ಫಸ್ಟ್‌ನೈಟ್‌ನಲ್ಲಿ ಮಂಚ ಮುರಿದ ಮಗನಿಗೆ ಅಪ್ಪನ ಶಹಬ್ಬಾಸ್‌ಗಿರಿ! ಸೀನ್-ಗುಂಡಮ್ಮನ ರಾದ್ಧಾಂತದ ಮೊದಲ ರಾತ್ರಿ !

Published : Mar 06, 2025, 01:02 PM ISTUpdated : Mar 06, 2025, 01:19 PM IST
ಫಸ್ಟ್‌ನೈಟ್‌ನಲ್ಲಿ ಮಂಚ ಮುರಿದ ಮಗನಿಗೆ ಅಪ್ಪನ ಶಹಬ್ಬಾಸ್‌ಗಿರಿ! ಸೀನ್-ಗುಂಡಮ್ಮನ ರಾದ್ಧಾಂತದ ಮೊದಲ ರಾತ್ರಿ !

ಸಾರಾಂಶ

Annayya Serial: ಅಣ್ಣಯ್ಯ ಸೀರಿಯಲ್‌ನಲ್ಲಿ ಸೀನ ಮತ್ತು ಗುಂಡಮ್ಮನ ಮೊದಲ ರಾತ್ರಿಯಲ್ಲಿ ಮಂಚ ಮುರಿಯುತ್ತದೆ. ಮಂಚ ಮುರಿದದ್ದನ್ನು ನೋಡಿದ ಸೀನನ ತಂದೆ ಮಾದಪ್ಪ ಮಗನಿಗೆ ಶಹಬ್ಬಾಸ್‌ಗಿರಿ ನೀಡುತ್ತಾನೆ. 

Gym Seena s And Gundamma Rashmi: ಅಣ್ಣಯ್ಯ ಸೀರಿಯಲ್‌ನಲ್ಲಿ ಹಲವು ತಿರುವುಗಳನ್ನು ಪಡೆದ ನಂತರ ಮಾದಪ್ಪನ ಮಗ ಜಿಮ್ ಸೀನನಿಗೂ ಮತ್ತು ಶಿವು ತಂಗಿ ಗುಂಡಮ್ಮ ರಶ್ಮಿಯ ಮದುವೆಯಾಗಿ ಫಸ್ಟ್‌ನೈಟ್ ನಡೆದಿದೆ. ಮೊದಲ ರಾತ್ರಿಯಲ್ಲಿ ಸೀನ ಮತ್ತು ರಶ್ಮಿ ಮುಂಗುಸಿಯಂತೆ ಕಿತ್ತಾಡಿಕೊಂಡಿದ್ದಾರೆ.  ಗುಂಡಮ್ಮ ರೌದ್ರಾವತಾರ ಕಂಡು ಸೀನ ಬಾಲ ಮದುರಿಕೊಂಡ ಬೆಕ್ಕಿನಂತೆ ಕುಳಿತಿದ್ದನು. ಮೊದಲರಾತ್ರಿಯಲ್ಲಿ ಮಂಚ ಮುರಿದಿದೆ ಅಂದ್ರೆ ಜನರು ಕಲ್ಪನೆ ಬೇರೆಯೇ ಆಗಿರುತ್ತದೆ. ಬೆಳಗ್ಗೆ ಕೋಣೆಯೊಳಗೆ ಬಂದ ಮಾದಪ್ಪ, ಮಂಚ ಮುರಿದಿರೋದನ್ನು ನೋಡಿ,  ಖುಷಿಯಾಗಿ ಮಗ ಸೀನನ ಬೆನ್ನುತಟ್ಟಿ ಶಹಬ್ಬಾಸ್‌ ನೀಡಿದ್ದಾನೆ. 

