ಸೀತಾರಾಮ: ಶ್ರೀರಾಮ್ ದೇಸಾಯಿ ಪಾತ್ರಕ್ಕೆ ಹೊಸ ನಟ, ಸಿಂಧು ರಾವ್ ರಿವೀಲ್

ಗಗನ್‌ ಚಿನ್ನಪ್ಪ, ವೈಷ್ಣವಿ ಗೌಡ ನಟನೆಯ ‘ಸೀತಾರಾಮ’ ಧಾರಾವಾಹಿಗೆ ಹೊಸ ಎಂಟ್ರಿಯಾಗಿದೆ. ಅವರಾರು? 

actress sindhu rao son enter to Seetha Rama serial

‘ಸೀತಾರಾಮ’ ಧಾರಾವಾಹಿಯಲ್ಲಿ ಸದ್ಯ ಶ್ರೀರಾಮ್‌ ದೇಸಾಯಿ ತಾಯಿ ಕುರಿತ ಕಥೆ ಪ್ರಸಾರ ಆಗುತ್ತಿದೆ. ಹೀಗಿರುವಾಗ ಹೊಸ ನಟರೋರ್ವರು ಈ ಧಾರಾವಾಹಿಗೆ ಎಂಟ್ರಿ ಕೊಟ್ಟಿದ್ದಾರೆ. ‘ಸೀತಾರಾಮ’ ಧಾರಾವಾಹಿ ನಟಿ ಸಿಂಧು ರಾವ್‌ ಅವರೇ ಸೋಶಿಯಲ್‌ ಮೀಡಿಯಾದಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾರೆ.

ಸಿಂಧು ರಾವ್‌ ಮಗನ ಎಂಟ್ರಿ!
‘ಸೀತಾರಾಮ’ ಧಾರಾವಾಹಿಯಲ್ಲಿ ಸದ್ಯ ಹಳೆಯ ದಿನಗಳನ್ನು ನೆನಪು ಹಾಕಲಾಗುತ್ತಿದೆ. ಶ್ರೀರಾಮ್‌ ತನ್ನ ತಾಯಿ ಜೊತೆಗೆ ಕಳೆದ ಕ್ಷಣಗಳನ್ನು ನೆನಪಿಸಿಕೊಳ್ಳುತ್ತಿದ್ದಾನೆ. ಹೀಗಾಗಿ ಪುಟ್ಟ ಶ್ರೀರಾಮ್‌ ದೇಸಾಯಿ ಆಗಮನವಾಗಿದೆ. ‘ಸೀತಾರಾಮ’ ಧಾರಾವಾಹಿಯಲ್ಲಿ ಶ್ರೀರಾಮ್‌ರ ಎರಡನೇ ಚಿಕ್ಕಮ್ಮ ಪಾತ್ರದಲ್ಲಿ ನಟಿಸುತ್ತಲಿರುವ ಸಿಂಧು ರಾವ್‌ ಅವರ ಪುಟಾಣಿ ಮಗ ಈ ಪಾತ್ರವನ್ನು ನಿರ್ವಹಣೆ ಮಾಡುತ್ತಿದ್ದಾರೆ. ನಟಿ ಸಿಂಧು ರಾವ್‌ ಅವರೇ ಸೋಶಿಯಲ್‌ ಮೀಡಿಯಾದಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. 

