‘ಸಲಾರ್’ ಅಬ್ಬರಕ್ಕೆ ಬ್ರೇಕ್ ಹಾಕೋದಕ್ಕೆ ‘ಡಂಕಿ’ ಮಾಸ್ಟರ್ ಪ್ಲಾನ್..? ಹೊಂಬಾಳೆ ಫಿಲ್ಮ್ಸ್‌ಗೆ ಆಗ್ತಿದೆಯಾ ಅನ್ಯಾಯ..!

‘ಸಲಾರ್’ ಅಬ್ಬರಕ್ಕೆ ಬ್ರೇಕ್ ಹಾಕೋದಕ್ಕೆ ‘ಡಂಕಿ’ ಮಾಸ್ಟರ್ ಪ್ಲಾನ್..? ಹೊಂಬಾಳೆ ಫಿಲ್ಮ್ಸ್‌ಗೆ ಆಗ್ತಿದೆಯಾ ಅನ್ಯಾಯ..!

Published : Dec 22, 2023, 10:10 AM IST

ಡಂಕಿ ಹಾಗೂ ಸಲಾರ್ ಬಾಕ್ಸಾಫೀಸ್‌ನಲ್ಲಿ ಸೆಡ್ಡು ಹೊಡೆಯೋಕೆ ರೆಡಿಯಾಗಿವೆ. ಒಂದ್ಕಡೆ ಕೆಜಿಎಫ್‌ನಂತ ಸೂಪರ್ ಡೂಪರ್ ಹಿಟ್ ಸಿನಿಮಾ ಕೊಟ್ಟ ಡೈರೆಕ್ಟರ್ ಪ್ರಶಾಂತ್‌ನೀಲ್‌ ಸಲಾರ್‌ ಇದ್ರೆ, ಇನ್ನೊಂದ್ಕಡೆ ಒಂದಕ್ಕಿಂತ ಒಂದು ಅದ್ಭುತ ಸಿನಿಮಾ ಕೊಟ್ಟಿರೋ ಡೈರೆಕ್ಟರ್ ರಾಜ್‌ಕುಮಾರ್ ಹಿರಾನಿ ಡಂಕಿ ಇದೆ. ಅಲ್ಲಿಗೆ ಎರಡು ಸಿನಿಮಾಗಳು ದರ್ಬಾರ್ ಮಾಡೋದಕ್ಕೆ ಪಕ್ಕಾ. 