ಧಾರಾವಾಹಿ ಆರಂಭದ ದಿನದಿಂದಲೂ ಸೀನ ಮತ್ತು ರಶ್ಮಿಯನ್ನು ಬದ್ಧವೈರಿಗಳಂತೆ ತೋರಿಸಲಾಗಿತ್ತು. ಇಬ್ಬರ ಕೋಳಿ ಜಗಳ ನೋಡಿದ ವೀಕ್ಷಕರು ಇವರಿಬ್ಬರ ಮದುವೆ ಫಿಕ್ಸ್ ಅಂದ್ಕೊಂಡಿದ್ದರು. ಆದರೆ ಇಬ್ಬರ ಮದುವೆ ಮಾತ್ರ ರೋಚಕ ತಿರುವಿನಲ್ಲಿ ನಡೆದಿದೆ. ಅಪ್ಪನ ಬಲವಂತಕ್ಕೆ ತನ್ನ ಬದ್ಧವೈರಿಯನ್ನು ಜಿಮ್ ಸೀನ ಮದುವೆಯಾಗಿದ್ದಾನೆ. ಮಗನ ಸ್ಥಿತಿ ಕಂಡು ತಾಯಿ ಲೀಲಾ ಒಳಗೊಳಗೆ ಕಣ್ಣೀರು ಹಾಕುತ್ತಿದ್ದಾಳೆ. ತನ್ನ ಈ ಸ್ಥಿತಿಗೆ ರಶ್ಮಿ ಕಾರಣ ಎಂದು ಆಕೆಯ ಮೇಲೆಯೇ ಸೀನ ಮತ್ತು ಲೀಲಾ ಕೋಪಗೊಂಡಿದ್ದಾರೆ. ರಶ್ಮಿಗೆ ಚೆನ್ನಾಗಿ ಹೊಂದಿಕೊಂಡು ಹೋಗುವಂತೆ ಸಲಹೆ ನೀಡಿ ಶಿವು ಮತ್ತು ಪಾರು ಹೇಳಿ ಹೋಗಿದ್ದರು.

ಅಣ್ಣ ಮತ್ತು ಅತ್ತಿಗೆ ಹೇಳಿದಂತೆ ಹಾಲು ತೆಗೆದುಕೊಂಡು ಬಂದ ಗುಂಡಮ್ಮ ತಾಳ್ಮೆಯಿಂದಲೇ ಇದ್ದಳು. ಹಾಲು ಕುಡಿಯುವಂತೆ ಹೇಳುತ್ತಿದ್ದಂತೆ ಕೋಪಗೊಂಡ ಸೀನ, ರಶ್ಮಿಯನ್ನು ಬೈಯ್ಯಲು ಶುರು ಮಾಡಿದ್ದನು. ಇದು ಜಿಮ್ ಬಾಡಿ, ತಳ್ಳಿದ್ರೆ ಸೊಂಟ ಮುರಿದುಕೊಳ್ಳುತ್ತೀಯಾ ಎಂದು ಸೀನ್ ಹೇಳುತ್ತಿದ್ದಂತೆ ಏನು ಅಂತ ಮುಂದೆ ಬರುತ್ತಾಳೆ. ಹೇಳಿದಂತೆ ರಶ್ಮಿಯನ್ನು ತಳ್ಳುತ್ತಾನೆ. ರಶ್ಮಿ ಬಿದ್ದ ರಭಸಕ್ಕೆ ಮಂಚವೇ ಮುರಿಯುತ್ತದೆ. ಇಷ್ಟು ವರ್ಷ ನಾನು ಮಲಗುತ್ತಿದ್ದ ಮಂಚ ಮುರಿದೆಯಾ ಮೂಟೆ ಎಂದು ಸೀನ ಮತ್ತಷ್ಟು ಕೋಪಗೊಳ್ಳುತ್ತಾನೆ. ಈ ಮಂಚ ಮುರಿದಿದ್ದಕ್ಕೂ ನನ್ನ ಅಪ್ಪ ನನಗೆ ಬೈಯ್ಯುತ್ತಾನೆ. ಬೆಳಗ್ಗೆ ಅಪ್ಪನಿಗೆ ಏನು ಹೇಳಲಿ ಎಂದು ಸೀನ ತಲೆ ಚಚ್ಚಿಕೊಂಡಿದ್ದಾನೆ.

