ಕನ್ನಡ ಕಿರುತೆರೆಯ ಪ್ರಸಿದ್ಧ ಧಾರಾವಾಹಿಗಳಲ್ಲಿ ಒಂದಾಗಿರುವ ಕನ್ನಡತಿ ಜನವರಿ ಅಂತ್ಯಕ್ಕೆ ಮುಕ್ತಾಯವಾಗುತ್ತಿದೆ.
ಕನ್ನಡ ಕಿರುತೆರೆ ಲೋಕದ ಪ್ರಸಿದ್ಧ ಧಾರಾವಾಹಿಗಳಲ್ಲಿ ಕನ್ನಡತಿ ಕೂಡ ಒಂದು. ಅಪ್ಪಟ ಕನ್ನಡ ಮಾತನಾಡುತ್ತಾ ಪ್ರೇಕ್ಷಕರಿಗೂ ಕನ್ನಡ ಕಲಿಸುತ್ತ ಮುನ್ನುಗ್ಗಿತ್ತಿದ್ದ ಕನ್ನಡತಿ ಧಾರಾವಾಹಿ ಸದ್ಯದಲ್ಲೇ ಪ್ರಸಾರ ನಿಲ್ಲಿಸಲಿದೆ. ಈಗಾಗಲೇ ಕನ್ನಡತಿ ಕೊನೆಯ ಹಂತಕ್ಕೆ ಬಂದಿದ್ದು ಕೆಲವೇ ದಿನಗಳಲ್ಲಿ ಮುಕ್ತಾಯವಾಗಲಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಕನ್ನಡತಿ ಮುಕ್ತಾಯ ಹಾಡುತ್ತಿದ್ದೆ ಎನ್ನುವ ಸುದ್ದಿ ಪ್ರೇಕ್ಷಕರು ಭಾರಿ ನಿರಾಸೆ ಮೂಡಿಸಿದೆ. ಆಸಕ್ತಿದಾಯಕ ಕಥಾಹಂದರ ಹೊಂದಿದ್ದ ಕನ್ನಡತಿ ಕಿರುತೆರೆ ಪ್ರೇಕ್ಷಕರನ್ನು ರಂಜಿಸುತ್ತಿತ್ತು. ಆದರೀಗ ಮುಕ್ತಾಯವಾಗುತ್ತಿದೆ. ಸದ್ಯ ಕನ್ನಡತಿ ತಂಡ ಕ್ಲೈಮ್ಯಾಕ್ಸ್ ಶೂಟಿಂಗ್ ಮಾಡುತ್ತಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಕನ್ನಡತಿ ಧಾರಾವಾಹಿ ಜನವರಿ ಅಂತ್ಯಕ್ಕೆ ತನ್ನ ಪಯಣವನ್ನು ಮುಗಿಸುತ್ತಿದೆ. ಕನ್ನಡತಿ ಧಾರಾವಾಹಿಯ ನಾಯಕ ಕಿರಣ್ ರಾಜ್ ಅದೇ ಅದೇ ಔಟ್ ಫಿಟ್‌ನಲ್ಲಿ ಅತ್ಯುತ್ತಮ ಪ್ರಯಾಣವನ್ನು ಪ್ರಾರಂಭಿಸಲಾಗಿತ್ತು ಮತ್ತು ಕೊನೆಗೊಳಿಸಲಾಗಿದೆ ಎಂದು ಬರೆದುಕೊಂಡಿದ್ದಾರೆ. ರಂಜನಿ ಕೂಡ , ಎಲ್ಲಾ ಸಂತೋಷದ ಸಂಗತಿಗಳು ಕೊನೆಗೊಳ್ಳಬೇಕು ಎನ್ನುವ ವಿಡಿಯೋ ಹಂಚಿಕೊಂಡಿದ್ದಾರೆ. ಕನ್ನಡತಿ ಧಾರಾವಾಹಿ ಮುಕ್ತಾಯದಿಂದ ಪ್ರೇಕ್ಷಕರು ಹರ್ಷ ಮತ್ತು ಭುವಿಯನ್ನು ತುಂಬಾ ಮಿಸ್ ಮಾಡಿಕೊಳ್ಳುವುದಂತು ಖಂಡಿತ ನಿಜ.
