Puttakkana Makkalu: ಒಬ್ಬಂಟಿಯಾಗಿ ಬದುಕು ಕಟ್ಟಿಕೊಂಡು ಮಾದರಿಯಾಗ್ತಿರೋ ಸಹನಾ, ಇನ್ನೊಂದು ಮದುವೆಗೆ ಸಜ್ಜಾದ ಗಂಡ ಮುರಳಿ!

By Bhavani BhatFirst Published Aug 28, 2024, 12:05 PM IST
Highlights

ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಸಹನಾ, ಅವಮಾನಗಳನ್ನು ಸಹಿಸದೆ ಸ್ವಾಭಿಮಾನದಿಂದ ಸ್ವತಂತ್ರ ಬದುಕು ಕಟ್ಟಿಕೊಳ್ಳಲು ಹೊರಡುವುದು ಹೊಸ ತಿರುವು ಪಡೆದಿದೆ. ತನ್ನ ಕಾಲ ಮೇಲೆ ತಾನು ನಿಂತು ಸ್ವಂತ ಬ್ಯುಸಿನೆಸ್ ಆರಂಭಿಸುವ ಮೂಲಕ ಸ್ಫೂರ್ತಿಯಾಗಿದ್ದಾಳೆ.

ಪುಟ್ಟಕ್ಕನ ಮಕ್ಕಳು ಸೀರಿಯಲ್ ಕಥೆಯೇ ಬಹಳ ಸ್ಟ್ರಾಂಗ್ ಬೇಸ್ ಹೊಂದಿರುವಂಥಾದ್ದು. ಮೂರು ಹೆಣ್ಣುಮಕ್ಕಳನ್ನು ಹೆತ್ತ ಕಾರಣಕ್ಕೆ ಪುಟ್ಟಕ್ಕನನ್ನು ಒಂಟಿಯಾಗಿ ಬಿಟ್ಟುಹೋಗ್ತಾನೆ ಆಕೆಯ ಗಂಡ. ಆತ ಬೇರೊಂದು ಮದುವೆಯನ್ನೂ ಮಾಡ್ಕೊಳ್ತಾನೆ. ಇತ್ತ ಪುಟ್ಟಕ್ಕ ಹಳ್ಳಿಯಲ್ಲಿ ಮೆಸ್ ನಡೆಸುತ್ತ ತನ್ನ ಮೂವರು ಹೆಣ್ಣುಮಕ್ಕಳನ್ನು ಬಹಳ ಸ್ಟ್ರಾಂಗ್ ಆಗಿ ಬೆಳೆಸುತ್ತಾಳೆ. ಎರಡನೇ ಮಗಳು ಸ್ನೇಹಾ ಅಮ್ಮ, ಗಂಡನ ಮನೆಯವರ ಬೆಂಬಲದಿಂದ ಚೆನ್ನಾಗಿ ಓದಿ ಇದೀಗ ಡಿಸಿ ಆಗುವ ಹಂತದಲ್ಲಿದ್ದಾಳೆ. ಇನ್ನೊಂದು ಕಡೆ ಅವಳ ಅವಳ ಅಕ್ಕ ಪುಟ್ಟಕ್ಕನ ಹಿರಿಯ ಮಗಳು ಸಹನಾ ಬದುಕು ನುಚ್ಚು ನೂರಾಯ್ತು ಎನ್ನುವ ಹೊತ್ತಿನಲ್ಲೇ ಆಕೆ ಸ್ವಾಭಿಮಾನದಿಂದ ಎದ್ದು ನಿಂತು ಸ್ವತಂತ್ರ್ಯವಾಗಿ ಬೆಳೆಯಲು ಒಂದು ಹೆಜ್ಜೆ ಮುಂದಿಟ್ಟಿದ್ದಾಳೆ.

