Trending Reels: ಇನ್‌ಫ್ಲುಯೆನ್ಸರ್ ರೇಷ್ಮಾ ಮತ್ತು ನವೀನ್ ಜೋಡಿಯ ರೀಲ್ಸ್‌ಗಳು ಸಖತ್ ವೈರಲ್ ಆಗಿವೆ. 'ಯಮ್ಮೋ ಯಮ್ಮೋ' ಹಾಡಿಗೆ ಈ ಜೋಡಿ ಮಾಡಿರುವ ರೊಮ್ಯಾಂಟಿಕ್ ರೀಲ್ಸ್ ವೀಕ್ಷಕರ ಗಮನ ಸೆಳೆದಿದೆ.
ಬೆಂಗಳೂರು: ಸೋಶಿಯಲ್ ಮೀಡಿಯಾದಲ್ಲಿ ತಮ್ಮ ವಿಭಿನ್ನ ಶೈಲಿಯಿಂದ ಜನಪ್ರಿಯತೆ ಪಡೆದುಕೊಂಡಿರುವ ಇನ್‌ಫ್ಲುಯೆನ್ಸರ್ ರೇಷ್ಮಾ, ರಿಯಾಲಿಟಿ ಶೋನ ಸ್ಪರ್ಧಿಯಾಗಿಯೂ ಜನರನ್ನು ರಂಜಿಸಿದ್ದರು. ಈ ರಿಯಾಲಿಟಿ ಶೋ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಮತ್ತಷ್ಟು ಆಕ್ಟಿವ್ ಆಗಿದ್ದು, ನವೀನ್ ಎಂಬಾತನೊಂದಿಗೆ ಕಪಲ್ ವಿಡಿಯೋಗಳನ್ನು ಮಾಡುತ್ತಿರುತ್ತಾರೆ. ವೀಕ್ಷಕರಿಂದ ರೇಷ್ಮಾ ಆಂಟಿ ಅಂತಾನೇ ಕರೆಸಿಕೊಳ್ಳುವ ಇವರು, ಇನ್‌ಸ್ಟಾಗ್ರಾಂನಲ್ಲಿ 1.87 ಲಕ್ಷ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಇನ್ನು ನವೀನ್ ಕುಮಾರ್ ಇನ್‌ಸ್ಟಾಗ್ರಾಂನಲ್ಲಿ (Instagram) 74 ಸಾವಿರ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಸೋಶಿಯಲ್ ಮೀಡಿಯಾ ಖಾತೆ ಓಪನ್ ಮಾಡಿದ್ರೆ ಸಾಕು ಈ ಜೋಡಿಯ ರೀಲ್ಸ್‌ಗಳು ಕಣ್ಮುಂದೆ ಬರುತ್ತದೆ.
ತೆಳ್ಳಗೆ, ದೇಹವನ್ನು ಬಳ್ಳಿಯಂತೆ ಬಳುಕಿಸಿದವರ ವಿಡಿಯೋ, ರೀಲ್ಸ್ ವೈರಲ್ ಆಗುತ್ತವೆ ಅನ್ನೋ ಮಾತನ್ನು ರೇಷ್ಮಾ ಸುಳ್ಳು ಮಾಡಿದ್ದಾರೆ. ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಿಂದ ಬಂದ ರೇಷ್ಮಾ ಹೇಳುವ ಹಾಯ್ ಫ್ರೆಂಡ್ಸ್ ವೀಕ್ಷಕರಿಗೆ ಇಷ್ವವಾಗುತ್ತಿದೆ. ಗಿಚ್ಚ ಗಿಲಿಗಿಲಿ ಶೋ ಬಳಿಕ ರೇಷ್ಮಾ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿದೆ. ಕಳೆದ ನಾಲ್ಕೈದು ತಿಂಗಳಿನಿಂದ ರೇಷ್ಮಾ ಮತ್ತು ನವೀನ್ ಜೋಡಿಯ ರೀಲ್ಸ್‌ಗಳು ಪ್ರತಿದಿನವೂ ಬರುತ್ತಿವೆ.
ಇತ್ತೀಚೆಗೆ ಹೊರಬಂದ ರೇಷ್ಮಾ ಮತ್ತು ನವೀನ್ ರೀಲ್ಸ್ ನೀರಿನಲ್ಲಿ ಪ್ರೀತಿಯ ಕಿಚ್ಚು ಹಚ್ಚಿದ್ದಾರೆ. ಎಂದಿಗಿಂತ ತುಂಬಾ ವಿಭಿನ್ನವಾಗಿ ಕಾಣಿಸಿಕೊಂಡಿರುವ ರೇಷ್ಮಾ ಮತ್ತು ನವೀನ್, ಕನ್ನಡದ ಮಲ್ಲ ಸಿನಿಮಾದಲ್ಲಿನ 'ಯಮ್ಮೋ ಯಮ್ಮೋ' ಹಾಡಿಗೆ ಮಾದಕವಾಗಿ ರೀಲ್ಸ್ ಮಾಡಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಪ್ರಿಯಾಂಕಾ ಉಪೇಂದ್ರ ಜೋಡಿಯ ಈ ರೊಮ್ಯಾಂಟಿಕ್ ಹಾಡು ಇಂದಿಗೂ ಪಡ್ಡೆಹುಡುಗರ ಫೇವರಿಟ್.
