ಮಗುವಿನ ನಾಮಕರಣದ ವಿಡಿಯೋ ಶೇರ್ ಮಾಡಿ ಗಂಡು ಮಗು ಎಂದು ಹೇಳಿದ ಸೀತಾರಾಮ ಸೀತಾ ಉರ್ಫ್ ವೈಷ್ಣವಿ ಗೌಡ. ಫ್ಯಾನ್ಸ್ ಶಾಕ್
ಜೀ ಕನ್ನಡದ ಜನಮನ ಗೆದ್ದಿರೋ ಸೀತಾರಾಮ ಸೀರಿಯಲ್ ಸೀತೆ ಅರ್ಥಾತ್ ನಟಿ ವೈಷ್ಣವಿ ಗೌಡ ಅವರ ಮದುವೆಯ ಬಗ್ಗೆ ಇದಾಗಲೇ ಸಾಕಷ್ಟು ಬಾರಿ ಅಭಿಮಾನಿಗಳು ತಲೆ ಕೆಡಿಸಿಕೊಂಡದ್ದು ಇದೆ. ಮದ್ವೆ ಯಾವಾಗ ಎನ್ನುವ ಪ್ರಶ್ನೆ ನಟಿಗೆ ಎದುರಾಗಿ ಸುಸ್ತಾಗಿದ್ದೂ ಇದೆ. ಪದೇ ಪದೇ ಇದೇ ಪ್ರಶ್ನೆಯನ್ನು ಯಾಕೆ ಕೇಳ್ತೀರಾ ಎಂದು ವೈಷ್ಣವಿ ಗೌಡ ಅವರು ಬೇಸರಿಸಿಕೊಂಡದ್ದೂ ಆಗಿದೆ. ಆದರೂ ಅಭಿಮಾನಿಗಳು ಅದೇ ಪ್ರಶ್ನೆಯನ್ನು ಕೇಳುವುದೂ ಅಲ್ಲದೇ, ಸೀತಾರಾಮ ಸೀರಿಯಲ್ ರಾಮ್ನೇ ರಿಯಲ್ ಲೈಫ್ನಲ್ಲಿಯೂ ಗಂಡನಾಗಲಿ ಎಂದು ಹಾರೈಸುವವರೂ ಇದ್ದಾರೆ. ರಾಮ್ ಅರ್ಥಾತ್ ಗಗನ್ ಚೆಂಗಪ್ಪಾ ಕೂಡ ಸಿಂಗಲ್ ಆಗಿರುವ ಕಾರಣ ಹಾಗೂ ಇವರಿಬ್ಬರ ಕೆಮೆಸ್ಟ್ರಿಯನ್ನು ಅಭಿಮಾನಿಗಳು ಮೆಚ್ಚಿಕೊಂಡಿರುವ ಕಾರಣ, ನಿಜ ಜೀವನದಲ್ಲಿಯೂ ಇವರೇ ಜೋಡಿಯಾಗಲಿ ಎಂದು ಹಾರೈಸುತ್ತಿರುವವರೇ ಹೆಚ್ಚುಮಂದಿ.
