ಕುಂಭಮೇಳದ ಎಫೆಕ್ಟ್​- ಆತ್ಮದಿಂದ ಹೊರಬಂದ ಸಿಹಿ: ಕೋಮಾಕ್ಕೆ ಹೋದ ಭಾರ್ಗವಿ ಚಿಕ್ಕಿ!

Published : May 02, 2025, 03:38 PM ISTUpdated : May 02, 2025, 04:06 PM IST
ಕುಂಭಮೇಳದ ಎಫೆಕ್ಟ್​- ಆತ್ಮದಿಂದ ಹೊರಬಂದ ಸಿಹಿ: ಕೋಮಾಕ್ಕೆ ಹೋದ ಭಾರ್ಗವಿ ಚಿಕ್ಕಿ!

ಸಾರಾಂಶ

ಸಿಹಿ ಆತ್ಮವಾಗಿ ಅಶೋಕನಿಗೆ ಕಾಣಿಸಿ, ಭಾರ್ಗವಿ ಚಿಕ್ಕಿಯ ಕೊಲೆ ರಹಸ್ಯ ಬಯಲು ಮಾಡಲು ಯತ್ನಿಸುತ್ತಿದ್ದಾಳೆ. ಸುಬ್ಬಿ ಕಿಡ್ನ್ಯಾಪ್ ಆಗಿದ್ದಾಳೆ. ಆಂಜನೇಯನ ಕೃಪೆಯಿಂದ ಸಿಹಿ ಎಲ್ಲರಿಗೂ ಗೋಚರಿಸುತ್ತಾಳೆ. ಸುಬ್ಬಿ ಸೀತೆಯ ಮಗಳೆಂದು ತಿಳಿದು, ದತ್ತು ಪಡೆಯಲು ಬೇರೆಯವರು ಬಂದಿದ್ದಾರೆ. ರಾಮ್ ಸತ್ಯ ತಿಳಿಯಲು ಮಕ್ಕಳಿಂದ ನಾಟಕ ಮಾಡಿಸುತ್ತಿದ್ದಾನೆ.

ಸಿಹಿ ಇಲ್ಲಿಯವರೆಗೆ ಸುಬ್ಬಿಗೆ ಮಾತ್ರ ಕಾಣಿಸ್ತಾ ಇದ್ದಾಳೆ. ಈಗ ಅಶೋಕನಿಗೂ ಸಿಹಿಯ ಆತ್ಮದ ಬಗ್ಗೆ ಗೊತ್ತಾಗಿದೆ. ಹೇಗಾದರೂ ಮಾಡಿ ಸಿಹಿಯನ್ನು ಕೊಂದದ್ದು ಭಾರ್ಗವಿ ಚಿಕ್ಕಿಯೇ ಎಂದು ಮನವರಿಕೆ ಮಾಡಬೇಕಿದೆ. ಅದನ್ನು ರಾಮ್​ ಅಷ್ಟು ಸುಲಭದಲ್ಲಿ ನಂಬಲ್ಲ ಎಂದು ಇದೇ ಕಥೆಯನ್ನು ಇಟ್ಟುಕೊಂಡು ಮಕ್ಕಳಿಂದ ನಾಟಕ ಮಾಡಿಸುತ್ತಿದ್ದಾನೆ.  ಆದರೆ, ಸಿಹಿಯ ಕೊಲೆ ಆಗಿರುವ ಬಗ್ಗೆ ತಿಳಿಸಲು ಅಶೋಕ್​ ಏನೋ ಸ್ಕೆಚ್​ ಹಾಕ್ತಾ  ಇದ್ದಾನೆ ಎಂದು ಗೊತ್ತಾಗಿ ಭಾರ್ಗವಿ ಸುಬ್ಬಿಯನ್ನು ಕಿಡ್​ನ್ಯಾಪ್​ ಮಾಡುತ್ತಾನೆ. ಅವಳು ಇರುವಲ್ಲಿ ಸಿಹಿಗೆ ತಲುಪಲು ಆಗುವುದಿಲ್ಲ. ನಾಟಕ ಶುರುವಾಗುತ್ತದೆ. ನಕಲಿ ಸಿಹಿ ಸುಲಭದಲ್ಲಿ ಬರುವುದಿಲ್ಲ ಎಂದು ಖುಷಿಯಲ್ಲಿ ಇರುತ್ತಾಳೆ ಭಾರ್ಗವಿ. ಆದರೆ ಆದದ್ದೇ ಬೇರೆ.

