ಮಿಸ್​ ಆಗಿದ್ದ ವೇದಾಂತ್​ ಕ್ಲೈಮ್ಯಾಕ್ಸ್​ನಲ್ಲಿ ಭರ್ಜರಿ ಎಂಟ್ರಿ: ವಿಕ್ಕಿನೂ ಬರ್ತಾನಾ? ಫ್ಯಾನ್ಸ್ ಫುಲ್​ ಖುಷ್​

Published : Jan 02, 2024, 12:07 PM IST
ಮಿಸ್​ ಆಗಿದ್ದ ವೇದಾಂತ್​  ಕ್ಲೈಮ್ಯಾಕ್ಸ್​ನಲ್ಲಿ ಭರ್ಜರಿ ಎಂಟ್ರಿ: ವಿಕ್ಕಿನೂ ಬರ್ತಾನಾ? ಫ್ಯಾನ್ಸ್ ಫುಲ್​  ಖುಷ್​

ಸಾರಾಂಶ

ಗಟ್ಟಿಮೇಳ ಸೀರಿಯಲ್​ ಅಂತ್ಯ ಕಾಣುತ್ತಿದ್ದು, ಇದೀಗ ಮಿಸ್​ ಆಗಿದ್ದ ವೇದಾಂತ್​ ಎಂಟ್ರಿ ಆಗಿದೆ. ಅಭಿಮಾನಿಗಳು ಸಂತಸಗೊಂಡಿದ್ದಾರೆ.   

ಅತ್ತ ಸುಹಾಸಿನಿ ಬಣ್ಣ ಬಯಲಾಗಿದೆ. ಅಸಲಿಯತ್ತು ಗೊತ್ತಾದ ಮೇಲೂ ನಾಟಕ ಮಾಡಿ ಎಲ್ಲರನ್ನೂ ಮೋಡಿ ಮಾಡಿದ್ದ ಸುಹಾಸಿನಿ ಗೆದ್ದು ಬೀಗುತ್ತಿದ್ದಾರೆ. ಗೆಲುವು ತನ್ನದೇ ಎಂದುಕೊಂಡು ತಾನು ಕೊಲೆಗೆ ಪ್ರಯತ್ನಿಸಿದ್ದು, ಅಕ್ಕನ ಗಂಡನನ್ನು ಕಿಡ್ನ್ಯಾಪ್​ ಮಾಡಿಸಿದ್ದು ಎಲ್ಲವನ್ನೂ ಹೇಳಿದ್ದಾಳೆ.ಅತ್ತ ಸೂರ್ಯನಾರಾಯಣ ವಸಿಷ್ಠ ಅಗ್ನಿ ಮತ್ತು ಆತನ ಅಪ್ಪನ ಕೈಗೆ ಸಿಲುಕಿ ಒದ್ದಾಡುತ್ತಿದ್ದಾನೆ. ದೇವರು ಇದ್ದದ್ದೇ ಹೌದಾದರೆ ನಿನ್ನ ಮಕ್ಕಳು ಬಂದು ನಿನ್ನನ್ನು ಕಾಪಾಡುತ್ತಿದ್ದರು ಎಂದು ವಿಲನ್​ ಹೇಳುತ್ತಿದ್ದಂತೆಯೇ, ಹಲವು ತಿಂಗಳು ಮಿಸ್​ ಆಗಿದ್ದ ವೇದಾಂತ್​ ಭರ್ಜರಿ ಎಂಟ್ರಿ ಕೊಟ್ಟಿದ್ದಾನೆ! ಇಷ್ಟು ತಿಂಗಳು ವೇದಾಂತ್​ಗಾಗಿ ಕಾದು ಸುಸ್ತಾಗಿದ್ದ ಅಭಿಮಾನಿಗಳಂತೂ ಸಂತಸದಲ್ಲಿ ತೇಲಾಡುತ್ತಿದ್ದಾರೆ. ಇದರ ಪ್ರೊಮೋ ಅನ್ನು ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿದ್ದು, ಅಭಿಮಾನಿಗಳಿಂದ ಆನಂದದ ಸುರಿಮಳೆಯೇ ಆಗುತ್ತಿದೆ.

