ಕಿರುತೆರೆ ನಟಿ ತಮ್ಮ ಮದುವೆಯ ಕಲ್ಪನೆಗಳ ಬಗ್ಗೆ ಮಾತನಾಡಿದ್ದಾರೆ. ಹುಡುಗ ಮದ್ಯಪಾನ ಮಾಡಿದ್ರೆ ಪರವಾಗಿಲ್ಲ. ಎತ್ತರ, ಬಣ್ಣ ಮತ್ತು ದಪ್ಪದ ಬಗ್ಗೆ ತಲೆಕೆಡಿಸಿಕೊಳ್ಳಲ್ಲ. ವಯಸ್ಸು ಮಾತ್ರ ಇಷ್ಟೇ ಇರಲಿ ಎಂದು ಹೇಳಿದ್ದಾರೆ.
ಕೊಚ್ಚಿ: ಕಿರುತೆರೆ ನಟಿ ತಾನು ಮದುವೆಯಾಗುವ ಹುಡುಗ ಹೇಗಿರಬೇಕೆಂದು ಹೇಳಿದ್ದು, ಈ ಮಾತುಗಳನ್ನು ಕೇಳಿ ಹುಡುಗರು ಆ ಗುಣಗಳು ತಮ್ಮಲ್ಲಿವೆಯಾ ಎಂದು ಚೆಕ್ ಮಾಡಿಕೊಳ್ಳುತ್ತಿದ್ದಾರೆ. ಕಿರುತೆರೆಯ ಪ್ರೇಕ್ಷಕರ ನಟಿಯಲ್ಲಿ ಒಬ್ಬರಾಗಿರುವ ಅನುಮೋಳ್, ತಾವು ಮದುವೆಯಾಗುವ ಹುಡುಗ ಮದ್ಯಪಾನ ಮಾಡಿದ್ರೆ ಪರವಾಗಿಲ್ಲ. ಆದ್ರೆ ಧೂಮಪಾನ ಮಾಡಬಾರದು ಎಂದು ಹೇಳಿಕೊಂಡಿದ್ದಾರೆ. ಹುಡುಗ ನೋಡಲು ಹೇಗಿರಬೇಕು? ವಯಸ್ಸು ಎಷ್ಟಿರಬೇಕು ಸೇರಿದಂತೆ ತಮ್ಮ ಹುಡುಗನ ಕಲ್ಪನೆಗಳ ಬಗ್ಗೆ ಮುಕ್ತ ಮನಸ್ಸಿನಿಂದ ಹೇಳಿಕೊಂಡಿದ್ದಾರೆ.
ಅನುಮೋಳ್ ಕಿರುತೆರೆ ಪ್ರೇಕ್ಷಕರ ನೆಚ್ಚಿನ ನಟಿಯರಲ್ಲಿ ಒಬ್ಬರು. ಟೆಲಿವಿಷನ್ ಧಾರಾವಾಹಿಗಳ ಮೂಲಕ ಅನುಮೋಳ್ ಗುರುತಿಸಿಕೊಂಡಿದ್ದಾರೆ. ನಂತರ ಸ್ಟಾರ್ ಮ್ಯಾಜಿಕ್ ಎಂಬ ಟೆಲಿವಿಷನ್ ಶೋ ಮೂಲಕವೂ ಅವರು ಪ್ರಸಿದ್ಧರಾದರು. ಅಭಿಮಾನಿಗಳು ಅನುಮೋಳನ್ನು ಪ್ರೀತಿಯಿಂದ ಅನುಕುಟ್ಟಿ ಎಂದು ಕರೆಯುತ್ತಾರೆ. ಅನು ಹೆಸರಿನಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳ ಗುಂಪುಗಳಿವೆ. ಇತ್ತೀಚಿನ ಸಂದರ್ಶನದಲ್ಲಿ ಅವರು ತಮ್ಮ ಮದುವೆಯ ಕಲ್ಪನೆಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಮೂವಿ ವರ್ಲ್ಡ್ ಮೀಡಿಯಾಕ್ಕೆ ನೀಡಿದ ಸಂದರ್ಶನದಲ್ಲಿ ಅನುಮೋಳ್ ಈ ರೀತಿ ಹೇಳಿದ್ದಾರೆ.