Latest Videos

ಸೀತಾರಾಮ ಶೂಟಿಂಗ್​ ವೇಳೆ ಸೆಟ್​ನಲ್ಲಿಯೇ ರೊಚ್ಚಿಗೆದ್ದ ಪ್ರಿಯಾ: ನಟಿಯರ ಗಲಾಟೆ ವಿಡಿಯೋ ವೈರಲ್

ಧಾರಾವಾಹಿ ಕಥೆ ಏನು?
ಶ್ರೀರಾಮ್‌ ದೇಸಾಯಿ ಆಗರ್ಭ ಶ್ರೀಮಂತ. ಇವನ ತಂದೆ-ತಾಯಿ ಪ್ರೀತಿಸಿ ಮದುವೆಯಾಗಿದ್ದರು. ಶ್ರೀರಾಮ್‌ ತಂದೆಯನ್ನು ಮದುವೆ ಆಗಬೇಕು ಅಂತ ಅವನ ಅತ್ತೆ ಮಗಳು ಭಾರ್ಗವಿ ಕಾಯುತ್ತಲಿದ್ದಳು. ಆದರೆ ಅದು ಸಾಧ್ಯವಾಗಲಿಲ್ಲ. ಹೀಗಾಗಿ ಅವಳು ಶ್ರೀರಾಮ್‌ ಚಿಕ್ಕಪ್ಪ ವಿಶ್ವನನ್ನು ಮದುವೆಯಾಗಿ ಆ ಮನೆಗೆ ಬಂದಳು. ನನಗೆ ಸಿಗಬೇಕಾಗಿದ್ದೆಲವೂ ಶ್ರೀರಾಮ್‌ ತಾಯಿ ವಾಣಿಗೆ ಸಿಕ್ಕಿತು ಅಂತ ಅವಳು ಸಿಟ್ಟಿನಲ್ಲಿ ಇಡೀ ಕುಟುಂಬದ ಖುಷಿಯನ್ನು ಹಾಳು ಮಾಡಲು ಹೊರಟಿದ್ದಾಳೆ. ವಾಣಿ ಸಾಯೋಕೆ ಭಾರ್ಗವಿಯೇ ಕಾರಣ. ಈ ವಿಷಯ ಸತ್ಯಜಿತ್‌ಗೆ ಬಿಟ್ಟು ಇನ್ನುಳಿದಂತೆ ಯಾರಿಗೂ ಗೊತ್ತಿಲ್ಲ.

ಶೀಘ್ರದಲ್ಲೇ ಸೀತಾರಾಮ ಸೀತೆ ಮದುವೆ? ಪ್ರಿಯಾ ಪ್ರಶ್ನೆಗೆ ಶೂಟಿಂಗ್​ ಸೆಟ್​ನಲ್ಲಿ ನಾಚಿ ನೀರಾದ ವೈಷ್ಣವಿ ಹೇಳಿದ್ದೇನು?

ಶ್ರೀರಾಮ್‌ ದೇಸಾಯಿ, ಸೀತಾ ಎನ್ನುವವಳನ್ನು ಪ್ರೀತಿಸಿ ಮದುವೆಯಾಗಿದ್ದಾನೆ. ಸೀತಾ ಸರೋಗಸಿ ಮೂಲಕ ಶ್ಯಾಮ್-ಶಾಲಿನಿ ಮಗುವಿಗೆ ತಾಯಿಯಾಗಿದ್ದಳು. ಆ ಮಗುವನ್ನು ಸಿಹಿ ಎಂದು ಹೆಸರಿಟ್ಟು ಅವಳೇ ಬೆಳೆಸಿದ್ದಳು. ಅದಾದ ನಂತರದಲ್ಲಿ ಶ್ಯಾಮ್-ಶಾಲಿನಿಯಿಂದ ಫೈಟ್‌ ಮಾಡಿ ಆ ಮಗುವನ್ನು ಪಡೆದುಕೊಂಡಿದ್ದಳು. ಎಲ್ಲವೂ ಚೆನ್ನಾಗಿ ಇರುವಾಗ ಸಿಹಿಯನ್ನು ಭಾರ್ಗವಿ ಕೊಲ್ಲುತ್ತಾಳೆ. ರಾಮ್‌ಗೆ ಸಿಹಿ ಕೊಂದೋರು ಯಾರು ಎನ್ನೋದು ಇನ್ನೂ ಗೊತ್ತಾಗಿಲ್ಲ. ಇನ್ನೊಂದು ಕಡೆ ಸೀತಾಳ ಮಾನಸಿಕ ಆರೋಗ್ಯ ಹಾಳು ಮಾಡಿ ಆಸ್ಪತ್ರೆಗೆ ಕಳಿಸಬೇಕು ಅಂತ ಭಾರ್ಗವಿ ಅಂದುಕೊಂಡಿದ್ದಳು. ಅದೂ ಕೂಡ ಈಗ ಸಾಧ್ಯ ಆಗಿಲ್ಲ.

