ಹೆಂಡ್ತಿ ಖಾತೆಗೆ 10 ಕೋಟಿ ಹಾಕಿದ ಗೌತಮ್: ಖಾತೆ ನಂಬರ್ ಕಳಿಸ್ತೀವಿ ನಮ್ಗೂ ಸ್ವಲ್ಪ ಕೊಡಪ್ಪ ಎಂದ ವೀಕ್ಷಕರು

Published : Jan 02, 2024, 02:36 PM ISTUpdated : Jan 02, 2024, 02:41 PM IST
ಹೆಂಡ್ತಿ ಖಾತೆಗೆ 10 ಕೋಟಿ ಹಾಕಿದ ಗೌತಮ್:  ಖಾತೆ ನಂಬರ್ ಕಳಿಸ್ತೀವಿ ನಮ್ಗೂ ಸ್ವಲ್ಪ ಕೊಡಪ್ಪ ಎಂದ ವೀಕ್ಷಕರು

ಸಾರಾಂಶ

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಸೀರಿಯಲ್ ಅಮೃತಧಾರೆ ಸೀರಿಯಲ್ ಯಶಸ್ವಿ ಪ್ರದರ್ಶನ ಕಾಣುತ್ತಿದೆ.ಇದರಲ್ಲಿ ಪತ್ನಿಗೆ 10 ಕೋಟಿ ರೂಪಾಯಿ ಖಾತೆಗೆ ಹಾಕುವ ದೃಶ್ಯವಿದೆ. ಇದನ್ನು ನೋಡಿದ ವೀಕ್ಷಕರು ನಮಗೂ ಸ್ವಲ್ಪ ಕೊಟ್ಬಿಡಿ ಎಂದು ಕೇಳ್ತಿದ್ದಾರೆ.

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಸೀರಿಯಲ್ ಅಮೃತಧಾರೆ ಸೀರಿಯಲ್ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ವಯಸ್ಸು ದಾಟಿದ ನಂತರ ಮದುವೆಯಾಗುವ ಪ್ರಬುದ್ಧ ಜೋಡಿಯ ಕತೆ ಇದು ಈ ಸೀರಿಯಲ್‌ ಶ್ರೀಮಂತ ಉದ್ಯಮಿ ಗೌತಮ್ ದಿವಾನ್‌ ಮಾಧ್ಯಮವರ್ಗದ ಕುಟುಂಬದ ಹೆಣ್ಣು ಮಗಳು ಭೂಮಿಕಾಳನ್ನು ಮದುವೆಯಾಗಿ ಜೀವನ ನಡೆಸುವ ಕಥಾ ಹಂದರವನ್ನು ಹೊಂದಿರುವುದು ವೀಕ್ಷಕರೆಲ್ಲರಿಗೂ ಗೊತ್ತೆ ಇದೆ. ನಿನ್ನೆಯ ಎಪಿಸೋಡ್‌ನಲ್ಲಿ ಪತ್ನಿ ಭೂಮಿಕಾಳ ಖಾತೆಗೆ ಗೌತಮ್ ದಿವಾನ್ ದಿನನಿತ್ಯದ ಖರ್ಚಿಗೆಂದು 10 ಕೋಟಿ ಹಾಕಿದ್ದಾರೆ. ಇದನ್ನು ನೋಡಿದ ಭೂಮಿಕಾ ಎಲ್ಲರಿಗೂ ಬರುವಂತಹ  ಆನ್‌ಲೈನ್ ವಂಚಕರು ಕಳಿಸುವ ಫೇಕ್‌ ಮೆಸೇಜ್ ತನಗೂ ಬಂದಿದೆ ಎಂದು ಭೂಮಿಕಾ ಭಾವಿಸುತ್ತಾಳೆ.  ಆದರೆ ಪತಿ ಅಕೌಂಟ್‌ಗೆ ದುಡ್ಡು ಬಂತ ಎಂದು ಕೇಳಿದಾಗ ನಿಮಗೇಗೆ ಗೊತ್ತಾಯ್ತು? ನಿಮಗೂ ಬಂತ ಎಂದು ಮರು ಪ್ರಶ್ನಿಸಿದ ಭೂಮಿಕಾ ಮಾತಿಗೆ ಶಾಕ್ ಆಗಿ ನೋಡುತ್ತಾನೆ ಗೌತಮ್. ಈ ವೇಳೆ ಮಾತು ಮುಂದುವರಿಸುವ ಭೂಮಿಕಾ ನಿಮಗೆಷ್ಟು ಹಣ ಬಂತು ಹೇಳಿ. ನನಗೆ 10 ಕೋಟಿ ಬಂತು ಇದು ಫೇಕು ಮೆಸೇಜ್ ಎಂದು ಪತಿಯೊಂದಿಗೆ ಹೇಳಿಕೊಳ್ಳುತ್ತಾಳೆ ಭೂಮಿಕಾ. 

