ಬಿಗ್​ಬಾಸ್​ ವಿನಯ್​ ಕನಸು ಏನಿತ್ತು? ಡ್ರೋನ್​ ಪ್ರತಾಪ್​ ಗೆಲ್ಲದ ಕಾರಣವೇನು? ಅವ್ರ ಬಾಯಲ್ಲೇ ಕೇಳಿ....

By Suvarna News  |  First Published Feb 21, 2024, 5:43 PM IST

ಬಿಗ್​ಬಾಸ್​ ವಿನಯ್​ ಕನಸು ಏನಿತ್ತು? ಡ್ರೋನ್​ ಪ್ರತಾಪ್​ ಗೆಲ್ಲದ ಕಾರಣವೇನು? ಅವ್ರ ಬಾಯಲ್ಲೇ ಕೇಳಿ....
 


ಬಿಗ್​ಬಾಸ್​ ಮುಗಿದು ತಿಂಗಳು ಕಳೆದರೂ ಅದರ ಕ್ರೇಜ್​ನಿಂದ ಬಿಗ್​ಬಾಸ್​ ಅಭಿಮಾನಿಗಳು ಹೊರ ಬಂದಿಲ್ಲ. ಅದೇ ಇನ್ನೊಂದೆಡೆ ಬಿಗ್​ಬಾಸ್​ ಸ್ಪರ್ಧಿಗಳು ಹೊರಕ್ಕೆ ಬರುತ್ತಿದ್ದಂತೆಯೇ ಅವರಿಗೆ ಹಿಂದೆಂದಿಗಿಂತಲೂ ಹೋದಲ್ಲಿ, ಬಂದಲ್ಲಿ ಡಿಮ್ಯಾಂಡ್​ ಜಾಸ್ತಿಯಾಗಿದೆ. ಸ್ಪರ್ಧಿಗಳು ಗೆಲ್ಲದಿದ್ದರೂ ಅವರ ಮೇಲಿನ ಕ್ರೇಜ್​ ಮಾತ್ರ ಅಭಿಮಾನಿಗಳಲ್ಲಿ ನಿಂತಿಲ್ಲ, ಜೊತೆಗೆ ಹಲವಾರು ಕಾರ್ಯಕ್ರಮಗಳಲ್ಲಿ ಇವರನ್ನು ಗೆಸ್ಟ್​ ಆಗಿ ಕರೆಸುವ ಟ್ರೆಂಡ್​ ಶುರುವಾಗಿದೆ. ಒಟ್ಟಿನಲ್ಲಿ ಈಗ ಬಿಗ್​ಬಾಸ್​​ ಖ್ಯಾತಿಯ ಸ್ಪರ್ಧಿಗಳ  ಹವಾ ಜೋರಾಗಿದೆ. ಇವರಿಗಾಗಿ ಫ್ಯಾನ್ಸ್​ ಪೇಜ್​ ಅಸಂಖ್ಯ ಹುಟ್ಟುಕೊಂಡಿದೆ.  ಇವರ ಅಭಿಮಾನಿಗಳ ಬಳಗ ಬಹುದೊಡ್ಡದಾಗುತ್ತಲೇ ಸಾಗುತ್ತಿದೆ.  ವಿವಿಧ ಕ್ಷೇತ್ರಗಳ ಗಣ್ಯಾತಿಗಣ್ಯರನ್ನು ಮಾತಿನ ಮೋಡಿಯಲ್ಲಿ ಸಿಲುಕಿಸಿ ಮೋಸ, ವಂಚನೆ ಮಾಡಿರುವ ಗಂಭೀರ ಆರೋಪ ಎದುರಿಸುತ್ತಿದ್ದ ಡ್ರೋನ್​ ಪ್ರತಾಪ್​ರಿಂದ ಹಿಡಿದು ಬಿಗ್​ಬಾಸ್​ ಮನೆಯೊಳಕ್ಕೆ ಹೋಗಿ ಬಂದ ಎಲ್ಲರಿಗೂ ಡಿಮ್ಯಾಂಡ್ ಜಾಸ್ತಿಯಾಗಿದೆ.