ರಶ್ಮಿಗೆ ಹೆದರಿ ಮಂಚವೇರಿ ಕುಳಿತ ಸೀನ 
ಹಸಿವು ಆಗಿದೆ ಅಂತ ರಶ್ಮಿ ಚಕ್ಕಲಿ ತಿನ್ನಲು ಶುರು ಮಾಡುತ್ತಾಳೆ. ಏ ತಡಗಲಿ, ಏನು ಆಗದೇ ಇರೋರ ರೀತಿ ಧಾರಾವಾಡದ ಎಮ್ಮೆ ರೀತಿ ಗೂಸ ತಿಂದಂತೆ ತಿಂತಿದ್ದೀಯಲ್ಲಾ ಎಂದು ಸೀನ ಬೈಯ್ಯುತ್ತಾನೆ. ಇದಕ್ಕೆ ಕೋಪಗೊಂಡ ರಶ್ಮಿ, ಕೈಯಲ್ಲಿದ್ದ ತಟ್ಟೆಯನ್ನು ಸೀನನತ್ತ ಎಸೆಯುತ್ತಾಳೆ. ಏನೋ ಅಂದೆ ಓತಿಕ್ಯಾತ ನನ್ಮಗನೇ? ನಮ್ಮ ಅಣ್ಣ ಮತ್ತು ಅತ್ತಿಗೆ ಅನುಸರಿಸಿಕೊಂಡು ಇಲ್ಲೇ ಜೀವನ ಮಾಡು ಅಂತ ಹೇಳಿದ್ದರು. ಅದಕ್ಕೆ ನಿನ್ನನ್ನು ಮಗು ರೀತಿ ಮಾತಾಡಿಸಿದ್ರೆ ಗಾಂಚಾಲಿಯಿಂದ ಮುಖ ಆಕಡೆ ಮಾಡ್ಕೊಂಡು ನನ್ನನ್ನೇ ದಡಗಲಿ ಅಂತಿಯಾ? ಯಾಕೋ ನಿಮ್ಮಪ್ಪ ರೇಷನ್ ಕೊಟ್ಟು ಬೆಳೆಸಿದ್ದಾರೆ ಏನೋ ಹಂಚಿಕಡ್ಡಿ ನನ್ನ ಮಗನೇ ಎಂದು ರಶ್ಮಿ ಅವಾಜ್ ಹಾಕಿದ್ದಾಳೆ. ರಶ್ಮಿ ಅವಾಜ್‌ಗೆ ಹೆದರಿದ ಸೀನ ಮಂಚ ಏರಿ ಕುಳಿತಿದ್ದಾನೆ. 

ಇದನ್ನೂ ಓದಿ: ಫಸ್ಟ್‌ನೈಟ್‌ನಲ್ಲಿ ಮಂಚ ಮುರಿದ ಜಿಮ್ ಸೀನ- ಗುಂಡಮ್ಮ ರಶ್ಮಿ; ಭಲೇ ಭಲೇ ಎಂದ ವೀಕ್ಷಕರು!

ಹೆಣ್ಣಾಗಿ ಹುಟ್ಟಿದ ಮೇಲೆ ದಿನವೂ ಕನ್ನಡಿಯಲ್ಲಿ ಮುಖ ನೋಡಿಕೊಳ್ಳುತ್ತಿದ್ದೇನೆ. ತುಂಬಾ ಮಾತಾಡಬೇಡ ಕಣೋ ಅಂತ ರಶ್ಮಿ ಹೇಳಿದ್ರೆ. ದಿನಾ ಕನ್ನಡಿಯಲ್ಲಿ ನಿನ್ನ ಮುಖ ನೋಡ್ಕೊಂಡ್ರು ಹೇಗಿದಿಯಾ ಅಂತಾ ಗೊತ್ತಾಗಿಲ್ಲವೇ ಗಜಗಾಮಿನಿ ಎಂದು ಮತ್ತೆ ಅಣಕಿಸಿದ್ದಾನೆ. ಹೀಗೆ ಇಬ್ಬರ ಜಗಳ ಮುಂದುವರಿದಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಒಂದು ರೀತಿಯಲ್ಲಿ ಟಾಮ್ ಆಂಡ್ ಜೆರ್ರಿ ರೀತಿ ನಿಮ್ಮ ಜಗಳ ಆಗಿದೆ ಎಂದು ಕಮೆಂಟ್ ಮಾಡಿದ್ದಾರೆ. 

ಇದನ್ನೂ ಓದಿ: ಅಣ್ಣಯ್ಯ ಧಾರಾವಾಹಿ ಶೂಟಿಂಗ್ ನಡೆಯುವ ಹಳ್ಳಿ ಯಾವುದು ಗೊತ್ತಾ? ನಿಶಾ ಶೂಟಿಂಗ್ ಅಡ್ರೆಸ್ ರಿವೀಲ್ ಆಯ್ತು!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?