ಆಕೆಯ ಈ ನಿರ್ಧಾರ ಈ ಸೀರಿಯಲ್ ವೀಕ್ಷಕರಿಗೂ ಬಹಳ ಇಷ್ಟವಾಗಿದೆ. ಹೆಣ್ಣು ಸ್ವಾಭಿಮಾನಿಯಾಗಿ ಸ್ವತಂತ್ರವಾಗಿ ಮುಂದಡಿ ಇಡೋದು ಈ ಸಮಾಜಕ್ಕೆ ಮಾದರಿಯಾಗಿ ಬೆಳೆದು ನಿಲ್ಲೋದನ್ನು ಈ ಪಾತ್ರದ ಮೂಲಕ ಸೀರಿಯಲ್‌ ಟೀಮ್ ಹೇಳಹೊರಟಿದೆ. ಈ ಸ್ಟೋರಿಲೈನ್‌ ಕ್ಲಿಕ್ ಸಹ ಆಗಿದೆ.

Latest Videos

Puttakkana Makkalu: ಪುಟ್ಟಕ್ಕನ ಮಕ್ಕಳು ಸಹನಾ ಕಾಳಿ ಜೋಡಿ ಸೂಪರ್, ಇಬ್ರಿಗೂ ಮದ್ವೆ ಮಾಡ್ಸಿಬಿಡಿ ಅನ್ನೋದಾ ಫ್ಯಾನ್ಸ್!

ಇನ್ನೊಂದೆಡೆ ಸಹನಾ ಅಷ್ಟೇನೂ ಶಿಕ್ಷಣವಿಲ್ಲದ ಅವಿದ್ಯಾವಂತೆಯಾದರೂ ಹೆಣ್ಣಾದವಳು ಎಲ್ಲವನ್ನೂ ಸಹಿಸಿಕೊಂಡು ಹೋಗಬೇಕು ಎಂಬ ಹಳೆಯ ಕೆಟ್ಟ ಚಾಳಿಯನ್ನು ಮೆಟ್ಟಿ ನಿಲ್ಲಲು ಹೊರಟವಳು. ಅವಳ ಅತ್ತೆ ಮನೆಯಲ್ಲಿ ಅವಳಿಗೆ ಅತ್ತೆಯಿಂದಲೇ ಅವಮಾನವಾಗುತ್ತೆ. ಗಂಡ ಪತ್ನಿಯ ಜೊತೆಗೆ ನಿಲ್ಲುವ ಬದಲು ತನ್ನ ತಾಯಿಯ ಜೊತೆಗೆ ನಿಲ್ಲುತ್ತಾನೆ. ಒಂದು ಹಂತದವರೆಗೆ ಇದನ್ನೆಲ್ಲ ಸಹಿಸಿಕೊಂಡ ಸಹನಾಳ ಸಹನೆ ಒಂದು ಹಂತದಲ್ಲಿ ಕಟ್ಟೆ ಒಡೆಯುತ್ತೆ. ಆಕೆ ಅತ್ತೆಯಿಂದ ಹೊರಬರುತ್ತಾಳೆ. ಗಂಡ ತನ್ನ ಜೊತೆಗಿರುವುದಾದರೆ ಮಾತ್ರ ಸಂಸಾರದಲ್ಲಿ ಮುಂದುವರಿಯುವುದಾಗಿ ಗಟ್ಟಿ ನಿಲುವು ತಾಳುತ್ತಾಳೆ. ಇದಕ್ಕೆ ಆಕೆಯ ಗಂಡ ಸುತಾರಾಂ ಒಪ್ಪೋದಿಲ್ಲ. ಸಹನಾ ಎಷ್ಟೇ ಹೇಳಿದರೂ ಆತನಿಗೆ ತನ್ನ ತಾಯಿಯನ್ನು ಬಿಟ್ಟು ಬರಲು ಮನಸ್ಸು ಒಪ್ಪುವುದಿಲ್ಲ. ಪತ್ನಿಯಾ ತಾಯಿಯಾ ಅನ್ನೋ ಆಯ್ಕೆಯಲ್ಲಿ ಆತ ತನ್ನ ತಾಯಿಯ ತಪ್ಪಿದ್ದರೂ ಆಕೆಯ ಜೊತೆಗೇ ನಿಲ್ಲುತ್ತಾನೆ. ಸೋ ಸಹನಾ ಆತನಿಂದ ಆತನ ಸಂಬಂಧದಿಂದ ಹೊರಬರುತ್ತಾಳೆ.