ಇದರಿಂದ ಆಘಾತಗೊಂಡಂತೆ ನೋಡುವ ಗೌತಮ್ ಹೇಯ್ ಇದು ಫೇಕ್ ಮೆಸೇಜ್ ಅಲ್ಲ, ನಾನೇ ನಿನ್ನ ಖಾತೆಗೆ ಇಷ್ಟೊಂದು ದುಡ್ಡನ್ನು ಹಾಕಿರುವುದು ಎಂದು ಹೇಳುತ್ತಾನೆ ಗೌತಮ್ ದಿವಾನ್. ಪತಿಯ ಮಾತು ಕೇಳಿ ಶಾಕ್ ಆಗುವ ಭೂಮಿಕಾ 10 ಕೋಟಿ ನನ್ನ ಖಾತೆಗೆ ಹಾಕಿದ್ದೀರಾ ಎಂದು ತೊದಲುತ್ತಲೇ ಶಾಕ್ ಆಗಿ ಪಕ್ಕದಲ್ಲಿದ್ದ ಸೋಫಾದ ಮೇಲೆ ಕುಳಿತುಕೊಳ್ಳುತ್ತಾಳೆ. ಇದಕ್ಕೆ ಪ್ರತಿಕ್ರಿಯಿಸುವ ಗೌತಮ್  ನೀವು ಹುಷಾರಿದ್ದೀರಾ ತಾನೆ, ಏಕೆ ಶಾಕ್ ಆಗ್ತೀರಾ? ನಾನು ಹಾಕಿರುವುದು 10 ಕೋಟಿ ಅದರಲ್ಲೇನಿದೆ ಎಂದು ಪ್ರಶ್ನೆ ಮಾಡುತ್ತಾನೆ. ಇದಕ್ಕೆ ತಡವರಿಸುತ್ತಲೇ ಪ್ರತಿಕ್ರಿಯಿಸುವ ಭೂಮಿಕಾ ಏನಿದೇ ಅಂತ ಕೇಳ್ತೀರಾ? ಏನಿಲ್ಲಾ ಅಂತ ಕೇಳಿ. ನಾನು ನನ್ನ ಕನಸಿನಲ್ಲೂ ಇಷ್ಟೊಂದು ಮೊತ್ತದ ಹಣವನ್ನು ಯಾವತ್ತೂ ನೋಡಿರಲೇ ಇಲ್ಲ. ನನ್ನ ಖಾತೆಗೇಕೆ ಇಷ್ಟೊಂದು ಮೊತ್ತದ ಹಣವನ್ನು ಹಾಕಿದ್ದೀರಾ ನಾನು ಇದನ್ನು ಏನು ಮಾಡಲಿ ಎಂದು ಪ್ರಶ್ನಿಸಿದ್ದಾಳೆ.

Amrutadhare: ಭೂಮಿ ಗೌತಮ್ ನಡುವೆ ಪ್ರೇಮ ಅರಳಿದೆ! ಇದನ್ನೂ ಕನಸು ಅಂತ ತೋರಿಸಬೇಡ್ರೋ ಅಂತಿದ್ದಾರೆ ಫ್ಯಾನ್ಸ್!

