ಬಾಲಿವುಡ್ ಬಾದ್ ಷಾ ಶಾರೂಖ್ ಖಾನ್ ಮದುಮಗಳ ಲುಕ್‌ನಲ್ಲಿ ಇರುವ ವಿಡಿಯೋವೊಂದು ಸಖತ್ ವೈರಲ್ ಆಗಿದ್ದು, ಈ ವಿಡಿಯೋವನ್ನು ಶಾರೂಖ್ ಅಭಿಮಾನಿಯೋ ಅಥವಾ ಕಿಡಿಗೇಡಿಯೋ ಎಂಬುದು ತಿಳಿದು ಬಂದಿಲ್ಲ.
ಹೊಸ ಹೊಸ ಟೆಕ್ನಾಲಜಿ ಬರುತ್ತಿದ್ದ ಹಾಗೆ ಈ ಡಬ್ ಸ್ಮಾಶ್ ವಿಡಿಯೋಗಳ (Dub Smash Video) ಗುಂಗಲ್ಲಿ ಜನ ಏನೆನೋ ಮಾಡುತ್ತಿದ್ದಾರೆ. ಇದೀಗ ಅಂತಹದ್ದೇ ರೀತಿಯಲ್ಲಿ ಹೊಸದೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ಸಿಕ್ಕಾಪಟ್ಟೆ ವೈರಲ್ (Viral) ಆಗಿದೆ. ಹೌದು! ಬಾಲಿವುಡ್ (Bollywood) ಬಾದ್ ಷಾ ಶಾರೂಖ್ ಖಾನ್ (Shah Rukh Khan) ಮದುಮಗಳ ಲುಕ್‌ನಲ್ಲಿ ಇರುವ ವಿಡಿಯೋವೊಂದು ಸಖತ್ ವೈರಲ್ ಆಗಿದ್ದು, ಈ ವಿಡಿಯೋವನ್ನು ಮಾಡಿದ್ದು ಶಾರೂಖ್ ಅಭಿಮಾನಿಯೋ ಅಥವಾ ಕಿಡಿಗೇಡಿಯೋ ಎಂಬುದು ತಿಳಿದು ಬಂದಿಲ್ಲ. ಆದರೆ ಆಪ್‌ನಲ್ಲಿ ಮಾಡಿರುವ ವಿಡಿಯೋದಲ್ಲಿ ಶಾರೂಖ್ ಮಾತ್ರ ಮದುಮಗಳ ರೀತಿಯಲ್ಲಿ ಮುದ್ದು ಮುದ್ದಾಗಿ ಕಾಣಿಸುತ್ತಿದ್ದಾರೆ.
Yash KGF 2 ಹಾಡಿನ ಬಗ್ಗೆ ಹರಿದಾಡುತ್ತಿದೆ ಹೊಸ ವಿಷಯ!
ಇನ್ನು ಮೇಕಪ್ ಕಲಾವಿದೆಯೊಬ್ಬರು ಶಾರುಖ್ ಖಾನ್ ಆಗಿ ವಿಸ್ಮಯಕಾರಿಯಾಗಿ ರೂಪಾಂತರಗೊಂಡಿರುವ ವಿಡಿಯೋವೊಂದು ಇತ್ತೀಚೆಗಷ್ಟೇ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ದೆಹಲಿಯ ಮೇಕಪ್ ಆರ್ಟಿಸ್ಟ್ ದೀಕ್ಷಿತಾ ಎಂಬುವರು ಹೀಗೆ ಮೇಕಪ್ ಹಾಕಿ ಬಾದ್ ಷಾ ರೀತಿ ಕಾಣಿಸಿಕೊಂಡಿದ್ದರು. ಮೇಕಪ್ ಕಲೆಯಲ್ಲಿ ತುಂಬಾ ಪಳಗಿರುವವರಿಗೆ ಮಾತ್ರ ಇದು ಸಾಧ್ಯ. ಮೇಕಪ್ ಸಾಧನಗಳಾದ ಬ್ಲೆಂಡರ್ಸ್, ಬ್ರಷ್, ಪಫ್ ಜೊತೆ ಆಟವಾಡುವ ದೀಕ್ಷಿತಾ ಕೆಲ ಕ್ಷಣದಲ್ಲೇ ಶಾರೂಖ್ ಖಾನ್ ಆಗಿ ರೂಪಾಂತರಗೊಂಡಿದ್ದರು.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment