ಶ್ರೀಲಂಕಾದ ಪಬ್​ನಲ್ಲಿ ಕನ್ನಡಿಗರ ಜೊತೆ ನಿವೇದಿತಾ ಗೌಡ ಸಂವಾದ! ಅಲ್ಲಿದ್ದೋರು ಕೇಳಿದ್ದೇನು ನೋಡಿ..

Published : Jan 21, 2025, 06:37 PM ISTUpdated : Jan 22, 2025, 10:22 AM IST
ಶ್ರೀಲಂಕಾದ ಪಬ್​ನಲ್ಲಿ ಕನ್ನಡಿಗರ ಜೊತೆ ನಿವೇದಿತಾ ಗೌಡ ಸಂವಾದ! ಅಲ್ಲಿದ್ದೋರು ಕೇಳಿದ್ದೇನು ನೋಡಿ..

ಸಾರಾಂಶ

ಶ್ರೀಲಂಕಾದಲ್ಲಿ ಕನ್ನಡಿಗರೊಂದಿಗೆ ಕನ್ನಡದಲ್ಲೇ ಸಂವಾದ ನಡೆಸಿದ ನಿವೇದಿತಾ ಗೌಡ, ತಮ್ಮ ಮುಂಬರುವ ಚಿತ್ರ 'ಮುದ್ದು ರಾಕ್ಷಸಿ' ಬಗ್ಗೆ ಮಾಹಿತಿ ನೀಡಿದರು. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ನಿವೇದಿತಾ, ಆಕರ್ಷಕ ಉಡುಗೆಗಳಿಂದಾಗಿ ಟ್ರೋಲ್‌ಗೊಳಗಾಗುತ್ತಿದ್ದಾರೆ. ಶ್ರೀಲಂಕಾ ಪ್ರವಾಸದ ರಾಯಭಾರಿಯಾಗಿ ಆಯ್ಕೆಯಾಗಿರುವ ಅವರು, ಅಭಿಮಾನಿಗಳೊಂದಿಗೆ ಸಂವಾದ ನಡೆಸಿ, ಚಿತ್ರದ ಬಗ್ಗೆ ಉತ್ಸಾಹ ಹಂಚಿಕೊಂಡರು.

ನಿವೇದಿತಾ ಗೌಡ ಸದ್ಯ ಭಾರಿ ಡಿಮಾಂಡ್​ ಇರುವ ನಟಿಯಾಗಿದ್ದಾರೆ. ಸಿನಿಮಾಗಳಿಂದ ಆಫರ್​ ಇಲ್ಲದೇ ಹೋದರೂ ಸೋಷಿಯಲ್​ ಮೀಡಿಯಾದ ಸ್ಟಾರ್​ ಆಗಿದ್ದಾರೆ. ದಿನದಿಂದ ದಿನಕ್ಕೆ ಡ್ರೆಸ್​  ಮೇಲಕ್ಕೆ ಹೋಗುತ್ತಿರುವ ನಡುವೆಯೇ, ಇದರಿಂದಲೇ ಟ್ರೋಲ್​ ಆಗುತ್ತಿರುವ ನಿವೇದಿತಾ ಅವರನ್ನು ಶ್ರೀಲಂಕಾದ ಕೊಲೊಂಬೋದ ಪಬ್​ನಲ್ಲಿ ಇದೀಗ ಅವರು ಕನ್ನಡಿಗರ ಜೊತೆ ಕನ್ನಡದಲ್ಲಿಯೇ ಸಂವಾದ ನಡೆಸಿದ್ದಾರೆ. ಶ್ರೀಲಂಕಾದ ಟೂರ್​ ಪ್ಯಾಕೇಜ್​ಗೆ ನಿವೇದಿತಾ ಅವರನ್ನು ರಾಯಭಾರಿಯನ್ನಾಗಿಸಿ, ಅವರನ್ನು ಕರೆದುಕೊಂಡು ಹೋಗಲಾಗಿದೆ. ಅಲ್ಲಿದ್ದವರ ಜೊತೆ ಕನ್ನಡದಲ್ಲಿಯೇ ಮಾತು ಆರಂಭಿಸಿದ್ದಾರೆ ನಟಿ. ನಿವೇದಿತಾ ಅವರನ್ನು ನೋಡುತ್ತಿದ್ದಂತೆಯೇ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದಾರೆ. ಬಳಿಕ, ಹೇಗಿದ್ದಾರಾ ಎಲ್ಲರೂ ಎಂದು ಕನ್ನಡದಲ್ಲಿಯೇ ಮಾತನಾಡಿದ್ದಾರೆ ನಿವೇದಿತಾ.

ಬಳಿಕ ಅಲ್ಲಿದ್ದ ನಿರೂಪಕಿ, ಇವರಿಗೆ ಏನಾದರೂ ಪ್ರಶ್ನೆಗಳು ಇದ್ದರೆ ಕೇಳಿ ಎಮದಾಗ, ನಿಮ್ಮ ಮುಂದಿನ ಸಿನಿಮಾ ಯಾವುದು ಎಂದು ಅಲ್ಲಿದ್ದವರು ಪ್ರಶ್ನಿಸಿದ್ದಾರೆ. ಅದಕ್ಕೆ ನಿವೇದಿತಾ ಮುದ್ದು ರಾಕ್ಷಸಿ ಎಂದಿದ್ದಾರೆ. ಇದರಲ್ಲಿ ಹೀರೋ ಯಾರು ಎಂದಾಗ, ಹೀರೋ ಇಲ್ಲ. ನಾಯಕಿ ಮತ್ತು ವಿಲನ್​ ಮಾತ್ರ ಇರೋದು. ತುಂಬಾ ಚೆನ್ನಾಗಿದೆ. ನೀವೆಲ್ಲರೂ ಈ ಚಿತ್ರವನ್ನು ನೋಡಿ ಎಂದಿದ್ದಾರೆ. ಅಲ್ಲಿಗೇ ವಿಡಿಯೋ ಕಟ್​ ಆಗಿದೆ. ಅಲ್ಲಿದ್ದವರು ಮತ್ತಿನ್ನೇನು ಪ್ರಶ್ನೆ ಕೇಳಿದರು ಎನ್ನುವುದು ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.

