕ್ ನಲ್ಲಿ ಯಶ್​​ ಅಕ್ಕ ಯಾರಾಗ್ತಾರೆ ಅನ್ನೋ ಬಗ್ಗೆ.

ರಾಕಿಂಗ್ ಸ್ಟಾರ್​ ಯಶ್​​​ ನಟನೆಯ ಟಾಕ್ಸಿಕ್​ ಸಿನಿಮಾ ಈಗ ಟಾಕ್​ ಆಫ್ ದಿ ಟೌನ್. ಈ ಮೂವಿ ಬಗ್ಗೆ ದಿನಕ್ಕೊಂದು ಸುದ್ದಿಗಳು ಬಿಚ್ಚಿಕೊಳ್ಳುತ್ತಿವೆ. ಆ ಎಲ್ಲಾ ವಿಷಯಗಳಲ್ಲಿ ಹೆಚ್ಚು ಕುತೂಹಲ ಹುಟ್ಟಿಸುತ್ತಿರೋದು, ಹತ್ತಾರು ಹೆಸರುಗಳು ಹುಟ್ಟಿಕೊಂಡಿರೋದು ಟಾಕ್ಸಿಕ್ ನಲ್ಲಿ ಯಶ್​​ ಅಕ್ಕ ಯಾರಾಗ್ತಾರೆ ಅನ್ನೋ ಬಗ್ಗೆ. ಯಾಕಂದ್ರೆ ಟಾಕ್ಸಿಕ್​ ಲೀಸ್ಟ್​ನಲ್ಲಿ ಸ್ಟಾರ್​​ ನಟಿಯರ ಹೆಸರುಗಳು ಸೇರಿಕೊಳ್ಳುತ್ತಲೇ ಇವೆ. ಟಾಕ್ಸಿಕ್ ಸಿನಿಮಾದಲ್ಲಿ ಗೋವಾ ಡ್ರಗ್ ಮಾಫಿಯಾ ಸ್ಟೋರಿಯನ್ನ ಪ್ರಪಂಚಕ್ಕೆ ತಿಳಿಸೋ ಸಾಹಸ ಮಾಡಲಾಗ್ತಿದೆ. ಹೀಗಾಗಿ ನಿರ್ದೇಶಕಿ ಗೀತು ಮೋಹನ್​ ದಾಸ್ ಸೃಷ್ಟಿಸಿರೋ ಪಾತ್ರಕ್ಕೆ ತಕ್ಕನಾದ ನಟಿಯರನ್ನ ಹೆಕ್ಕಿ ತೆಗೆದು ಆಯ್ಕೆ ಮಾಡುತ್ತಿದ್ದಾರೆ. ಈ ನಟಿಯರ ಲೀಸ್ಟ್​​​​ನಲ್ಲಿ ಈಗ ಬಾಲಿವುಡ್​​ನ ಮತ್ತೊಂದು ಗೊಂಬೆ ಹುಮಾ ಖುರೇಷಿ ಬಂದಿದ್ದಾರೆ. 

