ಲಕ್ಷ್ಮೀ ನಿವಾಸದಿಂದ ಮತ್ತೊಂದು ಪ್ರಮುಖ ಪಾತ್ರ ಮುಕ್ತಾಯ; ಇನ್ಮುಂದೆ ಇವರಿಬ್ಬರದ್ದೇ ಆಟ?

Published : Apr 12, 2026, 02:22 PM IST
Lakshmi Nivasa

ಸಾರಾಂಶ

ಜೀ ಕನ್ನಡದ 'ಲಕ್ಷ್ಮೀ ನಿವಾಸ' ಧಾರಾವಾಹಿಯಿಂದ ಪ್ರಮುಖ ಪಾತ್ರ ಮುಕ್ತಾಯಗೊಳಿಸಲಾಗಿದೆ. ಈ ಹಿಂದೆ ಹಲವು ಪಾತ್ರಗಳು ಕಣ್ಮರೆಯಾಗಿದ್ದು, ಇದೀಗ ಜಾನು ವಾಪಸ್ ಬಂದಿರುವುದರಿಂದ ಕಥೆಯು ಜಾನು ಮತ್ತು ಜಯಂತ್ ನಡುವಿನ ಸಂಘರ್ಷದತ್ತ ಸಾಗುವ ಸೂಚನೆ ನೀಡಿದೆ.

Kannada Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಲಕ್ಷ್ಮೀ ನಿವಾಸ ಮತ್ತೊಮ್ಮೆ ಮೈಲೇಜ್ ಪಡೆದುಕೊಳ್ಳುತ್ತಿದೆ. ಆದ್ರೆ ಧಾರಾವಾಹಿಯಲ್ಲಿನ ಒಂದೊಂದೇ ಪ್ರಮುಖ ಪಾತ್ರಗಳು ಮುಕ್ತಾಯಗೊಳ್ಳುತ್ತಿರೋದು ವೀಕ್ಷಕರಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ. ಕೆಲ ದಿನಗಳ ಹಿಂದೆ ರವಿಶಂಕರ್, ಸೌಪರ್ಣಿಕಾ, ಶ್ರೀಕಾಂತ್ ಮೂರು ಪಾತ್ರಗಳನ್ನು ಮುಕ್ತಾಯಗೊಳಿಸಲಾಯ್ತು. ಅದೇ ರೀತಿ ವಿಶ್ವನ ತಾಯಿ ಲಲಿತಾ ಪಾತ್ರವೂ ಮುಕ್ತಾಯಗೊಳಿಸಲಾಗಿದೆ. ಇದೀಗ ಮತ್ತೊಂದು ಪಾತ್ರ ಕೊನೆಯಾಗಿದೆ. ಇದು ತಾತ್ಕಾಲಿಕವೋ ಅಥವಾ ಮತ್ತೆ ಈ ಪಾತ್ರ ತೆರೆ ಮೇಲೆ ಬರುತ್ತಾ ಎಂಬುದರ ಬಗ್ಗೆ ಅನುಮಾನ ಮೂಡಿದೆ.

ಯಾವ ಪಾತ್ರ ಮುಕ್ತಾಯ?

ಚಿನ್ನುಮರಿಯನ್ನು ಕಳೆದುಕೊಂಡಿದ್ದ ಸೈಕೋ ಜಯಂತ್‌, ತನ್ನೊಂದಿಗಿರಲು ತನ್ನ ಸಾಕಿ ಬೆಳೆಸಿದ ತಾಯಿ ಸಮಾನರಾದ ಶಾಂತಮ್ಮಳನ್ನು ಮನೆಗೆ ಕರೆದುಕೊಂಡು ಬಂದಿದ್ದನು. ಜಯಂತ್‌ನ ಸೈಕೋತನ ತಿಳಿದಿದ್ರೂ ಆತನ ಬಲವಂತಕ್ಕೆ ಆತನೊಂದಿಗೆ ಶಾಂತಮ್ಮ ಬಂದಿದ್ದಳು. ಕಳೆದ ಹಲವು ತಿಂಗಳುಗಳಿಂದ ಜಯಂತ್‌ಗೆ ತಾಯಿಯಾಗಿ ಶಾಂತಮ್ಮಾ ಕಾಣಿಸಿಕೊಂಡಿದ್ದರು. ಜಾನು ಬದುಕಿರೋ ವಿಷಯ ತಿಳಿದಿದ್ರೂ ಶಾಂತಮ್ಮಾ ಈ ವಿಷಯವನ್ನು ಜಯಂತ್ ಬಳಿ ಹೇಳಿರಲಿಲ್ಲ. ಇದೀಗ ಜಾನು ಮತ್ತೆ ಜಯಂತ್‌ನ ಬಂಗಾರದ ಪಂಜರಕ್ಕೆ ಬಂದಿದ್ದಾಳೆ.