ಪ್ರಭಾಸ್ ನಟನೆಯ ಸಲಾರ್ ಗೆಲ್ಲುತ್ತಾ. ಇಲ್ಲಾ ಶಾರುಖ್(Shah Rukh Khan) ನಟನೆಯ ಡಂಕಿ(Dunki) ಗೆಲ್ಲುತ್ತಾ ಅನ್ನೊ ಲೆಕ್ಕಾಚಾರ ನಡೀತಾ ಇದೆ. ಇದೆ ಗ್ಯಾಪ್‌ನಲ್ಲಿ ಸಲಾರ್ ಹಾಗೂ ಡಂಕಿ ನಡುವೆ ಯಾರಿಗೂ ಕಾಣದಂತ ಹೊಸ ಗೇಮ್ವೊಂದು ಶುರುವಾಗಿದೆ. ಅದೇ ಮಲ್ಟಿಪ್ಲೇಕ್ಸ್ಗೇಮ್. ‘ಡಂಕಿ’ ಹಾಗೂ ಸಲಾರ್ ಎರಡು ಘಟಾನುಘಟಿ ನಟರು ಹಾಗೂ ನಿರ್ದೇಶಕರ ಸಿನಿಮಾ. ಸಿನಿಪ್ರೇಕ್ಷಕರು ಯಾವ ಸಿನಿಮಾ ಮೊದಲು ನೋಡ್ಬೇಕು ಅನ್ನೊ ಕನ್ಫ್ಯೂಜನ್ನಲ್ಲಿದ್ದಾರೆ. ಇದೇ ಕಾರಣಕ್ಕೆ ಸಿಂಗಲ್ ಸ್ಕ್ರೀನ್ ಥೀಯೇಟರ್ಗಳು ಎರಡೂ ಸಿನಿಮಾಗಳನ್ನ, ದಿನಕ್ಕೆ ಎರಡೆರಡು ಬಾರಿ ಪ್ರದರ್ಶನ ಮಾಡ್ಬೇಕು ಎಂದು ತೀರ್ಮಾನಿಸಿದ್ದರು. ಆದರೆ ‘ಡಂಕಿ’ ಡಿಸ್ಟಿಬ್ಯೂಟರ್ಗಳು ಮಾತ್ರ ತಮಗೆ ಮಾತ್ರ ಒಂದೇ ದಿನಕ್ಕೆ 4 ಪ್ರದರ್ಶನಕ್ಕೆ ಅವಕಾಶ ನೀಡಬೇಕು ಅನ್ನೊ ಕಂಡಿಶನ್ ಹಾಕಿದ್ದಾರೆ. ‘ಡಂಕಿ’ ಸಿನಿಮಾ ಅಷ್ಟೆ, ಪ್ರದರ್ಶನ ಆಗ್ತಿದ್ರೆ, ‘ಸಲಾರ್’ ಪ್ರದರ್ಶನ ಮಾಡೋದಾದ್ರೂ ಯಾವಾಗ ಅನ್ನೊದೇ ಸಲಾರ್(Salaar) ಚಿತ್ರವಿತರಕರು ಮುಂದಿಟ್ಟಿರುವ ಪ್ರಶ್ನೆ. ಇನ್ನೂ ಮಲ್ಟಿಪ್ಲೆಕ್ಸ್ಗಳಲ್ಲಿ ಕೂಡ ಸಲಾರ್ಗಿಂಗ ಡಂಕಿ ಸಿನಿಮಾನೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರದರ್ಶನ ಆಗ್ತಿರೋ ಸಿನಿಮಾ ಆಗಿದೆ. ಪಿವಿಆರ್-ಐನಾಕ್ಸ್ ಮತ್ತು ವಮಿರಾಜ್ ಮಲ್ಟಿಪ್ಲೆಕ್ಸ್ಗಳಲ್ಲಿ ಸಲಾರ್ಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಪ್ರದರ್ಶನ ಮಾಡುವುದಾಗಿ ಕಮಿಟ್ ಆಗಿದೆ. ಈ ಮೊದಲು ಎರಡೂ ಸಿನಿಮಾಗಳಿಗೆ 50:50 ಅನುಪಾತದಲ್ಲಿ ಸ್ಕ್ರೀನ್ಗಳನ್ನು ನೀಡುವ ಒಪ್ಪಂದವನ್ನು ಮಲ್ಟಿಪ್ಲೆಕ್ಸ್ ಮಾಡಿಕೊಂಡಿತ್ತು. ಆದರೆ ಬಳಿಕ ಈ ಒಪ್ಪಂದವನ್ನು ಮುರಿದಿದೆ. ಇದರಿಂದ ‘ಸಲಾರ್’ ಸಿನಿಮಾಕ್ಕೆ ಅನ್ಯಾಯವಾಗಿದೆ. ಹೊಂಬಾಳೆ ಫಿಲ್ಮ್ಸ್‌ (Hombale Films) ತಮಗಾಗ್ತಿರೋ ಅನ್ಯಾಯದ ವಿರುದ್ಧ ದನಿ ಎತ್ತಿದ್ದಾರೆ. ಇದೇ ಕಾರಣಕ್ಕೆನೇ ಈಗ ‘ಸಲಾರ್ ಪಾರ್ಟ್ 1: ಸೀಸ್‍ಫೈರ್’ ಚಿತ್ರವನ್ನು ದಕ್ಷಿಣ ಭಾರತದ ಪಿವಿಆರ್-ಇನಾಕ್ಸ್ ಮತ್ತು ಮಿರಾಜ್‍ ಮಲ್ಟಿಪ್ಲೆಕ್ಸ್ ಗಳಲ್ಲಿ ಬಿಡುಗಡೆ ಮಾಡದಿರುವುದಕ್ಕೆ ನಿರ್ಧಾರ ಮಾಡಿದೆ. ಮಿಕ್ಕಂತೆ ಬೇರೆ ಮಲ್ಟಿಪ್ಲೆಕ್ಸ್ ಚೈನ್‍ಗಳಾದ ಸಿನಿಪೊಲಿಸ್‍ ಮತ್ತು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ‘ಸಲಾರ್’ ಸಿನಿಮಾ ನಿಗದಿತ ದಿನದಂದು ಬಿಡುಗಡೆ ಆಗಲಿದೆ.