ಟಾಕ್ಸಿಕ್​​ನಲ್ಲಿ ಹುಮಾ ಖುರೇಷಿ ಯಶ್​ಗೆ ಅಕ್ಕನ ರೋಲ್ ಮಾಡುತ್ತಾರೆ ಅಂತ ಹೇಳಲಾಗ್ತಿದೆ.  ‘ಟಾಕ್ಸಿಕ್’ ಸಿನಿಮಾದಲ್ಲಿ ಕರೀನಾ ಕಪೂರ್ ಇರ್ತಾರೆ ಅಂತ ಮೊದಲು ದೊಡ್ಡ ಟಾಕ್ ಆಗಿತ್ತು. ಇದನ್ನ ಯಶ್ ಆಪ್ತರು ಕೂಡ ಪಕ್ಕಾ ಮಾಡಿದ್ರು. ಕರೀನಾ ಕೂಡ ನನಗೆ ಯಶ್ ಜೊತೆ ನಟಿರೋ ಆಸೆ ಇದೆ ಅಂದಿದ್ರು. ಆದ್ರೆ ಕರೀನಾ ಯಶ್​ಗೆ ಇಲ್ಲಿ ನಾಯಕಿ ಅಲ್ಲ, ಯಶ್​ ಅಕ್ಕನ ರೋಲ್ ಮಾಡುತ್ತಾರೆ ಅಂತ ಹೇಳಲಾಯ್ತು. ಬಳಿಕ ಅದೇನಾಯ್ತೋ ಗೊತ್ತಿಲ್ಲ. ಕರೀನಾ ಟಾಕ್ಸಿಕ್​​ನಿಂದ ಹೊರ ಹೋದ್ರು. ಕೊನೆಗೆ ಯಶ್​ಗೆ ಅಕ್ಕ ಆಗಿ ಕರೀನಾ ಜಾಗಕ್ಕೆ ನಟಿ ನಯನತಾರಾ ಹೆಸರು ಕೇಳಿ ಬಂದಿತ್ತು. ಈಗ ಹುಮಾ ಖುರೇಷಿ ಹೆಸರು ಸೇರಿಕೊಂಡಿದೆ. ಟಾಕ್ಸಿಕ್​​ನಲ್ಲಿ ಯಶ್​ಗೆ ಅಕ್ಕನ ಪಾತ್ರದಲ್ಲಿ ಕರೀನಾ ಕಪೂರ್​ ಬಳಿಕ, ನಯನತಾರಾ ಈಗ ಹುಮಾ ಖುರೇಷಿ ಹೆಸರು ಸೇರಿದೆ. 

ಆದ್ರೆ ಈ ಮೂರು ನಟಿಯರ ಹೆಸರುಗಳು ಲೀಸ್ಟ್​ನಲ್ಲಿ ಸೇರಿಸಿಕೊಳ್ಳೋ ಮೊದಲೇ ಬಿಟೌನ್​​ನ ಮತ್ತೊಬ್ಬ ಬಿಗ್ ಸ್ಟಾರ್ ನಟಿ ಹಸರನ್ನ ಫೈನಲ್ ಮಾಡಿದ್ರು ಟಾಕ್ಸಿಕ್ ನಿರ್ದೇಶಕಿ ಗೀತು ಮೋಹನ್ ದಾಸ್. ಆ ಹೆಸರೇ ಐಶ್ವರ್ಯ ರೈ ಬಚ್ಚನ್. ಯಶ್ ಅಕ್ಕನ ರೋಲ್ ಮಾಡೋಕೆ ಇವರೇ ಕರೆಕ್ಟ್ ಅಂತ ನಿರ್ದೇಶಕಿ ಗೀತೂ ಮೋಹನ್ ದಾಸ್ ಮೊದಲು ಫೈನಲ್ ಮಾಡಿದ್ದು, ನಟಿ ಐಶ್ವರ್ಯ ರೈ ಬಚ್ಚನ್ ಹೆಸರನ್ನ. ಆದ್ರೆ ನಟಿ ಐಶ್ವರ್ಯ ಕಡೆಯಿಂದ ಯಾವ್ದೇ ಪಾಸಿಟೀವ್ ರೆಸ್ಪಾನ್ಸ್ ಬಂದಿಲ್ಲವಂತೆ. ಹೀಗಾಗೆ ಕರೀನಾಗೆ ಕಾಳ್ ಹಾಕಿದ್ರು. ಆದ್ರೆ ಅದು ರಿಜೆಕ್ಟ್ ಆಗಿ ನಯನತಾರ ಬಂದ್ರು, ಈಗ ಹುಮಾ ಖುರೇಷಿ ಹೆಸರು ಚಾಲ್ತಿಯಲ್ಲಿದೆ. ಹೀಗಾಗಿ ಟಾಕ್ಸಿಕ್​ನಲ್ಲಿ ಯಶ್​ಗೆ ಅಕ್ಕನ ರೋಲ್ ಮಾಡೋದು ಯಾರು ಅನ್ನೋದೇ ಈಗಿರೋ ಚರ್ಚೆ. ಇನ್ನೂ ಯಾರೆಲ್ಲಾ ಹೆಸರುಗಳು ಈ ಲೀಸ್ಟ್ ಸೇರಿಕೊಳ್ಳುತ್ತೋ ಕಾದು ನೋಡಬೇಕು.

