Lakshmi Nivasa Serial Episode: ʼಲಕ್ಷ್ಮೀ ನಿವಾಸʼ ಧಾರಾವಾಹಿಯಲ್ಲಿ ಜಾಹ್ನವಿ ಸಮುದ್ರಕ್ಕೆ ಹಾರಿದ್ದಾಳೆ. ಹಾಗಾದರೆ ಈ ಪಾತ್ರದ ಕಥೆ ಏನು? ಪಾತ್ರ ಬದಲಾಗತ್ತಾ? ಏನು ಕಥೆ?
‘ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ಜಯಂತ್‌ನ ಸೈಕೋ ಬುದ್ಧಿ ಜಾಹ್ನವಿಗೆ ಅರ್ಥ ಆಗಿದೆ. ಜಯಂತ್ ಪ್ರೀತಿ ಕಂಡು ಜಾನುಗೆ ಸಾಕಾಗಿ ಹೋಗಿದೆ. ನನಗೋಸ್ಕರ ಜಯಂತ್ ಬೇರೆಯವರಿಗೆ ಕಷ್ಟಕೊಡ್ತಾನೆ ಅಂತ ಜಾನು ಈಗ ಮಹಾ ನಿರ್ಧಾರ ಮಾಡಿದ್ದಾಳೆ.
ಪ್ರೀತಿ ಮಾಡಿದೋರನ್ನು ಕಟ್ಟಿಹಾಕೋದು ತಪ್ಪಲ್ವಾ?
ನನ್ನ ಪ್ರೀತಿಯಿಂದ ನಿಮ್ಮನ್ನು ಕಟ್ಟಿಹಾಕ್ತೀನಿ ಅಂತ ಹೇಳಿ ಜಾಹ್ನವಿ ಈಗ ಸಮುದ್ರದ ಮಧ್ಯೆ ಜಯಂತ್‌ನನ್ನು ಹಗ್ಗದಿಂದ ಕಟ್ಟಿಹಾಕಿದ್ದಾಳೆ. ಇದು ಜಯಂತ್‌ಗೆ ಆಶ್ಚರ್ಯ ತಂದಿದೆ. “ಈ ಹಗ್ಗದಿಂದ ನೀವು ಹೇಗೆ ಬಿಡಿಸಿಕೊಳ್ಳೋಕೆ ಆಗೋದಿಲ್ಲವೋ ಹಾಗೆ ನಿಮ್ಮ ಪ್ರೀತಿಯಿಂದ ನಾನು ಬಿಡಿಸಿಕೊಳ್ಳೋಕೆ ಆಗೋದಿಲ್ಲ” ಎಂದು ಜಾನು ಪರೋಕ್ಷವಾಗಿ ಹೇಳಿದ್ದಾಳೆ. ಆಗ ಜಯಂತ್, “ಪ್ರೀತಿ ಮಾಡಿದೋರನ್ನು ಕಟ್ಟಿಹಾಕೋದು ತಪ್ಪಲ್ವಾ?” ಅಂತ ಕೇಳಿದ್ದಾನೆ.
ವಿಯೆಟ್ನಾಂನಲ್ಲಿ ಲಕ್ಷ್ಮೀ ನಿವಾಸ ಚೆಲುವೆ ಬೊಂಬಾಟ್ ಲುಕ್
ಜಾನು ಏನು ಹೇಳ್ತಾಳೆ?