ಡೀಪ್​ಫೇಕ್​ ಹೆಸ್ರಲ್ಲಿ ಶಾರುಖ್​, ಸಲ್ಮಾನ್​, ರಣಬೀರ್, ಅಕ್ಷಯ್​​ಗೆ ಹೀಗೆಲ್ಲಾ ಮಾಡೋದಾ? ಉಫ್​ ಎಂದ ಫ್ಯಾನ್ಸ್​! ​

 
 
 
 
 
 
 
 
 
 
 
 
 
 
 

Tap to resize

Latest Videos

A post shared by Colors Kannada Official (@colorskannadaofficial)

 
ಇದೀಗ ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಕೆಂಡಸಂಪಿಗೆ ಸೀರಿಯಲ್​ ಜಾತ್ರೆ ಹೊಸಪೇಟೆಯಲ್ಲಿ ನಡೆದಿದ್ದು, ಅದರಲ್ಲಿ ಬಿಗ್​ಬಾಸ್​ ಸ್ಪರ್ಧಿಗಳು  ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಬಿಗ್​ಬಾಸ್​ನ ವಿನಯ್​ ಆನೆಯ ಮೂಲಕ ಬಂದಿದ್ದರೆ, ಡ್ರೋನ್​ ಪ್ರತಾಪ್​ ಗರುಡದಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಇದರ ಪ್ರೊಮೋ ರಿಲೀಸ್​ ಆಗಿದೆ. ಇದೇ ವೇಳೆ ಬಿಗ್​ಬಾಸ್​ ಸ್ಪರ್ಧಿಗಳು ಭರ್ಜರಿ ಡ್ಯಾನ್ಸ್​ ಕೂಡ ಮಾಡಿದ್ದಾರೆ. 

 

ಇದೇ ಸಮಯದಲ್ಲಿ ವಿನಯ್​ ಅವರು ತಮ್ಮ ಕನಸಿನ ಬಗ್ಗೆ ಮಾತನಾಡಿದ್ದಾರೆ. ಎಲ್ಲಿಗೆ ಹೋದರೂ ತಮಗೆ ಎಲ್ಲರೂ ಗೌರವ ಕೊಡಬೇಕು, ಚಪ್ಪಾಳೆಯಿಂದ ಬರಮಾಡಿಕೊಳ್ಳಬೇಕು ಎನ್ನುವ ಕನಸು ಇತ್ತು. ಅದೀಗ ಬಿಗ್​ಬಾಸ್​​ಗೆ ಹೋಗಿ ಬಂದ ಮೇಲೆ ಕನಸಾಗಿದೆ ಎಂದಿದ್ದಾರೆ. ಇದೇ ವೇಳೆ ನಿರೂಪಕ, ಡ್ರೋನ್​ ಪ್ರತಾಪ್​ ಅವರಿಗೆ ನೀವ್ಯಾಕೆ ಬಿಗ್​ಬಾಸ್​ ಕಪ್​ ಗೆಲ್ಲಲಿಲ್ಲ ಎಂದು ಪ್ರಶ್ನಿಸಿದ್ದಾರೆ. ಆಗ ಪ್ರತಾಪ್​ ತಮ್ಮ ಎಂದಿನ ಕಿಕಿಕಿ ಎನ್ನುವ ನಗುವಿನ ಮೂಲಕ ಉತ್ತರ ನೀಡಿದ್ದಾರೆ. ಅವರು ಮುಂದೆ ಏನು ಉತ್ತರ ನೀಡಿದ್ದಾರೆ ಎನ್ನುವುದನ್ನು ನೋಡಲು ಕೆಂಡಸಂಪಿಗೆ ಸೀರಿಯಲ್ ಸಂತೆ ನೋಡಬೇಕು. ಸದ್ಯ ರಿಲೀಸ್​ ಆಗಿರೋ ಪ್ರೊಮೋದಲ್ಲಿ ಪ್ರತಾಪ್​ ನಗುವುದನ್ನು ಮಾತ್ರ ನೋಡಬಹುದು.

