ಡಿಕೆಡಿಯಲ್ಲಿ, ಅನುಶ್ರೀ ಶೋನಲ್ಲಿ ಎಲ್ಲೆಲ್ಲೂ ತರುಣ್ ಸುಧೀರ್ - ಸೋನಲ್ ಜೋಡಿ! ಈ ಜೋಡಿಯ ಹನಿಮೂನ್‌ಗೆ ಎಲ್ಲಿಗೆ ಹೋಗ್ತಿದ್ದಾರೆ?

By Bhavani Bhat  |  First Published Aug 28, 2024, 10:32 AM IST

ಸ್ಯಾಂಡಲ್‌ವುಡ್‌ ನಟ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮೊಂತೆರೋ ಅವರ ಮದುವೆಯ ನಂತರದ ಸಂಭ್ರಮ ಹಲವು ರಿಯಾಲಿಟಿ ಶೋಗಳಲ್ಲಿ ಮುಂದುವರೆದಿದೆ. 'ಆಂಕರ್ ಅನುಶ್ರೀ', 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವ ಈ ಜೋಡಿ ತಮ್ಮ ಪ್ರೀತಿ, ಮದುವೆ ಬಗ್ಗೆ ಹೇಳಿಕೊಂಡಿದ್ದಾರೆ.


ಸ್ಯಾಂಡಲ್‌ವುಡ್‌ನ ನವ ದಂಪತಿ ಸೋನಲ್ ಮೊಂತೆರೋ ಮತ್ತು ತರುಣ್ ಸುಧೀರ್ ಈ ವಾರ ಕಿರುತೆರೆ, ಯೂಟ್ಯೂಬ್, ಟ್ರೋಲ್ ಪೇಜ್ ಸೇರಿದಂತೆ ಎಲ್ಲೆಲ್ಲೋ ಇದ್ದಾರೆ. ಇದನ್ನು ನೋಡ್ತಿದ್ರೆ 'ಎಲ್ಲೆಲ್ಲೂ ನೀವೇ ಎಲ್ಲೆಲ್ಲೂ ನೀವೆ' ಅನ್ನೋ ಅಣ್ಣಾವ್ರ ಲೈನ್ ನೆನ್ಪಾಗದಿರದು. ಮದುವೆಯಾದ ಹೊಸತರಲ್ಲಿ ಸಾಧ್ಯವಾದಷ್ಟು ಏಕಾಂತವಾಗಿ ತಾವಿಬ್ಬರೇ ಕಾಲ ಕಳೆಯಬೇಕು ಅಂತ ಹೆಚ್ಚಿನೆಲ್ಲ ದಂಪತಿ ಕೋರಿಕೆ ಆಗಿರುತ್ತೆ. ಆದರೆ ಪಾಪ, ತರುಣ್ ಮತ್ತು ಸೋನಲ್‌ಗೆ ಒಳಗಿನಿಂದ ಆ ಆಸೆ ಇದ್ದರೂ ಈ ರಿಯಾಲಿಟಿ ಶೋಗಳು, ಹಬ್ಬ ಹರಿದಿನಗಳು ಅಂತ ಒಂಚೂರು ಪ್ರೈವೇಟ್ ಲೈಫಿಗೆ ಟೈಮೇ ಇಲ್ದಂಗಾಗಿದೆ. ಆದರೆ ಮೊನ್ನೆ ಮೊನ್ನೆ ಗ್ರ್ಯಾಂಡ್ ಆಗಿ ಹಸೆಮಣೆ ಏರಿರೋ ಈ ಜೋಡಿ ಬಗ್ಗೆ ಜನರಿಗಂತೂ ಕುತೂಹಲ ಇದ್ದೇ ಇದೆ. ಅದನ್ನು ಕರೆಕ್ಟಾಗಿ ತಿಳ್ಕೊಂಡಿರೋ ಚಾನೆಲ್‌ನವ್ರು, ಯೂಟ್ಯೂಬ್‌ನವ್ರು ಈ ಜೋಡಿಯನ್ನು ಚೆನ್ನಾಗಿ ಕ್ಯಾಚ್ ಹಾಕ್ಕೊಂಡು ಅವರ ಲವ್‌ಸ್ಟೋರಿ, ರೊಮ್ಯಾಂಟಿಕ್ ಗೆಶ್ಚರ್‌ಗಳನ್ನು ತಮ್ಮ ಕ್ಯಾಮರದಲ್ಲಿ ಸೆರೆ ಹಿಡಿದು ವೀಕೆಂಡ್‌ನಲ್ಲಿ ವೀಕ್ಷಕರಿಗೆ ಮನರಂಜನೆಯ ಮಹಾಪೂರವನ್ನೇ ಹರಿಸ್ತಿದ್ದಾರೆ.

