ಕನ್ನಡ ಮತ್ತು ತೆಲುಗು ಕಿರುತೆರೆಯಲ್ಲಿ ಮಿಂಚುತ್ತಿರುವ ಸಿರಿ ರಾಜು ಮದುವೆ ನಂತರದ ವೃತ್ತಿ ಜೀವನದ ಬಗ್ಗೆ ಮಾತನಾಡಿದ್ದಾರೆ. ಮಗು ಆದ್ಮೇಲೆ ಸಿರಿ ಅವರ ಜೀವನದಲ್ಲಿ ಆದ ಬದಲಾವಣೆಗಳು ಮತ್ತು ಕುಟುಂಬದ ಬೆಂಬಲದ ಬಗ್ಗೆ ಹೇಳಿಕೊಂಡಿದ್ದಾರೆ.
ಕನ್ನಡ ಹಾಗೂ ತೆಲುಗು ಕಿರುತೆರೆ ಧಾರಾವಾಹಿಗಳಲ್ಲಿ ಮಿಂಚುತ್ತಿರುವ ಸಿರಿ ರಾಜು ಈಗ ಸಖತ್ ಸ್ಟ್ರಾಂಗ್ ಆಗಿ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಮದುವೆಯಾದ ವರ್ಷದೊಳಗೆ ಮಗು ಬರ ಮಾಡಿಕೊಂಡ ಸಿರಿ ವೃತ್ತಿ ಜೀವನ ಎಷ್ಟು ಬದಲಾಗಿದೆ? ಆಫರ್‌ಗಳು ಕಮ್ಮಿ ಆಯ್ತಾ? ಫ್ಯಾಮಿಲಿ ಸಪೋರ್ಟ್ ಹೇಗೆದೆ ಎಂದು ಪ್ರತಿಯೊಂದನ್ನು ಹಂಚಿಕೊಂಡಿದ್ದಾರೆ.
'ನನ್ನ ಮದುವೆನೇ unplanned ಮಗು ಅನ್ನೋದು ಕೂಡ unplanned ಅದು ಎಲ್ಲರಿಗೂ ಗೊತ್ತಿದೆ. ನಂದು ಪಕ್ಕಾ ಅರೇಂಜ್ಡ್ ಮ್ಯಾರೇಜ್. ನಾನು ಸಾಗರ್ ಒಳ್ಳೆ ಸ್ನೇಹಿತರು. ನಾನು ಪ್ರೆಗ್ನೆಂಟ್ ಅಂತ ಗೊತ್ತಿರಲಿಲ್ಲ ಆಗ ಸುಮಾರು ಆಫರ್‌ಗಳು ಬಂದಿತ್ತು. ಸೈನ್ ಮಾಡಿದ ತೆಲುಗು ಸೀರಿಯಲ್ ಕೂಡ ಅರ್ಧಕ್ಕೆ ಬಿಟ್ಟೆ ಮಾಡಲು ಆಗಲಿಲ್ಲ. ಮುಂಚೆ ಮದುವೆ ಆಗಿ ಮಗು ಆಗಿಬಿಟ್ಟರೆ ಕಾಸ್ಟಿಂಗ್ ಮಾಡುತ್ತಿರಲಿಲ್ಲ ಏಕೆಂದರೆ ಜವಾಬ್ದಾರಿಗಳು ಜಾಸ್ತಿ ಇರುತ್ತದೆ ಎಂದು.ಈಗ ಕಾಲ ಬದಲಾಗಿದೆ. ಮದುವೆ ಆಗಿದೆ ಮಗು ಆಗಿದೆ ಅಂದ್ರೆ ಕಾಸ್ಟಿಂಗ್ ಮಾಡುತ್ತೀವಿ ಅಂತಿದ್ದಾರೆ. ನಾನು ಇನ್ನೂ ಫಿಟ್ ಆಗಬೇಕು 2-3 ಕೆಜಿ ತೂಕ ಇಳಿಸಿಕೊಳ್ಳಬೇಕು. ನಾನು ಶುರು ಮಾಡುವ ಜರ್ನಿಯನ್ನು ನನ್ನ ಮಗಳು ಕೂಡ ನೋಡಬೇಕು' ಎಂದು ಖಾಸಗಿ ಯೂಟ್ಯೂಬ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ದರ್ಶನ್ -ಸುಮಲತಾ ಮನಸ್ತಾಪ 2 ವರ್ಷ ಮುಂದುವರೆಯಲಿದೆ?
