Jul 23, 2024, 4:28 PM IST
ಬಜೆಟ್ ಮಂಡನೆ ಬಳಿಕ ಪ್ರಧಾನಿ ಮೋದಿ(Narendra Modi) ಮಾತನಾಡಿದ್ದು, ಶಿಕ್ಷಣ ಮತ್ತು ಕೌಶಲ್ಯಕ್ಕೆ ಹೊಸ ಮಾರ್ಗ ಸಿಗಲಿದೆ. ಈ ಬಜೆಟ್ ಯುವಕರಿಗೆ ಉತ್ತಮ ಅವಕಾಶ ನೀಡಲಿದೆ. ಹೊಸ ಅವಕಾಶಗಳನ್ನು ಸೃಷ್ಟಿಸುವ ಬಜೆಟ್ (Budget) ಇದಾಗಿದೆ ಎಂದು ನಿರ್ಮಲಾ ಸೀತಾರಾಮನ್ (Nirmala Sitharaman) ಬಜೆಟ್‌ನನ್ನ ಮೋದಿ ಹಾಡಿಹೊಗಳಿದ್ದಾರೆ. ಬಜೆಟ್‌ನಿಂದ ಆರ್ಥಿಕತೆಗೆ ಹೊಸ ಗತಿ ಸಿಗಲಿದೆ. ಯುವಕರ ಶಿಕ್ಷಣಕ್ಕೆ ಉತ್ತಮ ಅವಕಾಶ ಸಿಗಲಿದೆ. ಬಜೆಟ್‌ನಲ್ಲಿ ಎಲ್ಲಾ ಕ್ಷೇತ್ರಗಳಿಗೂ ಒತ್ತು ನೀಡಲಾಗಿದೆ ಎಂದು ಬಜೆಟ್ ಮಂಡನೆ ಬಳಿಕ ಪ್ರಧಾನಿ ಮೋದಿ ಹೇಳಿದ್ದಾರೆ. ಮುದ್ರಾ ಯೋಜನೆ ಸಾಲದ ಮೀತಿ ಹೆಚ್ಚಳವಾಗಿದೆ. ಸಣ್ಣ, ಮಧ್ಯಮ ಕೈಗಾರಿಕೆಗೆ ಉತ್ತೇಜನ ನೀಡಲಾಗಿದೆ. ಭಾರತ ಜಾಗತಿಕ ಉತ್ಪಾದನೆಯ ಹಬ್ ಆಗಲಿದೆ. ‘ಏಂಜಲ್ ಟ್ಯಾಕ್ಸ್ ರದ್ದು ಮಹತ್ವದ ಹೆಜ್ಜೆ’. ಭಾರತದತ್ತ ಇಡೀ ಜಗತ್ತು ತಿರುಗಿ ನೋಡ್ತಿದೆ. ರಕ್ಷಣಾ ಕ್ಷೇತ್ರದಲ್ಲಿ ಆತ್ಮ ನಿರ್ಭರ್ ಅಳವಡಿಕೆ. ಹೆದ್ದಾರಿ ಅಭಿವೃದ್ಧಿಗೂ ಬಜೆಟ್ನಲ್ಲಿ ಒತ್ತು, ರೈತರು ದೇಶದ ಬೆನ್ನೆಲುಬಾಗಿದ್ದಾರೆ ಎಂದು ಮೋದಿ ಹೇಳಿದ್ದಾರೆ. ಹೊಸ ತೆರಿಗೆ ಪದ್ಧತಿಯನ್ನೂ ಜಾರಿ ಮಾಡಲಾಗಿದೆ. ಇದು ಸರ್ವಸ್ಪರ್ಶಿ ಬಜೆಟ್ . ದೇಶದ ಅಭಿವೃದ್ಧಿಗೆ ಬಜೆಟ್ ಸಹಕಾರಿಯಾಗಲಿದೆ. ಹೊಸ ಅವಕಾಶಗಳನ್ನ ದಲಿತರು, ಹಿಂದುಳಿದವರ, ಮಧ್ಯಮ ವರ್ಗದವರಿಗೆ ಹೊಸ ತಾಕತ್ ನೀಡುತ್ತೆ ಎಂದು ಮೋದಿ ಹೇಳಿದ್ದಾರೆ.
ಇದನ್ನೂ ವೀಕ್ಷಿಸಿ: ದಾವಣಗೆರೆಯ ಅಂಗನವಾಡಿ ಕೇಂದ್ರಗಳಿಗೆ ನ್ಯಾಯಾಧೀಶರ ಭೇಟಿ..ಅವ್ಯವಸ್ಥೆ ಕಂಡು ತ್ರೀವ ಆಕ್ರೋಶ