
ಈಗ ತಾನೇ ಸ್ನೇಹಾ ಮತ್ತು ಕಂಠಿಯ ಜೀವನದಲ್ಲಿ ಪ್ರೀತಿ ಚಿಗುರುತ್ತಿದೆ. ಸ್ನೇಹಾಗೆ ಕಂಠಿ ಮೇಲಿದ್ದ ವೈಮನಸ್ಸು ತಣ್ಣಗಾಗುತ್ತಿದ್ದು, ಪ್ರೀತಿಯಲ್ಲಿ ಬಿದ್ದಿದ್ದಾಳೆ. ಅದೇ ಇನ್ನೊಂದೆಡೆ, ಸ್ನೇಹಾಳ ಮೇಲೆ ಕಿಡಿ ಕಾರುತ್ತಿದ್ದ ಅತ್ತೆ ಬಂಗಾರಮ್ಮ ಒಪ್ಪಿಕೊಳ್ಳದಿದ್ದರೂ ಆಕೆಯ ಯಾವುದೋ ಒಂದು ಮೂಲೆಯಲ್ಲಿ ಸ್ನೇಹಾಳ ಮೇಲೆ ಪ್ರೀತಿ ಮೂಡುತ್ತಿದೆ. ಇದಾಗಲೇ ಅತ್ತೆ ಬಂಗಾರಮ್ಮನ ಮೇಲೆ ಸ್ನೇಹಾಗೆ ಇದ್ದ ಕೋಪ ಹೋಗಿದ್ದು, ಅತ್ತೆಯ ಮನಸ್ಸನ್ನು ಗೆಲ್ಲಲು ಹಾತೊರೆಯುತ್ತಿದ್ದಾಳೆ. ಎಷ್ಟೋ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಿರೋ ಅತ್ತೆ ಸ್ವಂತ ಮಗ ಕಂಠಿಗೇ ಶಾಲೆಗೆ ಏಕೆ ಕಳುಹಿಸಲಿಲ್ಲ ಎನ್ನುವ ಪ್ರಶ್ನೆಗೆ ಮಾತ್ರ ಸ್ನೇಹಂಗೆ ಇದುವರೆಗೆ ಉತ್ತರ ಸಿಗಲಿಲ್ಲ. ಆದರೂ ಇವರ ಪ್ರೀತಿಗೇನೂ ಕೊರತೆಯಿಲ್ಲ.
ಇಷ್ಟಾಗುತ್ತಿರುವಾಗಲೇ ಕಂಠಿಯನ್ನು ಪ್ರೀತಿಸಿ ಆತನನ್ನೇ ಮದ್ವೆಯಾಗಬೇಕೆಂದು ಹಾತೊರೆಯುತ್ತಿದ್ದ ರಾಧಾಳ ಎಂಟ್ರಿಯಾಗಿದೆ. ಇದೀಗ ಕುತೂಹಲದ ಘಟ್ಟದಲ್ಲಿ ಪುಟ್ಟಕ್ಕನ ಮಕ್ಕಳು ಸೀರಿಯಲ್ ತಲುಪಿದೆ. ಒಂದೆಡೆ ಪುಟ್ಟಕ್ಕನ ಗಂಡನಿಗೆ ಅಪಘಾತದಲ್ಲಿ ತಲೆಗೆ ಪೆಟ್ಟು ಬಿದ್ದ ಕಾರಣ, ಹಿಂದಿನದ್ದನ್ನೆಲ್ಲಾ ಮರೆತು ಬಿಟ್ಟಿದ್ದಾನೆ. 20 ವರ್ಷಗಳ ಹಿಂದೆ ಹೋಗಿರುವ ಆತನಿಗೆ ಈಗ ಎರಡನೆಯ ಪತ್ನಿ ರಾಜಿ, ಮಕ್ಕಳು ಯಾರೂ ನೆನಪಿಲ್ಲ. ಪುಟ್ಟಕ್ಕ ಮತ್ತು ಮಕ್ಕಳು ಮಾತ್ರ ನೆನಪಿದ್ದಾರೆ. ಆದರೆ ಅದೇ ಇನ್ನೊಂದೆಡೆ, ಕಂಠಿಯ ಬಾಳಲ್ಲಿ ಕೋಲಾಹಲ ಎದ್ದುಬಿಟ್ಟಿದೆ. ರಾತ್ರಿ ಮಲಗಿದ್ದ ಕಂಠಿ ಬೆಳಿಗ್ಗೆ ಎದ್ದು ನೋಡಿದಾಗ ಪಕ್ಕದಲ್ಲಿ ಸ್ನೇಹಾ ಬದಲು ರಾಧಾ ಇದ್ದಾಳೆ!
