
ಅಮೃತಧಾರೆ ಧಾರಾವಾಹಿಯಲ್ಲಿ (Amruthadhare serial) ಸಂಚಿಕೆ ದಿನದಿಂದ ದಿನಕ್ಕೆ ಕುತೂಹಲದಿಂದ ಸಾಗುತ್ತಿದೆ. ಒಂದು ಕಡೆ ಜೈದೇವ್ ಇನ್ನೊಂದು ಮುಖ ಮಲ್ಲಿ ಮುಂದೆ ಬಯಲಾಗಿದ್ದರೆ, ಇನ್ನೊಂದು ಕಡೆ ಜೀವನ್ ಮನೆಕಟ್ಟಿಸಿದ್ದು, ಅದರ ಗೃಹ ಪ್ರವೇಶ ಕೂಡ ಅದ್ಧೂರಿಯಾಗಿ ಜರಗುತ್ತಿದೆ. ಈ ಕಾರ್ಯಕ್ರಮಕ್ಕೆ ಭೂಮಿಕಾ ಗೌತಮ್ ಸೇರಿ ಎಲ್ಲರೂ ಆಗಮಿಸಿ ಸಂಭ್ರಮಿಸುತ್ತಿದ್ದಾರೆ. ಆದರೆ ಮತ್ತೊಂದೆಡೆ ಅಪೇಕ್ಷಾ ವರ್ತನೆ ಮಾತ್ರ ದಿನದಿಂದ ದಿನಕ್ಕೆ ಮಿತಿಮೀರುತ್ತಲೇ ಸಾಗುತ್ತಿದ್ದು, ಇದೀಗ ಅತಿರೇಕ ಎನ್ನುವಷ್ಟರ ಮಟ್ಟಿಗೆ ಅಪ್ಪಿ ಮಾಡಿರುವ ಅವಾಂತರ ಭೂಮಿಕಾ ಮನೆಯಲ್ಲಿ ಆತಂಕಕ್ಕೆ ಕಾರಣವಾಗಿದೆ.
ಲವರ್ ಮೇಲೆ ಕಣ್ಣು, ಮಲ್ಲಿಯನ್ನು ಹೀಗೆ ಎತ್ತಾಕೋದಾ ಜೈದೇವ್? ಸೊಂಟ ಹುಷಾರ್ ಕಣಮ್ಮೀ ಎಂದ ಫ್ಯಾನ್ಸ್
ಆಗಿದ್ದು ಇಷ್ಟು, ಸದ್ಯಕ್ಕಂತೂ ಅಪ್ಪಿಗೆ ಅಕ್ಕ ಭೂಮಿಕಾಳನ್ನು ನೋಡಿದ್ರೆ ಆಗೋದೆ ಇಲ್ಲ. ಅಕ್ಕಾ ತನ್ನ ಮದುವೆಗೆ ಬೆಂಬಲ ನೀಡಿಲ್ಲ ಅನ್ನೋದು ಒಂದು ಕಾರಣ ಆದ್ರೆ, ಮತ್ತೊಂದು ಕಾರಣ ಆಕೆ ಪಾರ್ಥ ಜೊತೆ ಆ ಮನೆಗೆ ಕಾಲಿಡುತ್ತಿದ್ದಂತೆ, ಅತ್ತೆ ಶಾಕುಂತಲಾ ಅಪ್ಪಿ ಮನಸಿನಲ್ಲಿ ಭೂಮಿಕಾ ವಿರುದ್ಧ ಎಲ್ಲಾ ರೀತಿಯಲ್ಲೂ ಹುಳಿ ಹಿಂಡಿದ್ದಾಗಿದೆ. ದಿನದಿಂದ ದಿನಕ್ಕೆ ಅಪೇಕ್ಷಾ ತಲೆಯಲ್ಲಿ ಹುಳ ಬಿಡುವ ಮೂಲಕ ಆಕೆಯನ್ನು ಭೂಮಿಕಾ ವಿರುದ್ಧ ಎತ್ತಿಕಟ್ಟಿದ್ದಾರೆ, ಹಾಗಾಗಿ ಅಪೇಕ್ಷಾ ಸದ್ಯಕ್ಕಂತೂ ಸಂಪೂರ್ಣ ಬದಲಾಗಿ, ಅಕ್ಕನನ್ನು ವಿಲನ್ ನಂತೆ ಕಾಣುತ್ತಾಳೆ. ಅಷ್ಟೇ ಅಲ್ಲ ಹೆತ್ತ ಅಪ್ಪ ಅಮ್ಮನ ವಿರುದ್ಧವೇ ತಿರುಗಿ ಬಿದ್ದಿದ್ದಾಳೆ ಅಪೇಕ್ಷಾ. ಹಾಗಾಗಿ ಎಲ್ಲರ ಮೇಲಿನ ಸಿಟ್ಟಿನಿಂದ ತನ್ನ ತವರು ಮನೆಯ ಗೃಹಪ್ರವೇಶಕ್ಕೆ ಹೋಗೋದಿಲ್ಲ ಎಂದು ಹಠ ಹಿಡಿದು ಕುಳಿತಿದ್ದಳು ಅಪೇಕ್ಷಾ. ಆದರೆ ಅತ್ತೆ ಶಾಕುಂತಲಾ ಒತ್ತಾಯ ಮಾಡಿದ್ದಕ್ಕಾಗಿ, ಮೆರೆಯುತ್ತಿರುವ ಭೂಮಿಕಾಗೆ ಅವಮಾನ ಮಾಡೋದಕ್ಕಾಗಿಯೇ ಗೃಹಪ್ರವೇಶಕ್ಕೆ (housewarming ceremony) ಹೋದ ಅಪೇಕ್ಷಾ ಅಲ್ಲೂ ತನ್ನ ಸಣ್ಣ ತನ ತೋರಿಸಿದ್ದಾರೆ.
