Ramachari Serial: ವೈಶಾಖ ಕುತಂತ್ರ, ಗಂಡನಿಗೆ ಗಿಣ್ಣು ತಿನಿಸಿದ ಚಾರು; ರಾಮಾಚಾರಿ ಖೇಲ್‌ ಕಥಮ್?

Published : Feb 24, 2025, 12:46 PM ISTUpdated : Feb 24, 2025, 01:23 PM IST
Ramachari Serial: ವೈಶಾಖ ಕುತಂತ್ರ, ಗಂಡನಿಗೆ ಗಿಣ್ಣು ತಿನಿಸಿದ ಚಾರು; ರಾಮಾಚಾರಿ ಖೇಲ್‌ ಕಥಮ್?

ಸಾರಾಂಶ

ʼರಾಮಾಚಾರಿʼ ಧಾರಾವಾಹಿಯಲ್ಲಿ ವೈಶಾಖ ಮಾಡಿದ ಮೋಸದಿಂದಾಗಿ ರಾಮಾಚಾರಿ ವಿಷ ತಿಂದಿದ್ದಾನೆ. ಚಾರುಲತಾ ಮಾಡಿದ ಗಿಣ್ಣಿನಲ್ಲಿ ವೈಶಾಖ ವಿಷ ಮಿಕ್ಸ್‌ ಮಾಡಿದ್ದಳು. ಈಗ ವಿಷ ತಿಂದು ರಾಮಾಚಾರಿ ರಕ್ತ ಕಾರಿಕೊಂಡಿದ್ದಾನೆ. 

ʼರಾಮಾಚಾರಿʼ ಧಾರಾವಾಹಿಯಲ್ಲಿ ವಿಶಾಖ ಮೋಸಕ್ಕೆ ರಾಮಾಚಾರಿ ಬಲಿಯಾಗುವ ಥರ ಕಾಣ್ತಿದೆ. ನಿತ್ಯ ಒಂದಲ್ಲ ಒಂದು ರೀತಿ ಹಿಂಸೆ ಕೊಡ್ತಿರುವ ವಿಶಾಖ ಈಗ ರಾಮಾಚಾರಿಗೆ ವಿಷ ತಿನಿಸುವ ಹಾಗೆ ಮಾಡಿದ್ದಾಳೆ.

ಮದ್ದಿನಪುಡಿ ಹಾಕಿದ್ರು! 
ಮದ್ದಿನಪುಡಿ ಮಾದಯ್ಯ ಕೊಟ್ಟ ಪೌಡರ್‌ನ್ನು ವಿಶಾಖ ಮನೆಗೆ ತಂದು ಅಡುಗೆಗೆ ಮಿಕ್ಸ್‌ ಮಾಡಿದ್ದಾಳೆ. ಈ ಪೌಡರ್‌ ತಿಂದ ಒಂದು ಗಂಟೆಯಲ್ಲಿ ವ್ಯಕ್ತಿ ಸಾಯುತ್ತಾನೆ. ಇದನ್ನು ಯಾವುದಕ್ಕೆ ಮಿಕ್ಸ್‌ ಮಾಡಿದರೂ ಕೂಡ, ಅದರ ರುಚಿ ಬರುತ್ತದೆಯೇ ಹೊರತು, ಬೇರೆ ಏನೋ ಮಿಕ್ಸ್‌ ಆಗಿದೆ ಅಂತ ಗೊತ್ತಾಗೋದೇ ಇಲ್ವಂತೆ. 