ಆದರೆ ಇವೆಲ್ಲವುಗಳ ನಡುವೆಯೇ, ವಿಡಿಯೋ ಒಂದನ್ನು ಶೇರ್ ಮಾಡಿರುವ ವೈಷ್ಣವಿ ಗೌಡ ಅದರಲ್ಲಿ ನಾಮಕರಣದ ದಿನ, ಬೇಬಿ ಬಾಯ್ ಎಂದು ಹಾಕಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಈ ವಿಷಯವನ್ನು ನಟಿ ಶೇರ್ ಮಾಡಿದ್ದಾರೆ. ಈ ಶೀರ್ಷಿಕೆಯಷ್ಟನ್ನೇ ನೋಡಿದ ಅಭಿಮಾನಿಗಳು ಶಾಕ್‌ಗೆ ಒಳಗಾಗಿದ್ದಾರೆ. ಈ ಬಗ್ಗೆ ಕಮೆಂಟ್‌ಗಳಲ್ಲಿ ಕೂಡ ಬರೆದಿದ್ದಾರೆ. ಆದರೆ ಯೂಟ್ಯೂಬ್ ನೋಡಿದರೆ ತಿಳಿಯುವುದು ಏನೆಂದರೆ, ಇದು ವೈಷ್ಣವಿ ಗೌಡ ಅವರ ಅಣ್ಣನ ಮಗುವಿನ ನಾಮಕರಣ ಎನ್ನುವುದು. ಅಣ್ಣನ ಮಗುವಿನ ನಾಮಕರಣ ಇದ್ದು, ಅದರಲ್ಲಿ ಪಾಲ್ಗೊಳ್ಳಲು ಅಣ್ಣನ ಮನೆಗೆ ಬಂದಿರುವುದಾಗಿ ವೈಷ್ಣವಿ ಹೇಳಿದ್ದಾರೆ. ಈ ವಿಡಿಯೋದಲ್ಲಿ ನಾಮಕರಣದ ಶಾಸ್ತ್ರಗಳ ಬಗ್ಗೆ ತೋರಿಸಲಾಗಿದೆ. ಆದರೆ ಮಗುವಿನ ಮುಖವನ್ನು ನಟಿ ರಿವೀಲ್ ಮಾಡಿಲ್ಲ. ಗಂಡುಮಗು ಎಂದಷ್ಟೇ ಹೇಳಿದ್ದಾರೆ.
ಶೀಘ್ರದಲ್ಲೇ ಸೀತಾರಾಮ ಸೀತೆ ಮದುವೆ? ಪ್ರಿಯಾ ಪ್ರಶ್ನೆಗೆ ಶೂಟಿಂಗ್ ಸೆಟ್ನಲ್ಲಿ ನಾಚಿ ನೀರಾದ ವೈಷ್ಣವಿ ಹೇಳಿದ್ದೇನು?
ಅಷ್ಟಕ್ಕೂ, ಈ ಹಿಂದೆ ವೈಷ್ಣವಿ ಅವರ ಬಾಳಲ್ಲಿ ದುರಂತವೂ ನಡೆದಿದೆ. 2022ರ ನವೆಂಬರ್‌ನಲ್ಲಿ ವೈಷ್ಣವಿ ಗೌಡ, ವಿದ್ಯಾಶಂಕರ್ ಎನ್ನುವವರು ಕುಟುಂಬದ ಮುಂದೆ ಹಾರ ಹಾಕಿಕೊಂಡಿದ್ದ ಫೋಟೋವೊಂದು ವೈರಲ್ ಆಗಿತ್ತು. ಎಲ್ಲರೂ ಇದು ನಿಶ್ಚಿತಾರ್ಥ ಎಂದೇ ಭಾವಿಸಿದರು. ಆಮೇಲೆ ವೈಷ್ಣವಿ ಕುಟುಂಬವೇ ಇದು ನಿಶ್ಚಿತಾರ್ಥ ಅಲ್ಲ ಎಂದು ಹೂ ಮುಡಿಸುವ ಶಾಸ್ತ್ರ ಎಂದು ಸ್ಪಷ್ಟನೆ ನೀಡಿತು. ಆ ನಂತರ ವಿದ್ಯಾಶಂಕರ್ ಕುರಿತಾದ ಆಡಿಯೋವೊಂದು ವೈರಲ್ ಆಗಿತ್ತು. ಆ ನಂತರ ವೈಷ್ಣವಿ ಅವರು ವಿದ್ಯಾಶಂಕರ್ ಜೊತೆ ಸಂಬಂಧ ಮುಂದುವರೆಸೋದಿಲ್ಲ ಎಂದು ಹೇಳಿದ್ದರು. 