
ಒಂದು ಕಡೆ ಸೀತಾರಾಮ ಸೀರಿಯಲ್ ರಾಮ್, ಇನ್ನೊಂದು ಕಡೆ ಬ್ರಹ್ಮಗಂಟು ಚಿರು... ಈ ಇಬ್ಬರು ಪಾತ್ರಧಾರಿಗಳ ಜೀವಕ್ಕೆ ಭಾರಿ ಅಪಾಯ ಎದುರಾಗಿದೆ. ಇವರಿಬ್ಬರೂ ಹೊರಗೆ ಬರದಂತೆ ಎಚ್ಚರಿಕೆಯನ್ನೂ ನೀಡಲಾಗಿದೆ. ಗಗನ್ ಚಿನ್ನಪ್ಪ ಅವರು ಸೀತಾರಾಮ ಸೀರಿಯಲ್ ನಾಯಕ ರಾಮ್ ಪಾತ್ರಧಾರಿಯಾಗಿದ್ದರೆ, ಭುವನ್ ಸತ್ಯ ಅವರು ಬ್ರಹ್ಮಗಂಟು ಸೀರಿಯಲ್ ನಾಯಕ ಚಿರು ಆಗಿದ್ದಾರೆ. ಇವರಿಬ್ಬರು ಸದ್ಯದ ಮಟ್ಟಿಗೆ ಹೊರಕ್ಕೆ ಹೋಗುವುದು ಅಪಾಯವಂತೆ, ಇದಕ್ಕೆ ಕಾರಣ ಇಬ್ಬರಿಗೂ ಜೀವ ಬೆದರಿಕೆ ಇದೆ!
ಹಾಗೆಂದು ಇದೇನೂ ಪೊಲೀಸರು ಈ ನಟರಿಗೆ ಕೊಟ್ಟಿರೋ ವಾರ್ನಿಂಗ್ ಅಲ್ಲ, ಬದಲಿಗೆ ಸೀರಿಯಲ್ ವೀಕ್ಷಕರು ಕೊಟ್ಟಿರೋ ಎಚ್ಚರಿಕೆ! ಹೌದು. ಸದ್ಯ ಈ ಇಬ್ಬರೂ ನಾಯಕರ ವಿರುದ್ಧ ಸೀರಿಯಲ್ ಪ್ರೇಮಿಗಳು ಕೊತಕೊತ ಕುದಿಯುತ್ತಿದ್ದಾರೆ. ವಿಲನ್ಗಳ ಬದಲು ನಾಯಕರ ಮೇಲೆ ಕೋಪ ಮಾಡಿಕೊಳ್ಳಲು ಕಾರಣವೂ ಇದೆ. ರಾಮ್ಗೆ ವಿಲನ್ ಭಾರ್ಗವಿಯೇ ಸರ್ವಸ್ವ. ಆಕೆ ಹೇಳಿದಂತೆ ಕುಣಿಯುತ್ತಿದ್ದರೆ, ಚಿರುಗೆ ಅತ್ತಿಗೆ ಸೌಂದರ್ಯಳೇ ದೇವತೆ. ಅವಳ ಮಾತನ್ನೇ ನಂಬಿ ಬದುಕುತ್ತಿದ್ದಾನೆ. ಇದು ಸೀರಿಯಲ್ ಮೊದಲಿನಿಂದಲೂ ಹೀಗೆಯೇ ಆಗಿದ್ದರೂ, ಇದೀಗ ಈ ಎರಡೂ ಸೀರಿಯಲ್ಗಳು ಕುತೂಹಲದ ಘಟ್ಟಕ್ಕೆ ತಲುಪಿರುವ ಹಿನ್ನೆಲೆಯಲ್ಲಿ ಸದ್ಯ ನೀವಿಬ್ಬರೂ ಹೊರಕ್ಕೆ ಬಂದರೆ ನಿಮ್ಮನ್ನು ಸುಮ್ಮನೇ ಬಿಡುವುದಿಲ್ಲ ಎಂದು ನೆಟ್ಟಿಗರು ಧಮ್ಕಿ ಹಾಕಿದ್ದಾರೆ. ಸಿಹಿಯ ಕೊಲೆಯನ್ನು ಭಾರ್ಗವಿ ಚಿಕ್ಕಿಯೇ ಮಾಡಿಸಿದ್ದಾಳೆ ಎಂದು ತೋರಿಸುವ ಸಲುವಾಗಿ ಅಶೋಕ್, ಮಕ್ಕಳ ಕೈಯಿಂದ ನಾಟಕ ಮಾಡಿಸಿದ್ದಾನೆ. ಇದರಲ್ಲಿ ಸೀತಾರಾಮ ಸೀರಿಯಲ್ ಕಥೆಯನ್ನು ತೋರಿಸಲಾಗಿದೆ. ಭಾರ್ಗವಿ ಪಾತ್ರಧಾರಿ ಹೇಗೆ ಮಗುವನ್ನು ಕೊಲೆ ಮಾಡುತ್ತಾಳೆ ಎನ್ನುವುದನ್ನು ತೋರಿಸಲಾಗಿದೆ. ಈ ಕಥೆಗೂ ತನ್ನ ಜೀವನಕ್ಕೂ ಲಿಂಕ್ ಆಗ್ತಿರುವಂತೆ ರಾಮ್ಗೆ ಕಾಣಿಸುತ್ತಿದ್ದು, ಭಾರ್ಗವಿ ಕ್ಯಾರೆಕ್ಟರ್ ಅನ್ನು ವಿಲನ್ ರೂಪದಲ್ಲಿ ತೋರಿಸಿರುವುದಕ್ಕೆ ಕೆಂಡಾಮಂಡಲ ಆಗಿದ್ದಾನೆ. ಅಶೋಕ್ಗೆ ಬಾಯಿಗೆ ಬಂದಂತೆ ಬೈದು, ಆತನನ್ನು ದೂರ ತಳ್ಳಿದ್ದಾನೆ. ಅಶೋಕ್ ಒಂಟಿಯಾಗಿ ಕಣ್ಣೀರು ಹಾಕುತ್ತಿದ್ದಾನೆ.
ಭಾಗ್ಯಲಕ್ಷ್ಮಿ ವಿಲನ್ ಕನ್ನಿಕಾ ರಿಯಲ್ ಲೈಫ್ನಲ್ಲಿ ಇದೇನಿದು ದುರಂತ? ನೋವಿನ ಘಟನೆ ತೆರೆದಿಟ್ಟ ಸುಕೃತಾ
ಇದು ಸೀತಾರಾಮ ಕಥೆಯಾದ್ರೆ, ಇನ್ನು ಬ್ರಹ್ಮಗಂಟುವಿನಲ್ಲಿ, ಯಾವುದೇ ದುರುದ್ದೇಶ ಇಲ್ಲದೆಯೇ ಸೌಂದರ್ಯಳಿಂದ ತೊಟ್ಟಿಲ ಪೂಜೆ ಮಾಡಿಸಲು ದೀಪಾ ಮುಂದಾಗಿದ್ದಳು. ಆದರೆ ಮಗು ಎಂದ್ರೆ ಆಗದ ಸೌಂದರ್ಯ ಅದನ್ನೇ ದೀಪಾಳ ವಿರುದ್ಧ ಅಸ್ತ್ರವಾಗಿ ಬಳಸಿಕೊಂಡಿದ್ದಾಳೆ. ಇದನ್ನು ನೋಡಿ ಚಿರು ದೀಪಾ ವಿರುದ್ಧ ತಿರುಗಿ ಬಿದ್ದಿದ್ದು ಆಕೆಯನ್ನು ಮನೆಯಿಂದ ಹೊರಕ್ಕೆ ಹಾಕಿದ್ದಾನೆ. ಇನ್ನು ನನ್ನ- ನಿಮ್ಮ ಸಂಬಂಧ ಮುಗಿಯಿತು, ಮತ್ತೆ ಮನೆಗೆ ಬರಬೇಡಿ ಎಂದು ಹೇಳಿದ್ದಾನೆ. ಇದೇ ಕಾರಣಕ್ಕೆ ಪೆದ್ದು ನಾಯಕರ ವಿರುದ್ಧ ನೆಟ್ಟಿಗರು ಕಿಡಿ ಕಾರುತ್ತಿದ್ದು, ನೀವು ಹೊರಗೆ ಬಂದ್ರೆ ಕಪಾಳಮೋಕ್ಷ ಮಾಡ್ತೇವೆ, ನಮ್ಮ ಕೈಗೆ ನೀವು ಸಿಗಿ, ಇದೆ ಹಬ್ಬ ಎಂದೆಲ್ಲಾ ಕಮೆಂಟ್ ಮಾಡುತ್ತಿದ್ದಾರೆ. ಇದೊಂದು ಸೀರಿಯಲ್ ಎಂದು ತಿಳಿದಿದ್ದರೂ ಆಕ್ರೋಶ ಮಾತ್ರ ಹೊರ ಹಾಕುತ್ತಲೇ ಇದ್ದಾರೆ.