‌ಅಬ್ಬಬ್ಬಾ..! ಎಲೆಮರಿ ಕಾಯಿಯಂತಿರೋ ಅದ್ಭುತ ಕಲಾವಿದ ಈ ʼರಾಮಾಚಾರಿʼ ನಟ ರವಿ ಸಾಲಿಯಾನ್

ಗೊತ್ತಿಲ್ಲದೆ ವಿಷ ತಿಂದ ರಾಮಾಚಾರಿ! 
ರಾಮಾಚಾರಿಗೆ ಗಿಣ್ಣು ಅಂದರೆ ತುಂಬ ಇಷ್ಟ ಅಂತೆ. ಹೀಗಾಗಿ ಚಾರುಲತಾ ರಾಮಾಚಾರಿಗೋಸ್ಕರ ಗಿಣ್ಣು ಮಾಡಿದ್ದಾಳೆ. ಈ ಗಿಣ್ಣನ್ನು ರಾಮಾಚಾರಿ ಮಾತ್ರ ತಿನ್ನಬೇಕು ಎನ್ನೋದು ಚಾರು ಆಸೆ. ಇದನ್ನು ರುಕ್ಮಿಣಿ ಕೇಳಿಸಿಕೊಂಡಿದ್ದಾಳೆ. ಅದನ್ನು ಅವಳು ವಿಶಾಖಗೆ ಹೇಳಿದಳು. ಈಗ ವಿಶಾಖ ಪ್ಲ್ಯಾನ್‌ ಮಾಡಿ ಗಿಣ್ಣದ ಹಾಲಿಗೆ ಆ ಪೌಡರ್‌ ಹಾಕಿದ್ದಾಳೆ. ಕೊನೆಗೂ ಚಾರು ಗಿಣ್ಣು ಮಾಡಿದ್ದೂ ಆಯ್ತು, ಅದನ್ನು ರಾಮಾಚಾರಿ ತಿಂದಿದ್ದೂ ಆಯ್ತು. ಇದನ್ನು ತಿಂದ ರಾಮಾಚಾರಿ ಬಾಯಲ್ಲಿ ರಕ್ತ ಬಂದಿದೆ.

ರಾಮಾಚಾರಿ ಸಾಯ್ತಾನಾ? 
ರಾಮಾಚಾರಿಗೆ ಹೀಗೆಲ್ಲ ಆಗ್ತಿದೆ ಅಂತ ಚಾರು ಬೇಸರ ಮಾಡಿಕೊಂಡಿದ್ದಾಳೆ. ಒಂದು ಗಂಟೆಯೊಳಗಡೆ ರಾಮಾಚಾರಿ ಸಾಯುತ್ತಾನೆ. ಅಷ್ಟರೊಳಗಡೆ ಚಾರುಲತಾ ಅವನನ್ನು ಕಾಪಾಡಿಕೊಳ್ಳಬೇಕು. ರಾಮಾಚಾರಿ ಸಾಯೋಕೆ ಚಾನ್ಸ್‌ ಇಲ್ಲ. ರಾಮಾಚಾರಿ ಸತ್ತರೆ ಕಥೆ ಮುಗಿದಂತೆ. 

ನನ್ನ ಧರ್ಮವೇ ಬೇರೆ, ನಾನು ಪುರೋಹಿತ ಅಂತ ನಂಬಿದ್ರೆ ಅದೇ ಗೆಲುವು: ರಾಮಾಚಾರಿ ನಟ ರಿತ್ವಿಕ್‌ ಕೃಪಾಕರ್

ಈಗ ಇರುವ ಪ್ರಶ್ನೆ ಏನು? 
ರಾಮಾಚಾರಿಯನ್ನು ಚಾರು ಹೇಗೆ ಕಾಪಾಡಿಕೊಳ್ಳುತ್ತಾಳೆ. ವೈಶಾಖ ಸತ್ಯ ಎಲ್ಲರಿಗೂ ಗೊತ್ತಾಗತ್ತಾ? ವೈಶಾಖ ಮಾಡಿದ ಮೋಸವನ್ನು ಚಾರು ಬಯಲಿಗೆ ಎಳೆಯುತ್ತಾಳಾ? ಅಥವಾ ಚಾರು ಈ ರೀತಿ ಮಾಡಿರ್ತಾಳೆ ಅಂತ ಯಾರಾದರೂ ಆರೋಪ ಮಾಡುತ್ತಾರಾ? ಎನ್ನುವ ಪ್ರಶ್ನೆ ಎದ್ದಿದೆ.

BBK 11: ಭವ್ಯಾ ಗೌಡ ಪರ ಸಂಬಂಧಿಯೂ ಆಗಿರೋ ಸ್ಟಾರ್‌ ನಟಿ ದನಿಯೆತ್ತಿದ್ರೆ, ಕನ್ನಡ ಮಾತಾಡಿದ ತೆಲುಗು ನಟ! ಯಾರದು?

