ಸರಿಗಮಪ ವೇದಿಕೆಯಲ್ಲಿ ಅರ್ಜುನ್ ಜನ್ಯ ಅವರು ಬಾಳು ಬೆಳಗುಂದಿ ಅವರಿಗೆ 'ಬ್ರ್ಯಾಟ್' ಸಿನಿಮಾದಲ್ಲಿ ಹಾಡುವ ಅವಕಾಶ ನೀಡಿದ್ದಾರೆ. ಬಾಳು ಅವರೇ ಹಾಡಿಗೆ ಸಾಹಿತ್ಯ ಬರೆದಿದ್ದು, ಯುಗಾದಿಗೆ ವಿಶೇಷ ಉಡುಗೊರೆಯಾಗಿ ಈ ಅವಕಾಶ ಸಿಕ್ಕಿದೆ.
ಬೆಂಗಳೂರು (ಮಾ.30): ಕನ್ನಡ ಚಿತ್ರರಂಗದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಅವರು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಗಾಯನ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿದ್ದಾರೆ. ರಿಯಾಲಿಟಿ ಶೋನಲ್ಲಿ ಹಾಡುವುದಕ್ಕೆ ಬಂದ ಡಜನ್‌ಗಟ್ಟಲೆ ಹುಡುಗರನ್ನು ಸಿನಿಮಾದಲ್ಲಿ ಹಾಡು ಹೇಳಿಸಿ ಗಾಯಕರನ್ನಾಗಿ ಮಾಡಿ ಜೀವನ ರೂಪಿಸಿಕೊಟ್ಟಿದ್ದಾರೆ. ಇದೀಗ ಸರಿಗಮಪದಲ್ಲಿ ಸ್ಪರ್ಧಿಯಾಗಿರುವ ಉತ್ತರ ಕರ್ನಾಟಕದ ಪ್ರತಿಭೆ ಬಾಳು ಬೆಳಗುಂದಿ ಅವರಿಗೂ ಕೂಡ ಸಿನಿಮಾದಲ್ಲಿ ಹಾಡುವುದಕ್ಕೆ ಚಾನ್ಸ್ ನೀಡಿದ್ದಾರೆ.
ಚಂದನವನದ ಸಂಗೀತ ಲೋಕದಲ್ಲಿ ಅರ್ಜುನ್ ಜನ್ಯಅವರು, ಸರಿಗಮಪ ಸ್ಪರ್ಧಿಗಳಾಗಿ ಬಂದ ಐಶ್ವರ್ಯ, ಜಸ್ ಕರಣ್, ಸುನಿಲ್, ಅಂಕಿತಾ ಕುಂದು, ಶಿವಾನಿ, ಪೃಥ್ವಿ ಭಟ್ ಸೇರಿ ಹಲವಾರು ಕಲಾವಿದರಿಗೆ ಹಾಡುವುದಕ್ಕೆ ಚಾನ್ಸ್ ಕೊಟ್ಟಿದ್ದಾರೆ. ಒಮ್ಮೆ ಸಿನಿಮಾದಲ್ಲಿ ಹಾಡು ಹೇಳಿ ಗಾಯಕ, ಗಾಯಕಿ ಎಂದು ಗುರುತಿಸಿಕೊಂಡ ನಂತರ ಅವರಿಗೆ ಸಿಗುವ ಮನ್ನಣೆಯೇ ಬೇರೆ. ಇದಾದ ನಂತರ ಅವರಿಗೆ ಹಲವು ಸಿನಿಮಾಗಳಿಗೆ ಹಾಡುವುದಕ್ಕೆ ಚಾನ್ಸ್ ಸಿಗುತ್ತಲೇ ಹೋಗುತ್ತವೆ. ಇನ್ನು ಹಲವು ವೇದಿಕೆ ಕಾರ್ಯಕ್ರಮಗಳಿಗೂ ಅವರ ಗಾಯನಕ್ಕಾಗಿ ಆಮಂತ್ರಣಗಳು ಸಿಗುತ್ತವೆ. ಹೀಗಾಗಿ, ಅರ್ಜುನ್ ಜನ್ಯ ಅವರನ್ನು ಚಂದನವನದ ಸಂಗೀತ ಲೋಕಕ್ಕೆ ದಾರಿ ತೋರಿದ ಗುರು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ವಿಚಿತ್ರ ಕಾಂಬಿನೇಷನ್, ವಿಚಿತ್ರ ಲುಕ್, ವಿಚಿತ್ರ ಕತೆ: 45 ಬಗ್ಗೆ ರಿಯಲ್ ಸ್ಟಾರ್ ಉಪೇಂದ್ರ ಹೇಳಿದ್ದೇನು?
