
ಬಿಗ್‌ಬಾಸ್ ಫಿನಾಲೆಗೆ ಕ್ಷಣಗಣನೆ ಶುರುವಾಗಿದೆ. ಬಿಗ್‌ಬಾಸ್ ಕನ್ನಡ ಸೀಸನ್ 11 ಪೂರ್ಣಗೊಳ್ಳಲು ಕೇವಲ ಒಂದೇ ಒಂದು ವಾರ ಬಾಕಿ ಇದೆ ಅಷ್ಟೇ. ಈ ವಾರ ಕಳೆದರೆ ಮುಂದಿನ ವಾರ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಇದಕ್ಕಾಗಿ ವೇದಿಕೆ ಕೂಡ ಸಜ್ಜಾಗುತ್ತಿದೆ. ಈ ನಡುವೆ ಬಿಗ್‌ಬಾಸ್ ಮನೆಯಲ್ಲಿ ನಡೆದ ಪ್ರೇಮ ಪ್ರಕರಣವೊಂದರ ವೀಡಿಯೋ ವೈರಲ್ ಆಗಿದೆ. ನೀವು ಊಹಿಸಿದಂತೆ ಇದು ಬಿಗ್‌ಬಾಸ್ ಮನೆಯ ಪ್ರೇಮಿಗಳು ಅಂತ ಕರೆಸಿಕೊಂಡ ತ್ರಿವಿಕ್ರಮ್ ಮತ್ತು ಭವ್ಯಾ ನಡುವಿನ ಮಾತುಗಳು. ಆ ಮಾತುಗಳನ್ನು ಕೇಳಿ ಜನ ಬಾಯಿಗೆ ಬಂದ ಹಾಗೆ ಕಾಮೆಂಟ್ ಮಾಡುತ್ತಿದ್ದಾರೆ. ಕುಟುಂಬದವರೆಲ್ಲ ಕೂತು ನೋಡೋ ಶೋನಲ್ಲಿ ಇದೆಲ್ಲ ಏನು ನಡೀತಿದೆ ಅಂತೆಲ್ಲ ಹೇಳುತ್ತಿದ್ದಾರೆ. ಇನ್ನೂ ಕೆಲವರು ಅಶ್ಲೀಲವಾಗಿಯೂ ಕಾಮೆಂಟ್ ಮಾಡಿದ್ದಾರೆ. ಸದ್ಯ ಭವ್ಯಾ ಮತ್ತು ತ್ರಿವಿಕ್ರಮ್ ನಡುವಿನ ಈ ರಹಸ್ಯ ವೀಡಿಯೋ ಸೋಷಲ್ ಮೀಡಿಯಾ ತನಕ ತಲುಪಿದ್ದು ಹೇಗೆ ಅನ್ನೋ ಬಗೆಗೂ ಮಾತುಕತೆ ಶುರುವಾಗಿದೆ. ಅಂದರೆ ಕಲರ್ಸ್‌ನಲ್ಲಿ ಈ ಕಾರ್ಯಕ್ರಮಕ್ಕೆ ಸಂಬಂಧಿಸಿದ ಯಾರೋ ಇದನ್ನು ಲೀಕ್ ಮಾಡಿರಬಹುದಾ ಅಂತ ಮಾತೂ ಕೇಳಿ ಬರ್ತಿದೆ.
ಬಿಗ್‌ಬಾಸ್ ಮನೆಯಲ್ಲಿ ತ್ರಿವಿಕ್ರಮ್ ಹಾಗೂ ಭವ್ಯಾ ಈಗ ಕಚ್ಚಾಡುತ್ತಿದ್ದಾರೆ. ಆದರೆ ನಾಲ್ಕು ದಿನದ ಹಿಂದೆ ಇವರಿಬ್ಬರ ನಡುವೆ ಬೇರೆಯದೇ 'ಮಾತುಕತೆ' ನಡೆದಿತ್ತು ಅನ್ನೋದಕ್ಕೆ ಸಾಕ್ಷಿಯಾಗಿ ಈ ವೀಡಿಯೋ ಲೀಕ್ ಆಗಿದೆ. ಬಿಗ್‌ಬಾಸ್ ಮನೆಯಲ್ಲಿ ಈ ಹಿಂದೆ ಈವರೆಗೂ ಒಂದಿಲ್ಲಾ ಒಂದು ಲವ್ ಸ್ಟೋರಿ ನಡೆದಿವೆ. ಆದರೆ ಮನೆಯಿಂದ ಹೊರ ಬಂದ ಮೇಲೆ ಅವು ಅದೆಷ್ಟು ಉಳಿದುಕೊಂಡಿವೆ ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ಈ ಬಾರಿಯೂ ತ್ರಿವಿಕ್ರಮ್ ಹಾಗೂ ಭವ್ಯಾ ನಡುವೆ ಏನೋ ಸಂಥಿಂಗ್ ಇದೆ ಅನ್ನೋದು ಎಲ್ಲರಿಗೂ ಗೊತ್ತಾಗಿತ್ತು. ಸುದೀಪ್ ಸಹ ಇದನ್ನು ಪ್ರಶ್ನೆ ಮಾಡಿದ್ದರು. ಈ ಬಗ್ಗೆ ಅವರು ಭವ್ಯಾ ಗೌಡ ಬಳಿ ಕೇಳಿದಾಗ, 'ಆ ತರ ಏನು ಇಲ್ಲ ಸರ್' ಎಂದು ಡೈಲಾಗ್ ಹೊಡೆದಿದ್ದರು. ಆಗ ಸುದೀಪ್, 'ಆ ತರ ಅಂದರೆ ಯಾವ ತರ' ಎಂದು ಮರು ಪ್ರಶ್ನೆ ಹಾಕುತ್ತಾರೆ. 'ತ್ರಿವಿಕ್ರಮ್ ಜೊತೆ ಗುಡ್ ವೈಬ್ ಕನೆಕ್ಷನ್ ಇದೆ ಸರ್' ಎಂದು ಭವ್ಯಾ ಹೇಳಿದಾಗ ಸುದೀಪ್ ಕಾಮಿಡಿಯಾಗಿ 'ಗುಡ್ ವೈಫ್ ಕನೆಕ್ಷನ್ ಇದಿಯಾ?' ಎಂದು ಕೇಳಿ ಕಾಲೆಳೆದಿದ್ದಾರೆ. ಇದಕ್ಕೆ ಮನೆ ಮಂದಿಯೆಲ್ಲಾ ಬಿದ್ದೂ ಬಿದ್ದೂ ನಕ್ಕಿದ್ದಾರೆ.
