
ಬೆಂಗಳೂರು (ಫೆ.23): ಕನ್ನಡದ ಉದಯೋನ್ಮುಖ ನಟ ಹಾಗೂ ಖ್ಯಾತ ನಿರೂಪಕ ನಿರಂಜನ್ ದೇಶಪಾಂಡೆ ಅವರು ಇದೀಗ ಕಲರ್ಸ್ ಕನ್ನಡ ವಾಹಿನಿಯನ್ನು ಬಿಟ್ಟು ಇದೀಗ ಜೀ ಕನ್ನಡ ವಾಹಿನಿಯ ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ನಿರೂಪಕನಾಗಿ ಬಂದಿದ್ದಾರೆ. ಆದರೆ, ಈ ಬಗ್ಗೆ ಲೈವ್‌ಗೆ ಬಂದ ನಿರಂಜನ್ ದೇಶಪಾಂಡೆ ಕಲರ್ಸ್ ಕನ್ನಡ ಬಿಟ್ಟು ಬಂದಿದ್ದೇಕೆ ಎಂಬುದನ್ನು ಬಿಚ್ಚಿಟ್ಟಿದ್ದಾರೆ.
ಕನ್ನಡ ಕಿರಿತೆರೆಯ ಬಿಗ್ ಬಾಸ್ ಸೀಸನ್ 4ರ ಮಾಜಿ ಸ್ಪರ್ಧಿ ನಿರಂಜನ್ ದೇಶಪಾಂಡೆ, ಕನ್ನಡ ಚಿತ್ರರಂಗದ ಉದಯೋನ್ಮುಖ ನಟ. ರೇಡಿಯೋ ಜಾಕಿಯಾಗಿ, ನಿರೂಪಕನಾಗಿ, ಕಿರುತೆರೆ ನಟನಾಗಿ, ಸಿನಿಮಾ ನಟನಾಗಿ ಅನುಭವ ಇರುವ ನಿರಂಜನ್ ದೇಶಪಾಂಡೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಗಿಚ್ಚಿ ಗಿಲಗಿಲಿಯಲ್ಲಿ ನಿರೂಪಕನಾಗಿ ಕೆಲಸ ಮಾಡುತ್ತಿದ್ದರು. ಇದೀಗ ಕಲರ್ಸ್ ಕನ್ನಡ ಬಿಟ್ಟು ಬಂದು ಜೀ ಕನ್ನಡ ವಾಹಿನಿಯಲ್ಲಿ ಭರ್ಜರಿ ಬ್ಯಾಚುಲರ್ಸ್ ಸೀಸನ್-2 ರಿಯಾಲಿಟಿ ಶೋ ನಿರೂಪಕನಾಗಿ ಬಂದಿದ್ದಾರೆ. ಜೀ ಕನ್ನಡದಲ್ಲಿ ನಾನು ಬಂದಿದ್ದು ತವರು ಮನೆಗೆ ಬಂದಂತೆ ಆಗಿದೆ. ನಾನು ಮೊಟ್ಟ ಮೊದಲನೆಯದಾಗಿ ಕಿರುತೆರೆಯಲ್ಲಿ ನಿರೂಪಕನಾಗಿ ಕೆಲಸ ಮಾಡಿದ್ದೇ ಜೀ ಕನ್ನಡ ವಾಹಿನಿಯಲ್ಲಿ ಎನ್ನುವುದನ್ನು ಬಹಿರಂಗಪಡಿಸಿದ್ದಾರೆ.
ಇದೇ ವೇಳೆ ನೀವು ಅಕುಲ್ ಅವರನ್ನು ಕರೆಸುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ನಿರಂಜನ್, ಅಕುಲ್ ಅವರು ಭರ್ಜರಿ ಬ್ಯಾಚುಲರ್ಸ್ ಸೀಸನ್-1ರಲ್ಲಿ ಒಂದು ಹೊಸ ಟ್ರೆಂಡ್ ಸೃಷ್ಟಿಸಿದ್ದಾರೆ. ಆದರೆ, ನಾನು ಅದನ್ನು ರೀಚ್ ಮಾಡಲಾಗದಿದ್ದರೂ ನನ್ನ ಬೆಸ್ಟ್ ಅನ್ನು ನಾನು ಕೊಡುತ್ತೇನೆ ಎಂದು ಹೇಳಿದ್ದಾರೆ. ಇನ್ನು ನಿರಂಜನ್ ದೇಶಪಾಂಡೆ ನಿರೂಪಣೆ ಮಾಡಿದರೆ, ಇದರಲ್ಲಿ ನಟ, ನಿರ್ದೇಶಕ, ನಿರ್ಮಾಪಕ ರವಿಚಂದ್ರನ್ ಅವರು ಹಾಗೂ ನಟಿ ರಚಿತಾ ರಾಮ್ ಜಡ್ಜಸ್ ಆಗಿದ್ದಾರೆ. ಈಗಾಗಲೇ ಭರ್ಜರಿ ಬ್ಯಾಚುಲರ್ಸ್ ಶೋ ಆರಂಭವಾಗಿದ್ದು, ಉತ್ತಮ ಮಾತುಗಾರಿಕೆ, ಹಾಸ್ಯದ ಮಾತು, ಮಾತಿನ ಚಟಾಕಿಗಳು ಎಲ್ಲರಿಗೂ ಇಷ್ಟವಾಗುತ್ತವೆ. ಆದರೆ, ಎಲ್ಲಿ ಬೇಕು ಅಲ್ಲಿ ಕೋಪ ಮಾಡಿಕೊಂಡು ಸ್ಟ್ರಿಕ್ಟ್ ಆಗಿ ಮಾತನಾಡುವುದಿಲ್ಲ. ಈ ವಿಚಾರವನ್ನು ಹೇಗೆ ತೆಗೆದುಕೊಂಡು ಹೋಗುತ್ತಾರೆ ಎಂಬುದನ್ನು ನೋಡಬೇಕಿದೆ.