ಕನ್ನಡತಿ ಧಾರಾವಾಹಿಯಲ್ಲಿ ನಾಯಕಿಯಾಗಿ ರಂಜನಿ ರಾಘವನ್ ಭುನೇಶ್ವರಿ ಪಾತ್ರದಲ್ಲಿ ಕಾಣಿಸಿಕಂಡಿದ್ದರು. ಹೆಮ್ಮೆಯ ಕನ್ನಡತಿ ಮತ್ತು ಕನ್ನಡ ಸಾಹಿತ್ಯದ ಕಟ್ಟಾ ಅಭಿಮಾನಿ. ಅಪ್ಪಟ ಕನ್ನಡ ಮಾತನಾಡುತ್ತಾ ತಪ್ಪಾಗಿ ಮಾತನಾಡಿದವರನ್ನೂ ತಿದ್ದುವ ಯುವತಿ. ನಾಯಕ ಹರ್ಷ ಯುವ ಉದ್ಯಮಿ. ತನ್ನ ಜೀವನದಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ಸಮಯ ಮತ್ತು ಹಣವನ್ನು ಗೌರವಿಸುವ ವ್ಯಕ್ತಿ. ಮಾಡ್ರನ್ ಹರ್ಷನಿಗೆ ಸಂಪ್ರದಾಯಸ್ಥ ಭುವಿ ಮೇಲೆ ಹೇಗೆ ಲವ್ ಆಗುತ್ತೆ ಇಬ್ಬರ ಮದುವೆ ಹೇಗೆ ಸಂಭವಿಸುತ್ತೆ ಎನ್ನುವುದು ಒಲ್ ಲೈನ್ ಸ್ಟೋರಿ ಆಗಿದೆ.
ಕನ್ನಡತಿ ಸೀರಿಯಲ್: ಶಿಕ್ಷಣದ ಬಗ್ಗೆ ಅರಿವು ಮೂಡಿಸೋ ಭುವಿ ಮಾತು ಸಿಕ್ಕಾಪಟ್ಟೆ ವೈರಲ್!
ಸದ್ಯ ಧಾರಾವಾಹಿಯಲ್ಲಿ ಹರ್ಷ ಮತ್ತು ಭುವಿಯ ಮದುವೆಯಾಗಿದೆ. ಹರ್ಷನ ತಾಯಿ ಅಮ್ಮಮ್ಮ ನಿಧನ ಹೊಂದಿದ್ದು ಅಮ್ಮಮ್ಮನ ಜಾಗಕ್ಕೆ ಭುವಿ ಎಂಟ್ರಿ ಕೊಟ್ಟಿದ್ದಾಳೆ. ಅಮ್ಮಮ್ಮನ ಅಧಿಕಾರ ವಹಿಸಿಕೊಂಡಿರುವ ಭುವಿ ಹೇಗೆ ಮನೆ, ಆಫೀಸ್ ಎಲ್ಲವನ್ನೂ ನಿಭಾಯಿಸುತ್ತಾಳೆ ಎನ್ನುವುದು ಸದ್ಯ ಪ್ರಸಾರವಾಗುತ್ತಿದೆ. ಜನವರಿ ಅಂತ್ಯಕ್ಕೆ ಎಂದರೆ ಕೆಲವೇ ದಿನಗಳಲ್ಲಿ ಕನ್ನಡತಿ ಮುಗಿಯಲಿದೆ.
ತಂದೆ ಸಪೋರ್ಟ್ ಮಾಡಲಿಲ್ಲ; ತಾಯಿ ಸಹಾಯ ನೆನೆದು ಕಣ್ಣೀರಿಟ್ಟ 'ರಾಮಚಾರಿ' ಚಾರು
ಈ ಪ್ರಸಿದ್ಧ ಧಾರಾವಾಹಿಯಲ್ಲಿ ಕಿರಣ್ ರಾಜ್ ಮತ್ತು ರಂಜಿನಿ ರಾಘವನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರೆ ಸಾರಾ ಅಣ್ಣಯ್ಯ ನಟಿಸಿದ್ದಾರೆ. ಮೂವರಿಗೂ ಈ ಧಾರಾವಾಹಿ ಪುನರಾಗಮನ ಆಗಿತ್ತು. ಮೂವರ ಪಾತ್ರ ಕೂಡ ಅಭಿಮಾನಿಗಳ ಹೃದಯ ಗೆದ್ದಿದೆ. ಇನ್ನೇನು ಕೆಲವೇ ದಿನಗಳಲ್ಲಿ ಮುಕ್ತಾಯ ಹಾಡಿದ ಬಳಿಕ ಮತ್ಯಾವ ಧಾರಾವಾಹಿ ಮೂಲಕ ಅಭಿಮಾನಿಗಳ ಮುಂದೆ ಬರ್ತಾರೆ ಎನ್ನುವ ಕುತೂಹಲ ಕೂಡ ಪ್ರೇಕ್ಷಕರಿಗೆ ಹೆಚ್ಚಾಗಿದೆ.