25 ವರ್ಷಗಳ ಬಳಿಕ ಗಂಡ ಕೊಟ್ಟ ಚಿನ್ನದ ಬಳೆ: ಪ್ರೇಮಿಗಳ ದಿನದ ಉಡುಗೊರೆಗೆ ಪುಟ್ಟಕ್ಕ ಶಾಕ್​!

By Suvarna News  |  First Published Feb 21, 2024, 4:27 PM IST

ಪುಟ್ಟಕ್ಕನಿಗೆ ಗಂಡ 25 ವರ್ಷಗಳ ಬಳಿಕ ಚಿನ್ನದ ಬಳೆ ನೀಡಿ ಪ್ರೇಮಿಗಳ ದಿನ ಆಚರಿಸಿದ್ದಾನೆ. ಪುಟ್ಟಕ್ಕ ಶಾಕ್​ ಆಗಿದ್ದಾಳೆ. ಪುಟ್ಟಕ್ಕನ ಮಕ್ಕಳು ಸೀರಿಯಲ್​ಗೆ ಟ್ವಿಸ್ಟ್​!
 


ಈಗ ತಾನೇ ಸ್ನೇಹಾ ಮತ್ತು ಕಂಠಿಯ ಜೀವನದಲ್ಲಿ ಪ್ರೀತಿ ಚಿಗುರುತ್ತಿದೆ. ಸ್ನೇಹಾಗೆ ಕಂಠಿ ಮೇಲಿದ್ದ ವೈಮನಸ್ಸು ತಣ್ಣಗಾಗುತ್ತಿದ್ದು, ಪ್ರೀತಿಯಲ್ಲಿ ಬಿದ್ದಿದ್ದಾಳೆ. ಅದೇ ಇನ್ನೊಂದೆಡೆ, ಸ್ನೇಹಾಳ ಮೇಲೆ ಕಿಡಿ ಕಾರುತ್ತಿದ್ದ ಅತ್ತೆ ಬಂಗಾರಮ್ಮ ಒಪ್ಪಿಕೊಳ್ಳದಿದ್ದರೂ ಆಕೆಯ ಯಾವುದೋ ಒಂದು ಮೂಲೆಯಲ್ಲಿ ಸ್ನೇಹಾಳ ಮೇಲೆ ಪ್ರೀತಿ ಮೂಡುತ್ತಿದೆ. ಇದಾಗಲೇ ಅತ್ತೆ ಬಂಗಾರಮ್ಮನ ಮೇಲೆ ಸ್ನೇಹಾಗೆ ಇದ್ದ ಕೋಪ ಹೋಗಿದ್ದು, ಅತ್ತೆಯ ಮನಸ್ಸನ್ನು ಗೆಲ್ಲಲು ಹಾತೊರೆಯುತ್ತಿದ್ದಾಳೆ.  ಆದರೆ ಅತ್ತೆಗೋ ಈಕೆಯ ಮೇಲೆ ಕೋಪ ಕಡಿಮೆಯಾಗುವ ಹಾಗೆ ಕಾಣಿಸುತ್ತಿಲ್ಲ. ತಾನು ಗರ್ಭಿಣಿ ಎಂದು ಸುಳ್ಳು ಹೇಳಿದ್ದು ತಿಳಿದು ನಂತರ ಸತ್ಯ ಗೊತ್ತಾಗಿ ಸ್ನೇಹಾಳ ಮೇಲೆ ಮುನಿಸಿಕೊಂಡಿದ್ದ ಕಂಠಿಗೂ ಸ್ನೇಹಾದ ಮೇಲೆ ಕೋಪ ಕರಗಿದೆ. ಪ್ರೇಮಿಗಳ ದಿನದಂದು ಇಬ್ಬರೂ ಪ್ರೀತಿ ಹಂಚಿಕೊಂಡಿದ್ದಾರೆ.

ಶೂಟಿಂಗ್​ನಲ್ಲಿ ಜಾರಿಬಿದ್ದ ಹಾಟ್​ ಬ್ಯೂಟಿ ನೋರಾ ಫತೇಹಿ: ಛೇ... ಹೀಗೆಲ್ಲಾ ನಟಿಯ ಕಾಲೆಳೆಯೋದಾ ನೆಟ್ಟಿಗರು?

