
ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ದೇವರ ಕಲ್ಯಾಣೋತ್ಸವ ನಡೆಯುತ್ತಿದೆ. ಈ ವೇಳೆ ಕೆಲವರು ಅಮ್ಮನವರ ( ದೇವಿ ) ಮೆರವಣಿಗೆಗೆ ಅಡ್ಡಿ ಮಾಡಲು ನೋಡಿದ್ದಾರೆ. ಆಗ ಪುಟ್ಟಕ್ಕನ ಮಕ್ಕಳು ಅವರನ್ನು ಸದೆಬಡಿದಿದ್ದಾರೆ.
ಪುಟ್ಟಕ್ಕನ ಮಕ್ಕಳ ಭರ್ಜರಿ ಫೈಟ್!
ಈ ಹಿಂದೆ ತನ್ನ ಬಾವನಿಂದ ರಕ್ಷಿಸಿಕೊಳ್ಳಲು ಸಹನಾ ಯುಟ್ಯೂಬ್ ನೋಡಿ ಕರಾಟೆ ಕಲಿತಿದ್ದಳು. ಈಗ ಅವಳು ಕರಾಟೆಯನ್ನು ರೌಡಿಗಳಿಂದ ತಾಯಿಯನ್ನು ಕಾಪಾಡಿಕೊಳ್ಳಲು ಬಳಸಿಕೊಂಡಿದ್ದಾಳೆ. ಸಹನಾ, ಸ್ನೇಹಾ, ಸುಮಾ ಮಾತ್ರ ಭರ್ಜರಿ ಫೈಟ್ ಮಾಡಿ ಎಲ್ಲ ರೌಡಿಗಳ ಹೆಡೆಮುರಿ ಕಟ್ಟಿದ್ದಾರೆ.
Puttakkana Makkalu Serial: ಈ ವಯಸ್ಸಲ್ಲಿ ಪುಟ್ಟಕ್ಕ ಮತ್ತೆ ಮದುವೆ ಆಗ್ತಾಳಾ? ಏನಿದು ಟ್ವಿಸ್ಟ್!
ಈ ಹಿಂದೆ ಟ್ರೋಲ್ ಆಗಿದ್ದ ಫೈಟ್!
ʼಗೀತಾʼ ಧಾರಾವಾಹಿ ಗೀತಾ, ʼಮಂಗಳಗೌರಿʼ ಧಾರಾವಾಹಿಯಲ್ಲಿ ಗೌರಿ, ʼಪುಟ್ಟಗೌರಿ ಮದುವೆʼ ಧಾರಾವಾಹಿಯಲ್ಲಿ ಗೌರಿ ಹೀಗೆ ನಾಯಕಿಯರು ಈಗಾಗಲೇ ಭರ್ಜರಿ ಫೈಟ್ ಮಾಡಿದ್ದಾರೆ. ಈ ಫೈಟ್‌ಗಳು ಟ್ರೋಲ್ ಕೂಡ ಆಗಿತ್ತು. ಈಗ ʼಪುಟ್ಟಕ್ಕನ ಮಕ್ಕಳುʼ ಧಾರಾವಾಹಿಯ ಈ ಫೈಟ್ ನೋಡಿ ಸೋಶಿಯಲ್ ಮೀಡಿಯಾದಲ್ಲಿ ತರಹೇವಾರಿ ಕಾಮೆಂಟ್ ವ್ಯಕ್ತವಾಗ್ತಿದೆ.
Puttakkana Makkalu Serial: ರವಿಚಂದ್ರನ್ ಸಲಹೆಯಂತೆ ವೈರಿಗಳ ಹೆಡೆಮುರಿ ಕಟ್ಟಿದ ಕಂಠಿ
ವೀಕ್ಷಕರು ಏನು ಹೇಳುತ್ತಿದ್ದಾರೆ?
ಈ ಪ್ರೋಮೋ ನೋಡಿ ಅನೇಕರು ಅತಿ ಆಯ್ತು, ಓವರ್ ಆಕ್ಟಿಂಗ್, ಪುರುಷರಿಗೆ ಮರ್ಯಾದೆಯೇ ಇಲ್ಲ ಎನ್ನೋ ಥರ ಮಾಡಿದ್ದೀರಾ ಎಂದು ಕೆಲ ವೀಕ್ಷಕರು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದಾರೆ. ಇನ್ನೊಂದು ಕಡೆ ಈ ರೀತಿ ಹೆಣ್ಣು ಮಕ್ಕಳು ಕೂಡ ಸ್ಟ್ರಾಂಗ್ ಇದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಧಾರಾವಾಹಿ ಕಥೆ ಎತ್ತ ಸಾಗ್ತಿದೆ?
ಗಂಡು ಮಕ್ಕಳಾಗಿಲ್ಲ, ಮೂವರು ಹೆಣ್ಣು ಮಕ್ಕಳು ಅಂತ ಗೋಪಾಲಯ್ಯ ತನ್ನ ಪತ್ನಿ ಪುಟ್ಟಕ್ಕಳನ್ನು ಬಿಟ್ಟು ರಾಜೇಶ್ವರಿಯನ್ನು ಮದುವೆಯಾಗಿದ್ದಾನೆ. ರಾಜಿ-ಗೋಪಾಲಯ್ಯನಿಗೆ ಗಂಡು ಮಗನಿದ್ದಾನೆ. ಈಗ ಬುದ್ಧಿ ಬಂದ ನಂತರದಲ್ಲಿ ಮತ್ತೆ ಗೋಪಾಲಯ್ಯ ಪುಟ್ಟಕ್ಕನ ಮನೆಗೆ ಬಂದಿದ್ದಾನೆ. ಈ ಕಲ್ಯಾಣೋತ್ಸವದಲ್ಲಿ ಪುಟ್ಟಕ್ಕನ ಕೊರಳಿಗೆ ಮತ್ತೆ ತಾಳಿ ಕಟ್ಟಬೇಕು, ಈ ಮೂಲಕ ನಾನು ಮಾಡಿದ ಪಾಪ ತೊಳೆದುಕೊಳ್ಳಬೇಕು ಎಂದು ಅವನು ಬಯಸುತ್ತಿದ್ದಾನೆ. ಪುಟ್ಟಕ್ಕಳಿಗೆ ಈ ವಿಷಯ ಇಷ್ಟ ಇಲ್ಲ. ಈಗ ಅವಳು ಏನು ಮಾಡ್ತಾಳೆ ಎಂದು ಕಾದು ನೋಡಬೇಕಿದೆ. ಇನ್ನೊಂದು ಕಡೆ ಪತ್ನಿ ಸ್ನೇಹಾಳನ್ನು ಕಳೆದುಕೊಂಡಿರೋ ಕಂಠಿ ಇನ್ನೊಂದು ಮದುವೆ ಆಗ್ತಾನಾ ಎನ್ನುವ ಪ್ರಶ್ನೆ ಇದೆ.
ಪಾತ್ರಧಾರಿಗಳು
ಪುಟ್ಟಕ್ಕ- ಉಮಾಶ್ರೀ
ಸಹನಾ- ಅಕ್ಷರಾ
ಸ್ನೇಹ- ಅಪೂರ್ವ ನಾಗರಾಜ್
ಸುಮಾ-ಶಿಲ್ಪಾ ಸವರಸೆ
ಗೋಪಾಲಯ್ಯ-ರಮೇಶ್ ಪಂಡಿತ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.