ಧಾರಾವಾಹಿ ಕಥೆ ಏನು?
ಹಣದ ಮದದಲ್ಲಿ ದುರಹಂಕಾರಿ ಚಾರುಲತಾ ಮೆರೆಯುತ್ತಿರುತ್ತಾಳೆ. ಅವಳಿಗೆ ರಾಮಾಚಾರಿ ಪರಿಚಯ ಆಗುವುದು. ರಾಮಾಚಾರಿ ಪುರೋಹಿತ ಕೂಡ ಹೌದು, ನಾರಾಯಣಾಚಾರ್‌ ಪುತ್ರ ರಾಮಾಚಾರಿಗೆ ಸದ್ಗುಣಗಳೇ ತುಂಬಿವೆ. ರಾಮಾಚಾರಿಯನ್ನು ದ್ವೇಷಿಸುತ್ತಿದ್ದ ಚಾರು, ಪ್ರೀತಿಸಲು ಆರಂಭಿಸುತ್ತಾಳೆ. ಆಮೇಲೆ ಅವನನ್ನು ಮೋಸದಿಂದ ಮದುವೆ ಆಗುತ್ತಾಳೆ. ಕೊನೆಗೂ ಚಾರು ಮೇಲೆ ರಾಮಾಚಾರಿಗೆ ಲವ್‌ ಆಗುವುದು. ರಾಮಾಚಾರಿ ಮನೆಗೆ ಬಂದ ಚಾರು ಎಲ್ಲ ವಿಷಯಗಳನ್ನು ಕಲಿತು, ಎಲ್ಲರ ಮನಸ್ಸು ಕದಿಯುತ್ತಾಳೆ. ಈಗ ಅವಳು ಆ ಮನೆಯ ಫೇವರಿಟ್‌ ಸೊಸೆ. ಆ ಮನೆಯಲ್ಲಿ ರಾಮಾಚಾರಿ ಅಣ್ಣನ ಹೆಂಡ್ತಿ ವೈಶಾಖ ದೊಡ್ಡ ದುಷ್ಟೆ. ಆ ಮನೆಯನ್ನು ಹಾಳು ಮಾಡೋದು ಅವಳ ಉದ್ದೇಶ. ಈಗಾಗಲೇ ಸಾಕಷ್ಟು ಬಾರಿ ಅವಳು ಆ ಮನೆಯವರಿಗೆ ಒಂದಲ್ಲ ಒಂದು ರೀತಿಯಲ್ಲಿ ತೊಂದರೆ ಕೊಟ್ಟು, ಜೀವ ತೆಗೆಯುವ ಪ್ರಯತ್ನ ಮಾಡಿದಳು, ಅಷ್ಟೇ ಅಲ್ಲದೆ ಜೈಲಿಗೂ ಹೋಗಿ ಬಂದಳು. ಹೀಗಿದ್ರೂ ಕೂಡ ಅವಳಿಗೆ ಬುದ್ಧಿ ಬಂದಿಲ್ಲ.

ಚಾರುಲತಾ ಹೇಳಿದ ಮಾತು ಕೇಳಿದ್ರು ಅವಳು ಬದಲಾಗಬಹುದಿತ್ತು. ಆದರೂ ಅವಳು ಬದಲಾಗಲಿಲ್ಲ. ವೈಶಾಖಗೆ ಚಾರುಲತಾ ಸಾಕಷ್ಟು ಬಾರಿ ಪಾಠ ಮಾಡಿದ್ದಳು, ಬುದ್ಧಿ ಕಲಿಸಿದ್ದಳು. ಆದರೆ ನಾಯಿ ಬಾಲ ಡೊಂಕು ಅಲ್ವೇ? ಹಾಗೆ. ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳು ಭಾರೀ ರೋಚಕತೆಯಿಂದ ಕೂಡಿವೆ. ನಿಮ್ಮ ಪ್ರಕಾರ ಧಾರಾವಾಹಿ ಯಾವ ರೀತಿ ಮೂಡಿ ಬರುತ್ತಿದೆ? ಏನಾಗಬಹುದು?

ಪಾತ್ರಧಾರಿಗಳು
ರಾಮಾಚಾರಿ- ರಿತ್ವಿಕ್‌ ಕೃಪಾಕರ್‌
ವೈಶಾಖ- ಐಶ್ವರ್ಯಾ ಸಾಲೀಮಠ
ಚಾರುಲತಾ- ಮೌನ ಗುಡ್ಡೇಮನೆ 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

2 ಸತ್ಯ ಬಯಲು ಮಾಡಿದ 'ಲಕ್ಷ್ಮೀ ನಿವಾಸ' ನಿರ್ದೇಶಕರು, ವೀಕ್ಷಕರು ಫುಲ್ ಹ್ಯಾಪಿ
BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!