 
 
 
 
 
 
 
 
 
 
 
 
 
 
 

Tap to resize

Latest Videos

A post shared by Zee Kannada (@zeekannada)

ಅದೇ ಇನ್ನೊಂದೆಡೆ, ಪುಟ್ಟಕ್ಕನ ಅಕ್ಕ ಸಹನಾ ಮತ್ತು ಆಕೆಯ ಗಂಡನೂ ಪ್ರೇಮಿಗಳ ದಿನದಂದು ಪ್ರೀತಿ ನಿವೇದನೆ ಮಾಡಿಕೊಳ್ಳುತ್ತಿದ್ದಾರೆ. ಇದೆಲ್ಲವೂ ಸರಿ. ಆದರೆ ಮದುವೆಯಾದ ದಿನದಿಂದಲೂ ನೋವಿನಲ್ಲಿಯೇ ಬದುಕು ಸಾಗಿಸಿದ ಪುಟ್ಟಕ್ಕನಿಗೆ ಇದೀಗ ಪ್ರೇಮಿಗಳ ದಿನದ ಉಡುಗೊರೆ ಸಿಕ್ಕಿದೆ! ಇದೇ ವಿಶೇಷ. ಮೂರು ಮಕ್ಕಳೂ ಹೆಣ್ಣೇ ಎನ್ನುವ ಕಾರಣಕ್ಕೆ ಪುಟ್ಟಕ್ಕನನ್ನು ಬಿಟ್ಟು ಎರಡನೆಯ ಮದ್ವೆಯಾಗಿದ್ದ ಗಂಡನಿಗೆ ಈಗ ಪುಟ್ಟಕ್ಕನ ಮೇಲೆ ಲವ್​ ಶುರುವಾಗಿದ್ದು 25 ವರ್ಷಗಳ ಬಳಿಕ ಪ್ರೇಮಿಗಳ ದಿನಕ್ಕೆ ಚಿನ್ನದ ಬಳೆಗಳ ಉಡುಗೊರೆ ಕೊಟ್ಟಿದ್ದಾನೆ. ಪುಟ್ಟಕ್ಕ ಶಾಕ್​ ಆಗಿದ್ದಾಳೆ! ಇದರ ಪ್ರೊಮೋ ಬಿಡುಗಡೆಯಾಗಿದೆ. 

ಅಷ್ಟಕ್ಕೂ, ಪುಟ್ಟಕ್ಕನ ಮಕ್ಕಳು ಸೀರಿಯಲ್​ ಸದಾ ಟಿಆರ್​ಪಿಯಲ್ಲಿ ಟಾಪ್​ಮೋಸ್ಟ್​ ಸ್ಥಾನ ಪಡೆದು ಮುನ್ನುಗ್ಗುತ್ತಿದೆ. ದಿನದಿಂದ ದಿನಕ್ಕೆ ವೀಕ್ಷಕರ ಸಂಖ್ಯೆಯನ್ನು ಈ ಧಾರಾವಾಹಿ ಪಡೆದುಕೊಳ್ಳುತ್ತಿದೆ. ಗಂಡ ತನ್ನನ್ನು ಬಿಟ್ಟು ಇನ್ನೊಂದು ಮದುವೆಯಾದರೂ ಪುಟ್ಟಕ್ಕ ತನ್ನ ಮೂರು ಹೆಣ್ಣುಮಕ್ಕಳಾದ  ಸಹನಾ,  ಸ್ನೇಹಾ ಮತ್ತು  ಸುಮಾ ಅವರನ್ನು ಹೇಗೆ ಕಷ್ಟಪಟ್ಟು ಸಾಕುತ್ತಿದ್ದಾಳೆ ಎನ್ನುವ ಕಥಾಹಂದರವನ್ನು ಈ ಧಾರಾವಾಹಿ ಹೊಂದಿದೆ. ಚಿಕ್ಕದೊಂದು ಕ್ಯಾಂಟೀನ್​ ನಡೆಸಿಕೊಂಡು ಮಕ್ಕಳನ್ನು ಈಕೆ ಸಾಕುವ ಪರಿಯಿಂದ ಉತ್ತೇಜನಗೊಂಡು ನಿಜ ಜೀವನದಲ್ಲಿ ಎಷ್ಟೋ ತಾಯಂದಿರು ತಮಗೆ ಇದು ಸ್ಫೂರ್ತಿ ಕೊಟ್ಟಿದೆ ಎಂದೂ ಹೇಳಿದ್ದುಂಟು. ತಮ್ಮ ಕಥೆ ಕೂಡ ಪುಟ್ಟಕ್ಕನ ಕಥೆಗಿಂತ ಭಿನ್ನವಾಗಿಲ್ಲ ಎಂದು ಮಾಧ್ಯಮದ ಮುಂದೆ ಬಂದು ಕಣ್ಣೀರಾಕಿದ್ದೂ ಇದೆ. ಹಾಗೆ ಪುಟ್ಟಕ್ಕನಲ್ಲಿ ತಮ್ಮತನವನ್ನು ಕಂಡುಕೊಳ್ಳುವಷ್ಟರ ಮಟ್ಟಿಗೆ ಈ ಧಾರಾವಾಹಿ ಮನೆಮಾತಾಗಿದೆ.  