ಈ ಬಗ್ಗೆ ಲೈವ್‌ನಲ್ಲಿ ಮಾತನಾಡಿದ ನಿರೂಪಕ ನಿರಂಜನ್ ದೇಶಪಾಂಡೆ, ನನ್ನ ಬರಮಾಡಿಕೊಂಡ ಜೀ ಕನ್ನಡಕ್ಕೆ ಧನ್ಯವಾದಗಳು. ನನ್ನ ಪರಿಚಯ ಎಲ್ಲರಿಗೂ ಇರುತ್ತದೆ. ನಾನು ನಿರೂಪಕನಾಗಿದ್ದೇನೆ, ನಟನಾಗಿದ್ದೇನೆ, ರೆಡಿಯೋ ಜಾಕಿಯಾಗಿದ್ದೇನೆ, ಥಿಯೇಟರ್ ಆರ್ಟಿಸ್ಟ್ ಕೂಡ ಆಗಿ ಕೆಲಸ ಮಾಡಿದ್ದೇನೆ. ಕೆಲವು ವರ್ಷಗಳಿಂಗ ಆಂಕರಿಂಗ್ ನ್ಯಾಯಯುತವಾಗಿ ಮಾಡಿಕೊಂಡು ಬಂದಿದ್ದೇನೆ. ನನ್ನ ಲೈಫ್ನಲ್ಲೇ ಫಸ್ಟ್ ಟೈಮ್ ಆಂಕರಿಂಗ್ ಅಂತ ಶುರು ಮಾಡಿರೋ ಮೊದಲ ರಿಯಾಲಿಟಿ ಶೋ ಪರದೇಶದಲ್ಲಿ ಪರದಾಟ. ಅದು ಜೀ ಕನ್ನಡದ್ದೇ. ತವರು ಮನೆಗೆ ವಾಪಸ್ ಬಂದ ಹಾಗೇ ಆಗಿದೆ. ಬರೋಬ್ಬರಿ 8 ರಿಂದ 10 ವರ್ಷಗಳ ಬಳಿಕ ಮತ್ತೆ ಜೀ ಕನ್ನಡಕ್ಕೆ ಆಂಕರ್ ಆಗಿ ಬಂದಿದ್ದೇನೆ ಎಂದು ಹೇಳಿದರು.
ಒಟ್ಟಾರೆಯಾಗಿ ನಿರಂಜನ ದೇಶಪಾಂಡೆ ಜೀ ಕನ್ನಡ ತಮ್ಮ ತವರುಮನೆಯಂತಿದ್ದು, ಅದಕ್ಕೆ ವಾಪಸ್ ಬಂದಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಕಲರ್ಸ್ ಕನ್ನಡ ವಾಹಿನಿಂದ ಸಿಕ್ಕ ಅವಕಾಶವನ್ನು ಬಾಚಿಕೊಳ್ಳಲು ಬಂದಿದ್ದು, ಯಾವುದೇ ಅನ್ಯ ಉದ್ದೇಶ ಇಲ್ಲ ಎಂಬರ್ಥದಲ್ಲಿ ಮಾತನಾಡಿದ್ದಾರೆ. ಆದರೆ, ಅಸಲಿ ಕಾರಣವನ್ನು ಇಲ್ಲಿ ಬಿಚ್ಚಿಟ್ಟಿಲ್ಲ.
ಇದನ್ನೂ ಓದಿ: ಬಿಗ್ ಬಾಸ್ ಸ್ಪರ್ಧೆಗೆ ಬಂದು ಕಣ್ಣು ತಂಪು ಮಾಡ್ತಾರಾ ಜ್ಯೋತಿ ರೈ ? ನಟಿಯ ಸೌಂದರ್ಯ ಹಾಡಿಹೊಗಳಿದ ನಿರಂಜನ್, ಕೀರ್ತಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.