 

ಆದರೆ ಪುಟ್ಟಕ್ಕನಿಗೆ ತನ್ನ ಮಗಳು ಅವಳ ಕುಟುಂಬ, ಗಂಡನ ಜೊತೆಗೆ ಸಂತೋಷವಾಗಿರಬೇಕು ಎನ್ನುವ ಆಸೆ. ತನ್ನಂತೆ ಅವಳ ಬದುಕು ಒಂಟಿಯಾಗಬಾರದು ಎಂಬ ಕಾಳಜಿ. ಹೀಗಾಗಿ ಅವಳು ಮಗಳು ಸಹನಾಳಿಗೆ ತಿಳಿವಳಿಕೆಯ ಮಾತು ಹೇಳ್ತಾಳೆ. ಆದರೆ ಗಟ್ಟಿಗಿತ್ತಿ ಸಹನಾ ಇಲ್ಲೇ ಇದ್ದರೆ ತನ್ನಮ್ಮನ ಭಾವನೆಗೂ ಸಮಸ್ಯೆಯಾಗುತ್ತದೆ ಎಂದು ಒಬ್ಬೊಂಟಿಯಾಗಿ ಸಿಟಿಗೆ ಬರುತ್ತಾಳೆ. ಅಲ್ಲಿ ಅಡುಗೆ ಸಹಾಯಕಿಯಾಗಿ ಕೆಲಸ ಮಾಡುತ್ತಾಳೆ. ಅವಳ ಕೈರುಚಿಗೆ ಜನ ಮಾರುಹೋಗುತ್ತಾರೆ. ಇಂಥಾ ಟೈಮಲ್ಲಿ ಅವಳು ಸ್ವತಂತ್ರ್ಯವಾಗಿ ಬ್ಯುಸಿನೆಸ್ ಶುರು ಮಾಡಲು ಮುಂದಾಗುತ್ತಾಳೆ. ಸಾಲ ಮಾಡಿ ತನ್ನ ಕಾಲ ಮೇಲೆ ತಾನು ನಿಂತು ತನ್ನದೇ ಸ್ವತಂತ್ರ್ಯ ಪುಟ್ಟ ಗಾಡಿ ಹೊಟೇಲ್ ಆರಂಭಿಸುತ್ತಿದ್ದಾಳೆ. ಅವಳ ಗಂಡ ಮುರಳಿ ಮತ್ತೊಂದು ಮದುವೆಗೆ ಮುಂದಾಗುತ್ತಾನೆ.

Seetharama Serial: ಮತ್ತೆ ಮತ್ತೆ ಮೇಘಶ್ಯಾಮ, ಸೀತೆ ಮುಖಾಮುಖಿ, ಕಥೆ ಮುಂದುವರ್ಸಿ ಸರ್ ಅಂತಿದ್ದಾರೆ ಫ್ಯಾನ್ಸ್!

ಸಹನಾಳ ಈ ಗಟ್ಟಿ ನಿಲುವಿಗೆ ಎಲ್ಲ ಕಡೆಯಿಂದ ಬೆಂಬಲ ವ್ಯಕ್ತವಾಗಿದೆ. ಆದರೆ ಕೆಲವು ಸಂಕುಚಿತ ಮನಸ್ಸಿನವರು ಮಾತ್ರ ಅವಳು ಸ್ವಾವಲಂಬನೆಯ ಬದುಕಿನ ಕನಸಿನ ಬಗ್ಗೆ ತಲೆ ಕೆಡಿಸಿಕೊಳ್ಳದೇ ಮತ್ತೆ ಕಾಳಿ ಜೊತೆ ಮದುವೆ ಆಗು ಅನ್ನೋ ಕಾಮೆಂಟ್ ಹೇಳ್ತಿದ್ದಾರೆ. ಎಲ್ಲೋ ಒಂದು ಕಡೆ ಇದು ಸಹ ಒಂದು ವರ್ಗದ ಜನರ ಮನಸ್ಥಿತಿಯನ್ನು ಪ್ರತಿನಿಧಿಸುತ್ತೆ ಅಂದರೆ ತಪ್ಪಲ್ಲ.

ಅಕ್ಷರಾ ಸಹನಾ ಪಾತ್ರದಲ್ಲಿ, ಉಮಾಶ್ರೀ ಪುಟ್ಟಕ್ಕನಾಗಿ ನಟಿಸಿದ್ದಾರೆ.

 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

click me!