04:06ಸಲ್ಲೂಗೆ ಮತ್ತೆ ಕಂಟಕ; ದೇಶಪ್ರೇಮ ತೋರಿಸ್ತೀನಿ ಅಂದ್ರೂ 'ಮಾತೃಭೂಮಿ'ಗೆ ಇದೆಂತಾ ಅಗ್ನಿ ಪರೀಕ್ಷೆ?
08:55ರಾಕಿ ಬಾಯ್ ಡ್ರೀಮ್ ಸಿನಿಮಾದಲ್ಲಿ ಏನೆಲ್ಲಾ ಇದೆ? 'ಟಾಕ್ಸಿಕ್'ನಲ್ಲಿ ಗ್ಯಾಂಗ್​ಸ್ಟರ್​ಮಾತ್ರವಲ್ಲ, ಬೇರೆಯದ್ದೇ ಸ್ಟೋರಿ ಇದೆ!
04:43ಆಲಿಯಾ in ಡ್ರ್ಯಾಗನ್.. ಸೌತ್ ಸಿನಿಇಂಡಸ್ಟ್ರಿಗೆ ಆಲಿಯಾ ಭಟ್ ಕಂಬ್ಯಾಕ್; ಮ್ಯಾನ್ ಆಫ್ ಮಾಸಸ್ ಜೋಡಿಯಾದ ಆಲಿಯಾ!
12:03ನೀರಿನಲ್ಲಿ ಹೋಮ ಆಯ್ತಾ 500 ಕೋಟಿ ಬಂಡವಾಳ? ಜನನಾಯಗನ್​'ಲೀಕ್' ಉದ್ದೇಶಪೂರ್ವಕವಾಗಿ ಮಾಡಿದ್ದಾ?
04:15ಭಾರತದ ಸಿನಿಮಾಗಳಲ್ಲಿ ಈ ರೀತಿಯ ಅದ್ಭುತ ಅನುಭವವನ್ನು ಎಂದಿಗೂ ಪಡೆದಿಲ್ಲ: ವಿರಾಟ್ ಕೊಹ್ಲಿ
04:15ಮೈಚಳಿ ಬಿಟ್ಟು ಕುಣಿಯುವ ಮೋಹಿನಿ, 'ಬಾಂಬೆ ಟೈಮ್ಸ್​ಫ್ಯಾಶನ್ ವೀಕ್' ಶೋನಲ್ಲಿ ಸಖತ್ ಮಿಂಚಿದ ದಿಶಾ ಪಟಾನಿ!
05:51ರಿಷಬ್ ನಟನೆಯ 'ಛತ್ರಪತಿ ಶಿವಾಜಿ' ಚಿತ್ರ ಬರಲ್ವಾ..? ರಿತೇಶ್ ದೇಶಮುಖ್ 'ರಾಜಾ ಶಿವಾಜಿ' ಆಗಿ ರಿಲೀಸ್​ಗೆ ರೆಡಿ!
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
06:20'ಕಿಸ್' ಬ್ಯೂಟಿಗೆ ಬೆನ್ನುಬಿಡದ ಬ್ಯಾಡ್​ಲಕ್; ಶ್ರೀಲೀಲಾ ಕುಣಿದ ಸಾಂಗ್ಸ್ ಹಿಟ್, ಆದ್ರೆ ಸಿನಿಮಾಗಳೆಲ್ಲಾ ಫ್ಲಾಪ್..!
06:036 ದಿನ, 800 ಕೋಟಿ ಕ್ಲಬ್: ಮುಂದುವರಿದ ಧುರಂಧರ್ ಮ್ಯಾಜಿಕ್.. ರೀಲ್ಸ್ ಕಾಲದಲ್ಲೂ ಸುದೀರ್ಘ ಸಿನಿಮಾ ಮೆಚ್ಚಿದ ಜನ
Read more