Drone Prathap, ನೀವು ಸಾಮಾನ್ಯದವರಲ್ಲ.. ಗಗನಾಗೆ 1000 ಅಡಿ ಎತ್ತರದಿಂದ ಗಿಫ್ಟ್‌ ಕೊಟ್ಟ ‌ʼಭರ್ಜರಿ ಬ್ಯಾಚುಲರ್ಸ್ʼ

Published : Mar 06, 2025, 12:28 PM ISTUpdated : Mar 06, 2025, 12:46 PM IST
Drone Prathap, ನೀವು ಸಾಮಾನ್ಯದವರಲ್ಲ.. ಗಗನಾಗೆ 1000 ಅಡಿ ಎತ್ತರದಿಂದ ಗಿಫ್ಟ್‌ ಕೊಟ್ಟ ‌ʼಭರ್ಜರಿ ಬ್ಯಾಚುಲರ್ಸ್ʼ

ಸಾರಾಂಶ

Zee Kannada Bharjari Bachelors Drone Prathap and Gagana: ʼಬಿಗ್ ಬಾಸ್‌ ಕನ್ನಡ ಸೀಸನ್‌ 10ʼ ಸ್ಪರ್ಧಿ ಡ್ರೋನ್‌ ಪ್ರತಾಪ್‌ ಅವರು ʼಭರ್ಜರಿ ಬ್ಯಾಚುಲರ್ಸ್‌ ಶೋʼನಲ್ಲಿ ಎಲ್ಲರೂ ಅಚ್ಚರಿ ಆಗುವಂತೆ ಮಾಡಿದ್ದಾರೆ. ʼಮಹಾನಟಿʼ ಖ್ಯಾತಿಯ ಗಗನಾಗೆ ಅವರು ನೀಡಿದ ಸರ್ಪ್ರೈಸ್‌ ಎಲ್ಲರಿಗೂ ಸರ್ಪ್ರೈಸ್‌ ಉಂಟುಮಾಡಿತ್ತು. 

ʼಬಿಗ್‌ ಬಾಸ್ʼ‌ ಮನೆಯಲ್ಲಿ ತನ್ನ ಅತಿ ಬುದ್ಧಿವಂತಿಕೆಯಿಂದ ವೀಕ್ಷಕರು ಹುಬ್ಬೇರಿಸುವಲ್ಲಿ ಯಶಸ್ವಿಯಾಗಿದ್ದ ಡ್ರೋನ್‌ ಪ್ರತಾಪ್ ಈಗ ʼಭರ್ಜರಿ ಬ್ಯಾಚುಲರ್ಸ್ʼ‌ ಶೋ ಸ್ಪರ್ಧಿ. ಈಗ ಈ ಶೋನಲ್ಲಿ ಮೆಂಟರ್‌ ಗಗನಾಗೆ ಅವರು 1000 ಅಡಿ ಎತ್ತರದಲ್ಲಿ ಹಾರು ಹೆಲಿಕ್ಯಾಪ್ಟರ್‌ತಂದು ಸರ್ಪ್ರೈಸ್‌ ಕೊಟ್ಟಿದ್ದಾರೆ. ವಾಹಿನಿಯು ಹೊಸ ಪ್ರೋಮೋ ರಿಲೀಸ್‌ಮಾಡಿ ವೀಕ್ಷಕರಿಗೂ ಅಚ್ಚರಿ ನೀಡಿದೆ. 

ಎಲ್ಲರಿಗೂ ಅಚ್ಚರಿ! 
ರಚಿತಾ ರಾಮ್‌ ಅವರು ಡ್ರೋನ್‌ ಪ್ರತಾಪ್‌ಗೆ "ಭಯ ಬಿಟ್ಟು ಆರಾಮಾಗಿರಿ, ಯಾಕೆ ಹೆದರುತ್ತೀರಾ?" ಎಂದು ಧೈರ್ಯ ತುಂಬಿದ್ದರು. ಅಲ್ಲಿಂದ ಪ್ರತಾಪ್‌ ಸಿಕ್ಕಾಪಟ್ಟೆ ಬದಲಾದರು. ಪ್ರತಾಪ್‌ ನಡವಳಿಕೆ ನೋಡಿ ವಿ ರವಿಚಂದ್ರನ್‌ ಕೂಡ ಮೂಗು ಮೇಲೆ ಬೆಳರು ಇಟ್ಟುಕೊಂಡಿದ್ದರು. 

