ಕೆಲವು ರಿಯಾಲಿಟಿ ಶೋಗಳಲ್ಲಿ ರಿಯಾಲಿಟಿ ಇರೋದಿಲ್ಲ ಎಂದು ಕೊರಿಯೋಗ್ರಾಫರ್ ಮಾಸ್ಟರ್ ಪವನ್ ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ರಿಯಾಲಿಟಿ ಶೋಗಳಲ್ಲಿ ಮಸಾಲೆ ಹಾಕಲಾಗುತ್ತದೆ, ಅಪ್ಪ-ಅಮ್ಮ ಇಲ್ಲದೋರನ್ನು ಅಥವಾ ಕಷ್ಟ ಏನಾದರೂ ಇದ್ದರೆ ಅದನ್ನೇ ಹೈಲೈಟ್ ಮಾಡಲಾಗುತ್ತದೆ ಎನ್ನುವ ಆರೋಪ ಇತ್ತು. ಈಗ ಕನ್ನಡದ ಸಾಕಷ್ಟು ಡ್ಯಾನ್ಸ್ ರಿಯಾಲಿಟಿ ಶೋ ಗೆದ್ದಿರುವ, ಸದ್ಯ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಶೋಗೆ ಕೊರಿಯೋಗ್ರಾಫರ್ ಆಗಿರೋ ಪವನ್ ಅವರು ಈ ಬಗ್ಗೆ ಮೌನ ಮುರಿದಿದ್ದಾರೆ. its majja kannada ಯುಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಅವರು ಈ ಮಾತು ಹೇಳಿದ್ದಾರೆ.
ಡ್ಯಾನ್ಸ್‌ನಲ್ಲೂ ಇದೆಲ್ಲ ಬೇಕಾ?
“ಕೊರೊನಾ ವೈರಸ್ ಬರೋ ಮೊದಲು ಕೆಲಸ ಇತ್ತು. ಸಿನಿಮಾ ಇಂಡಸ್ಟ್ರಿಯಲ್ಲಿದ್ದವರಿಗೆ ಕೆಲಸ ಇಲ್ಲದ ಹಾಗೆ ಆಗಿದೆ. ಟಿವಿಯಲ್ಲಿದ್ದವರಿಗೆ ಸ್ವಲ್ಪ ಕೆಲಸ ಇದೆ. ಕೆಲವೊಂದು ರಿಯಾಲಿಟಿ ಶೋಗಳಲ್ಲಿ ದುಡ್ಡಿರಬೇಕು, ಬ್ಯಾಕ್‌ಗ್ರೌಂಡ್ ಕಷ್ಟ ಇರಬೇಕು. ಅಪ್ಪ ಇಲ್ಲ, ಅಮ್ಮ ಇಲ್ಲ ಅಂತ ಕರುಣೆ ತೋರಿಸ್ತಾರೆ. ಇದನ್ನೇ ಜಾಸ್ತಿ ಹೈಲೈಟ್ ಮಾಡ್ತಾರೆ. ಪ್ರತಿಭೆ ಇದ್ದವರಿಗೆ ಅಲ್ಲಿ ಅವಕಾಶ ಇರೋದಿಲ್ಲ. ಸೆಲೆಬ್ರಿಟಿಯಾಗಿದ್ದಾಗಲೂ ಅವರಿಗೆ ಮನ್ನಣೆ ಹಾಕಲಾಗುತ್ತದೆ. ಡ್ಯಾನ್ಸ್‌ನಲ್ಲೂ ಇದೆಲ್ಲ ಬೇಕಾ ಎನ್ನೋ ಪ್ರಶ್ನೆ ಇದೆ” ಎಂದು ಪವನ್ ಹೇಳಿದ್ದಾರೆ.
ಪುನೀತ್ ರಾಜ್‌ಕುಮಾರ್ ಮಗಳಿಗೆ ಡ್ಯಾನ್ಸ್ ಹೇಳಿಕೊಟ್ಟ ಖ್ಯಾತ ರಿಯಾಲಿಟಿ ಶೋ ಸ್ಪರ್ಧಿ; ನಿಜಕ್ಕೂ ಎಲ್ಲರೂ ಶಾಕ್
ಪ್ರತಿಭೆ ಇದ್ರೆ ಚಿತ್ರರಂಗಕ್ಕೆ ಬನ್ನಿ!
