
ಕಲರ್ಸ್ ಕನ್ನಡ ವಾಹಿನಿಯ ಹೊಸ ಧಾರಾವಾಹಿ ಯಜಮಾನ ದಿನದಿಂದ ದಿನಕ್ಕೆ ವೀಕ್ಷಕರ ಗಮನ ಸೆಳೆಯುತ್ತಿದೆ. ಟಿಆರ್‌ಪಿಯಲ್ಲಿ ಮೊದಲ ಸ್ಥಾನ ಗಿಟ್ಟಿಸಿಕೊಂಡ ಕಾರಣ ಪಾತ್ರಧಾರಿಗಳ ಸಂಭಾವನೆ ವಿಚಾರ ದೊಡ್ಡ ಚರ್ಚೆ ಹುಟ್ಟುಹಾಕಿದೆ. ಪ್ರಮುಖ ಪಾತ್ರ ಝಾನ್ಸಿಯಾಗಿ ಮಿಂಚುತ್ತಿರುವುದು ರೀಲ್ಸ್ ಕ್ವೀಮ್, ಸೋಷಿಯಲ್ ಮಿಡಿಯಾ ಸ್ಟಾರ್ ಹಾಗೂ ಬ್ಯೂಟಿ ಮೇಕ್ ಓವರ್ ಆರ್ಟಿಸ್ಟ್ ಮಧುಶ್ರೀ ಭೈರಪ್ಪ. ಆರಂಭದಲ್ಲಿ ಸಿಕ್ಕಾಪಟ್ಟೆ ನೆಗೆಟಿವ್ ಕಾಮೆಂಟ್ ಎದುರಿಸಿದ ಸುಂದರಿ ತಮ್ಮ ನಟನೆ ಮೂಲಕ ಅದನ್ನು ಪಾಸಿಟಿವ್ ಮಾಡಿಕೊಂಡಿದ್ದು ನಿಜಕ್ಕೂ ಟ್ಯಾಲೆಂಟ್.
'ನಾನು ಮಾಡುತ್ತಿರುವ ಪಾತ್ರಕ್ಕೆ ಕೊಡುತ್ತಿರುವ ಸಂಭಾವನೆ ವಿಚಾರದಲ್ಲಿ ತುಂಬಾನೇ ಖುಷಿ ಇದೆ ಆದರೆ ಅದನ್ನು ರಿವೀಲ್ ಮಾಡುವುದಕ್ಕೆ ಆಗಲ್ಲ. ನಾನು ಇನ್‌ಫ್ಲೂಯನ್ಸರ್ ಆಗಿ ರೀಲ್ಸ್ ಮಾಡುತ್ತಾ ನಟನೆಗೆ ಬಂದಿರುವುದರಿಂದ ಪ್ರೋಮೋ ರಿಲೀಸ್ ಆದಾಗ ರೀಲ್ಸ್ ಮಾಡುತ್ತಿದ್ದವರು ಯಾಕೆ ಸೀರಿಯಲ್ ಅವರಿಗೆ ಬೇರೆ ಯಾರೂ ಸಿಕ್ಕಿಲ್ವಾ? ಇವರೇ ಬೇಕಾ ಎಂದು ಕಾಮೆಂಟ್ ಮಾಡುತ್ತಿದ್ದಾರು. ನೆಗೆಟಿವ್ ಕಾಮೆಂಟ್ ತುಂಬಾನೇ ಶುರುವಾಗಿತ್ತು. ಇದೇ ಸಮದಯಲ್ಲಿ ಧಾರಾವಾಹಿಯಲ್ಲಿ ನನ್ನ ಡೈಲಾಗ್‌ನ ತುಣುಕುವೊಂದನ್ನು ರಿವೀಲ್ ಮಾಡಿದ್ದರು ಅಲ್ಲಿಂದ ನೆಗೆಟಿವ್ ಇದ್ದ ಇಮೇಜ್ ಪಾಸಿಟಿವ್ ಆಗಿ ಬದಲಾಗಿತ್ತು. ಜನ ಇಷ್ಟು ಬೇಗ ನನ್ನನ್ನು ಸ್ವೀಕರಿಸಿದ್ದಾರೆ ಅನ್ನೋ ಖುಷಿ ಇದೆ' ಎಂದು ಇತ್ತೀಚಿಗೆ ನಡೆದ ಸಂದರ್ಶನದಲ್ಲಿ ಮಧುಶ್ರೀ ಭೈರಪ್ಪ ಮಾತನಾಡಿದ್ದಾರೆ.
ಹನಿಮೂನ್ ನೋಡ್ದಾಗೆಲ್ಲಾ ಯಾವಾಗ 2 ಅನ್ಸುತ್ತೆ, ಡಾಲಿ ಧನಂಜಯ್ ಎಲ್ಲಾ ಆಯ್ತಾ?: ಕಾಲೆಳೆದ ಧ್ರುವ ಸರ್ಜಾ
ಡ್ಯಾನ್ಸರ್ ಆಗಬೇಕು ಎಂದು ಮಧುಶ್ರೀ ಭೈರಪ್ಪ ಆಸೆ ಪಟ್ಟಿದ್ದರು ಆದರೆ ತಂದೆ ಬಿಗ್ ನೋ ಹೇಳುತ್ತಿದ್ದ ಕಾರಣ ಮನೆಯಲ್ಲಿಯೇ ಡ್ಯಾನ್ಸ್ ಕಲಿತುಕೊಂಡು 2 ವರ್ಷಗಳ ಕಾಲ ಟೀಚರ್ ಆಗಿ ಕೆಲಸ ಮಾಡಿದ್ದಾರೆ. ಇದರ ಜೊತೆಯಲಿ ಇನ್‌ಫ್ಲೂಯನ್ಸರ್ ಇನ್‌ಸ್ಟಾಗ್ರಾಂ, ಫೇಸ್‌ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಓಪನ್ ಮಾಡಿದ್ದರು. ಫೋಟೋಶೂಟ್ ಹಾಗೂ ಮೇಕಪ್ ಪ್ರಮೋಷನ್‌ಗಳನ್ನು ಮಾಡುತ್ತಾರೆ. ಹೀಗಾಗಿ ಇನ್‌ಸ್ಟಾಗ್ರಾಂನಲ್ಲಿ 3 ಲಕ್ಷ ಸುಮಾರು ಫಾಲೋವರ್ಸ್ ಹೊಂದಿದ್ದಾರೆ. ಎಲ್ಲಾ ಮೂಲಗಳನ್ನು ಲೆಕ್ಕ ಮಾಡಿದರೂ ಏನಿಲ್ಲ ಅಂದ್ರು ತಿಂಗಳಿಗೆ 1 ಲಕ್ಷ ಹಣವನ್ನು ದುಡಿಯುತ್ತಾರೆ ಮಧು.
ಪುನೀತ್ ರಾಜ್‌ಕುಮಾರ್ ಬಳಸುತ್ತಿದ್ದ ದುಬಾರಿ ಸೈಕಲ್‌ನ ಆಂಕರ್ ಅನುಶ್ರೀಗೆ ಗಿಫ್ಟ್ ಕೊಟ್ಟ ಅಶ್ವಿನಿ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.