ʼಅಗ್ನಿಸಾಕ್ಷಿʼ ನಟಿ ಸುಕೃತಾ ನಾಗ್‌ರ ಆ ಮಾತು ಕೇಳಿ ಜಡ್ಜ್‌ ಸೀಟ್‌ ಬಿಟ್ಟುಕೊಡಲು ರವಿಚಂದ್ರನ್ ರೆಡಿ; ಅಂಥದ್ದೇನಾಯ್ತು?

ಖುಷಿಗೆ ಕಿರುಚಾಡಿದ ಗಗನಾ! 
ಈಗ ಸ್ಪರ್ಧಿಗಳು ತಮ್ಮ ಮೆಂಟರ್‌ಗೆ ಸರ್ಪ್ರೈಸ್‌ ಕೊಡಬೇಕಿತ್ತು. ಆಗ ಪ್ರತಾಪ್‌ ಅವರು “ನಾನು ಡ್ರೋನ್‌ ಪ್ರತಾಪ್‌ ಆದರೆ ನೀವು ಏನು?” ಎಂದು ಪ್ರಶ್ನೆ ಮಾಡಿದ್ದರು. ಆಗ ಗಗನಾ “ಹೆಲಿಕ್ಯಾಪ್ಟರ್‌ ಗಗನಾ” ಎಂದಿದ್ದಾರೆ. ಹೆಲಿಕ್ಯಾಪ್ಟರ್‌ ನೋಡಿ ಗಗನಾ ಖುಷಿಗೆ ಪಾರವೇ ಇರಲಿಲ್ಲ. ಹೆಲಿಕ್ಯಾಪ್ಟರ್‌ ಲ್ಯಾಂಡ್‌ ಆಗುತ್ತಿದ್ದಂತೆ ಗಗನಾ ಖುಷಿಗೆ ಕಿರುಚಿದರು. 

ಪ್ರತಾಪ್‌ ಬಾಳಲ್ಲಿ ಲಕ್ಷ್ಮೀ ಬೇಕಂತೆ! 
ಪ್ರತಾಪ್‌ ಅವರು “ಕನ್ನಡದ ಹೆಣ್ಣು ಮಗಳೊಬ್ಬರು 1000 ಅಡಿ ಎತ್ತರದಲ್ಲಿ ಹಾರುತ್ತಿದ್ದಾಳೆ” ಎಂದಿದ್ದಾರೆ. ಇನ್ನು ಹೆಲಿಕ್ಯಾಪ್ಟರ್‌ನಲ್ಲಿ ಗಗನಾಗೆ ಅರಿಷಿಣ-ಕುಂಕುಮ ಕೊಟ್ಟಿದ್ದಾರೆ. ಇನ್ನು ವೇದಿಕೆ ಮೇಲೆ ಈ ಬಗ್ಗೆ ಮಾತನಾಡಿದ ಗಗನಾ “ಡ್ರೋನ್‌ ಪ್ರತಾಪ್‌ ನನಗೆ ಸ್ಪರ್ಧಿ ಸಿಕ್ಕಿದ್ದು ಅದೃಷ್ಟ” ಎಂದು ಹೇಳಿದ್ದಾರೆ. ಇನ್ನು ಪ್ರತಾಪ್‌ ಅವರು ನನ್ನ ಬಾಳಿಗೆ ಲಕ್ಷ್ಮೀ ಆಗಮನವಾಗಲಿ ಎಂದು ತನ್ನ ತೊಡೆಯ ಮೇಲೆ ಗಗನಾ ಕಾಲಿಟ್ಟು, ಆ ಕಾಲಿಗೆ ಬೆಳ್ಳಿ ಕಾಲ್ಗೆಜ್ಜೆ ತೊಡಿಸಿದ್ದಾರೆ.