ಹೇಗಾದರೂ ಮಾಡಿ ಭಾರ್ಗವಿ ಚಿಕ್ಕಿಯ ರಹಸ್ಯ ಭೇದಿಸಬೇಕು ಎಂದುಕೊಳ್ಳುವ ಸಿಹಿ, ಆಂಜನೇಯನ ಮೊರೆ ಹೋಗುತ್ತಾಳೆ. ಅಷ್ಟಕ್ಕೂ ಪ್ರಯಾಗ್​ರಾಜ್​ನಲ್ಲಿ ನಡೆದ ಕುಂಭಮೇಳದ ಸಂದರ್ಭದಲ್ಲಿ ಸಿಹಿ ಅಲ್ಲಿಗೂ ಹೋಗಿರುತ್ತಾಳೆ. ಹೇಗಾದರೂ ಮಾಡಿ ನನಗೆ ವಿಶೇಷ ಶಕ್ತಿ ಕೊಡುವಂತೆ ಆಕೆ ನಾಗಾಸಾಧು ಬಳಿ ಕೇಳಿಕೊಂಡಾಗ, ಆಂಜನೇಯರ ಪ್ರಾರ್ಥನೆ ದಿನವೂ ಮಾಡು, ವಿಶೇಷ ಶಕ್ತಿ ಬರುತ್ತದೆ ಎಂದಿರುತ್ತಾರೆ ನಾಗಾಸಾಧು. ಅದರಂತೆ ಸಿಹಿಗೆ ಈಗಾಗಲೇ ಎಲ್ಲಾ ವಸ್ತುಗಳನ್ನು ಮುಟ್ಟುವ ಅವಕಾಶ ಸಿಕ್ಕಿದೆ. ಇದೀಗ ಮತ್ತೊಮ್ಮೆ ಕೃಪೆ ತೋರುವ ಆಂಜನೇಯ ಸಿಹಿಯನ್ನು ಎಲ್ಲರಿಗೂ ಕಾಣಿಸುವ ಹಾಗೆ  ಮಾಡಿದ್ದಾನೆ. ಅವಳು ವೇದಿಕೆ  ಮೇಲೆ ಬರ್ತಾಳೆ.  ಅವಳನ್ನು ನೋಡುತ್ತಿದ್ದಂತೆಯೇ ಭಾರ್ಗವಿ ಮತ್ತು ವಿಶ್ವ ಕೋಮಾಕ್ಕೆ ಹೋಗುವುದು ಒಂದೇ ಬಾಕಿ. ಅಲ್ಲಿ ಕಿಡ್​ನ್ಯಾಪ್​ ಆದವಳು ಇಲ್ಲಿ ಬರಲು ಹೇಗೆ ಸಾಧ್ಯ ಎಂದು ತಲೆ ಕೆಡಿಸಿಕೊಳ್ತಾರೆ! 

'ಬ್ಲೌಸ್​ ಹಿಂದೆ ಏನಿದೆ' ಎನ್ನುತ್ತಾ ಕುಣಿದು ಕುಪ್ಪಳಿಸಿದ ವರ: ಮದ್ವೆನೇ ಕ್ಯಾನ್ಸಲ್​ ಮಾಡಿದ ವಧು ಅಪ್ಪ!

ಅಷ್ಟಕ್ಕೂ, ಇದೀಗ ಸೀರಿಯಲ್​  ಕುತೂಹಲದ ಹಂತ ತಲುಪಿದೆ. ಸೀತೆಗೆ ಸಿಹಿಯ ಜೊತೆ ಇನ್ನೊಬ್ಬಳು ಮಗಳು ಹುಟ್ಟಿದ್ದಳು ಎನ್ನುವ ರಹಸ್ಯ ಇದಾಗಲೇ ಸುಬ್ಬಿ ಕೇಳಿಸಿಕೊಂಡಿದ್ದು, ತಾವು ಸೀತಾಳ ಮಗಳೇ ಎನ್ನುವುದು ಆಕೆಗೆ ತಿಳಿದಿದೆ.  ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಹೆತ್ತ ಸೀತೆಗೆ ಹುಟ್ಟಿದ್ದು ಅವಳಿ ಮಕ್ಕಳು, ಅವರಲ್ಲಿ ಒಬ್ಬಳು ಸಿಹಿ ಇದಾಗಲೇ ಕಾನೂನುಬದ್ಧವಾಗಿ ಸೀತೆಗೆ ಸಿಕ್ಕೂ ಆಗಿದೆ. ಆಕೆ ಸತ್ತು ಸುಬ್ಬಿಗೆ ಕಾಣಿಸಿಕೊಳ್ತಿರೋದೂ ಆಗಿದೆ. ಇದೀಗ ಸುಬ್ಬಿ ಕೂಡ ಸೀತಾ-ರಾಮ ಮನೆಯನ್ನು ಸೇರಿದ್ದರೂ ಅವಳೇ ಸೀತೆಯ ಮಗಳು ಎನ್ನುವ ಸತ್ಯ ಗೊತ್ತಿಲ್ಲ. ಆದರೆ ಸುಬ್ಬಿಯನ್ನು ಇದೀಗ ದತ್ತು ಪಡೆದುಕೊಳ್ಳಲು ಬೇರೊಬ್ಬರು ಬಂದಿದ್ದಾರೆ. ಇದೇ ಸಮಯದಲ್ಲಿ ಸುಬ್ಬಿಗೆ ಆತನ ಸಾಕು ತಾತ ತಾನು ಮಗುವನ್ನು ಕದ್ದು ಬಂದಿದ್ದ ವಿಷ್ಯ ಹೇಳಿದ್ದಾನೆ. ಅದೇ ಇನ್ನೊಂದೆಡೆ, ಅಶೋಕ್​ಗೆ ಕೂಡ ಸಿಹಿ ಆತ್ಮದ ರೂಪದಲ್ಲಿ ಇರುವುದು ತಿಳಿದಿದೆ. ಆಕೆಯಿಂದ ಭಾರ್ಗವಿಯೇ ಕೊಲೆಗಾತಿ ಎನ್ನುವ ವಿಷಯವೂ ತಿಳಿದಿದೆ. ಇದು ರಾಮ್​ಗೆ ಗೊತ್ತಾಗಬೇಕಿದೆಯಷ್ಟೇ.

