
ಬಿಗ್ ಬಾಸ್ ಕನ್ನಡ ಸೀಸನ್ 12ರ ವಿಜೇತ ಗಿಲ್ಲಿ ನಟ, ತನ್ನ ಕೈಯಲ್ಲಿ ಜಿಮ್ ವರ್ಕೌಟ್ ಸಾಧ್ಯವಿಲ್ಲ ಎಂದಿದ್ದ ಸಹ ಸ್ಪರ್ಧಿ ಮ್ಯೂಟೆಂಟ್ ರಘು ಅವರಿಗೆ ತಿರುಗೇಟು ನೀಡಿದ್ದಾರೆ. ಜಿಮ್‌ನಲ್ಲಿ ಕಸರತ್ತು ನಡೆಸುತ್ತಿರುವ ಗಿಲ್ಲಿ ನಟನ ವಿಡಿಯೋ ಇದೀಗ ವೈರಲ್ ಆಗಿದ್ದು, ರಘು ಮಾತನ್ನು ಸುಳ್ಳಾಗಿಸಿದ್ದಾರೆ ಎಂದು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧೆಯಲ್ಲಿ ಕುಚಿಕುಗಳಾಗಿದ್ದ ಸ್ಪರ್ಧಿಗಳೆಂದರೆ ಟ್ರೋಫಿ ಗೆದ್ದ ಗಿಲ್ಲ ನಟ ಮತ್ತು ವೇಟ್ ಲಿಫ್ಟರ್ ಮ್ಯೂಟೆಂಟ್ ರಘು ಅವರು. ಇಬ್ಬರೂ ಆರಂಭದಲ್ಲಿ ಹಾವು ಮುಂಗುಸಿಯ ಹಾಗೆ ಎಷ್ಟು ಕಿತ್ತಾಡಿಕೊಂಡಿದ್ದ ಕೊನೆಗೆ ಅಷ್ಟೇ ಆತ್ಮೀಯರಂತೆ ಅಂಟಿಕೊಂಡಿದ್ದರು. ಇನ್ನು ಗಿಲ್ಲಿನಟ ಯಾವುದೇ ಫಿಸಿಕಲ್ ಟಾಸ್ಕ್‌ನಲ್ಲಿ ಅಗ್ರೆಸಿವ್ ಪ್ರದರ್ಶನ ನೀಡದಿದ್ದರೂ, ಮಾತು ಮತ್ತು ಆತನ ಮನರಂಜೆಯೇ ಟ್ರೋಫಿ ಗೆಲುವುಗೆ ಕಾರಣವಾಗಿತ್ತು. ಇನ್ನು ಬಿಗ್ ಬಾಸ್ ರಿಯಾಲಿಟಿ ಶೋ ಮುಕ್ತಾಯವಾಗಿ ಮೂರ್ನಾಲ್ಕು ತಿಂಗಳು ಕಳೆದರೂ ಅಭಿಮಾನಿಗಳ ಕ್ರೇಜ್ ಮಾತ್ರ ಇನ್ನೂ ಹಾಗೆಯೇ ಇದೆ. ಎಲ್ಲಿಯೇ ಹೋದರೂ, ಗಿಲ್ಲಿ ನಟ ಸೇರಿದಂತೆ ಬಿಗ್ ಬಾಸ್ ಫೈನಲ್‌ಗೆ ಬಂದ ಎಲ್ಲ ಕಂಟೆಸ್ಟೆಂಟ್‌ಗಳನ್ನು ತುಂಬಾ ಪ್ರೀತಿಯಿಂದ, ಆತ್ಮೀಯತೆಯಿಂದ ಕಾಣುತ್ತಾರೆ.
ಅದರಲ್ಲಿಯೂ, ಗಿಲ್ಲಿ ನಟನ ಸಹಚರರಾಗಿದ್ದ ನಟಿ ಕಾವ್ಯಾ ಶೈವ, ಮ್ಯೂಟೆಂಟ್ ರಘು ಹಾಗೂ ರಕ್ಷಿತಾ ಶೆಟ್ಟಿ ಅವರನ್ನು ಜನ ಮೆರೆಸುವುದನ್ನು ಮಾತ್ರ ಬಿಟ್ಟಿಲ್ಲ. ಅವರು ಎಲ್ಲಿಗೇ ಹೋದರೂ ಸಾವಿರಾರು ಅಭಿಮಾನಿಳು ಸೇರಿ, ಸೆಲ್ಫಿಗೆ ಹಾಗೂ ಹ್ಯಾಂಡ್‌ಶೇಕ್ ಮಾಡುವುದಕ್ಕೆ ಮುಗಿಬೀಳುತ್ತಾರೆ. ಜೊತೆಗೆ ಹಲವು ಕಾರ್ಯಕ್ರಮಗಳಿಗೆ ಈ ಸ್ಪರ್ಧಿಗಳನ್ನು ಸ್ಟಾರ್ ಪ್ರಚಾರಕರಾಗಿ, ಕಾರ್ಯಕ್ರಮದ ರಾಯಭಾರಿಗಳಾಗಿ ಕರೆಸಿಕೊಳ್ಳುತ್ತಾರೆ. ಇದಕ್ಕೆ ಬಿಗ್ ಬಾಸ್ ಸ್ಪರ್ಧಿಗಳೂ ಕೂಡ ಯಾವುದೇ ಮೋಸ ಇಲ್ಲದೇ ಬಂದು ತಮ್ಮ ಕೈಲಾದ ಮನರಂಜನೆಯನ್ನಂತೂ ನೀಡುತ್ತಾರೆ.