ಇದನ್ನೂ ಓದಿ: Lakshmi Baramma Serial ಮುಗಿದ್ರೂ ಕೀರ್ತಿಗೆ ನ್ಯಾಯ ಸಿಗ್ಲಿಲ್ಲ, ಸುಪ್ರೀತಾ ಬದುಕು ಸರಿ ಹೋಗ್ಲಿಲ್ಲ!
ನವೀನ್ ಜೊತೆ ರೇಷ್ಮಾ ಅಂಟಿಯ ಸಖತ್ ರೀಲ್ಸ್
ಕೆಂಪು ಬಣ್ಣದ ಔಟ್‌ಫಿಟ್‌ನಲ್ಲಿ ರಾಣಿಯಂತೆ ರೇಷ್ಮಾ ಕಾಣಸಿದ್ರೆ, ಬಿಳಿಪಂಚೆ ಮತ್ತು ಕಪ್ಪು ಶರ್ಟ್ ಧರಿಸಿ ನವೀನ್ ಮಿಂಚಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಐಕಾನಿಕ್ ಸಿಗ್ನೇಚರ್ ಸ್ಟೆಪ್ಸ್‌ಗಳನ್ನು ನವೀನ್ ಮತ್ತು ರೇಷ್ಮಾ ಮುದ್ದಾಗಿ ನಕಲು ಮಾಡಿದ್ದಾರೆ. ಯುವತಿ ಸೊಂಟಕ್ಕೆ ಗುಲಾಬಿ ತಾಗಿಸೋದು, ಇಡೀ ದ್ರಾಕ್ಷಿ ಗೊಂಚಲನ್ನು ನಾಯಕಿಗೆ ತಿನ್ನಿಸೋದು, ಜೊತೆಯಾಗಿ ಒಂದೇ ಸೇಬು ಕಚ್ಚುವ ದೃಶ್ಯಗಳನ್ನು ಇಬ್ಬರು ರಿಕ್ರಿಯೇಟ್ ಮಾಡಿದ್ದಾರೆ. ಇದರ ಜೊತೆಯಲ್ಲಿ ಈಜುಕೊಳಕ್ಕೆ ಇಳಿದ ರೇಷ್ಮಾ ಮತ್ತು ನವೀನ್, ತಂಪಾದ ನೀರನ್ನು ಬಿಸಿ ಮಾಡಿದ್ದಾರೆ. ಎಂದಿಗಿಂತ ಭಿನ್ನವಾಗಿ ಕಾಣಿಸಿಕೊಂಡು ರೇಷ್ಮಾ ಹೊಸ ಲುಕ್ ನೋಡಿ ವೀಕ್ಷಕರು ಹುಬ್ಬೇರಿಸಿದ್ದಾರೆ.
ತಮಾಷೆಯ ಕಮೆಂಟ್‌ಗಳು
ಈ ವಿಡಿಯೋಗೆ ನೆಟ್ಟಿಗರು ಕಮೆಂಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ರೇಷ್ಮಾ ಆಂಟಿ ಗಂಡ ಸದ್ಯದಲ್ಲೇ ಒಂದ್ ರೀಲ್ಸ್ ಮಾಡ್ತಾನೆ, ಯಾರೋ ಯಾರೂ ಗೀಚಿ ಹೋದ ಈ ಹಾಳು ಹಣೆಯ ಬರಹ ಎಂದು ವಿರುಪಾಕ್ಷಿ ಎಂಬವರು ಕಮೆಂಟ್ ಮಾಡಿದ್ದಾರೆ. ಯಪ್ಪಾ ಇನ್ನು ಎನ್ ಏನ್ ನೋಡಬೇಕು ಈ ಕಣ್ಣು ಥೂ, ಇವಳು ಟ್ರೊಲ್ ಮಾಡಲಿ ಅಂತನೆ ಇತರ ಆಟ ಆಡೋದು ಬೇಕು ಅಂತ, ಇವಳ ಗಂಡನೇ ಸುಮ್ಮನಿರುವಾಗ ನಾವು ಏನ್ ತಾನೇ ಹೇಳೋಕಾಗುತ್ತೆ. ಏನಾದ್ರು ಹೇಳಿದ್ರೆ ಅಣ್ಣ ತಂಗಿ ಅಂತಾರೆ. ಯಾಕೋ ನೀವು ಇತ್ತೀಚೆಗೆ ತುಂಬಾ ಅಸಹ್ಯವಾಗಿ ಮನಸ್ಸಿಗೆ ಮುಜುಗರ ಆಗುವಂತೆ ವಿಡಿಯೋ ಮಾಡುತ್ತಾ ಇದ್ದೀರಾ ದಯವಿಟ್ಟು ಎಲ್ಲದಕ್ಕೂ ಒಂದು ಇತಿಮಿತಿ ಇರುತ್ತದೆ ನಿಮಗೆ ಇದು ಸಭ್ಯ ಅಲ್ಲ. ಇದು ಅಣ್ಣ ತಂಗಿ ಮಾಡೋ ರೀಲ್ಸ್.. ಪದಕ್ಕೆ ಅವಮಾನ ಎಂದು ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ. ಸಭ್ಯತೆ ಮೀರಬೇಡಿ ಎಂದು ಬಹುತೇಕರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಕಾಟನ್ ಕ್ಯಾಂಡಿ ಹಾಡಿಗೆ ರೀಲ್ಸ್ ರಾಣಿ ರೇಷ್ಮಾ ಆಂಟಿಯ ಭರ್ಜರಿ ಡ್ಯಾನ್ಸ್