ಮಿಸ್ ಆಗಿದ್ದ ವೇದಾಂತ್ ಕ್ಲೈಮ್ಯಾಕ್ಸ್ನಲ್ಲಿ ಭರ್ಜರಿ ಎಂಟ್ರಿ: ವಿಕ್ಕಿನೂ ಬರ್ತಾನಾ? ಫ್ಯಾನ್ಸ್ ಫುಲ್ ಖುಷ್
ಕಂಠಿ ಬೆಳಿಗ್ಗೆ ಎದ್ದು ಮೆಸ್ಸು ಮೆಸ್ಸು ಎಂದು ಪಕ್ಕದಲ್ಲಿದ್ದಾಕೆಯನ್ನು ಎಬ್ಬಿಸಿದ್ದಾನೆ. ಆದರೆ ನೋಡಿದರೆ ಆಕೆ ಸ್ನೇಹಾ ಅಲ್ಲ, ಬದಲಿಗೆ ರಾಧಾ! ಇದನ್ನು ಕಂಡು ಕಂಠಿಗೆ ಗಾಬರಿಯಾಗಿದೆ. ಅದೇ ಇನ್ನೊಂದೆಡೆ ರಾಧಾ, ಏನೂ ಗೊತ್ತಿಲ್ಲದವರ ರೀತಿ ದಿಗಿಲಾಗಿ ಎಲ್ಲರನ್ನೂ ಕೂಗಿ ಕರೆದಿದ್ದಾಳೆ. ಸ್ನೇಹಾ ಸೇರಿದಂತೆ ಮನೆಯವರೆಲ್ಲರೂ ಓಡೋಡಿ ಬಂದಿದ್ದಾರೆ. ಕಂಠಿ ಮತ್ತು ರಾಧಾ ಅಕ್ಕಪಕ್ಕ ಮಲಗಿದ್ದನ್ನು ನೋಡಿ ಎಲ್ಲರೂ ಗಾಬರಿಯಾಗಿದ್ದಾರೆ. ಅಸಲಿಗೆ ಇದು ಅಚಾನಕ್ ಆಗಿರೋ ಘಟನೆ ಅಲ್ಲ. ಕಂಠಿ ಮತ್ತು ಸ್ನೇಹಾಳನ್ನು ದೂರ ಮಾಡುವ ಉದ್ದೇಶದಿಂದ ರಾಧಾ ಮಾಡಿದ್ದ ಪ್ಲ್ಯಾನ್.
ರಾಧಾಳ ಈ ಪ್ಲ್ಯಾನ್ ಸಕ್ಸಸ್ ಆಗತ್ತಾ? ಇಬ್ಬರನ್ನೂ ಒಂದೇ ಮಂಚದಲ್ಲಿ ನೋಡಿದ ಬಳಿಕ ಸ್ನೇಹಾಳ ಪ್ರತಿಕ್ರಿಯೆ ಹೇಗಿರುತ್ತೆ? ರಾಧಾ ಇನ್ನಾವ ರೀತಿಯ ನಾಟಕ ಆಡುತ್ತಾಳೆ? ಆಕೆಯ ತಾಯಿ ಇನ್ನಾವ ರೀತಿಯಲ್ಲಿ ಗೋಳೋ ಎನ್ನಬಹುದು, ಬಂಗಾರಮ್ಮ ಇದನ್ನು ನೋಡಿ ಏನು ಮಾಡಬಹುದು ಎಂಬೆಲ್ಲಾ ಪ್ರಶ್ನೆಗೆ ಮುಂದಿನ ಕಂತು ನೋಡಬೇಕಿದೆ. ಸದ್ಯ ಎಲ್ಲರೂ ಗಾಬರಿಯಾಗಿದ್ದಾರೆ. ಇದರ ಪ್ರೊಮೋ ಅನ್ನು ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ. ಹುಡುಗಿಯರು ಈ ಮಟ್ಟಕ್ಕೆ ಇಳಿದುಬಿಟ್ಟರೆ ಹೇಗೆ ಎಂದು ಹಲವರು ಪ್ರಶ್ನಿಸಿದ್ದರೆ, ಇನ್ನು ಕೆಲವರು ಇದೇನ್ ಮಾಡ್ಬಿಟ್ಟೆ ಗುರೂ ಎಂದು ಕಂಠಿಯ ಕಾಲೆಳೆದಿದ್ದರೆ, ನೀನು ಏನೂ ಮಾಡಿರಲ್ಲ , ಹೆದರಿಕೊಳ್ಬೇಡಾ ಎಂದು ಕೆಲವರು ಕಂಠಿಯನ್ನು ಸಮಾಧಾನವನ್ನೂ ಮಾಡ್ತಿದ್ದಾರೆ.
ಹೊಸ ವರ್ಷಕ್ಕೆ ಹೊಸ ಸರ್ಪ್ರೈಸ್: ಅಯೋಧ್ಯೆ ಪುಣ್ಯಭೂಮಿಯಲ್ಲಿ ಡಾ.ಬ್ರೋ- ರಾಮಾಯಣ ನಂಟಿರೋ ನೇಪಾಳಕ್ಕೂ ಭೇಟಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.