ಡಂಕಿ v/s ಸಲಾರ್..ಯಾರು ಗೆಲ್ತಾರೆ..? ಯಾರು ಸೋಲ್ತಾರೆ..?

ಡಂಕಿ v/s ಸಲಾರ್..ಯಾರು ಗೆಲ್ತಾರೆ..? ಯಾರು ಸೋಲ್ತಾರೆ..?

Published : Dec 19, 2023, 09:27 AM IST

‘ಸಲಾರ್’ ಫೈನಲ್ ಪಂಚ್ ಕೂಡ ರಿಲೀಸ್ ಆಗಿದ್ದಾಯ್ತು. ಅಭಿಮಾನಿಗಳೆಲ್ಲ ಸಲಾರ್ ಫಿವರ್ ತಲೆಗೇರಿಸಿಕೊಂಡು ಕೂತಿದ್ದಾರೆ. ಈಗ ಸಿನಿಮಾ ಕೂಡ ತೆರೆಗೆ ಬರೋ ದಿನವೂ ತುಂಬಾ ದೂರದಲ್ಲಿಲ್ಲ. ಇದೇ ಸಲಾರ್‌ಗೆ ಟಕ್ಕರ್ ಕೊಡೊದಕ್ಕೆ ಬಾಲಿವುಡ್ ಬಾದ್‌ಶಹ ಶಾರುಖ್ ನಟಿಸಿರೋ ಡಂಕಿ ಕೂಡ ಇದೇ ದಿನ ರಿಲೀಸ್ ಆಗ್ತಿರೋದು ಸ್ಪೆಷಲ್. 

ಒಂದು ಕಡೆ ನಟ ಪ್ರಭಾಸ್‌ ಅಬ್ಬರ.. ಇನ್ನೊಂದು ಕಡೆ ನಟ ಶಾರುಖ್‌ನ ಸುನಾಮಿ ಅಲೆ.. ಇವೆರಡು ನೋಡ್ತಿದ್ರೆ ಬಾಕ್ಸಾಪೀಸ್ ಚಿಂದಿ ಚಿತ್ರಾನ್ನ ಆಗೋದು ಗ್ಯಾರಂಟಿ ಅಂತಿದ್ದಾರೆ ಅಭಿಮಾನಿಗಳು. ಭಾರತೀಯ ಚಿತ್ರರಂಗ ಹಾಗೂ ವಿದೇಶಗಳಲ್ಲೂ ಭರ್ಜರಿ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ ಡಂಕಿ(Dunky) ಹಾಗೂ ಸಲಾರ್(Salaar). ಬಿಗ್‌ಸ್ಟಾರ್. ಬಿಗ್‌ಬಜೆಟ್‌ ಹಾಗೂ ಸ್ಟಾರ್ ಡೈರೆಕ್ಟರ್ ಅಂದ್ರೆ ಸುಮ್ನೆನಾ? ಇವೆಲ್ಲವೂ ಒಂದಾದ್ರೆ ಸ್ಕ್ರಿನ್ ಮೇಲೆ ಬರೋ ಸಿನಿಮಾ ಹೇಗಿರುತ್ತೆ ಅಂತ ನೋಡೋದಕ್ಕೆ, ಅಭಿಮಾನಿಗಳು ಕುತೂಹಲದಿಂದ ಕಾಯ್ತಿದ್ದಾರೆ. ಡಂಕಿ, ರಾಜ್‌ಕುಮಾರ್ ಇರಾನಿ ನಿರ್ದೇಶನದ ಹಿಂದಿ ಸಿನಿಮಾ. ಇನ್ನು ಸಲಾರ್ ತೆಲಗು ಮೂಲದಾಗಿದ್ದು,  ಈಗ ಪ್ಯಾನ್ ಇಂಡಿಯಾ ಸಿನಿಮಾ(Pan India Movie) ಆಗಿದೆ. ನಟ ಶಾರುಖ್ ಈಗಾಗಲೇ ಪಠಾಣ್, ಜವಾನ್ ಸೂಪರ್ ಡೂಪರ್ ಹಿಟ್ ಸಿನಿಮಾ ಕೊಟ್ಟು, ಈ ಸಿನಿಮಾ ಕೂಡ ಗೆದ್ದು ಹ್ಯಾಟ್ರಿಕ್ ಆಗೋ ಆಸೆಯನ್ನ ಇಟ್ಟುಕೊಂಡಿದ್ದಾರೆ. ನಟ ಪ್ರಭಾಸ್(Prabhas) ಬಾಹುಬಲಿಯ ನಂತರ, ಸಾಹೋ, ರಾಧೆ ಶ್ಯಾಮ್, ಆದಿಪುರುಷ್ ಸಿನಿಮಾಗಳು ಬಂದರೂ ಸಾಲು ಸಾಲಾಗಿ ಸೋತಿದ್ದವು. ಆದ್ದರಿಂದ ಪ್ರಶಾಂತ್ ನೀಲ್ ನಿದೇರ್ಶನದ ಈ ಸಿನಿಮಾ ಕೆಜಿಎಫ್‌ನಂತೆಯೇ ಹಿಟ್ ಆಗ್ಬೇಕು ಅನ್ನೊದೇ ಪ್ರಭಾಸ್ ಲೆಕ್ಕಾಚಾರ. ಇದೇ ಡಿಸೆಂಬರ್ 22ರಂದು ರಿಲೀಸ್ ಆಗಲಿರೋ ಡಂಕಿ ಹಾಗೂ ಪ್ರಭಾಸ್ ಸಿನಿಮಾ ನೋಡೋದಕ್ಕೆ ಅಭಿಮಾನಿಗಳಲ್ಲಿ ಕಾಂಪಿಟೇಶನ್ ಶುರುವಾಗಿದೆ. ಹೊಂಬಾಳೆ ಸಂಸ್ಥೆ ಬಹಳ ಅದ್ಧೂರಿಯಾಗಿ ನಿರ್ಮಾಣ ಮಾಡಿರುವ ಸಲಾರ್‌ಗೆ ಭರ್ಜರಿಯಾಗಿ ಪ್ರಮೋಶನ್ ನಡೀತಾ ಇದೆ. ಕೆಲವರಂತೂ ಈಗಾಗಲೇ ಅಡ್ವಾಸ್ ಟಿಕೆಟ್ ಬುಕ್ ಮಾಡ್ಬಿಟ್ಟಿದ್ದಾರೆ. ಅದರಲ್ಲಿ ನಿರ್ದೆಶಕ ರಾಜ್ಮೌಳಿ  ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಮುಂಚೆಯೇ, ಫಸ್ಟ್ ಡೇ ಫಸ್ಟ್ ಟಿಕೆಟ್ನ್ನ ಖರೀದಿಸಿ, ಸಲಾರ್ ಸಿನಿಮಾ ನೋಡುವುದಕ್ಕೆ ಕಾತುರದಿಂದ ಕಾಯುತ್ತಿದ್ದಾರೆ.

ಇದನ್ನೂ ವೀಕ್ಷಿಸಿ:  ಸಲಾರ್ ಸಾಮ್ರಾಜ್ಯದ ಸುಲ್ತಾನ ಪ್ರಭಾಸ್..! 2ನೇ ಟ್ರೇಲರ್ ಔಟ್..ಪ್ರೇಕ್ಷಕ ಶಾಕ್..!

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more