ಇದೀಗ ಹಾಲಿ ಸರಿಗಮಪ ಸ್ಪರ್ಧಿಯಾಗಿರುವ ಬಾಳು ಬೆಳಗುಂದಿ ಅವರಿಗೆ ಸಿನಿಮಾದಲ್ಲಿ ಹಾಡನ್ನು ಹೇಳುವುದಕ್ಕೆ ಚಾನ್ಸ್ ಕೊಡುತ್ತಿದ್ದಾರೆ. ಈ ಬಗ್ಗೆ ಸರಿಗಮಪ ವೇದಿಕೆಯಲ್ಲಿ ಮಾತನಾಡಿದ ಅರ್ಜುನ್ ಜನ್ಯ ಅವರು, 'ಈ ಯುಗಾದಿಗೆ ಬಾಳು ಅವರಿಗೆ ಕೊಡುವ ವಿಶೇಷ ಉಡುಗೊರೆ ಏನೆಂದರೆ, ಶಶಾಂಕ್ ನಿರ್ದೇಶನದ ಹಾಗೂ ಡಾರ್ಲಿಂಗ್ ಕೃಷ್ಣ ಅಭಿನಯದ 'ಬ್ರ್ಯಾಟ್' ಎನ್ನುವ ಸಿನಿಮಾಗೆ ಹಾಡನ್ನು ಹೇಳುತ್ತಿದ್ದಾರೆ. ಈ ಹಾಡಿಗೆ ಸ್ವತಃ ಬಾಳು ಬೆಳಗುಂದಿ ಅವರೇ ಸಾಹಿತ್ಯವನ್ನೂ ಬರೆದಿದ್ದಾರೆ. ಇನ್ನು 2 ದಿನದಲ್ಲಿ ಆ ಹಾಡನ್ನು ರೆಕಾರ್ಡ್ ಮಾಡುತ್ತಿದ್ದೇವೆ. ಅವರ ಮೊದಲ ಹಾಡಿ ಲಿರಿಕ್ಸ್ ತುಂಬಾ ಚೆನ್ನಾಗಿದೆ. ಈ ಯುಗಾದಿ ಹಬ್ಬದಿಂದ ನಿಮ್ಮ ಜೀವನ ಉತ್ತಮವಾಗಿ ಬೆಳೆಯಲಿ ಎಂದು ಹಾರೈಸಿದರು.
ಒಂದು ನಂಬಿಕೆ ನನಗೇನೆಂದರೆ ನೀವು ಕೊಟ್ಟ ಈ ಅವಕಾಶ ನನಗೆ ಹೊಸ ಜೀವನವನ್ನೇ ತಂದುಕೊಡಬಹುದು. ಎಲ್ಲರನ್ನೂ ಒಂದೇ ರೀತಿ ಕಾಣುವಂತರ ಮ್ಯೂಸಿಕ್ ಡೈರೆಕ್ಟರ್ ಎಂದರೆ ಅದು ಅರ್ಜುನ್ ಜನ್ಯ ಅವರು. ನಾನು ಮೊದಲಿನಿಂದರೂ ನೋಡಿದಂತೆ ಆಗಿನಿಂದಲೂ ಈವರೆಗೆ ಒಂದೇ ರೀತಿಯಲ್ಲಿದ್ದಾರೆ. ಅರ್ಜುನ್ ಜನ್ಯ ಸರ್ ಎಂದರೆ ನನಗೆ ಬಹಳ ಇಷ್ಟ ಎಂದು ಹೇಳಿದರು.
ಇದನ್ನೂ ಓದಿ: ಅಪ್ಪ ಅಮ್ಮ ಯಾರೂ ಇಲ್ಲದೆ ಕಣ್ಣೀರುಗರೆದ ಗಾಯಕನಿಗೆ ಸರೆಗಮಪ ಟೀಮ್ ಕುಟುಂಬವಾದ ಕಥೆಯಿದು! ಯಾರು ಆ ಗಾಯಕ?