ಇದಕ್ಕೆ ಪ್ರತಿಕ್ರಿಯಿಸಿದ ಗೌತಮ್ ಇದೇಕೆ ಹೀಗೆ ಕೇಳ್ತಿದ್ದೀರಾ ನಿಮಗೂ ದೈನಂದಿನ ಖರ್ಚುಗಳಿರುತ್ತವಲ್ಲ. ಅದಕ್ಕೆ ಬಳಸಿಕೊಳ್ಳಿ ಎಂದು ಹೇಳುತ್ತಾನೆ ಗೌತಮ್ ಅಲ್ಲಿಗೆ ಸೀರಿಯಲ್ ಪ್ರೋಮೋ ಮುಗಿದಿದೆ. ಆದರೆ ಈ ಫ್ರೋಮೋ ನೋಡಿದ ಒಬ್ಬರು ಇದು ಆಕ್ಟಿಂಗ್ ಅಲ್ಲ ಓವರ್ ಆಕ್ಟಿಂಗ್ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಇಂತಹ ಗಂಡ ಎಲ್ಲ ಹೆಣ್ಣು ಮಕ್ಕಳಿಗೆ ಸಿಕ್ಕಿ ಬಿಟ್ಟರೆ ಅಷ್ಟೇ ಲೈಫ್ ಚಿಂದಿ ಎಂದು ಕಾಮೆಂಟ್ ಮಾಡಿದ್ದಾರೆ ಮತ್ತೊಬ್ಬರು. ಇದಕ್ಕೆ ಮತ್ತೊಬ್ಬರು ನಾನು ನಿನ್ನೆ ಇದೇ ರೀತಿ ಯೋಚಿಸುತ್ತಿದೆ. ಲೈಫ್ ಚೆನ್ನಾಗಿರುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಇಷ್ಟೆಲ್ಲಾ ದುಡ್ಡು ಹೆಣ್ಮಕ್ಕಳ ಖಾತೆಗೆ ಹಾಕಿದ್ರೆ ಅವರನ್ನು ಹಿಡಿಯೋಕೆ ಆಗಲ್ಲ ಅಂತಾನೇ ಯಾವ ಗಂಡನೂ ಕೂಡ ಹೆಂಡ್ತಿ ಖಾತೆಗೆ ದುಡ್ಡು ಹಾಕಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ನನ್ ಅಕೌಂಟ್ ನಂಬರ್ ಕಳ್ಸಿಬಿಡ್ತಿನಿ ನಂಗೂ ಸ್ವಲ್ಪ ಹಾಕು ಅಂತ ಕೇಳಿದ್ದಾರೆ. ಮತ್ತೆ ಕೆಲವರು 10 ಲಕ್ಷ ಅಂದಿದ್ರೆ ಸಾಕಿತ್ತು. 10 ಕೋಟಿ ಓವರ್ಗ ಆಯ್ತು ಎಂದಿದ್ದಾರೆ. 

ದೇಹಕ್ಕಿಂತ ಮುಖ್ಯವಾದದ್ದು ಮಾನಸಿಕ ಸಂಬಂಧ: ಹುಳಿ ಹಿಂಡಲು ಬಂದ ಕಿರಣ್​ಗೆ ಗೌತಮ್​ ಕೊಟ್ಟ ಶಾಕಿದು!

ಹೆಸರಾಂತ ಕಲಾವಿದರ ದಂಡೇ ಈ ಧಾರಾವಾಹಿಯಲ್ಲಿ ಇದ್ದು, ಗೌತಮ್ ದಿವಾನ್ ಆಗಿ ರಾಜೇಶ್ ನಟರಂಗ, ಭೂಮಿಕಾ ಪಾತ್ರದಲ್ಲಿ ಛಾಯಾಸಿಂಗ್ ಅಭಿನಯಿಸಿದ್ದಾರೆ. ಸಿಹಿಕಹಿ ಚಂದ್ರು, ಅಮೃತ ನಾಯಕ್, ವನಿತಾ ವಾಸು, ಚೈತ್ರಾ ಶೆಣೈ, ಶಶಿ ಹೆಗ್ಡೆ ಹೀಗೆ ಹಲವಾರು ಕಲಾವಿದರು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ತಮ್ಮ ತಮ್ಮ ಕುಟುಂಬಕ್ಕಾಗಿ ಭೂಮಿಕಾ ಹಾಗೂ ಗೌತಮ್ ತಮ್ಮ ಬದುಕನ್ನೇ ತ್ಯಾಗ ಮಾಡುವ ಕಥೆ ಆರಂಭದಲ್ಲಿತ್ತು. ಆದರೆ ಈಗ ಇವರಿಬ್ಬರ ಮಧ್ಯೆ ಪ್ರೀತಿ ಮೂಡಿದ್ದು, ವೀಕ್ಷಕರಿಗೆ ಚೆನ್ನಾಗಿಯೇ ಮನೋರಂಜನೆ ನೀಡ್ತಿದೆ ಈ ಸೀರಿಯಲ್ .


 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೈವಾಹಿಕ ಜೀವನಕ್ಕೆ ಬಿಗ್ ಬಾಸ್ ಮಾಜಿ ಸ್ಪರ್ಧಿ, ಹಿಂದೂ ಮುಸ್ಲಿಂ ಸಂಪ್ರದಾಯದಂತೆ ಮದುವೆ
ಕಾಲುಂಗುರ ಧರಿಸಿದ ನಟಿ ರಜಿನಿ ಪತಿ…. ಪ್ರಶ್ನಿಸಿದವರಿಗೆ ಏನಂದ್ರು ನೋಡಿ