ಇನ್ನು ಗಿಲ್ಲಿ ನಟ ಫಿಸಿಕಲ್ ಆಗಿ ಸ್ಟ್ರಾಂಗ್ ಇಲ್ಲದ ಕಾರಣ, ಅವನಿಗೆ ಎಷ್ಟೇ ಹೇಳದರೂ ಫಿಸಿಕಲ್ ಫಿಟ್ನೆಸ್ ಬಗ್ಗೆ ಗಮನ ಹರಿಸುತ್ತಿರಲಿಲ್ಲ. ಈ ಬಗ್ಗೆ ಸ್ವತಃ ಬಿಗ್ ಬಾಸ್ ಮನೆಯಲ್ಲಿ ಜಿಮ್ ಟ್ರೈನರ್ ಮ್ಯೂಟೆಂಟ್ ರಘು ಅವರೇ ಫಿಸಿಕಲ್ ಫಿಟ್ನೆಸ್‌ಗೆ ಸಲಹೆ ನೀಡಿದ್ದರು. ಆದರೆ, ಇದ್ಯಾವುದನ್ನೂ ಗಿಲ್ಲಿನಟ ಮನಸ್ಸಿಗೆ ಹಾಕಿಕೊಳ್ಳುವುದು ದೂರದ ಮಾತು. ಮುಂದುವರೆದು, ಒಂದು ಕಿವಿಯಲ್ಲಿ ಕೇಳಿಸಿಕೊಂಡು ಇನ್ನೊಂದು ಕಿವಿಯಲ್ಲಿ ಬಿಡುವುದಿರಲಿ, ಕಿವಿಯೊಳಗೆ ಹಾಕಿಕೊಂಡಿರಲಿಲ್ಲ.
ಇದೆಲ್ಲವನ್ನು ನೋಡಿದ್ದ ಮ್ಯೂಟೆಂಟ್ ರಘು ಅವರಿಗೆ ಅಭಿಮಾನಿಗಳು ನೀವು ಗಿಲ್ಲಿ ನಟನಿಗೆ ಜಿಮ್‌ನಲ್ಲಿ ಟ್ರೈನಿಂಗ್ ಮಾಡುವಂತೆ ಕೇಳುತ್ತಾರೆ. ಆಗ ರಘು ಅವರು 'ಅವನ ಕೈಲಿ ಏನೂ ಆಗೊಲ್ಲ. ಮಾತು ಬಿಟ್ಟರೆ ಅವನ ಕೈಯಿಂದ ಏನೂ ಆಗುವುದಿಲ್ಲ. ಚೆನ್ನಾಗಿ ಮಾತಾಡ್ತಾನೆ, ಅದೊಂದೇ ಮಾಡೋದು ಅವನು' ಎಂದು ನಗಾಡುತ್ತಾ ಹೇಳುತ್ತಾರೆ. ನೀವೇ ಅವರಿಗೆ ದಯವಿಟ್ಟು ಟ್ರೈನ್ ಮಾಡಿ ಎಂದು ಕೇಳಿದಾಗ 'ಟ್ರೈನ್ ಮಾಡೋದಕ್ಕೂ ಆಗೊಲ್ಲ, ಅವನು ಜಿಮ್ ಮಾಡೋದೂ ಇಲ್ಲ' ಎಂದು ಹೇಳುತ್ತಾರೆ.
ಇದರ ಬೆನ್ನಲ್ಲಿಯೇ ಗಿಲ್ಲಿನಟ ಇದೀಗ ಜಿಮ್‌ನಲ್ಲಿ ವರ್ಕೌಟ್ ಮಾಡುವುದಕ್ಕೆ ಆರಂಭಿಸಿದ್ದಾರೆ. ಜಿಮ್‌ನಲ್ಲಿ ವೇಟ್ ಲಿಫ್ಟಿಂಗ್‌ನ ತೂಕದ ಪ್ಲೇಟ್ ಒಂದನ್ನು ಹಿಡಿದು ಕಸರತ್ತು ಮಾಡುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋ ಮೂಲಕ ಗಿಲ್ಲಿ ನಟನಿಗೆ ಆಗೊಲ್ಲ ಎನ್ನುವುದು ಯಾವುದೂ ಇಲ್ಲ, ಎಂದು ರಘು ಅವರಿಗೆ ಕೌಂಟರ್ ಕೊಡುವಂತೆ ಅಭಿಮಾನಿಗಳು ವಿಡಿಯೋ ಜೋಡಣೆ ಮಾಡಿ ಹಂಚಿಕೊಂಡಿದ್ದಾರೆ. ಇದೀಗ ಮ್ಯೂಟೆಂಟ್ ರಘು ಅವರ ಹೇಳಿಕೆಯನ್ನು ಸುಳ್ಳಾಗಿಸಿ ಗಿಲ್ಲಿ ನಟ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.