ಮಂಚದಲ್ಲಿನ ನಿವೇದಿತಾ ಗೌಡ ಹಾಟ್​ ವಿಡಿಯೋ ವೈರಲ್​: ಹಾಕಲು ಬಟ್ಟೆ ಇಲ್ಲ ಎಂದ ನಟಿಯ ಎದುರಿಗೆ ಇರೋದ್ಯಾರು?

ಅಷ್ಟಕ್ಕೂ ನಿವೇದಿತಾ ಇತ್ತೀಚೆಗೆ ಹಾಟ್​ ಅವತಾರದಲ್ಲಿ ಕಾಣಿಸಿಕೊಂಡು ಪಡ್ಡೆ ಹುಡುಗರ ನಿದ್ದೆ ಕೆಡಿಸುತ್ತಿದ್ದಾರೆ. ನಿನ್ನೆಯಷ್ಟೇ ಈಕೆ, ಮಂಚದ ಮೇಲಿನ ವಿಡಿಯೋ ಶೇರ್​ ಮಾಡಿಕೊಂಡಿದ್ದರು. ಅದಕ್ಕೆ ಇನ್ನಿಲ್ಲದಂತೆ ಕಮೆಂಟ್ಸ್​ ಬಂದಿದ್ದವು.  ಪ್ರತಿದಿನವೂ ಒಂದಿಲ್ಲೊಂದು ಹಾಟ್​ ಡ್ರೆಸ್​ನಲ್ಲಿ ನಟಿ ಮಿಂಚುತ್ತಲೇ ಇದ್ದಾರೆ. ಕನ್ನಡದ ಉರ್ಫಿ ಜಾವೇದ್​ ಎಂದು ಕೆಲವರು ಹೇಳಿದರೆ, ಮತ್ತೆ ಕೆಲವರು ಸನ್ನಿ ಲಿಯೋನ್​, ರಾಖಿ ಸಾವಂತ್​ ಇತ್ಯಾದಿಯಾಗಿಯೂ ಕಮೆಂಟ್​ ಮಾಡುವಷ್ಟರ  ಮಟ್ಟಿಗೆ ನಟಿಯ ಡ್ರೆಸ್​ ದಿನದಿಂದ ದಿನಕ್ಕೆ ಬದಲಾಗುತ್ತಲೇ ಇದೆ. 

ಸಿನಿಮಾಗಳಲ್ಲಿ ನಟಿಸದಿದ್ದರೂ, ಧಾರಾಳ ದೇಹ ಪ್ರದರ್ಶನ ಮಾಡಿಕೊಂಡಿರುವ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಹರಿಬಿಡುತ್ತಲೇ ಫೇಮಸ್​ ಆಗ್ತಿರೋ ನಟಿಯರು ಒಂದಿಷ್ಟು ಮಂದಿ ಇದ್ದಾರೆ.  ಅಂಗಾಂಗಗಳ ಪ್ರದರ್ಶನ ಹೆಚ್ಚಾದಷ್ಟೂ ಅವರಿಗೆ ಡಿಮಾಂಡ್​ ಜಾಸ್ತಿಯಾಗ್ತಿರೋದು ಈಗಿನ ಟ್ರೆಂಡ್​.  ಟ್ರೋಲ್​ ಮಾಡುವುದಕ್ಕಾಗಿಯೇ ಒಂದಿಷ್ಟು ಜನ ಇಂಥ ನಟಿಯರ ವಿಡಿಯೋ ಕಾಯುತ್ತಲೇ ಇರುತ್ತಾರೆ. ಅವರು ಟ್ರೋಲ್​  ಮಾಡಿ ಖುಷಿ ಪಟ್ಟುಕೊಂಡರೆ, ದೇಹ ಪ್ರದರ್ಶನ ಧಾರಾಳವಾಗಿ ಮಾಡುವ ನಟಿಯರೂ ಫುಲ್​ ಖುಷ್​. ಒಟ್ಟಿನಲ್ಲಿ ಪ್ರಚಾರ ಬೇಕು ಅಷ್ಟೇ, ಪಾಸಿಟಿವ್​, ನೆಗೆಟಿವ್​ ಅದೆಲ್ಲಾ ಯಾರಿಗೆ ಬೇಕು ಎನ್ನುವ ಜಾಯಮಾನ ಇವರದ್ದು. ಅವರ ಪಾಲಿಗೆ ಸೇರಿದ್ದಾರೆ ನಿವೇದಿತಾ ಎನ್ನುವುದೇ ಈಕೆಯ ಫ್ಯಾನ್ಸ್ ಬೇಸರ.

ಪಾರದರ್ಶಕ ಡ್ರೆಸ್​ ತೊಟ್ಟು ಸೂರ್ಯನ ಬೆಳಕಲ್ಲಿ ನಿವೇದಿತಾ ರೀಲ್ಸ್​: ನೆಟ್ಟಿಗರು ಸುಮ್ನೆ ಇರ್ತಾರಾ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?