ಜಾನು ಬಂದ ಖುಷಿಯಲ್ಲಿ ಜಯಂತ್ ಎಲ್ಲವನ್ನೂ ಮರೆತು ಸಂತಸದಲ್ಲಿ ತೇಲಾಡುತ್ತಿದ್ದಾನೆ. ಜಾನು ಮತ್ತು ಜಯಂತ್‌ಗೆ ಆರತಿ ಬೆಳಗಿ ಶಾಂತಮ್ಮಾ ಮನೆ ತುಂಬಿಸಿಕೊಂಡಿದ್ದಾಳೆ. ಈಗಾಗಲೇ ಪ್ರೋಮೋದಲ್ಲಿ ಜಯಂತ್‌ಗೆ ಜಾನು ನರಕ ತೋರಿಸುತ್ತಿರೋದನ್ನು ಹೇಳಲಾಗಿದೆ. ಈಗ ಜಾನು ಮನೆಗೆ ಬರುತ್ತಿದ್ದಂತೆ ಶಾಂತಮ್ಮಳನ್ನು ತನ್ನ ಮನೆಗೆ ಹೋಗಿ ಬರುವಂತೆ ಹೇಳಿದ್ದಾರೆ. ಮೂರ್ನಾಲ್ಕು ದಿನ ನಿಮ್ಮ ಮನೆಗೆ ಹೋಗಿ ಬನ್ನಿ ಎಂದು ಜಾನು ಹೇಳುತ್ತಿದ್ದಂತೆ ಶಾಂತಮ್ಮಾ ಒಪ್ಪಿಕೊಂಡಿದ್ದಾಳೆ. ಇತ್ತ ಜಯಂತ್ ಸಹ ಮೂರ್ನಾಲ್ಕು ದಿನದಲ್ಲಿಯೇ ಬರಬೇಕು. ಇಲ್ಲಾಂದ್ರೆ ಜಾನುಗೆ ಮನೆಗೆಲಸ ಹೆಚ್ಚಾಗುತ್ತೆ ಎಂದು ಶಾಂತಮ್ಮಾಳನ್ನು ಜಯಂತ್ ಬೀಳ್ಕೊಟ್ಟಿದ್ದಾನೆ. ಇಲ್ಲಿಗೆ ಶಾಂತಮ್ಮಳ ಪಾತ್ರ ಮುಕ್ತಾಯವಾಯ್ತಾ ಎಂದು ಸೀರಿಯಲ್ ವೀಕ್ಷಕರು ಪ್ರಶ್ನೆ ಮಾಡುತ್ತಿದ್ದಾರೆ.

