ಮುದ್ದು ಸಿಹಿಯನ್ನೇ ಬಿಟ್ಟೇ ಹೋದ ಸೀತಾ ರಾಮ! ರಾಮಾಯಣದಲ್ಲಿ ಸೀತೆ ಅನುಭವಿಸಿದ್ದೆಲ್ಲ ಇಲ್ಲಿ ಪುಟ್ಟ ಸಿಹಿ ಅನುಭವಿಸಬೇಕಾ?

By Bhavani BhatFirst Published Oct 31, 2024, 10:38 AM IST
Highlights

 ಸೀತಾರಾಮದಲ್ಲಿ ಪುಟ್ಟ ಸಿಹಿಗೆ ಎಲ್ಲಿಲ್ಲದ ಕಷ್ಟ ಬಂದಿದೆ. ರಾಮ ಸಿಹಿಯನ್ನು ಶ್ಯಾಮ್ ಮನೆಯಲ್ಲೇ ಬಿಟ್ಟು ಸೀತಾಳೊಂದಿಗೆ ಹೊರಬಂದಿದ್ದಾನೆ. ಪುಟ್ಟ ಸಿಹಿ ಅನಾಥೆಯ ಹಾಗೆ ಅಳ್ತಿದ್ದಾಳೆ.

ಸೀತಾರಾಮದಲ್ಲಿ ನಾನು ರಾಮಾಯಣದ ಸೀತೆ, ರಾಮನ ಕಥೆ ಹೇಳ್ತಿಲ್ಲ ಅಂತ ಡೈರೆಕ್ಟರ್ ಒಮ್ಮೆ ಹೇಳಿದ್ದರು. ಆದರೆ ಈಗ ನೋಡಿದರೆ ಇದು ಹೆಚ್ಚು ಕಡಿಮೆ ರಾಮಾಯಣಕ್ಕೆ ಹತ್ತಿರವಾಗಿದೆ. ಬಟ್ ರಾಮಾಯಣಕ್ಕಿಂತಲೂ ಕ್ರೂರವಾದಂತಿದೆ. ಕಾರಣ ಅಲ್ಲಿ ಹೊಟ್ಟೆಯಲ್ಲಿ ಮಗುವನ್ನು ಇಟ್ಟುಕೊಂಡಿದ್ದ ಸೀತೆ ವನವಾಸಕ್ಕೆ ಹೋದರೆ ಇಲ್ಲಿ ಸಿಹಿ ತನ್ನನ್ನು ಬೆಳೆಸಿದ ತಾಯಿಯಿಂದ ದೂರವಾಗಿದ್ದಾಳೆ. ಸೀತಾ ಮೇಲಿರುವ ಕಳಂಕ ತೊಡೆದು ಹಾಕಲು ಇಲ್ಲಿ ರಾಮ ಸಿಹಿಯಿಂದ ಸೀತೆಯನ್ನು ದೂರ ಮಾಡಿದ್ದಾನೆ, ತಾನೂ ಅವಳಿಂದ ದೂರವಾಗುತ್ತಿದ್ದಾನೆ. ಪುಟ್ಟ ಸಿಹಿ ತನ್ನವರಿಂದ ದೂರವಾಗಿದ್ದಾಳೆ. ಇಷ್ಟು ಸಮಯ ದೂರವಾಗಿದ್ದ ಸಂಬಂಧ ಇದೀಗ ಅವಳನ್ನು ಹತ್ತಿರ ಮಾಡಲು ನೋಡುತ್ತಿದೆ. ಆದರೆ ಈಗಾಗಲೇ ಸೀತಮ್ಮನ ಜೊತೆ ಇನ್ನಿಲ್ಲದಂತೆ ಹಚ್ಚಿಕೊಂಡು ಬೆಳೆದಿರುವ ಅವಳು ಹೊಸದಾಗಿ ತನ್ನ ಅಮ್ಮ ಅಪ್ಪ ಅಂತ ಬಂದಿರುವವರ ಜೊತೆ ಹೊಂದಾಣಿಕೆ ಮಾಡ್ಕೊಳ್ತಾಳ?