BBK 11: ತ್ರಿವಿಕ್ರಮ್ ಪಕ್ಕಾ ಮಾಸ್ಟರ್‌ಮೈಂಡ್; ಉದಾಹರಣೆ ಸಮೇತ ಬಿಚ್ಚಿಟ್ಟ ಧನರಾಜ್!
ಸದ್ಯ ಫೈನಲ್ಸ್ ಹತ್ತಿರ ಬರುತ್ತಿರುವಂತೆ ಈ ಜೋಡಿ ಕಿತ್ತಾಡಲು ಶುರು ಮಾಡಿದೆ. ಆದರೆ ಇಂಥಾ ಟೈಮಲ್ಲೇ ಆ ಕ್ಷಣಗಳ ವೀಡಿಯೋ ಸೋಷಲ್ ಮೀಡಿಯಾಗೆ ಬಂದು ಬಿದ್ದಿದೆ. 'ನಿಜ ಓಕೆ ಅಂತೀಯಾ, ಕರೆಕ್ಟಾಗಿ ಹೇಳು, ಜೆನ್ಯೂನ್ ಆನ್ಸರ್?' ಅಂತ ತ್ರಿವಿಕ್ರಮ್ ಕೇಳಿದ್ದಾರೆ. ಅದಕ್ಕೆ ಭವ್ಯಾ, 'ಅದೂ..' ಅಂತ ರಾಗ ಎಳೆದಿದ್ದಾರೆ. ಆಮೇಲೆ , 'ನಾನು ಫಸ್ಟ್ ಗೆಲ್ಲಬೇಕು' ಅಂದಿದ್ದಾರೆ. 'ನಾನು ಕೇಳಿದ್ರಲ್ಲಿ ತಪ್ಪೇನಿದೆ ಭವ್ಯಾ?' ಅಂತ ತ್ರಿವಿಕ್ರಮ್ ಕೇಳಿದ್ದಾರೆ. 'ಮೇ ಬಿ ಮೆ ನಾಟ್ ಬಿ' ಅಂತ ಭವ್ಯ ಹೇಳಿದ್ದಾರೆ. 'ಅದನ್ನೆಲ್ಲ ಹೆಂಗೆ ಓಪನ್ನಾಗಿ ಹೇಳೋದು..' ಅಂತ ನಾಚಿಕೊಂಡಿದ್ದಾರೆ. 'ಗೆದ್ದಾಗ ಹೇಳಿದ್ರೆ ಏನ್ ಹೇಳ್ತಿದ್ದೆ?' ಅಂತ ಕೇಳಿದ್ದಾರೆ. 'ಓಕೆ ಅಂತಿದ್ದೆ' ಅಂತ ಭವ್ಯಾ ಹೇಳಿದ್ದಾರೆ.
ಇನ್ನೊಂದೆಡೆ ಭವ್ಯ ಗೌಡ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಟ್ರೋಫಿ ಜೊತೆಗೆ ಬರೋ ದುಡ್ಡು ಬೇಕಿದೆ. ಅದರಿಂದ ಅಪ್ಪನ ವೋಕಲ್ ಕಾರ್ಡ್ ಆಪರೇಷನ್ ಮಾಡಿಸ್ಬೇಕು ಅನ್ನೋದನ್ನ ಹೇಳಿಕೊಂಡಿದ್ದಾರೆ. ನನ್ನಿಂದ ಅವರ ಆ ಒಂದು ತೊಂದರೆಯನ್ನ ಸರಿ ಮಾಡಿಸಲು ಆಗಲೇ ಇಲ್ಲ ಎಂದು ಕಣ್ಣೀರು ಹಾಕಿದ್ದಾರೆ. ಇತ್ರಿವಿಕ್ರಮ್, ದೊಡ್ಡ ಸ್ಟಾರ್ ಆಗಿ ಬೆಳೀಬೇಕು. ಈ ಟ್ರೋಫಿ ಸಿಕ್ಕರೆ ತುಂಬಾನೆ ಹೆಲ್ಫ್ ಆಗುತ್ತದೆ ಅನ್ನುವ ಮಾತು ಹೇಳಿಕೊಂಡಿದ್ದಾರೆ. ಟ್ರೋಫಿ ಗೆಲ್ತಾರೆ? ಸಂಬಂಧ ಮುಂದುವರಿಸ್ತಾರ? ಕಾಲವೇ ಉತ್ತರಿಸಬೇಕು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.