Dance Karnataka Dance Finale 2026: ಸೆಲೆಬ್ರಿಟಿಗಳ ಡ್ಯಾನ್ಸ್‌ ಯುದ್ಧದಲ್ಲಿ ಗೆಲ್ಲೋರು ಯಾರು?

Published : Apr 11, 2026, 10:45 AM IST
Dance Karnataka Dance Finale 2026

ಸಾರಾಂಶ

DKD Show Contestants: ಡಾನ್ಸ್ ಕರ್ನಾಟಕ ಡಾನ್ಸ್ ಶೋ ಈಗ ಅಂತಿಮ ಘಟ್ಟ ತಲುಪಿದ್ದು ಫಿನಾಲೆ ಇದೆ ಏಪ್ರಿಲ್ 11 ಶನಿವಾರ ಸಂಜೆ 7 ಗಂಟೆಯಿಂದ 9 ಗಂಟೆಯವರೆಗೆ ಮತ್ತು ಏಪ್ರಿಲ್ 12 ಭಾನುವಾರದಂದು ಸಂಜೆ 7 ಗಂಟೆಯಿಂದ 9:30 ರವರೆಗೆ ಪ್ರಸಾರ ಆಗಲಿದೆ. 

ಸೆಲೆಬ್ರಿಟಿ ಸ್ಪರ್ಧಿಗಳು ಮತ್ತು ಡ್ಯಾನ್ಸರ್ ಗಳು ಜೋಡಿಯಾಗಿ ಪರ್ಫಾರ್ಮೆನ್ಸ್ ನೀಡಿದ ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್ ಶೋನಲ್ಲಿ ವಿವಿಧ ಬಗೆಯ ನೃತ್ಯ ಪ್ರಕಾರಗಳು, ಥೀಮ್‌ಗಳಿದ್ದಿದ್ದು ಮಾತ್ರವಲ್ಲದೆ ಈ ಕಾರ್ಯಕ್ರಮ ಕಳೆದ ಕೆಲವು ವಾರಗಳಿಂದ ಚಾನೆಲ್‌ನ ವೀಕೆಂಡ್ ಕಾರ್ಯಕ್ರಮಗಳಲ್ಲಿ ಪ್ರಮುಖ ಭಾಗವಾಗಿತ್ತು.

ತೀರ್ಪುಗಾರರು!

ಡಾ. ಶಿವರಾಜ್ ಕುಮಾರ್, ರಚಿತಾ ರಾಮ್, ಅರ್ಜುನ್ ಜನ್ಯ, ವಿಜಯ್ ರಾಘವೇಂದ್ರ ಅವ್ರು ಡಾನ್ಸ್ ಕರ್ನಾಟಕ ಡಾನ್ಸ್ ಶೋನ ತೀರ್ಪುಗಾರಾಗಿದ್ದರು. ಇನ್ನು ಈ ಶೋನ ನಿರೂಪಣೆಯನ್ನು ಎಲ್ಲರ ಅಚ್ಚುಮೆಚ್ಚಿನ ಅನುಶ್ರೀ ಮಾಡುತ್ತಿದ್ದಾರೆ. ಈ ಸೀಸನ್‌ನಲ್ಲಿ ತೀರ್ಪುಗಾರರು ಸ್ಪರ್ಧಿಗಳ ಡ್ಯಾನ್ಸ್ ನೋಡಿ ತಮ್ಮ ತೀರ್ಪನ್ನು ನೀಡಿರುವುದು ಸ್ಪರ್ಧಿಗಳ ಮತ್ತಷ್ಟು ಸುಧಾರಣೆಗೆ ಕಾರಣಾವಾಯಿತು. ಈ ಶೋನಲ್ಲಿ ನೃತ್ಯದ ಮೂಲಕ ಕಥೆ ಹೇಳುವುದಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಇಲ್ಲಿ ಶಾಸ್ತ್ರೀಯ, ಜಾನಪದ ಮತ್ತು ಸಿನಿಮಾ ಶೈಲಿಯ ನೃತ್ಯಗಳನ್ನು ವಿಷಯ ಅಥವಾ ಕಥೆಯ ಆಧಾರದ ಮೇಲೆ ಪ್ರದರ್ಶಿಸಲಾಗಿದ್ದು, ಇದು ವೀಕ್ಷಕರಿಗೆ ಭಾವನಾತ್ಮಕವಾಗಿ ಮತ್ತಷ್ಟು ಹತ್ತಿರವಾಯ್ತು.

ವಿಜೇತರು ಯಾರು?