ಅವಳು ಹುಟ್ಟಿದಾಗ ಅವಳನ್ನು ಭೇಟಿ ಮಾಡಲು ಬರದಿದ್ದವರು ಈಗ ಬಂದು ಮಗು ನಮ್ಮದೇ ಅಂದರೆ ಆ ಮಗು ನಿಜಕ್ಕೂ ಅವರದ್ದಾಗುತ್ತ ಅನ್ನೋದು ಮುಂದಿರೋ ಕುತೂಹಲ. ಬಹಳ ಎಮೋಶನಲ್ ಆಗಿ ಈ ಎಪಿಸೋಡ್‌ಗಳು ಮೂಡಿ ಬರ್ತಾ ಇವೆ. ಒಂದು ಕಾಲದಲ್ಲಿ ಶ್ಯಾಮ್ ಮತ್ತು ಸಿಹಿ ಸೀನ್‌ಗಾಗಿ ಎದುರು ನೋಡ್ತಿದ್ದ ಜನ ಈಗ ಶ್ಯಾಮ್‌ನನ್ನು ಇನ್ನಿಲ್ಲದ ಹಾಗೆ ಹೇಟ್ ಮಾಡ್ತಿದ್ದಾರೆ. ಅದರ ಜೊತೆಗೆ ಶಾಲಿನಿ ಪಾತ್ರವಂತೂ ಅವರ ಪಾಲಿಗೆ ಭಾರ್ಗವಿಗಿಂತಲೂ ದೊಡ್ಡ ವಿಲನ್ ಆಗಿದೆ.

Latest Videos

ಕನ್ನಡತಿಯ ಅಮ್ಮಮ್ಮ ಈಗ ಅಮೃತಧಾರೆಯ ಗೌತಮ್ ದಿವಾನ್ ತಾಯಿ ಭಾಗ್ಯ ದಿವಾನ್ !

ಈ ಸೀತಾರಾಮದ ಟಿಆರ್‌ಪಿ ಶುರುವಿನಲ್ಲಿ ನಂ.೨ ಸ್ಥಾನದಲ್ಲಿತ್ತು. ಆದರೆ ಏಕಾಏಕಿ ಜರ್ರನೆ ಇಳಿದುಬಿಟ್ಟಿತು. ಇದು ಜೀ ಕನ್ನಡ ಚಾನೆಲ್‌ನದೇ ಪ್ರೊಡಕ್ಷನ್‌ ಆಗಿರುವ ಕಾರಣಕ್ಕೆ ಬಹುಶಃ ಜೀರ್ಣಿಸಲಾಗದ ತುತ್ತಾಗಿರಬೇಕು. ಹೀಗಾಗಿ ಒಂದು ಹೈ ಡ್ರಾಮ ಕ್ರಿಯೇಟ್ ಮಾಡಿಯೇ ಬಿಟ್ಟರು. ಪುಟ್ಟ ಸಿಹಿಗೆ ಆಕ್ಸಿಡೆಂಟ್ ಆಗುವ ಸೀನ್‌ ಎಲ್ಲ ತಂದು ಏಕ್‌ದಂ ಟಿಆರ್‌ಪಿ ಏರುವ ಟೆಕ್ನಿಕ್‌ಗಳನ್ನೆಲ್ಲ ತಂದು ಗುಡ್ಡೆ ಹಾಕಿದ್ದಾರೆ. ಇದರಿಂದ ಸೀರಿಯಲ್ ಟಿಆರ್‌ಪಿ ಏರೋದಂತೂ ಗ್ಯಾರಂಟಿ. ಸದ್ಯ ಜನ ಇದನ್ನು ಬೈದುಕೊಂಡೇ ನೋಡ್ತಿದ್ದಾರೆ.

ಈ ಹಿಂದಿನ ಎಪಿಸೋಡ್ ಅದರಲ್ಲೂ ಲಾಸ್ಟ್ ವೀಕ್ ಪ್ರಸಾರವಾದ ಪ್ರೋಮೋವೊಂದು ಈ ಸೀರಿಯಲ್ ಅಭಿಮಾನಿಗಳ ಎದೆ ನಡುಗಿಸಿದ್ದು ಸುಳ್ಳಲ್ಲ.

ಅಣ್ಣಯ್ಯ ಸೀರಿಯಲ್ : ಮೊಬೈಲ್, ವಿಂಡೋ ಶಾಪಿಂಗ್ ಅಂತ ತಂಗಿಯರ ಹಾದಿ ತಪ್ಪಿಸ್ತಿದ್ದಾಳಾ ಪಾರು?