ಇದೇ ಸಮಯದಲ್ಲಿ, ಬಿಗ್​ಬಾಸ್​ ಸ್ಪರ್ಧಿಗಳಿಗೆ ಫ್ಯಾನ್ಸ್​  ಹಲವಾರು ಪ್ರಶ್ನೆಗಳನ್ನು ಕೇಳಿದ್ದು, ನೀವೆಲ್ಲಾ ತುಂಬಾ ಇಷ್ಟ ಎಂದಿದ್ದಾರೆ. ಇದರಲ್ಲಿ ಗಮನ ಸೆಳೆದಿರುವುದು ಹೊಸಪೇಟೆಯ ಯುವತಿಯರು ಡ್ರೋನ್​ ಪ್ರತಾಪ್​ ಅವರಿಗೆ, ನೀವು ಎಂದರೆ ತುಂಬಾ ಇಷ್ಟ. ನಿಮ್ಮನ್ನು ಮದುವೆಯಾಗಲು ಬಂದಿದ್ದೇವೆ ಎಂದಿದ್ದಾರೆ. ಇದನ್ನು ಕೇಳಿ ಡ್ರೋನ್​ ಪ್ರತಾಪ್​ ನಾಚಿ ನೀರಾಗಿದ್ದಾರೆ. ಯೇ ಯೇ ಎನ್ನುತ್ತಲೇ ಯುವತಿಯರಿಂದ ದೂರ ಸರಿಸಲು ನೋಡಿದ್ದು, ಸಭಿಕರು ಬಿದ್ದೂ ಬಿದ್ದೂ ನಕ್ಕಿದ್ದಾರೆ. ಇದರ ಪ್ರೊಮೋ ಅನ್ನು ಕಲರ್ಸ್​ ಕನ್ನಡ ವಾಹಿನಿ ಬಿಡುಗಡೆ ಮಾಡಿತ್ತು.  ಈಚೆಗಷ್ಟ ಡ್ರೋನ್​ ಪ್ರತಾಪ್​ ಆಟೋ ಓಡಿಸಿದ್ದು, ಅದರ ವಿಡಿಯೋ ಅನ್ನು ಫ್ಯಾನ್ಸ್​ ಪೇಜ್​ ಶೇರ್​ ಮಾಡಿಕೊಂಡಿತ್ತು. ಆಟೋ ರಾಜ ಶಂಕರ್​ನಾಗ್​ ಅವರಿಗೆ ಜೈ ಎನ್ನುವ ಮೂಲಕ ಆಟೋ ಓಡಿಸುವ ಎಲ್ಲರಿಗೂ ಪ್ರತಾಪ್​ ಶುಭ ಹಾರೈಸಿದ್ದರು. ಇವರ ಈ ವಿಡಿಯೋಗೆ ಸಹಸ್ರಾರು ಮಂದಿ ಕಮೆಂಟ್​ ಮಾಡಿದ್ದು, ಹಲವರು ಮೆಚ್ಚುಗೆ ಸೂಚಿಸಿದ್ದರು. ನಿಮ್ಮ ಒಳ್ಳೆಯ ಗುಣ ನಿಮ್ಮನ್ನು ಕಾಪಾಡುತ್ತದೆ ಎಂದಿದ್ದರು. ಯಾರು ಏನೇ ಅಂದರೂ ಕ್ಯಾರೇ ಮಾಡಬೇಡಿ ಎಂದೆಲ್ಲಾ ಹೇಳಿದ್ದರು. ಆದರೆ ಒಂದಿಷ್ಟು ಮಂದಿ ಇವರ ಕಾಲೆಳೆದಿದ್ದರು.  ಇದಕದ್ಕೂ ಮೊದಲು  ಡ್ರೋನ್​ ಪ್ರತಾಪ್​ ಮಹಾದೇಶ್ವರ ಬೆಟ್ಟಕ್ಕೆ ಭೇಟಿ ನೀಡಿದ್ದರು.  ಚಾಮರಾಜನಗರದ ಹನೂರು ತಾಲೂಕಿನಲ್ಲಿರುವ  ಮಹದೇಶ್ವರ ಬೆಟ್ಟಕ್ಕೆ  ಪ್ರತಾಪ್ ತೆರಳಿ ಆಶೀರ್ವಾದ ಪಡೆದಿದ್ದರು. ಈ ಸಂದರ್ಭದಲ್ಲಿ ಅವರು,  ಅನ್ನ ಪ್ರಸಾದವನ್ನು ಬರಿಯ ನೆಲದ ಮೇಲೆ ತಿಂದು ಹರಕೆ ತೀರಿಸಿದ್ದರು. ತಟ್ಟೆಯ ಸಹಾಯವಿಲ್ಲದೆ, ನೆಲದ ಮೇಲೆಯೇ ಸೇವಿಸಿದ್ದಾರೆ. ಇದರ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಸೌಂಡ್​ ಮಾಡಿತ್ತು. 

ಮದ್ವೆಯಾಗ್ತೇನಂತ ಪ್ರತಾಪ್​ ಬಳಿ ಹೊಸಪೇಟೆ ಯುವತಿಯರು! ನಾಚಿ ನೀರಾದ ಡ್ರೋನ್​ ಮಾಡಿದ್ದೇನು ನೋಡಿ...
 

click me!