“ಪ್ರತಿಭೆಗಳಿಗೆ ಸಹಾಯ ಆಗಲಿ ಅಂತ ಟ್ಯಾಲೆಂಟ್ ಗುರು ಎನ್ನೋ ಅಕಾಡೆಮಿ ಶುರು ಮಾಡಿದೆ. ಇಂದು ದುಡ್ಡು ಇದ್ದಾಗ ಎಲ್ಲರೂ ಬರ್ತಾರೆ, ದುಡ್ಡಿಲ್ಲ ಎಂದಾಗ ಯಾರೂ ಬರೋದಿಲ್ಲ. ರುದ್ರ ಮಾಸ್ಟರ್‌ಗೂ ನಾನು ಈ ಬಗ್ಗೆ ಹೇಳಿದ್ದೆ. ಕೆಲವೊಂದು ರಿಯಾಲಿಟಿ ಶೋಗಳು ದುಡ್ಡಿದ್ರೆ ಬನ್ನಿ ಅಂತ ಹೇಳುತ್ತವೆ, ಇನ್ನೂ ಕೆಲವು ಪ್ರತಿಭೆ ಇದ್ದರೆ ಸಾಕು ಅಂತ ಹೇಳುತ್ತವೆ. ಬೇರೆ ಭಾಷೆಯಲ್ಲಿ ಮಾಡಿದ ಕಾನ್ಸೆಪ್ಟ್ ಕಾಪಿ ಮಾಡಿ ಡ್ಯಾನ್ಸ್ ಮಾಡೋದು ಈಗ ಸಾಮಾನ್ಯವಾಗಿದೆ. ಆದರೆ ತಪ್ಪಾಗಲೀ, ಏನೇ ಆಗಲಿ ಆದರೆ ಸ್ವಂತದ್ದೇ ಇರಬೇಕು. ಪ್ರತಿಭೆ ಇದ್ದರೆ ಮಾತ್ರ ಚಿತ್ರರಂಗಕ್ಕೆ ಬನ್ನಿ” ಎಂದು ಪವನ್ ಹೇಳಿದ್ದಾರೆ.
ಪುನೀತ್ ರಾಜ್‌ಕುಮಾರ್ ಮಗಳಿಗೆ ಡ್ಯಾನ್ಸ್ ಹೇಳಿಕೊಟ್ಟ ಖ್ಯಾತ ರಿಯಾಲಿಟಿ ಶೋ ಸ್ಪರ್ಧಿ; ನಿಜಕ್ಕೂ ಎಲ್ಲರೂ ಶಾಕ್
ಸಿಕ್ಕಾಪಟ್ಟೆ ನೃತ್ಯ ನಿರ್ದೇಶನ ಮಾಡಿರೋ ಪವನ್
‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ರಿಯಾಲಿಟಿ ಶೋನಲ್ಲಿ ಸಾಕಷ್ಟು ಡ್ಯಾನ್ಸ್‌ಗೆ ಪವನ್ ಅವರು ನೃತ್ಯ ನಿರ್ದೇಶನ ಮಾಡಿದ್ದಾರೆ. ಈ ಡ್ಯಾನ್ಸ್‌ಗೆ ನಟಿ ರಕ್ಷಿತಾ ಪ್ರೇಮ್, ಶಿವರಾಜ್‌ಕುಮಾರ್, ವಿಜಯ್ ರಾಘವೇಂದ್ರ, ಚಿನ್ನಿ ಮಾಸ್ಟರ್ ಕೂಡ ಮೆಚ್ಚುಗೆ ಸೂಚಿಸಿದ್ದರು.ಕನ್ನಡದಲ್ಲಿ ಸಾಕಷ್ಟು ವಿಧ ವಿಧದ ರಿಯಾಲಿಟಿ ಶೋಗಳು ಪ್ರಸಾರ ಆಗುತ್ತಿವೆ.