ಅಂದಹಾಗೆ ಇದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಗಟ್ಟಿಮೇಳದ ಕಥೆ ಎನ್ನುವುದು ಸೀರಿಯಲ್​ ಪ್ರಿಯರಿಗೆ ಇದಾಗಲೇ ತಿಳಿದಿದೆ. 2019ರ ಮಾರ್ಚ್​ 11ರಿಂದ ಶುರುವಾದ ಜೀ ಟಿ.ವಿ ವಾಹಿನಿಯ ಗಟ್ಟಿಮೇಳ ಈಗ ಅಂತಿಮ ಘಟಕ್ಕೆ ತಲುಪಿದೆ. ನಾಲ್ಕೂವರೆ ವರ್ಷಗಳವರೆಗೆ ಧಾರಾವಾಹಿ ಪ್ರಿಯರನ್ನು ಹಿಡಿದುಕೊಂಡಿದ್ದ ಈ ಸೀರಿಯಲ್​ ಮುಗಿಯುವ ಹಂತಕ್ಕೆ ಬಂದಿದೆ.   ತನ್ನ ಮನೆಯಲ್ಲಿಯೇ ಕೆಲಸದವಳ ರೀತಿ ಇದ್ದ  ವೈದೇಹಿಯ ಅಸಲಿಯತ್ತು ಬಯಲಾಗಿದೆ. ಆಕೆಯೇ ನಿಜವಾದ ತಾಯಿ ಎನ್ನುವುದು ತಿಳಿದಿದೆ. ಇದು ಆಗುತ್ತಿದ್ದಂತೆಯೇ ಧಾರಾವಾಹಿ ಮುಗಿಯಿತು ಎಂದುಕೊಂಡಿದ್ದರು ಫ್ಯಾನ್ಸ್‌. ಆದರೆ ಸೀರಿಯಲ್‌ಗೆ ಒಂದಿಷ್ಟು ಟ್ವಿಸ್ಟ್‌ ಕೊಟ್ಟು ಮತ್ತಷ್ಟು ದಿನ ತಳ್ಳಲಾಗಿತ್ತು. ಇದೀಗ ಜನವರಿ 5ರಂದು ಸೀರಿಯಲ್ ಮುಗಿಯಲಿದೆ ಎಂದು ಹೇಳಲಾಗಿದೆ. 

ಹೊಸ ವರ್ಷಕ್ಕೆ ಹೊಸ ಸರ್​ಪ್ರೈಸ್​: ಅಯೋಧ್ಯೆ ಪುಣ್ಯಭೂಮಿಯಲ್ಲಿ ಡಾ.ಬ್ರೋ- ರಾಮಾಯಣ ನಂಟಿರೋ ನೇಪಾಳಕ್ಕೂ ಭೇಟಿ

ಇಷ್ಟಾದರೂ ಸೀರಿಯಲ್​ ಪ್ರಿಯರನ್ನು ಕಾಡುತ್ತಿದ್ದುದು ನಾಯಕ ವೇದಾಂತ್​ ಕೆಲವು ತಿಂಗಳುಗಳಿಂದ ಮಿಸ್​ ಆಗಿದ್ದುದು. ಜೀ ಕನ್ನಡ ಅವಾರ್ಡ್ಸ್​ನಲ್ಲಿ ಪ್ರಶಸ್ತಿ ಗೆದ್ದರೂ ಪ್ರಶಸ್ತಿ ಪಡೆಯಲು ನಾಯಕಿ ಅಮೂಲ್ಯ ಬಂದಿದ್ದಳೇ ಹೊರತು ವೇದಾಂತ್​ ಮಿಸ್​ ಆಗಿದ್ದು ಅಭಿಮಾನಿಗಳಿಗೆ ತುಂಬಾ ನೋವು ಉಂಟು ಮಾಡಿತ್ತು. ಈ ಪಾತ್ರಕ್ಕೆ ಬೇರೆಯವರನ್ನು ತಾವು ನೋಡುವುದಿಲ್ಲ ಎಂದೆಲ್ಲಾ ಫ್ಯಾನ್ಸ್​ ಕಮೆಂಟ್​  ಮಾಡಿದ್ದರು. ಆದರೆ ಇದೀಗ ಅವರಿಗೆ ಖುಷಿಕೊಡುವಂತೆ ಅಸಲಿ ವೇದಾಂತ್​ ಎಂಟ್ರಿ ಕೊಟ್ಟಿದ್ದಾನೆ. ಅಷ್ಟಕ್ಕೂ ವೇದಾಂತ್​  ಪಾತ್ರಧಾರಿಯ ಅಸಲಿ ಹೆಸರು ರಕ್ಷ್ ರಾಮ್. ಅವರು ಇಷ್ಟು ದಿನ ಸೀರಿಯಲ್​ನಲ್ಲಿ ಮಿಸ್​ ಆಗಿರುವ ಹಿಂದೆ ಕಾರಣವೂ ಇದೆ. ಅದೇನೆಂದರೆ ಅವರು ಹಿರಿತೆರೆಗೆ ಕಾಲಿಟ್ಟಿದ್ದಾರೆ.  ಅವರು ‘ಬರ್ಮ’ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ‘ಬಹದ್ದೂರ್’, ‘ಭರ್ಜರಿ’ ನಿರ್ದೇಶಕ ಚೇತನ್ ಕುಮಾರ್ ಅವರು ‘ಬರ್ಮ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.  ಗಟ್ಟಿಮೇಳ ಸೀರಿಯಲ್​ನಲ್ಲಿ ವೇದಾಂತ್​ ಜಾಗಕ್ಕೆ ಬೇರೆಯವರನ್ನು ತರದೇ, ವೇದಾಂತ್​ ತನ್ನ ಆಸ್ತಿಯನ್ನು ಪತ್ನಿ ಅಮೂಲ್ಯಗೆ ಜಿಪಿಎ ಹೋಲ್ಡರ್​ ಮಾಡಿ ಕೊಟ್ಟಿದ್ದು, ಆತ ಕಂಪೆನಿಯೊಂದರ ಕೆಲಸದ ನಿಮಿತ್ತ ಪರ ಊರಿಗೆ ಹೋಗಿರುವುದಾಗಿ ತೋರಿಸಲಾಗಿತ್ತು.  ಅದೇನೇ ಇದ್ದರೂ ಕೊನೆಯದಾಗಿ ಒಮ್ಮೆ ಅವರ ದರ್ಶನ ಮಾಡಿಸಿ ಎಂದಿದ್ದರು  ಅಭಿಮಾನಿಗಳು. ಈಗ ಆ ಕಾಲ ಬಂದಿದ್ದು, ಅಪ್ಪನನ್ನು ಉಳಿಸಿಕೊಳ್ಳಲು ಭರ್ಜರಿ ಎಂಟ್ರಿ ಕೊಟ್ಟಿದ್ದಾನೆ ವೇದಾಂತ್​.

