ಮತ್ತೆ ‘ದರ್ಬಾರ್’ ಶುರು ಮಾಡಿದ ವಿ. ಮನೋಹರ್: ನಕ್ಕು ನಲಿದ ಪ್ರೇಕ್ಷಕ

Jun 10, 2023, 1:11 PM IST

ಕನ್ನಡ ಸಿನಿ ಪ್ರೇಕ್ಷಕರಿಗೆ ನಗೆ ಗಡಲಲ್ಲಿ ತೇಲೋ ಸಿನಿಮಾಗಳು ಬರ್ತಿಲ್ಲ ಅನ್ನೋ ಕೊರಗಿತ್ತು. ಈಗ ಆ ಕೊರಗು ನೀಗಿಸಿ ಹೊಟ್ಟೆ ತುಂಬಾ ನಕ್ಕು ಬರೋದಕ್ಕೆ ಭರ್ಜರಿಯಾಗಿರೋ ಕಾಮಿಡಿ ಸಿನಿಮಾ ಒಂದು ಬಿಡುಗಡೆ ಆಗಿದೆ. ಆ ಸಿನಿಮಾವೇ ದರ್ಬಾರ್. ವಿ. ಮನೋಹರ್ ನಿರ್ದೇಶನದ ಈ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗಿದ್ದು, ಪ್ರೇಕ್ಷಕರು ಪಾಸಿಟಿವ್ ಓಪಿನಿಯನ್ ಕೊಟ್ಟಿದ್ದಾರೆ. ದರ್ಬಾರ್ ಸಿನಿಮಾದಲ್ಲಿ ಸತೀಶ್ ನಾಯಕನಾಗಿ ನಟಿಸಿದ್ದು, ಜನ ಮನ ಗೆಲ್ಲುತ್ತಿದ್ದಾರೆ. ಅಷ್ಟೆ ಅಲ್ಲ ದರ್ಬಾರ್ ಸಿನಿಮಾವನ್ನ ಅವರೇ ನಿರ್ಮಾಣ ಕೂಡ ಮಾಡಿದ್ದಾರೆ. ನಾಯಕಿಯಾಗಿ ಜಾಹ್ನವಿ ಬಣ್ಣ ಹಚ್ಚಿದ್ದು, ಕಾಮಿಡಿ ಕಥಾ ಹಂದರದ ದರ್ಬಾರ್ ಸಿನಿಮಾ ಬೆಳ್ಳಿತೆರೆಯಲ್ಲಿ ದರ್ಬಾರ್ ಶುರು ಮಾಡಿದೆ. ಈ ಸಿನಿಮಾದ ಮತ್ತೊಂದು ವಿಶೇಷತೆ ಅಂದ್ರೆ ಬರೋಬ್ಬರಿ 23 ವರ್ಷಗಳ ಬಳಿಕ ವಿ ಮನೋಹರ್ ದರ್ಬಾರ್ ಸಿನಿಮಾ ಮೂಲಕ ಮತ್ತೆ ನಿರ್ದೇಶನದ ಕ್ಯಾಪ್ ತೊಟ್ಟಿದ್ದಾರೆ.