ನಾನಿನ್ನೂ ಅಪ್ಪ ಆಗ್ತಿಲ್ಲ ಕಣ್ರೋ, ಮಗು ಮಾಡ್ಕೊಳಕ್ಕೆ ರೆಡಿಯೇ ಆಗಿಲ್ಲ: ಚಂದನ್ ಶೆಟ್ಟಿ ಕ್ಲಾರಿಟಿ

Published : Jan 10, 2023, 09:38 AM ISTUpdated : Jan 10, 2023, 10:21 AM IST
ನಾನಿನ್ನೂ ಅಪ್ಪ ಆಗ್ತಿಲ್ಲ ಕಣ್ರೋ, ಮಗು ಮಾಡ್ಕೊಳಕ್ಕೆ ರೆಡಿಯೇ ಆಗಿಲ್ಲ: ಚಂದನ್ ಶೆಟ್ಟಿ ಕ್ಲಾರಿಟಿ

ಸಾರಾಂಶ

ರೀಲ್ಸ್‌ ಮೂಲಕ ತಮಾಷೆ ಮಾಡಲು ಹೋಗಿ ಸಂಕಷ್ಟದಲ್ಲಿ ಸಿಲುಕಿಕೊಂಡ ನಿವಿ- ಚಂದು. ಅಪ್ಪ ಆಗಿಲ್ಲ ಕಣ್ರೋ ಬಿಡ್ರೋ.....  

ಕನ್ನಡ ಕಿರುತೆರೆ ಸೆಲೆಬ್ರಿಟಿ ಕಪಲ್ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಸಾಮಾಜಿಕ ಜಾಲತಾಣದಲ್ಲಿ ತಮಾಷೆ ಮಾಡಲು ಹೋಗಿ ತೊಂದರೆಯಲ್ಲಿ ಸಿಲುಕಿಕೊಂಡಿದ್ದಾರೆ. ರ್ಯಾಪ್ ಚಂದನ್ ಮತ್ತು ಬಾರ್ಬಿ ಡಾಲಿ ನಿವೇದಿತಾ ಗೌಡ ಯಾವಾಗ ಮಗು ಮಾಡಿಕೊಳ್ಳುತ್ತಾರೆ ಅನ್ನೋದು ಇದೇ ರಾಜ್ಯದ ಪ್ರಶ್ನೆಯಾಗಿದೆ. ಹೀಗಿರುವ ಫಾದರ್‌ ಅನ್ನೋ ಇಂಗ್ಲಿಷ್‌ ತಮಾಷೆ ವಿಡಿಯೋ ಮಾಡಿ ಅಪ್ಲೋಡ್ ಮಾಡಿದ್ದರೆ ಸುಮ್ಮನೆ ಬಿಡುತ್ತಾರಾ? ಖಂಡಿತಾ ಇಲ್ಲ.... ವಿಡಿಯೋ ಅಪ್ಲೋಡ್ ಮಾಡಿದ ಕೆಲವೇ ನಿಮಿಷಗಳಲ್ಲಿ ಕಾಮೆಂಟ್ಸ್‌ನಲ್ಲಿ ಚಂದನ್ ಕ್ಲಾರಿಟಿ ಕೊಟ್ಟಿದ್ದಾರೆ. 

'ಸ್ನೇಹಿತರೆ ನಾನು ತಂದೆ ಆಗುವ ವಿಚಾರವನ್ನು ನಿವಿನೇ ರಿವೀಲ್ ಮಾಡಬೇಕು. ಹಾಸ್ಯ ಮಾಡೋ ಉದ್ದೇಶಕ್ಕೆ ಮಾಡಿರುವ ವಿಡಿಯೋ ಇದು. ಶುಭಾಶಯಗಳನ್ನು ತಿಳಿಸುವುದಕ್ಕೆ ತುಂಬಾ ಜನ ಕರೆ ಮಾಡುತ್ತಿದ್ದಾರೆ. ಮಗು ಮಾಡಿಕೊಳ್ಳಲು ನಾವು ಇನ್ನೂ ರೆಡಿಯಾಗಿಲ್ಲ. ನಿಜಕ್ಕೂ ತಂದೆ-ತಾಯಿ ಆದಾಗ ನಾವೇ ಅನೌನ್ಸ್‌ ಮಾಡುತ್ತೀವಿ. ಏನೇ ಹೇಳಿ ಇಂಗ್ಲಿಷ್ ಭಾಷೆ ತುಂಬಾನೇ ಫನ್ನಿ. Fat + Her = Father, not Fat her' ಎಂದು ಚಂದನ್ ಬರೆದುಕೊಂಡಿದ್ದಾರೆ. 