ಆಗ ಜಾನು, “ನಿಮ್ಮ ಪ್ರೀತಿಯಲ್ಲಿ ಕುರುಡಿ ಆಗಿದ್ದೆ. ನೀವು ಕಟ್ಟಿಹಾಕಿದ್ದ ಪ್ರೀತಿಯಲ್ಲಿ ನಾನು ನರಳಾಡುತ್ತಿದ್ದೆ, ಇದು ನಿಮಗೆ ಅರ್ಥ ಆಗಲ್ವಾ? ಆದರೆ ಇದಕ್ಕೆಲ್ಲ ಅಂತ್ಯ ಇನ್ನೋದು ಇದ್ದೇ ಇರುತ್ತೆ ಅಲ್ವಾ?” ಎಂದು ಹೇಳಿದ್ದಾಳೆ. “ಪ್ರೀತಿ ಎನ್ನೋ ನೆಪದಲ್ಲಿ ನನ್ನ ಮದುವೆಯಾಗಿ ಜೀವನ ಹಾಳು ಮಾಡಿದ್ರಿ. ನನ್ನ ಅಜ್ಜಿಗೂ ಎಂಥ ಪರಿಸ್ಥಿತಿ ತಂದಿಟ್ರಿ. ನನ್ನ ವೆಂಕಿ ಅಣ್ಣನ ಜೀವನ ಮಾಡಿದ್ರಿ. ವೆಂಕಿ ಅಣ್ಣ ಹುಡುಕುತ್ತಿರೋ ಫ್ರೆಂಡ್ ನೀವೆ ಅಂತ ನನಗೆ ಯಾಕೆ ಹೇಳಿಲ್ಲ? ನನ್ನ ಅಣ್ಣ ಕಣ್ಣೀರಿಟ್ರೂ ನಿಮ್ಮ ಮನಸ್ಸು ಕರಗಿಲ್ಲ ಅಲ್ವಾ? ಅಣ್ಣನ ಕಣ್ಣೀರು ನಿಮ್ಮನ್ನು ಕರಗಿಸಿಲ್ಲ ಅಂದ್ರೆ ನಿಮ್ಮ ಮನಸ್ಸು ಕಲ್ಲುಬಂಡೆ. ನಿಮ್ಮ ಪ್ರೀತಿ, ಪ್ರೀತಿಯಲ್ಲ, ಅದು ಕ್ರೂರತೆ ಎನ್ನೋದು ಅರ್ಥ ಆಗೋಕೆ ಇಷ್ಟುದಿನ ಬೇಕಾಯ್ತು. ಇಷ್ಟೆಲ್ಲ ಮಾಡಿರೋ ನಿಮ್ಮನ್ನು ನಾನು ಸುಮ್ಮನೆ ಬಿಡಬೇಕಾ?” ಎಂದು ಹೇಳಿದ್ದಾಳೆ.
ಗೋಳಿಟ್ಟ ಜಾನು!
“ನಿಮ್ಮನ್ನು ಕೊಲ್ಲೋ ಸ್ಥಿತಿಗೆ ತಂದಿಟ್ಟಿದ್ದೀರಿ? ನನ್ನನ್ನು ಇಷ್ಟೊಂದು ಪ್ರೀತಿಸುವ ನಿಮ್ಮನ್ನು ನಾನು ಕೊಲ್ಲೋಕೆ ಆಗೋದಿಲ್ಲ. ನಿಮ್ಮನ್ನು ಹಾಗೆ ಬಿಟ್ಟರೆ ನನ್ನವರನ್ನು ನೀವು ಸುಮ್ಮನೆ ಬಿಡೋದಿಲ್ಲ. ನನ್ನ ನೆಮ್ಮದಿ, ಜೀವನ ಎಲ್ಲವನ್ನು ಹಾಳು ಮಾಡಿದ್ರಿ” ಅಂತ ಜಾನು ಗೋಗರೆದಿದ್ದಾಳೆ.
ಶ್ರೀಲಂಕಾದಲ್ಲಿನ ಲಕ್ಷ್ಮೀ ನಿವಾಸ ತಂಡದ ಮೋಜು ಮಸ್ತಿಯ ಫೋಟೋಗಳು
ಸಮುದ್ರಕ್ಕೆ ಹಾರಿದ ಜಾಹ್ನವಿ!