ಎತ್ತರ, ದಪ್ಪ ಬೇಕಿಲ್ಲ, ವಯಸ್ಸು ಮಾತ್ರ ಇಷ್ಟೇ ಇರಲಿ
''ನನ್ನ ತಂದೆ ನನ್ನ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಹಾಗೆಯೇ ನನ್ನನ್ನು ಚೆನ್ನಾಗಿ ನೋಡಿಕೊಳ್ಳುವ ವ್ಯಕ್ತಿ ಬೇಕು. ನನ್ನನ್ನು ಬಿಟ್ಟು ಹೋಗಬಾರದು. ಡಿವೋರ್ಸ್ಗೆ ಅವಕಾಶವೇ ಇಲ್ಲ. ನನಗೆ ಸೌಂದರ್ಯ ಮುಖ್ಯವಲ್ಲ. ಒಳ್ಳೆಯ ಗುಣ ಇರಬೇಕು. ಎತ್ತರ, ದಪ್ಪ ಇವುಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ, ಆರೋಗ್ಯವಾಗಿರಬೇಕು. ಅಪರೂಪಕ್ಕೆ ಮದ್ಯಪಾನ ಮಾಡಿದರೆ ತೊಂದರೆಯಿಲ್ಲ. ಆದರೆ ಧೂಮಪಾನ ಮಾಡುವುದು ನನಗೆ ಇಷ್ಟವಿಲ್ಲ.
ಇದನ್ನೂ ಓದಿ: ಅಪ್ಪು ಅಭಿಮಾನಿ ಎನ್ನುತ್ತಲೇ ಶಿವಣ್ಣನ ಭೈರತಿ ರಣಗಲ್ ಸ್ಟೈಲಲ್ಲಿ ಪೋಸ್ ಕೊಟ್ಟ ಆಂಕರ್ ಅನುಶ್ರೀ..!
ನನಗಿಂತ ಐದು ವರ್ಷ ದೊಡ್ಡವರಾದರೂ ಪರವಾಗಿಲ್ಲ. ಸಮಾನ ವಯಸ್ಸಾದರೂ ಸರಿ. ಆದರೆ ತುಂಬಾ ವಯಸ್ಸಾಗಿರಬಾರದು. ನನ್ನನ್ನು ಚೆನ್ನಾಗಿ ತಿಳಿದಿರುವ, ನನ್ನನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವ ವ್ಯಕ್ತಿ ಆಗಿರಬೇಕು. ಇದು ಎಲ್ಲಾ ಹುಡುಗಿಯರ ಕಲ್ಪನೆಗಳೇ ಆಗಿರುತ್ತವೆ'', ಎಂದು ಅನುಮೋಳ್ ಹೇಳಿದರು.
ಅನುಮೋಳ್ ನಟನೆಯ ಜೊತೆಗೆ ಮಾಡೆಲಿಂಗ್ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದಾರೆ. ಅನುಮೋಳ್ಗೆ ಓದುವಾಗಲೇ ನಟನೆ ಮತ್ತು ಮಾಡೆಲಿಂಗ್ ಬಗ್ಗೆ ಹೆಚ್ಚಿನ ಆಸಕ್ತಿ ಇತ್ತು. ಅವರು ಅನೇಕ ಬ್ರ್ಯಾಂಡ್‌ಗಳಿಗೆ ಮಾಡೆಲ್ ಆಗಿದ್ದಾರೆ. ತಿಂಗಳ್ ಮುತಲ್ ವೆಳ್ಳಿ ವರೆ, ಕಲ್ಯಾಣಂ, ಮಹೇಶುಂ ಮಾರುತಿಯುಂ ಮುಂತಾದ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಅನುಮೋಳ್ ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ನಟಿಯ ಚಿತ್ರಗಳು ಮತ್ತು ವೀಡಿಯೊಗಳು ಬೇಗನೆ ವೈರಲ್ ಆಗುತ್ತವೆ.
ಇದನ್ನೂ ಓದಿ: ಹನುಮಂತ ನಾಟಕ ಮಾಡ್ತಾನೆ ಅನ್ನೋರು ನೋಡ್ಬೇಕಂತೆ ಇದು.. ಏನಂತೆ 'ಬಿಗ್ ಬಾಸ್' ಮ್ಯಾಟರ್?