'ಮಗಳು ತುಂಬಾ ಚೆನ್ನಾಗಿದ್ದಾಳೆ. ಪರ್ಹರ್ಷ ಅಂದ್ರೆ ಹ್ಯಾಪಿ ಗರ್ಲ್. ನಮ್ಮ ಜೀವನದಲ್ಲಿ ಖುಷಿ ತಂದಿದ್ದಾಳೆ ಹಾಗೂ ಒಳ್ಳೆ ಅವಕಾಶಗಳನ್ನು ತರ್ತಿದ್ದಾಳೆ ಅಂತ ಈ ಹೆಸರು ಆಯ್ಕೆ ಮಾಡಿದ್ದು. ಸಾಗರ್ ಪ್ರಾಜೆಕ್ಟ್‌ಗಳಲ್ಲಿ ತುಂಬಾ ಬ್ಯುಸಿಯಾಗಿದ್ದಾರೆ.ಪೋಸ್ಟ್ ಪಾರ್ಟಮ್ ಡಿಪ್ರೆಶ್ ಅನ್ನೋದು ಸತ್ಯ ಕೆಲಸವರು ಆ ಅವಧಿಯನ್ನು ಸಾಗಿಸಿಬಿಡುತ್ತಾರೆ. ಎಲ್ಲರೂ ಮಗು ಮಾಡಿಕೊಳ್ಳಿ ಎನ್ನುತ್ತಾರೆ ಆದರೆ ಮಗು ಆದ್ಮೇಲೆ ತಾಯಿಗೆ ಎಷ್ಟು ಕಷ್ಟವಾಗುತ್ತದೆ ಯಾರೂ ನೋಡಲ್ಲ. ಎಲ್ಲರೂ ಮಗುವನ್ನು ನೋಡಿಕೊಳ್ಳುತ್ತಾರೆ ಅಮ್ಮನನ್ನು ಯಾರೂ ನೋಡಿಕೊಳ್ಳಲ್ಲ. ನನಗೆ ಫ್ಯಾಮಿಲಿ ಸಪೋರ್ಟ್ ಜಾಸ್ತಿನೇ ಇತ್ತು, ಅತ್ತೆಮಾವ ತಂದೆ ತಾಯಿ ಮತ್ತು ಗಂಡ ಸಹಾಯ ಮಾಡಿದರು. ಒಂದು ವಾರ ನಾನು ವಿದೇಶ ಟ್ರಿಪ್ ಹೋಗಿದ್ದ ಮಗು ಇಲ್ಲದೆ ಆ ಸಮಯದಲ್ಲಿ ಎಲ್ಲರೂ ಪಾಪುನ ಚೆನ್ನಾಗಿ ನೋಡಿಕೊಂಡಿದ್ದಾರೆ. ನನಗೆ ಈ ಬ್ರೇಕ್ ಬೇಕಿತ್ತು. ನನಗೋಸ್ಕರ ಫ್ಯಾಮಿಲಿಗೋಸ್ಕರ ಏನಾದರೂ ಮಾಡಬೇಕು ಅನ್ನೋದು ನನ್ನ ತಲೆಯಲ್ಲಿ ಇದೆ ಹೀಗಾಗಿ ವಿವಿಧ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದೀನಿ' ಎಂದು ಸಿರಿ ಹೇಳಿದ್ದಾರೆ.
ಅಣ್ಣಮ್ಮ ದೇವಸ್ಥಾನಕ್ಕೆ ದುಬಾರಿ ಚೂಡಿದಾರ್ ಧರಿಸಿದ ವಿಜಯಲಕ್ಷ್ಮಿ