ತನಗೆ ಈಗ ಹಿಂದಿನದ್ದೆಲ್ಲಾ ಮರೆತಂತೆ ನಾಟಕವಾಡುತ್ತಿರುವ ಪುಟ್ಟಕ್ಕನ ಗಂಡ, ಪುಟ್ಟಕ್ಕ ಮತ್ತು ಮಕ್ಕಳಷ್ಟೇ ನೆನಪು ಇರುವುದಾಗಿ ಹೇಳಿಕೊಂಡು ಮನೆಯಲ್ಲಿಯೇ ಉಳಿದುಕೊಂಡಿದ್ದಾನೆ. ಎರಡನೆಯ ಪತ್ನಿ ರಾಜಿ ಮಾಡಿದ ತಂತ್ರಗಳೆಲ್ಲವೂ ವಿಫಲವಾಗಿವೆ. ಪುಟ್ಟಕ್ಕ ಮತ್ತು ಮಕ್ಕಳ ಮನಸ್ಸನ್ನು ಗೆಲ್ಲಲು ಈತ ಶತಪ್ರಯತ್ನ ಮಾಡುತ್ತಿದ್ದಾನೆ. ಪುಟ್ಟಕ್ಕ ಏನೋ ಕರುಣಾಮಯಿ. ಗಂಡನನ್ನು ಕ್ಷಮಿಸಿದ್ದಾಳೆ.  ಆದರೆ ಚಿಕ್ಕ ವಯಸ್ಸಿನಲ್ಲಿಯೇ  ತಮ್ಮನ್ನು ಬಿಟ್ಟು ಹೋಗಿರುವ ಅಪ್ಪನ ಬಗ್ಗೆ ಮಕ್ಕಳಿಗೆ ವಿಪರೀತ ಕೋಪ. ಆದರೂ ಆ ಕೋಪ ಕರಗುವ ಸಮಯ ಬಂದಿದೆ. ಈ ಹೊತ್ತಿನಲ್ಲಿಯೇ ಎಲ್ಲರೂ ಪ್ರೇಮಿಗಳ ದಿನ ಆಚರಿಸುತ್ತಿರುವ ಸಮಯದಲ್ಲಿ, ಪುಟ್ಟಕ್ಕನಿಗೆ ಉಡುಗೊರೆ ಸಿಕ್ಕಿದೆ. ಮುಂದೇನು ಎನ್ನುವುದು ಈಗಿರುವ ಕುತೂಹಲ. 

ಸಾವು ಬದುಕಿನ ನಡುವೆ ರಾಮ್​: ಸೀತಾಳಿಗೆ ತಪ್ಪಿನ ಅರಿವಾಗೋ ಹೊತ್ತಲ್ಲೇ ಹಳೆಯ ಲವರ್​ ಎಂಟ್ರಿ! ಏನಿದು ಟ್ವಿಸ್ಟ್​?
 

click me!