ಕಾಣೆಯಾಗಿರುವ ಮಂಗಳಾ ಕುಟುಂಬ

ಇನ್ನು ಸೀರಿಯಲ್ ಆರಂಭದ ಕೆಲವು ದಿನ ಶ್ರೀನಿವಾಸ್-ಲಕ್ಷ್ಮೀ ದಂಪತಿಗೆ ಮಂಗಳಾ ಎಂಬ ಮಗಳಿದ್ದಳು. ಆದ್ರೆ ಕಳೆದ ಒಂದೂವರೆ ವರ್ಷದಿಂದ ಮಂಗಳಾ ಪಾತ್ರವೇ ಸೀರಿಯಲ್‌ನಲ್ಲಿ ಕಾಣಿಸುತ್ತಿಲ್ಲ. ಇತ್ತೀಚೆಗೆ ಶ್ರೀನಿವಾಸ್-ಲಕ್ಷ್ಮೀ ದಂಪತಿಯ ಮರುವಿವಾಹಕ್ಕೂ ಮಂಗಳಾ ಗೈರಾಗಿದ್ದಳು. ಮತ್ತೊಂದೆಡೆ ಚೆಲುವಿ ತಾಯಿ ಪಾತ್ರವನ್ನು ಸಹ ತೆರೆಯ ಹಿಂದೆ ಸರಿಸಲಾಗಿದೆ.

ಇದನ್ನೂ ಓದಿ: ಪ್ರೀತಿಯ ಹೆಸ್ರಲ್ಲಿ ಮೋಸದಾಟ: ಕನ್ನಡದ ಈ ಸೀರಿಯಲ್​ ನಾಯಕರಿಗೆ ಶುರುವಾಯ್ತು ನಡುಕ; ಏನಿವರ ಸ್ಟೋರಿ?

ಹೀಗೆ ಒಂದೊಂದೇ ಪಾತ್ರಗಳು ಕೊನೆಯಾಗ್ತೀರೊದರಿಂದ ಸೀರಿಯಲ್ ಮುಗಿಯಲಿದೆಯಾ ಎಂಬ ಅನುಮಾನ ವೀಕ್ಷಕರಲ್ಲಿ ಮೂಡಿದೆ. ಆದ್ರೆ ಕೆಲವರು ಲಕ್ಷ್ಮೀ ನಿವಾಸ ಸೀರಿಯಲ್‌ ಕಥೆಯನ್ನು ಹೊಂದಿದ್ದು, ಮುಂದುವರಿಯಲಿದೆ ಎಂಬ ಮಾತುಗಳು ಕೇಳಿ ಬಂದಿವೆ. ಲಲಿತಾಳನ್ನು ಕೊ0ಲೆ ಮಾಡಿರೋದು ಜಯಂತ್ ಎಂಬ ಸತ್ಯ ಎಲ್ಲರಿಗೂ ಗೊತ್ತಾಗಬೇಕಿದೆ. ಲಕ್ಷ್ಮೀಯನ್ನು ತಂಗಿ ಎಂದು ನರಸಿಂಹ ಒಪ್ಪಿಕೊಳ್ಳಬೇಕಿದೆ, ತನು-ವಿಶ್ವನ ಮದುವೆ ಆಗಬೇಕಿದೆ, ಹರೀಶ್‌ನ ಸಂಸಾರವೂ ಇನ್ನು ಸರಿಯಾಗಿಲ್ಲ, ಹಾಗೆಯೇ ನೀಲು ಉದ್ದೇಶ ಏನು ಎಂಬುವುದು ಸಹ ಗೊತ್ತಾಗಬೇಕಿದೆ.

ಇದನ್ನೂ ಓದಿ: ಸೈಕೋ ಜಯಂತ್‌ಗೆ ನರಕ ತೋರಿಸಿದ ಜಾನು; ಇದು ಚಿನ್ನುಮರಿಯ 2.O ಅಧ್ಯಾಯ, ವೀಕ್ಷಕರು ಹ್ಯಾಪಿ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Karna Serial: ಕರ್ಣನಿಗೆ ಠಕ್ಕರ್ ಕೊಡೋಕೆ ಬಂದ ಹ್ಯಾಂಡ್​ಸಮ್​ ಅರ್ಜುನ್​ ; ಗಗನ್ ಗ್ರ್ಯಾಂಡ್ ಎಂಟ್ರಿಗೆ ಕಿರಣ್‌ ರಾಜ್ ಶಾಕ್
Bigg Boss ರಕ್ಷಿತಾ ಶೆಟ್ಟಿ- ರಘು Fish Fry ಮಾಡುವಾಗಿ ಧಗ್ಗನೆ ಬಂದ ಬೆಂಕಿ : ಶಾಕಿಂಗ್​ ವಿಡಿಯೋ ವೈರಲ್