ಇಡೀ ಸೀತಾರಾಮ ಸೀರಿಯಲ್​ನ ಸಂಪೂರ್ಣ ಕಥೆಯನ್ನು, 2-3 ನಿಮಿಷಗಳ ನಾಟಕದಲ್ಲಿ ತೋರಿಸಲಾಗಿದೆ.  ಇದನ್ನು ನೋಡಿ ರಾಮ್​ಗೆ ಸಿಹಿಯ ಸಾವಿನ ಬಗ್ಗೆ ತಿಳಿಯಬೇಕು, ಇದರ ಹಿಂದೆ ಇರೋದು ಭಾರ್ಗವಿ ಚಿಕ್ಕಿ ಎನ್ನೋದು ಅರ್ಥ ಆಗಬೇಕು ಎನ್ನುವುದು ಅವನ ಆಸೆ. ಆದ್ದರಿಂದ ಮಕ್ಕಳನ್ನು ಕರೆದುತಂದು ನಾಟಕ ಮಾಡಿಸಿದ್ದಾನೆ. ಸಿಹಿಯ ಆ್ಯಕ್ಟಿಂಗ್​ ಅಂತೂ ಹೇಳುವುದೇ ಬೇಡ. ಆದರೆ ಇಲ್ಲೊಂದು ಇಂಟರೆಸ್ಟಿಂಗ್​ ವಿಷ್ಯ ಎಂದರೆ, ಎಲ್ಲಾ ಪುಟಾಣಿಗಳೂ ಸಕತ್​ ಕ್ಯೂಟ್​ ಆಗಿ ನಟನೆ ಮಾಡಿದ್ದಾರೆ. ಭಾರ್ಗವಿ ಚಿಕ್ಕಿಯ ಪಾತ್ರದಲ್ಲಿನ ಬಾಲಕಿಯೂ ಸೂಪರ್​ ಆಗಿ ನಟಿಸಿದ್ದು, ಎಲ್ಲರಿಂದ ಶ್ಲಾಘನೆಗೆ ಒಳಗಾಗಿದ್ದಾಳೆ. ಒಟ್ಟಿನಲ್ಲಿ ಈ ನಾಟಕ ಮುಗಿದ ಮೇಲೆ ರಾಮ್​ಗೆ ಸತ್ಯ ಗೊತ್ತಾದರೆ ಅಲ್ಲಿಗೆ ಸೀತಾರಾಮ ಸೀರಿಯಲ್​ ಮುಗಿದಂತೆ. 

ಭಾಗ್ಯಲಕ್ಷ್ಮಿ ವಿಲನ್​ ಕನ್ನಿಕಾ ರಿಯಲ್​ ಲೈಫ್​ನಲ್ಲಿ ಇದೇನಿದು ದುರಂತ? ನೋವಿನ ಘಟನೆ ತೆರೆದಿಟ್ಟ ಸುಕೃತಾ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss ಬಗ್ಗೆ ನಂಬಲಸಾಧ್ಯ, ಯಾರೂ ಹೇಳದ ಗುಟ್ಟುಗಳನ್ನು ರಿವೀಲ್​ ಮಾಡಿದ ಅಭಿಷೇಕ್​ ಶ್ರೀಕಾಂತ್​
Karna Serial: ಮೋಸಗಾತಿಯ ಬಲೆಗೆ ಬಿದ್ದ ನಿಧಿ Red Light ಏರಿಯಾದಲ್ಲಿ ಸಿಕ್ಕಾಕ್ಕೊಂಡ್ಲು! ಮುಂದೇನು?