ಅದೇ ರೀತಿ  ಕೊಲೆಯಾಗಿದ್ದಾನೆ ಎನ್ನಲಾದ ವಿಕ್ಕಿ ಕೂಡ ಬಂದೇ ಬರುತ್ತಾನೆ ಎಂದು ಫ್ಯಾನ್ಸ್‌ ಕಾತರದಿಂದ ಕಾಯುತ್ತಿದ್ದಾರೆ. ಸುಹಾಸಿನಿಯ ಕುತಂತ್ರದಿಂದ ವಿಕ್ಕಿ ಅಪಘಾತದಲ್ಲಿ ಸಾಯುವಂತೆ ತೋರಿಸಲಾಗಿದೆ. ಆದರೆ ಹೆಣದ ಮುಖ ತೋರಿಸದ ಕಾರಣ, ವಿಕ್ಕಿ ಸಾಯಲಿಲ್ಲ ಎನ್ನುವುದು ಅಭಿಮಾನಿಗಳ ಅನಿಸಿಕೆ. ಅಷ್ಟಕ್ಕೂ ವಿಕ್ಕಿ ಪಾತ್ರಧಾರಿಯ ಹೆಸರು ಅಭಿಷೇಕ್. ಅವರೂ ಸಿನಿಮಾ ಶೂಟಿಂಗ್​ನಲ್ಲಿ ಬಿಜಿಯಾಗಿರುವ ಕಾರಣ, ಅವರ ಕೊಲೆಯಾಗಿದೆ ಎಂದು ತೋರಿಸಲಾಗಿದೆ. ಅವರು ಕಳೆದ ಜೂನ್​ ತಿಂಗಳಿನಲ್ಲಿಯೇ ತಮ್ಮ ಕೊನೆಯೆ ಶೂಟಿಂಗ್​ ಎಂದು ಭಾವುಕರಾಗಿ ಪೋಸ್ಟ್​ ಮಾಡಿಕೊಂಡಿದ್ದರು. ಇದರ ಹೊರತಾಗಿಯೂ ಅವರು ಬದುಕಿರುವಂತೆ ಅಂತಿಮ ಘಳಿಗೆಯಲ್ಲಿ ತೋರಿಸಲಾಗುವುದು ಎಂಬ ಆಸೆಯಲ್ಲಿ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ.   

ಪತಿಯ ಕಣ್ಣಿಗೆ ಬಟ್ಟೆ ಕಟ್ಟಿ ಡಿಫರೆಂಟಾಗಿ ಗರ್ಭಿಣಿ ವಿಷ್ಯ ತಿಳಿಸಿದ ನಟಿ ಅದಿತಿ: ವಿಡಿಯೋ ನೋಡಿ ಆಹಾ ಎಂದ ಫ್ಯಾನ್ಸ್​

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?