ಈ ಹೊಸ ಪ್ರೋಮೋದಲ್ಲಿ ರಸ್ತೆ ಬದಿಯಲ್ಲಿ ಸಿಹಿ, ರಾಮ್, ಸೀತಾ ಇದ್ದಾರೆ. ಫೋನ್ ಬಂತು ಅಂತ ರಾಮ್ ಅಲ್ಲೇ ಪಕ್ಕಕ್ಕೆ ಹೋಗ್ತಾನೆ. ಆಗ ಭಾರ್ಗವಿ ಕಳಿಸಿದ ರೌಡಿ ಕಾರ್‌ನಲ್ಲಿ ಬಂದು ಸೀತಾಗೆ ಆಕ್ಸಿಡೆಂಟ್ ಮಾಡಬೇಕು ಅಂತ ಬರುತ್ತಾನೆ. ಆ ಕಾರ್ ನೋಡಿದ ಸಿಹಿ ಸೀತಾಳನ್ನು ನೂಕುತ್ತಾಳೆ. ಆಗ ಸಿಹಿಗೆ ಆಕ್ಸಿಡೆಂಡ್ ಆಗಿ ಅವಳು ಸಾಯುತ್ತಾಳೆ. ಸೀತಾ-ರಾಮ್ ಕಣ್ಣೀರು ಹಾಕುತ್ತಾರೆ. ಸಿಹಿ ದೆವ್ವವಾಗ್ತಾಳೆ. ಇದನ್ನು ಕಂಡು ವೀಕ್ಷಕರು ಕಂಗಾಲಾದರು. ಹಿಂದೆ ‘ಮುದ್ದು ಗುಮ್ಮ ಅಂಜಲಿ’ ಎನ್ನುವ ಧಾರಾವಾಹಿ ಪ್ರಸಾರ ಆಗುತ್ತಿತ್ತು. ಆ ಧಾರಾವಾಹಿಯಲ್ಲಿ ಅಂಜಲಿ ಎನ್ನುವ ಪುಟಾಣಿ ದೆವ್ವ ಆದ ಕಥೆ ಇತ್ತು. ಈಗ ಈ ಧಾರಾವಾಹಿಯಲ್ಲಿಯೂ ಕೂಡ ಸಿಹಿ ದೆವ್ವ ಆಗಿ ಬರ್ತಾಳಾ ಎಂಬ ಪ್ರಶ್ನೆ ಮೂಡಿತ್ತು.

ಆದರೆ ಇನ್ನೂ ಆ ಸೀನ್ ಬಂದಿಲ್ಲ. ಸದ್ಯ ರಾಮ ಸಿಹಿಯನ್ನು ಶ್ಯಾಮ್ ಮತ್ತು ಶಾಲಿಗೆ ಒಪ್ಪಿಸಿ ಸೀತಾಳನ್ನು ಕರೆದುಕೊಂಡು ಹೊರಟಿದ್ದಾನೆ. ಸೀತಾ ಮೇಲಿರುವ ಕಳಂಕವನ್ನು ನಿವಾರಿಸಿ ಸರಿಯಾದ ದಾರಿಯಲ್ಲೇ ಸಿಹಿಯನ್ನು ಮಗಳಾಗಿ ಸ್ವೀಕರಿಸುತ್ತೇನೆ ಅನ್ನುತ್ತಿದ್ದಾನೆ. ಸೀತಾಳನ್ನೂ ಬಲವಂತವಾಗಿ ಕರೆದೊಯ್ಯುತ್ತಾನೆ. ಪುಟ್ಟ ಸಿಹಿಯ ವೇದನೆ ದೇವರಿಗೇ ಪ್ರೀತಿ ಅನ್ನೋ ಹಾಗಾಗಿದೆ. ರೀತು ಸಿಂಗ್ ಎಂಬ ಪುಟ್ಟ ಹುಡುಗಿ ಸಿಹಿ ಪಾತ್ರದಲ್ಲಿ ಅದ್ಭುತವಾಗಿ ನಟಿಸುತ್ತಿದ್ದಾಳೆ.

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

 

click me!