ಗಗನ್ ಚಿನ್ನಪ್ಪ ಕುರಿತು ಹೇಳುವುದಾದರೆ, ಇವರಿಗೆ ಮೊದಲು ಮಂಗಳಗೌರಿ ಮದುವೆ ಸೀರಿಯಲ್‌ನಲ್ಲಿ ಅವಕಾಶ ಸಿಕ್ಕಿತು. ಈ ಧಾರಾವಾಹಿಯಲ್ಲಿ ಅವರು ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಮಿನಿ ಬಿಗ್ ಬಾಸ್ಗೂ ಎಂಟ್ರಿ ಕೊಟ್ಟು ಈಗ ಸೀತಾರಾಮ ಸೀರಿಯಲ್ ಮೂಲಕ ಕನ್ನಡ ಧಾರಾವಾಹಿ ಲೋಕದಲ್ಲಿ ಪೂರ್ಣಪ್ರಮಾಣದ ನಾಯಕರಾಗಿ ಮಿಂಚುತ್ತಿದ್ದಾರೆ. ತೆಲುಗು ಕಿರುತೆರೆಗೂ ಕಾಲಿಟ್ಟಿರೋ ಗಗನ್ ಅವರು, ‘ಕೃಷ್ಣ ಮುಕುಂದ ಮುರಾರಿ’ ಸೀರಿಯಲ್‌ನಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ಅವವರು ಮುರಾರಿ ಹೆಸರಿನ ಪಾತ್ರ ಮಾಡುತ್ತಿದ್ದಾರೆ. ಪ್ರೇರಣಾ ಕಂಬಮ್, ಯಶ್ಮಿ ಗೌಡ ಮೊದಲಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಇನ್ನು, ಪುಣ್ಯವತಿ ಧಾರಾವಾಹಿಯಲ್ಲಿ ನಂದನ್ ಪಾತ್ರದಲ್ಲಿ ನಟಿಸಿದ್ದ ಭುವನ್ ಸತ್ಯ ನಟನೆಯ ಮೂಲಕ ಪ್ರೇಕ್ಷಕರ ಮನಸ್ಸು ಗೆದ್ದವರು. ಹ್ಯಾಂಡ್ಸಮ್ ನಟ ಮೋಸ್ಟ್ ಸ್ಟೈಲಿಶ್ ಐಕಾನ್ ಅವಾರ್ಡ್ ಕೂಡ ಪಡೆದಿದ್ದರು.
ಪುಟ್ಟಕ್ಕನ ಮಕ್ಕಳು ಸೀರಿಯಲ್ ಅರ್ಧಕ್ಕೇ ಬಿಟ್ಟು ಸಾವಿನ ಬಗ್ಗೆ ಮಾತನಾಡೋದಾ ಸ್ನೇಹಾ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.