'ಅದು ನನ್ನ ತಾಯಿಯಿಂದ ಬಂದ ಸಂಬಂಧವಾಗಿತ್ತು. ಕೆಲ ದಿನಗಳ ನಂತರ ಸಂದರ್ಭ ಬದಲಾಯ್ತು, ನಾವು ಸಂಬಂಧ ಮುಂದುವರೆಸಲಿಲ್ಲ. ಆ ಘಟನೆ ನಮ್ಮ ಹಿಂದೆ ನಡೆದಿದ್ದಾಗಿತ್ತು. ಏನಾಗತ್ತೋ ಅದು ಒಳ್ಳೆಯದಕ್ಕೆ ಆಗುವುದು. ನನಗೆ ಇಂದಿಗೂ ಕೂಡ ರಿಲೇಶನ್‌ಶಿಪ್‌ನಲ್ಲಿ ನಂಬಿಕೆಯಿದೆ. ಮುಂದೊಂದು ದಿನ ನನಗೂ ಮದುವೆಯಾಗಿ ಕುಟುಂಬ ಇರುತ್ತದೆ ಎಂದು ನಂಬಿದ್ದೇನೆ. ಆ ರೀತಿ ಘಟನೆಗಳು ನನ್ನ ನಂಬಿಕೆಯನ್ನು ಮುರಿಯೋದಿಲ್ಲ' ಎಂಬ ಮಾತನ್ನು ಈ ಘಟನೆ ನಡೆದು ಎಷ್ಟೋ ದಿನಗಳ ಬಳಿಕ ಸಂದರ್ಶನವೊಂದರಲ್ಲಿ ವೈಷ್ಣವಿ ಹೇಳಿದ್ದರು.
ಇದಾಗಲೇ ವೈಷ್ಣವಿ ಅವರು, ಸುಮಾರು 300ಕ್ಕೂ ಅಧಿಕ ಲವ್ ಪ್ರಪೋಸ್‌ಗಳು ಬಂದಿದ್ದರೂ ಒಪ್ಪಿಕೊಂಡಿಲ್ಲ ಎಂಬ ಬಗ್ಗೆ ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಕನ್ನಡ ನಾಡಿನ ಜನತೆಗೆ ಅಗ್ನಿಸಾಕ್ಷಿಯ ಸನ್ನಿಧಿಯಾಗಿ ಪರಿಚಿತಗೊಂಡ ವೈಷ್ಣವಿಗೌಡ ಅವರ ಸೌಂದರ್ಯ ಹಾಗೂ ನಟನೆಯನ್ನು ನೋಡಿ ಲಕ್ಷಾಂತರ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಅಗ್ನಿಸಾಕ್ಷಿ ಧಾರಾವಾಹಿಯ ನಂತರ ಬಿಗ್‌ಬಾಸ್ ಮನೆಯಲ್ಲೂ ಕಾಣಿಸಿಕೊಂಡ ವೈಷ್ಣವಿ ಇಲ್ಲಿಯೂ ಕೂಡ ಹೆಚ್ಚಿನ ರಗಳೆ ಮಾಡಿಕೊಳಳದೇ ಸೀದಾ-ಸಾದಾ ನಡತೆಯಿಂದ ಜನರ ಮನಸ್ಸನ್ನು ಗೆದ್ದಿದ್ದರು. ಇದಾದ ನಂತರ ಪುನಃ ಒಂದೆರಡು ಸಿನಿಮಾಗಳಲ್ಲಿಯೂ ನಟಿಸಿದ ವೈಷ್ಣವಿಗೌಡ, ಅಲ್ಲಿ ಹೆಚ್ಚಿನ ಯಶಸ್ಸು ಸಿಗದ ಹಿನ್ನೆಲೆಯಲ್ಲಿ ಪುನಃ ಕಿರುತೆರೆಗೆ ಆಗಮಿಸಿದ್ದಾರೆ.
ಪ್ರಿಯಾ ಮದ್ವೆ ಆಯ್ತು, ಈಗೇನಿದ್ರೂ ಸೀತಾಳದ್ದು! 'ಆ ಹುಡುಗನ' ಬಗ್ಗೆ ಬಾಯ್ಬಿಟ್ಟು ಎಲ್ಲರ ಹುಬ್ಬೇರಿಸಿದ ವೈಷ್ಣವಿ ಗೌಡ