ʼಸರಿಗಮಪʼ ಮಂಜಮ್ಮ ಸಹೋದರಿ 5 ತಿಂಗಳ ಗರ್ಭಿಣಿ ಹೊಟ್ಟೆಯಲ್ಲಿ ಗಡ್ಡೆ: ಸಹಾಯಕ್ಕೆ ಮುಂದಾದ ಡ್ರೋನ್‌ ಪ್ರತಾಪ್

ಚಿತ್ರವಿಚಿತ್ರ ಕಾಮೆಂಟ್ಸ್‌ಗಳ ಸುರಿಮಳೆ! 
ಡ್ರೋನ್‌ ಪ್ರತಾಪ್‌ ನೀಡಿದ ಸರ್ಪ್ರೈಸ್‌ ನೋಡಿ ಎಲ್ಲರೂ ವಾವ್‌ ಎಂದಿದ್ದಾರೆ. ರಚಿತಾ ರಾಮ್‌ ಕೂಡ ನಿಬ್ಬೆರಗಾಗಿದ್ದಾರೆ. ಇನ್ನು ರವಿಚಂದ್ರನ್‌ ಅವರು “ಅರಿಷಿಣ ಕುಂಕುಮ ಕೊಟ್ಟಾಗಲೇ ಪ್ರತಾಪ್‌ ಗೆದ್ದ” ಎಂದಿದ್ದಾರೆ. ಈ ಪ್ರೋಮೋ ನೋಡಿ ವೀಕ್ಷಕರು ಸರ್ಪ್ರೈಸ್‌ ಆಗಿದ್ದಲ್ಲದೆ, “ಪ್ರತಾಪ್‌, ನೀನು ಸಾಮಾನ್ಯದವನು ಅಲ್ಲಾ ಕಣಣ್ಣಾ..” ಎಂದಿದ್ದಾರೆ. ಇನ್ನು ವೇದಿಕೆಯಲ್ಲಿ ಪ್ರತಾಪ್‌ ಹಾಗೂ ಗಗನಾ ಡ್ಯಾನ್ಸ್‌ ಮಾಡಿದ್ದಾರೆ. ಗಗನಾಗೆ ಪ್ರತಾಪ್‌ ಅವರು ಕೆಂಪು ಗುಲಾಬಿ ಹೂಡ ಕೂಡ ನೀಡಿದರು. ಇದನ್ನು ನೋಡಿ ಗಿಲ್ಲಿ ನಟ ನೊಂದುಕೊಂಡರು. ಇವುಗಳನ್ನೆಲ್ಲ ನೋಡಿದ ವೀಕ್ಷಕರು ಥರಹೇವಾರಿ ಕಾಮೆಂಟ್‌ ಮಾಡಿದ್ದಾರೆ. “ಗಿಲ್ಲಿ ಅಣ್ಣ ನಿನಗೆ ಈ ನೋವು ಮರೆಯುವಂತ ಶಕ್ತಿ ಕೊಡಲಿ ಅಂತ ಆ ದೇವರಲ್ಲಿ ಪ್ರಾರ್ಥಿಸುತ್ತೇನೆ” ಎಂದು ಅನೇಕರು ಸೋಶಿಯಲ್‌ ಮೀಡಿಯಾದಲ್ಲಿ ಕಾಮೆಂಟ್‌ ಮಾಡಿದ್ದಾರೆ. 

ಉಳಿದ ಸ್ಪರ್ಧಿಗಳು ತಮ್ಮ ಮೆಂಟರ್‌ಗೆ ವಿಧ ವಿಧದ ಉಡುಗೊರೆ ಕೊಟ್ಟಿರೋದು, ಭಾವನಾತ್ಮಕ ಎಪಿಸೋಡ್‌ ಸೃಷ್ಟಿಯಾಗಿದೆ. ಒಟ್ಟಿನಲ್ಲಿ ಈ ಶೋ ಸಾಕಷ್ಟು ಕುತೂಹಲ ಸೃಷ್ಟಿ ಮಾಡಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಕಿಚ್ಚ ಸುದೀಪ್‌ ಮುಂದೆ ರೇಷ್ಮೆ ಶಾಲಿನಲ್ಲಿ ಹೊಡೆದಂತೆ ಸತ್ಯದರ್ಶನ ಮಾಡಿಸಿದ ಗಿಲ್ಲಿ ನಟ
BBK 12: ಸ್ಪಂದನಾ ಸೋಮಣ್ಣ ಮುಂದೆ ಧ್ರುವಂತ್ ಅಸಭ್ಯ ಸನ್ನೆ ಮಾಡಿದ್ರು: ರಜತ್‌ ಗಂಭೀರವಾದ ಆರೋಪ