ʼಅಮೃತಧಾರೆʼ ಧಾರಾವಾಹಿಯಿಂದ ಹೊರ ಬಂದಿದ್ದೇಕೆ ಶಶಿ ಹೆಗಡೆ, ಸಾರಾ ಅಣ್ಣಯ್ಯ? ಇದೇ ಅಸಲಿ ಕಾರಣಾನಾ?
ಜೀವಾ ಮತ್ತು ಮಹಿಮಾ ಪ್ರೀತಿಯಿಂದ ಕೊಟ್ಟ ಸೀರೆಯನ್ನು ನೋಡಿ ಇದೆಂಥಾ ಚೀಪ್ ಸೀರೆ, ರೋಡ್ ಸೈಡ್ ನಿಂದ ತಂದಂತಿದೆ, ಇಂತದ್ದೆಲ್ಲಾ ನಾನು ಉಡಲ್ಲ, ನಾನು ಉಡೋದು ಡಿಸೈನರ್ ಸೀರೆನೇ. ಅಕ್ಕನಿಗೆ ನೀವು ಒಳ್ಳೆ ಕಾಸ್ಲಿ ಸೀರೆನೆ ಕೊಟ್ಟಿರಬೇಕು ಅಲ್ವಾ? ಯಾವಾಗ್ಲೂ ಎಲ್ಲಾ ವಿಷ್ಯದಲ್ಲೂ ತಾರತಮ್ಯ ಮಾಡೋದೆ ಆಯ್ತು ಎಂದಿದ್ದಾರೆ. ಇಷ್ಟೇ ಸಾಲದು ಎಂಬಂತೆ, ಮನೆಯಲ್ಲಿ ಗಣಹೋಮಕ್ಕೆ ಪೂರ್ಣಾಹುತಿಯನ್ನು ಮನೆಮಗಳು ನೀಡಬೇಕು ಎಂದಾಗ, ಅಮ್ಮ ಅಪೇಕ್ಷಾಳನ್ನು ಕರೆಯದೇ ಭೂಮಿಕಾಗೆ ಹೇಳಿದ್ದಕ್ಕೆ ಕೋಪಗೊಂಡು , ಅದು ತನಗಾದ ಅವಮಾನ ಎನ್ನುತ್ತಾ ಗೃಹಪ್ರವೇಶದಿಂದ ಹೊರನಡೆದಿದ್ದಾಳೆ. ಅತ್ತ ಕಡೆ ಅತ್ತೆ ಶಾಕುಂತಲ ಅಪೇಕ್ಷಾ ಅಲ್ಲಿ ಭೂಮಿಕಾಗೆ ಅವಮಾನ ಮಾಡಿರಬಹುದು ಎಂದು ಬೀಗುತ್ತಿರುವಾಗ, ಆಕೆ ಹೊರಬಂದಿರೋದು ಗೊತ್ತಾಗಿ, ಮತ್ತೆ ಆಕೆಗೆ ಕರೆ ಮಾಡಿ, ಆಕೆಯನ್ನು ಮತ್ತಷ್ಟು ಉರಿಯುವಂತೆ ಮಾಡಿ, ಆಕೆಗೆ ಡ್ರಿಂಕ್ಸ್ (consume alcohol) ಮಾಡುವಂತೆ ಪ್ರೇರೆಪಿಸುತ್ತಾಳೆ ಶಾಕುಂತಲಾ.
ತನ್ನ ಎಲ್ಲಾ ಅವಮಾನ, ನೋವನ್ನು ಮರೆಯೋದಕ್ಕೆ ಡ್ರಿಂಕ್ಸ್ ಮಾಡೋದೆ ಸರಿ ಎನ್ನುತ್ತಾ, ಅಪ್ಪಿ ಕುಡಿದು ಕಾರು ಓಡಿಸಿ, ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ, ಅಷ್ಟೇ ಅಲ್ಲದೇ ಪೊಲೀಸರ ಜೊತೆಗೆ ಕಿರಿಕ್ ಮಾಡಿಕೊಂಡು ಕೊನೆಗೆ, ಪೊಲೀಸ್ ಕೆನ್ನೆಗೆ ಬಾರಿಸಿದ್ದು, ಸದ್ಯ ಅಪೇಕ್ಷ ಜೈಲಲ್ಲಿ (Apeksha in jail) ಕಂಬಿ ಎಣಿಸುತ್ತಿದ್ದಾರೆ. ಈ ವಿಷಯವನ್ನು ಶಾಕುಂತಲಾ, ಮಂದಾಕಿನಿಗೆ ಕರೆ ಮಾಡಿ ಹೇಳಿದ್ದು, ಮಗಳನ್ನು ಜೈಲಿನಿಂದ ಬಿಡಿಸಲು ಹೊರಟ ಅಪ್ಪನನ್ನು ತಡೆದ ಭೂಮಿಕಾ, ತಾನೇ ಪೊಲೀಸ್ ಸ್ಟೇಷನ್ ಹೋಗಿ ಅಪೇಕ್ಷಾಳನ್ನು ಬಿಡಿಸೋದಾಗಿ ಹೊರಟಿದ್ದಾಳೆ ಭೂಮಿಕಾ. ಒಟ್ಟಲ್ಲಿ ಕುಡಿದು ಮನೆ ಮರ್ಯಾದೆ ಕಳೆದು ಜೈಲು ಪಾಲಾದ್ದ ಅಪ್ಪಿಗೆ ಈಗ ಭೂಮಿಕಾ ಕಾವಲಾಗಿದ್ದಾಳೆ. ಮುಂದೆ ಏನಾಗುತ್ತೆ ಕಾದು ನೋಡಬೇಕು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.