ಪೂಜಾ ಮತ್ತು ಅನೂಪ್, ಸಿದ್ದೇಗೌಡ್ರು ಮತ್ತು ದೀಶಲ್, ಮೋಹಿತ್ ಮತ್ತು ಅನನ್ಯ, ಹರ್ಷ ಮತ್ತು ನಂದು ಹಾಗೂ ಶಿಕ್ಷಿತ್ ತಾಪಾ ಮತ್ತು ಸಂಜನಾ ಫೈನಲಿಸ್ಟ್‌ಗಳಾಗಿದ್ದು ಇವರ ನಡುವೆ ಗ್ರಾಂಡ್ ಫಿನಾಲೆಯಲ್ಲಿ ಪೈಪೋಟಿ ನಡೆಯಲಿದೆ. ವಿಭಿನ್ನ ಶೈಲಿಯ ನೃತ್ಯಗಳನ್ನು ಅದ್ಭುತವಾಗಿ ಪ್ರದರ್ಶಿಸಿದ ಎಲ್ಲಾ ಜೋಡಿಗಳು ಈಗ ಅಂತಿಮ ಸುತ್ತನ್ನು ತಲುಪಿದ್ದಾರೆ. ಫಿನಾಲೆ ಎಪಿಸೋಡ್‌ನಲ್ಲಿ ಎಲ್ಲ ಜೋಡಿಗಳು ಪರ್ಫಾರ್ಮ್ ಮಾಡಿದ ನಂತರ ಈ ಸೀಸನ್‌ನ ವಿಜೇತರು ಯಾರು ಅಂತ ಘೋಷಣೆ ಮಾಡಲಾಗುತ್ತದೆ. ಇನ್ನು ಡಾನ್ಸ್ ಕರ್ನಾಟಕ ಡಾನ್ಸ್ ಈ ಸೀಸನ್‌ನ ವಿಜೇತರು ಯಾರಾಗಲಿದ್ದಾರೆ ಅನ್ನೋ ಕುತೂಹಲ ವೀಕ್ಷಕರಲ್ಲಿ ಜಾಸ್ತಿ ಆಗಿದೆ.

ಯಾರು ವಿಜೇತರು?

ಸೀಸನ್ ಈಗ ಅಂತಿಮ ಹಂತಕ್ಕೆ ಬಂದಿದ್ದು ಸ್ಪರ್ಧೆ ಮತ್ತಷ್ಟು ಕಠಿಣಗೊಂಡಿದ್ದೆ. ಫಿನಾಲೆಯಲ್ಲಿ ಪ್ರತಿ ಜೋಡಿಯು ಅದ್ಭುತವಾಗಿ ಪ್ರದರ್ಶನ ನೀಡುತ್ತಿರುವುದರಿಂದ ಗೆಲ್ಲುವವರು ಯಾರು ಎಂದು ಹೇಳುವುದು ಕಷ್ಟವಾಗಿದೆ. ಈ ಅಂತಿಮ ಸಂಚಿಕೆಗಳಲ್ಲಿ ವಿಜೇತರು ಯಾರೆಂದು ತಿಳಿಯಲಿದ್ದು, ಎಲ್ಲರಲ್ಲಿಯೂ ಕುತೂಹಲ ಮೂಡಿಸಿದೆ.

ಯಾವಾಗ ಪ್ರಸಾರ ಆಗಲಿದೆ?

ಯಾರಾಗಲಿದ್ದಾರೆ ಡಾನ್ಸ್ ಕರ್ನಾಟಕ ಡಾನ್ಸ್ ಈ ಸೀಸನ್ ನ ವಿನ್ನರ್? ತಿಳ್ಕೊಳೋಕೆ ವೀಕ್ಷಿಸಿ ಜೀ ಕನ್ನಡ ಏಪ್ರಿಲ್ 11 ಶನಿವಾರ ಸಂಜೆ 7 ಗಂಟೆಯಿಂದ 9 ಗಂಟೆಯವರೆಗೆ ಮತ್ತು ಏಪ್ರಿಲ್ 12 ಭಾನುವಾರದಂದು ಸಂಜೆ 7 ಗಂಟೆಯಿಂದ 9:30 ರವರೆಗೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಂದು ಪ್ರೀತಿ ಹೆಚ್ಚಾಗಿತ್ತು, ಬ್ಯಾಲೆನ್ಸ್ ಕಡಿಮೆ ಇತ್ತು: ನಟ ಸುದರ್ಶನ್‌ ಮನೆಗೆ Bhagyalakshmi ಬಂದು 10 ವರ್ಷ!
Anchor Anushree ಗುಡ್​ನ್ಯೂಸ್​ ಯಾವಾಗ? ಫ್ಯಾನ್ಸ್​ ಕಾಡ್ತಿರೋ ಪ್ರಶ್ನೆಗೆ ಉತ್ತರ ಕೊಟ್ಟೇಬಿಟ್ರು ನಟಿ