“ನೀವು ಮಾಡಿರೋ ಪಾಪ ಕರ್ಮಕ್ಕೆ ನೀವು ಒಂದೇ ಸಲ ಸಾಯಬಾರದು, ನರಳಿ ನರಳಿ ಸಾಯಬೇಕು. ನನಗೆ ಏನು ಕಷ್ಟ ಆಯ್ತು ಅಂತ ಪಾಲಕರಿಗೆ ಗೊತ್ತಾಗೋದು ಬೇಡ. ನನ್ನ ತಂದೆ-ತಾಯಿಗೆ ನನ್ನ ಕಷ್ಟ ಗೊತ್ತಾಗೋದು ಬೇಡ. ನನ್ನ ನೋವು ನನ್ನಲ್ಲೇ ಇರಲಿ. ನನ್ನ ಮನೆಯವರು ಚೆನ್ನಾಗಿರಲಿ” ಎಂದು ಮನಸ್ಸಿನಲ್ಲಿ ಅಂದುಕೊಂಡು ಜಾನು ಸಮುದ್ರಕ್ಕೆ ಹಾರಿದ್ದಾಳೆ. ಇದನ್ನು ಕಂಡು ಜಯಂತ್ ಕಣ್ಣೀರು ಹಾಕಿದ್ದಾನೆ.
ಜಯಂತ್ ಒಂಟಿಯಾಗಿ ಭಾರತಕ್ಕೆ ಮರಳಿದ್ದಾನೆ. ಕಾಲು ಜಾರಿ ಜಾಹ್ನವಿ ಸಮುದ್ರಕ್ಕೆ ಬಿದ್ದಿದ್ದಾಳೆ ಅಂತ ಅವನು ಎಲ್ಲರ ಮುಂದೆ ಹೇಳಿದ್ದಾನೆ. ಈ ಮಾತು ಕೇಳಿ ಲಕ್ಷ್ಮೀ ಮನೆಯವರು ಶಾಕ್ ಆಗಿದ್ದಾರೆ. ಈಗ ಮುಂದೆ ಏನಾಗುವುದು ಎಂದು ಕಾದು ನೋಡಬೇಕಿದೆ.
ಪಾತ್ರ ಬದಲಾಗ್ತಿದ್ಯಾ?
ಜಾಹ್ನವಿ ಪಾತ್ರ ಬದಲಾಗೋಕೆ ಈ ರೀತಿ ಮಾಡಲಾಗಿದ್ಯಾ? ಚಂದನಾ ಅನಂತಕೃಷ್ಣ ಬದಲು ಬೇರೆ ಯಾರಾದರೂ ಈ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರಾ? ಜಾನು ಪಾತ್ರ ಅಂತ್ಯ ಆಗೋಯ್ತಾ? ನಿಜಕ್ಕೂ ಜಾನು ಸಾಯ್ತಾಳಾ ಎನ್ನುವ ಪ್ರಶ್ನೆ ಶುರುವಾಗಿದೆ. ಒಟ್ಟಿನಲ್ಲಿ ಈ ಪಾತ್ರದ ಬಗ್ಗೆ ಸಾಕಷ್ಟು ಕುತೂಹಲ ಸೃಷ್ಟಿಯಾಗಿದೆ. ಮುಂದಿನ ದಿನಗಳಲ್ಲಿ ಏನಾಗಲಿದೆ ಎಂದು ಕಾದು ನೋಡಬೇಕಿದೆ.
ಕಥೆ ಏನು?
ಲಕ್ಷ್ಮೀ-ಶ್ರೀನಿವಾಸ್ ಅವರಿಗೆ ಐವರು ಮಕ್ಕಳು. ಅವರಲ್ಲಿ ಜಾನು ಕೂಡ ಓರ್ವಳು. ಜಾನು ಜಯಂತ್ ಎನ್ನುವವರನ್ನು ಮದುವೆಯಾಗಿದ್ದಾಳೆ. ಜಯಂತ್ ಪೊಸೆಸ್ಸಿವ್ ಗಂಡ. ಗಂಡನ ಪ್ರೀತಿ ಉಸಿರುಗಟ್ಟಿಸಿದ್ದಕ್ಕೆ ಜಾನು ಈಗ ಸಮುದ್ರಕ್ಕೆ ಹಾರಿದ್ದಾಳೆ.
ಪಾತ್ರಧಾರಿಗಳು
ಜಯಂತ್-ದೀಪಕ್ ಸುಬ್ರಹ್ಮಣ್ಯ
ಜಾಹ್ನವಿ- ಚಂದನಾ ಅನಂತಕೃಷ್ಣ