ಆಂಕರ್ ಅನುಶ್ರೀ ಕಾರ್ಯಕ್ರಮದಲ್ಲಿ ಈ ಜೋಡಿ ಭಾಗಿಯಾಗಿದೆ. ಸದ್ಯ ಈ ಕಾರ್ಯಕ್ರಮದ ಪ್ರೋಮೊ ರಿಲೀಸ್ ಆಗಿದ್ದು ಟ್ರೆಂಡಿಂಗ್‌ನಲ್ಲಿ ಇದೆ. ಈ ವಿಶೇಷ ಸಂದರ್ಶನದ ವೇಳೆ ಆ್ಯಂಕರ್ ಅನುಶ್ರೀ ಕೇಳಿದ ಪ್ರಶ್ನೆಗಳಿಗೆ ತರುಣ್ ಸುಧೀರ್ ಹಾಗೂ ಸೋನಲ್ ಮಾಂಥೆರೋ ಕೊಟ್ಟ ಉತ್ತರ ಅಷ್ಟೇ ಕ್ಯೂಟ್ ಆಗಿತ್ತು. ಅದರ ಚಿಕ್ಕದೊಂದು ತುಣುಕನ್ನು ಯೂಟ್ಯೂಬ್ ಚಾನೆಲ್‌ನಲ್ಲಿ ರಿವೀಲ್ ಮಾಡಲಾಗಿದೆ. ಅದೇ ಈಗ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿ ಇದೆ.

Tap to resize

Latest Videos

undefined

ಅಬ್ಬಬ್ಬಾ, ಎಂಥಾ ಅಬ್ಸರ್ವೇಶನ್ನು! ಅಮೃತಧಾರೆಯ ಈ ನಟಿಗೆ ಕುತ್ತಿಗೇನೆ ಇಲ್ವಾ? ಈ ಥರ ಕಾಮೆಂಟ್ ಮಾಡ್ತಿರೋದು ಯಾರಿಗೆ?

ಕಂಠೀರವ ಸ್ಟುಡಿಯೋದಲ್ಲಿ ರೊಮ್ಯಾಂಟಿಕ್ ಸೆಟ್ ಹಾಕಿ, ಹಾರ್ಟ್ ಶೇಪ್‌ನ ಪ್ರಾಪರ್ಟಿಯನ್ನು ಇಟ್ಟು, ಬಲೂನ್‌ಗಳನ್ನು ಇಟ್ಟು ಶೂಟ್ ಮಾಡಲಾಗಿತ್ತು. ಹಾಗೇ ಈ ಕಾರ್ಯಕ್ರಮದಲ್ಲಿ ತರುಣ್ ಸುಧೀರ್ ಹಾಗೂ ಸೋನಲ್ ಮಾಂಥೆರೋ ಇಬ್ಬರಿಂದಲೂ ಕೇಕ್ ಕಟ್ ಮಾಡಿಸಿ ಸಂಭ್ರಮಿಸಲಾಗಿದೆ. ಈ ಅರೇಂಜ್‌ಮೆಂಟ್‌ಗೆ ನವ ದಂಪತಿ ಕೂಡ ಫುಲ್ ಫಿದಾ ಆಗಿದೆ. ರೊಮ್ಯಾಂಟಿಕ್ ಪರ್ಸನಾಲಿಟಿ ಬಗ್ಗೆ ತರುಣ್ ಸುಧೀರ್‌ಗೆ ಕೇಳಿದ ಪ್ರಶ್ನೆಗಳಿಗೆ ತರುಣ್, 'ನಾನು ರವಿಚಂದ್ರನ್ ಸರ್ ಸಿನಿಮಾ ತರನೇ ರೊಮ್ಯಾಂಟಿಕ್' ಎಂದಿದ್ದಾರೆ. ಅದೇ ವೇಳೆ ಎರಡು ಹಾರ್ಟ್ ಶೇಪಿನ ಬಲೂನ್ ಹಿಡಿದು ಚುಂಬಿಸಿದಂತೆ  ಆಕ್ಟ್ ಮಾಡಿದ್ದಾರೆ. ನೆನಪಿರಲಿ ಪ್ರೇಮ್ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

