ಸೆಕ್ಸ್‌ ಪೊಸಿಷನ್‌ ವಿಡಿಯೋದಿಂದ ಹೆಚ್ಚಾಯ್ತು ಅಜಾಜ್‌ ಖಾನ್‌ ಟ್ರಬಲ್‌, ಸಮನ್ಸ್‌ ನೀಡಿದ NCW

Published : May 02, 2025, 05:55 PM ISTUpdated : May 02, 2025, 06:13 PM IST
ಸೆಕ್ಸ್‌ ಪೊಸಿಷನ್‌ ವಿಡಿಯೋದಿಂದ ಹೆಚ್ಚಾಯ್ತು ಅಜಾಜ್‌ ಖಾನ್‌ ಟ್ರಬಲ್‌, ಸಮನ್ಸ್‌ ನೀಡಿದ NCW

ಸಾರಾಂಶ

ಉಲ್ಲು ಆ್ಯಪ್‌ನ 'ಹೌಸ್ ಅರೆಸ್ಟ್' ಕಾರ್ಯಕ್ರಮದಲ್ಲಿ ಅಜಾಜ್ ಖಾನ್ 'ಸೆಕ್ಸ್ ಪೋಸಿಷನ್' ವಿಡಿಯೋದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಶ್ಲೀಲ ವಿಷಯಕ್ಕಾಗಿ ರಾಷ್ಟ್ರೀಯ ಮಹಿಳಾ ಆಯೋಗವು ಅಜಾಜ್ ಮತ್ತು ಉಲ್ಲು ಆ್ಯಪ್ ಸಿಇಒಗೆ ಸಮನ್ಸ್ ಜಾರಿ ಮಾಡಿದೆ. ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ಕಾರ್ಯಕ್ರಮ ನಿಷೇಧಿಸುವಂತೆ ಒತ್ತಾಯ ಕೇಳಿಬಂದಿದೆ. ಸ್ಪರ್ಧಿಗಳಿಗೆ ಲೈಂಗಿಕ ಭಂಗಿಗಳನ್ನು ಪ್ರದರ್ಶಿಸಲು ಹೇಳಿದ್ದು ವಿವಾದಕ್ಕೆ ಕಾರಣವಾಗಿದೆ.

ಮುಂಬೈ (ಮೇ.2): ಉಲ್ಲು ಆಪ್ ನ 'ಹೌಸ್ ಅರೆಸ್ಟ್' ಕಾರ್ಯಕ್ರಮದಲ್ಲಿ ನಿರೂಪಕ ಹಾಗೂ ಬಿಗ್ ಬಾಸ್ 7 ರ ಮಾಜಿ ಸ್ಪರ್ಧಿ ಅಜಾಜ್‌ ಖಾನ್ ಸಂಕಷ್ಟಕ್ಕೆ ಸಿಲುಕಿದ್ದಾರೆ. 'ಸೆಕ್ಸ್ ಪೋಸಿಷನ್' ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಭಾರೀ ಒತ್ತಡ ಕೇಳಿ ಬಂದಿದೆ. ಇದರ ನಡುವೆ, ರಾಷ್ಟ್ರೀಯ ಮಹಿಳಾ ಆಯೋಗ (NCW) ಎಜಾಜ್ ಖಾನ್ ಮತ್ತು ಉಲ್ಲು ಆಪ್ ಸಿಇಒ ವಿಭು ಅಗರ್ವಾಲ್ ಅವರಿಗೆ ಸಮನ್ಸ್ ಕಳುಹಿಸಿದ್ದಲ್ಲದೆ, ಕಾರ್ಯಕ್ರಮದ ಅಶ್ಲೀಲ ವಿಷಯದ ಬಗ್ಗೆ NCW ಸ್ವಯಂಪ್ರೇರಿತ ದೂರು ದಾಖಲಿಸಿದೆ.