ಇನ್ನೊಂದು ಕಡೆ ಸಿಹಿಯನ್ನು ಕಳೆದುಕೊಂಡ ಸೀತಾ ಹುಚ್ಚಿಯಂತಾಗಿದ್ದಳು. ಆಗ ರಾಮ್‌ಗೆ ಸಿಹಿ ಥರ ಇರೋ ಸುಬ್ಬಿ ಸಿಕ್ಕಿದ್ದಳು. ಸಿಹಿ ಬದುಕಿದ್ದಾಳೆ ಅಂತ ಸುಬ್ಬಿಯನ್ನು ರಾಮ್‌ ಮನೆಗೆ ಕರೆದುಕೊಂಡು ಬಂದಿದ್ದಾರೆ. ಸುಬ್ಬಿ ಸತ್ಯ ರಿವೀಲ್‌ ಮಾಡಬೇಕು ಅಂತ ಭಾರ್ಗವಿ ಒದ್ದಾಡುತ್ತಿದ್ದಾಳೆ. ಇನ್ನೊಂದು ಕಡೆ ಶ್ರೀರಾಮ್‌ ದೇಸಾಯಿ ತಾಯಿ ಹೇಗೆ ಸತ್ತರು ಎನ್ನೋದು ಕೂಡ ರಿವೀಲ್‌ ಆಗುವ ಸಾಧ್ಯತೆ ಇದೆ. ಮುಂದೆ ಏನಾಗುವುದು ಎಂದು ಕಾದು ನೋಡಬೇಕಾಗಿದೆ. 

ಸಿಹಿಯನ್ನು ಸಾಯಿಸಿದ್ದಕ್ಕೆ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸಿತಾರಾಮ ಸೀರಿಯಲ್ ಪ್ರೇಕ್ಷಕರು ಫುಲ್ ಗರಂ ಆಗಿದ್ದರು. ಇನ್ನು ಮುಂದೆ ಸೀರಿಯಲ್ ನೋಡೋಲ್ಲವೆಂದು ಬಾಯ್ಕಾಟ್ ಮಾಡುವವರಿದ್ದರು. ಆದರೆ, ಸಿಹಿಯನ್ನು ಸುಬ್ಬಿ ರೂಪದಲ್ಲಿ ತಂದು, ಪ್ರೇಕ್ಷಕರ ಕೋಪವನ್ನು ತಣ್ಣಗಾಗಿಸಲು ಸೀರಿಯಲ್ ತಂಡ ಯತ್ನಿಸುತ್ತಿದೆ. 

ಪಾತ್ರಧಾರಿಗಳು
ಶ್ರೀರಾಮ್‌ ದೇಸಾಯಿ ಪಾತ್ರದಲ್ಲಿ ನಟ ಗಗನ್‌ ಚಿನ್ನಪ್ಪ, ಸೀತಾ ಪಾತ್ರದಲ್ಲಿ ವೈಷ್ಣವಿ ಗೌಡ, ಸಿಹಿ ಪಾತ್ರದಲ್ಲಿ ರೀತು ಸಿಂಗ್‌, ಭಾರ್ಗವಿ ಪಾತ್ರದಲ್ಲಿ ಪೂಜಾ ಲೋಕೇಶ್‌ ಅವರು ನಟಿಸುತ್ತಿದ್ದಾರೆ. 

vuukle one pixel image
click me!