ಇನ್ನೊಂದು ಕಡೆ ಆಂಕರ್ ಅನುಶ್ರೀ ಅವರೇ ನಡೆಸಿಕೊಡೋ ಫೇಮಸ್ ರಿಯಾಲಿಟಿ ಶೋ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಕಾರ್ಯಕ್ರಮದಲ್ಲೂ ಈ ಜೋಡಿ ಖುಷಿಯಿಂದ ಭಾಗಿಯಾಗಿದೆ. ಅಲ್ಲೂ ಸಾಕಷ್ಟು ಫನ್, ರೊಮ್ಯಾಂಟಿಕ್ ಸೀನ್‌ಗಳು ಎಲ್ಲ ನಡೆದಿವೆ. ಈ ರಿಯಾಲಟಿ ಶೋನ ಜಡ್ಜ್ ಆಗಿರುವ ತರುಣ್‌ಗೆ ಸೋನಾಲ್ ಬಂದಿರೋದು ಸರ್ಪೈಸಿಂಗ್ ಆಗಿದೆ. ಆಮೇಲೆ ಇಬ್ಬರೂ ಸಖತ್ ರೊಮ್ಯಾಂಟಿಕ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಮದುವೆಯ ಮೊದ ಮೊದಲ ಅನುಭವಗಳನ್ನು ಹೇಳಿಕೊಂಡಿದ್ದಾರೆ. ಚಿನ್ನಾ ಬಂಗಾರ ಅಂತ ಪ್ರೀತಿಯಿಂದ ಹೆಂಡತಿಯನ್ನು ಕರೆಯೋದಾಗಿ ತರುಣ್ ಹೇಳಿದರೆ, ತರುಣ್‌ನಂಥಾ ಗಂಡ ಸಿಕ್ಕಿರೋದು ತನ್ನ ಪುಣ್ಯ ಅಂತ ಸೋನಾಲ್ ಹೇಳ್ಕೊಂಡಿದ್ದಾರೆ.

ಬೋರ್ಡಿಂಗ್ ಸ್ಕೂಲ್ ಆಯ್ತು, ಈಗ ತಮ್ಮನ ಬೇಡಿಕೆ: ಈ ಕಿಲಾಡಿ ತಾತಂಗೆ ಮಾಡಕ್ಕೆ ಬೇರೆ ಕೆಲ್ಸ ಇಲ್ವಾ?

ಇರಲಿ, ಇನ್ನು ಸೀಕ್ರೆಟ್ ವಿಚಾರಕ್ಕೆ ಬಂದರೆ ಈ ಜೋಡಿ ಹನಿಮೂನ್‌ಗೆ ಎಲ್ಲಿಗೆ ಹೋಗ್ತಾರೆ ಅನ್ನೋದರ ಬಗ್ಗೆ ಒಂದು ಸೀಕ್ರೆಟ್ ಮಾಹಿತಿ ಸಿಕ್ಕಿದೆ. ಅದು ಈ ಜೋಡಿ ಹನಿಮೂನ್‌ಗೆ ಸ್ವಿಜರ್‌ಲ್ಯಾಂಡ್‌ಗೆ ಹೋಗ್ತಿದ್ದಾರೆ ಅಂತ ಆಪ್ತಮೂಲಗಳಿಂದ ಮಾಹಿತಿ ಸಿಕ್ಕಿದೆ. ಈ ಶೋನಲ್ಲಿ ಈ ಬಗ್ಗೆ ಪ್ರಶ್ನೆ ಬಂದರೂ ಅದಕ್ಕೆ ತರುಣ್ ಉತ್ತರ ಸರಿಯಾಗಿ ಕೊಟ್ಟಿಲ್ಲ. ಸೋ, ಈ ಜೋಡಿ ಸದ್ಯದಲ್ಲೇ ಹನಿಮೂನ್‌ಗೆ ಫ್ಲೈಟ್ ಹತ್ತಲಿದೆ ಅನ್ನೋದು ಸದ್ಯದ ಮಾಹಿತಿ.

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

 

 

click me!