ವೈರಲ್ ಆಗಿರುವ ವಿಡಿಯೋದ ಪ್ರಕಾರ, ಈ ಕಾರ್ಯಕ್ರಮದಲ್ಲಿ ಹುಡುಗಿಯರನ್ನು 'ಸೆಕ್ಸ್‌ ಪೊಶಿಷನ್‌ಗಳು' ಯಾವುದು ಅನ್ನೋದನ್ನು ತಿಳಿಸುವಂತೆ ಹೇಳಲಾಗಿತ್ತು. ಇದರ ನಂತರ, ಕ್ಯಾಮೆರಾದ ಎದುರಲ್ಲೇ ಮಹಿಳಾ ಹಾಗೂ ಪುರುಷ ಸ್ಪರ್ಧಿಗಳು ಈ ಸೆಕ್ಸ್‌ ಪೊಶಿಷನ್‌ಗಳನ್ನು ಮಾಡಿಸಿ ತೋರಿಸಿದ್ದಾರೆ. ಅಶ್ಲೀಲತೆಯನ್ನು ಹರಡಿದ್ದಕ್ಕಾಗಿ ಮತ್ತು ಸಾಮಾಜಿಕ ಸಭ್ಯತೆ ಉಲ್ಲಂಘಿಸಿದ್ದಕ್ಕಾಗಿ ರಾಷ್ಟ್ರೀಯ ಮಹಿಳಾ ಆಯೋಗ ಈ ಕಾರ್ಯಕ್ರಮವನ್ನು  ಟೀಕಿಸಿದೆ. NCW ಅಜಾಜ್‌ ಖಾನ್ ಮತ್ತು ವಿಭು ಅಗರ್ವಾಲ್ ಅವರಿಗೆ ಸಮನ್ಸ್ ಜಾರಿ ಮಾಡಿದ್ದು, ಮೇ 9ರ ಒಳಗಾಗಿ ಉತ್ತರ ನೀಡಬೇಕು ಎಂದು ತಿಳಿಸಿದೆ.

ಈ ವಿಡಿಯೋ ವೈರಲ್ ಆದ ನಂತರ, ಸಾಮಾಜಿಕ ಮಾಧ್ಯಮ ಬಳಕೆದಾರರು ಮತ್ತು ರಾಜಕಾರಣಿಗಳು ಸಹ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿ ಅಂತಹ ಕಾರ್ಯಕ್ರಮಗಳನ್ನು ನಿಷೇಧಿಸಬೇಕೆಂದು ಒತ್ತಾಯಿಸಿದ್ದಾರೆ. ಮನರಂಜನೆಯ ಹೆಸರಿನಲ್ಲಿ ಇಂಟರ್ನೆಟ್‌ನಲ್ಲಿ ಅಶ್ಲೀಲತೆಯನ್ನು ನೀಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿಂದೆ, ಶಿವಸೇನೆ (ಯುಬಿಟಿ) ರಾಜ್ಯಸಭಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರು ಹೌಸ್ ಅರೆಸ್ಟ್ ಕಾರ್ಯಕ್ರಮದ ಕ್ಲಿಪ್ ಅನ್ನು ಹಂಚಿಕೊಂಡಿದ್ದರು.

ಅಪ್ಲಿಕೇಶನ್‌ಗಳಲ್ಲಿ ಅಶ್ಲೀಲ ವಿಷಯವನ್ನು ನಿರಂತರವಾಗಿ ನೀಡಲಾಗುತ್ತಿದೆ ಆದರೆ ಸರ್ಕಾರ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಬರೆದಿದ್ದರು. "ನಾವು ಸ್ಥಾಯಿ ಸಮಿತಿಯ ಮುಂದೆಯೂ ಈ ವಿಷಯವನ್ನು ಪ್ರಸ್ತಾಪಿಸಿದ್ದೇವೆ. ಆಲ್ಟ್ ಬಾಲಾಜಿ ಮತ್ತು ಉಲ್ಲು ನಂತಹ ಅಪ್ಲಿಕೇಶನ್‌ಗಳು ನಿಯಮಗಳನ್ನು ಉಲ್ಲಂಘಿಸುತ್ತಿವೆ. ಸಚಿವಾಲಯ ನಿಷೇಧಿಸಿರುವ ವಿಷಯವನ್ನು ಸಹ ಬಹಿರಂಗವಾಗಿ ನೀಡಲಾಗುತ್ತಿದೆ" ಎಂದು ಅವರು ಹೇಳಿದ್ದಾರೆ.

ಸುಪ್ರೀಂ ಕೋರ್ಟ್‌ ತೀರ್ಪಿಗೂ ಬೆಲೆಯಿಲ್ಲ: ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿನ ವಿಷಯವು "ವಿಕೃತ" ದವರೆಗೆ ಹೋಗಬಹುದು ಮತ್ತು ವೇದಿಕೆಗಳು "ಸಾಮಾಜಿಕ ಜವಾಬ್ದಾರಿ" ಹೊಂದಿವೆ ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದ ಕೆಲವು ದಿನಗಳ ನಂತರ ಈ ಬೆಳವಣಿಗೆ ಸಂಭವಿಸಿದೆ. ಕಾರ್ಯಕ್ರಮದ ಸ್ಪಷ್ಟ ವಿಷಯವನ್ನು ಟೀಕಿಸುವಾಗ, ಅನೇಕ ಸೋಶಿಯಲ್‌ ಮೀಡಿಯಾ ಯೂಸರ್‌ಗಳು ಇತ್ತೀಚೆಗೆ ಎದುರಿಸಿದ ಹಿನ್ನಡೆಯ ಹಾಸ್ಯನಟ ಸಮಯ್ ರೈನಾ ಅವರೊಂದಿಗೆ ಹೋಲಿಕೆಗಳನ್ನು ಮಾಡಿದರು.