ಇದನ್ನೂ ವೀಕ್ಷಿಸಿ:  2023ರಲ್ಲಿ ಸದ್ದು ಮಾಡಿದ ಟಾಪ್ 10 ಸಿನಿಮಾಗಳು..! ಹೊಸಬರಿಗೆ ಬಹುಪರಾಕ್ ಎಂದ ಕನ್ನಡ ಪ್ರೇಕ್ಷಕ..!

05:21ಕಿರಿಕ್ ಪಾರ್ಟಿ ಮರೆತಳಾ ರಶ್ಮಿಕಾ? ರಿಷಬ್–ರಕ್ಷಿತ್ ಹೆಸರಿಲ್ಲದ ಪೋಸ್ಟ್‌ಗೆ ಕನ್ನಡ ಫ್ಯಾನ್ಸ್ ಗರಂ
04:15ದೈವಗಳ ಟೈಮ್ ಮುಗಿತು.. ದೆವ್ವಗಳ ಸಮಯ ಶುರು.! ದೆವ್ವಗಳ ಆರ್ಭಟ.. ಬಾಹುಬಲಿ ಪ್ರಭಾಸ್​ ಧಗಧಗ..!
06:55ಕಾಟೇರನಂತೆಯೇ ಆಯ್ತು ದರ್ಶನ್ ಬದುಕು! ಕಂಬಿ ಹಿಂದೆ ಇನ್ನೆಷ್ಟು ಕಾಲ ಇರಬೇಕು ದಾಸ?
03:13Video: ರಕ್ಕಸಪುರದಲ್ಲಿ Raj B Shetty; ಮೊದಲ ಬಾರಿಗೆ ಖಾಕಿ ತೊಟ್ಟ ನಟ!
03:18ರಣಚಂಡಿ ರಶ್ಮಿಕಾ ಮಂದಣ್ಣ: ರಗಡ್‌ ಲುಕ್‌ನಲ್ಲಿ ಎಂಟ್ರಿಕೊಟ್ಟ ನ್ಯಾಷನಲ್‌ ಕ್ರಶ್‌!
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
04:19ಸಕ್ಕರೆಗೆ ಇರುವೆ ಮುತ್ತಿದಂತೆ ಸ್ಯಾಮ್​ಗೆ ಮುಗಿಬಿದ್ದ ಜನ: ಅಭಿಮಾನಿಗಳ ವರ್ತನೆಗೆ ಸಮಂತಾ ಹೈರಾಣು!
03:0445, ಮಾರ್ಕ್ ಜೊತೆ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ: ಡಿ.25ಕ್ಕೆ ಮೋಹನ್ ಲಾಲ್ 'ವೃಷಭ' ತೆರೆಗೆ
05:19ಕಾಲಿವುಡ್ ಬ್ಯೂಟಿ ನಿವೇತಾ ಥಾಮಸ್‌ರ ಆ ಫೋಟೋ ವೈರಲ್: 'ನಾನವಳಲ್ಲ' ಎಂದ ಚತುರ್ಭಾಷಾ ನಟಿ
02:50ಅವತಾರ್​ 3 ವರ್ಲ್ಡ್​​ವೈಡ್ ಮೆಗಾ ಓಪನಿಂಗ್: ಬೆಂಗಳೂರಿನಲ್ಲಿಂದು ಬಿಗ್ಗೆಸ್ಟ್ ಮ್ಯೂಸಿಕಲ್ ನೈಟ್
Read more