ನಾನು ಸೆಲೆಬ್ರೆಟಿಯಾಗಿದ್ದೇನೆ; ದೌಲತ್ತು ಮುಂದುವರಿಸಿದ ದೇಶದ್ರೋಹಿ ಅಮೂಲ್ಯ!

Feb 29, 2020, 7:58 PM IST

ಬೆಂಗಳೂರು(ಫೆ.29): ಪೌರತ್ವ ಕಾಯ್ದೆ(CAA) ವಿರೋಧಿ ಪ್ರತಿಭಟನೆಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ದೇಶದ್ರೋಹಿ ಅಮೂಲ್ಯ ಇದೀಗ SIT ತನಿಖಾಧಿಕಾರಿಗಳ ಮುಂದೆ ದೌಲತ್ತು ತೋರಿಸುತ್ತಿದ್ದಾಳೆ. ಜೈಲಲ್ಲಿದ್ದರೂ ಅಮೂಲ್ಯ ಮೊಂಡುವಾದ ಕಡಿಮೆಯಾಗಿಲ್ಲ. ಇದೀಗ ನಾನು ಸೆಲೆಬ್ರೆಟಿಯಾಗಿದ್ದೇನೆ ಎಂದು ಅಧಿಕಾರಿಗಳನ್ನೇ ವ್ಯಂಗ್ಯವಾಡುತ್ತಿದ್ದಾಳೆ.