ಏನಿದೆ ಈ ವಿಡಿಯೋದಲ್ಲಿ: ವಿವಾದಾತ್ಮಕ ಕ್ಲಿಪ್‌ನಲ್ಲಿ, ಮಾಜಿ ಬಿಗ್ ಬಾಸ್ ಸ್ಪರ್ಧಿ ಅಜಾಜ್ ಖಾನ್, ಸ್ಪರ್ಧಿಗಳಿಗೆ ವಿಭಿನ್ನ ಲೈಂಗಿಕ ಭಂಗಿಗಳನ್ನು ಮಾಡಿ ತೋರಿಸುವಂತೆ ಹೇಳಿರುವುದು ಕಂಡುಬಂದಿದೆ. ಈ ವಿನಿಮಯವನ್ನು ಅನೇಕ ವೀಕ್ಷಕರು ಅಸಭ್ಯ ಮತ್ತು ಅಸಹ್ಯಕರವೆಂದು ಟೀಕಿಸಿದ್ದಾರೆ.

ಒಂದು ಹಂತದಲ್ಲಂತೂ, ಎಜಾಜ್‌ ಖಾನ್‌ ಒಬ್ಬ ಮಹಿಳಾ ಸ್ಪರ್ಧಿಯ ಮೇಲೆ ಲೈಂಗಿಕ ಭಂಗಿಗಳ ಬಗ್ಗೆ ನಿಮಗೆ ಇರುವ ಜ್ಞಾನವನ್ನು ತಿಳಿಸುವಂಯೆ ಹೇಳುತ್ತಾರೆ. ಇದಕ್ಕೆ ಆಕೆ ಹಿಂಜರಿಯುತ್ತಾ, ನಾನು ಈವರೆಗೂ ಅಂಥದ್ದನ್ನು ಮಾಡಿಲ್ಲ ಎಂದು ಒಪ್ಪಿಕೊಂಡಿದ್ದಾಳೆ. ಇದಕ್ಕೆ ಅಜಾಜ್‌,"ತುಮ್ನೆ ಪ್ರಯೋಗ ನಹಿ ಕಿಯಾ ಕಭಿ?" (ನೀವು ಎಂದಿಗೂ ಪ್ರಯೋಗ ಮಾಡಿಲ್ಲವೇ?) ಎಂದು ನೇರವಾಗಿ ಕೇಳಿದ್ದಾರೆ.

ಈ ಹಂತದಲ್ಲಿ ಅಜಾಜ್ ಒಬ್ಬ ತಲಾ ಇಬ್ಬರು ಮಹಿಳಾ ಜಾಗೂ ಪುರುಷ ಸ್ಪರ್ಧಿಗಳಿಗೆ ಸೆಕ್ಸ್‌ ಪೊಸಿಷನ್‌ಗಳನ್ನು ತೋರಿಸುವಂತೆ ಹೇಳಿದಾಗ ಪರಿಸ್ಥಿತಿ ಇನ್ನಷ್ಟು ವಿವಾದಾತ್ಮಕವಾಗಿದೆ. ನಂತರ ಸ್ಪರ್ಧಿಯು ಅದನ್ನು ಪಾಲಿಸುತ್ತಾನೆ, ಇತರರಿಗೆ ಆಕ್ಟ್ ಮೂಲಕ ಮಾರ್ಗದರ್ಶನ ನೀಡುತ್ತಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ದೇವರ ನೆನೆಸ್ಕೊಂಡೇ ಈ ಹಾರರ್‌ ವೆಬ್‌ ಸಿರೀಸ್‌ ನೋಡಿ, IMDBಯಲ್ಲೂ ಭರ್ಜರಿ ರೇಟಿಂಗ್‌
ತಟ್ಟೆ ಖಾಲಿಯಾದ್ರೆ ಊಟ ತರೋದೂ ಕಷ್ಟ, ಗಿಲ್ಲಿಗಿಂತ ನೂರು ಪಟ್ಟು ಸೋಂಬೇರಿ ಸ್ಪಂದನಾ