ವಿಡಿಯೋದಲ್ಲಿ ಏನಿದೆ? 

ಸಾಮಾನ್ಯವಾಗಿ ನಿವೇದಿತಾ ತಮಾಷೆ ವಿಡಿಯೋಗಳನ್ನು ಮಾಡಿ ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡುತ್ತಾರೆ ಹೀಗಾಗಿ ಈ ಸಲ ಚಂದನ್ ನಿವಿಗೆ ಫೂಲ್ ಮಾಡಿದ್ದಾರೆ. ಅದುವೇ ಫಾದರ್‌ ಅನ್ನೋ ಪದ ಹಿಡಿದುಕೊಂಡು. ಮೊದಲು Fat ಅಂದ್ರೆ ಏನು ಎಂದು ಅಕ್ಷರ ಬಿಡಿಸಿ ಚಂದನ್ ಹೇಳುತ್ತಾರೆ ಆಗ ನಿವಿ ಫ್ಯಾಟ್ ಎನ್ನುತ್ತಾರೆ ಮತ್ತೊಮ್ಮೆ Her ಅನ್ನೋ ಪದದ ಅಕ್ಷರಗಳನ್ನು ಬಿಡಿಸಿ ಕೇಳುತ್ತಾರೆ ಆಗ ಹರ್‌ ಎನ್ನುತ್ತಾರೆ. ಎರಡನ್ನೂ ಹೊಟ್ಟೆಗೆ ಸೇರಿಸಿದ್ದರೆ ಯಾವ ಪದ ಆಗುತ್ತೆ ಎಂದು ಕೇಳಿದ್ದಾರೆ ಅದಕ್ಕೆ ನಿವಿ ಫಾದರ್ ಎಂದು ಹೇಳುವುದನ್ನು ಬಿಟ್ಟು ಫ್ಯಾಟ್‌ ಹರ್‌ ಎನ್ನುತ್ತಾರೆ. ಇದು ತಪ್ಪು ತಪ್ಪು ಫ್ಯಾಟ್‌ ಹರ್‌ ಅಲ್ಲ ಫಾದರ್‌ ಎಂದು ಚಂದನ್ ಸರಿ ಮಾಡುತ್ತಾರೆ. ಈ ವಿಡಿಯೋ ಎಲ್ಲೆಡೆ ಸಖತ್ ವೈರಲ್ ಆಗಿದಕ್ಕೆ ಚಂದನ್ ಕ್ಲಾರಿಟಿ ಕೊಟ್ಟಿದ್ದಾರೆ. 

ಪ್ರಪೋಸಲ್‌ ಕೂಡ ವೈರಲ್: 

ನಿವೇದಿತಾ ಮತ್ತು ಚಂದನ್ ಏನೇ ಮಾಡಿದ್ದರೂ ಕಾಂಟ್ರವರ್ಸಿ ಅಥವಾ ಸುದ್ದಿ ಮಾಡದೆ ಇರುವ ದಿನವಿಲ್ಲ. ಬಿಗ್ ಬಾಸ್‌ ಸೀಸನ್ 5ರಿಂದ ಹೊರ ಬಂದ ನಂತರ ಇಬ್ಬರು ಸ್ನೇಹಿತರಾಗಿದ್ದರು. 2019ರಲ್ಲಿ ನಡೆದ ಯುವ ದಸರ ಕಾರ್ಯಕ್ರಮದಲ್ಲಿ ಚಂದನ್ ರೊಮ್ಯಾಂಟಿಕ್ ಸಾಂಗ್ ಹಾಡಿದ ನಂತರ ಮಂಡಿಯೂರಿ ಪ್ರಪೋಸ್ ಮಾಡುತ್ತಾರೆ. ಆರಂಭದಲ್ಲಿ ತಮಾಷೆ ಎಂದು ತಿಳಿದುಕೊಂಡು ನಿವಿಗೆ ಅದು ನಿಜ ಎಂದು ತಿಳಿಯುತ್ತದೆ. ವೇದಿಕೆ ಎದುರು ಕುಳಿತುಕೊಂಡಿದ್ದ ತಂದೆ ತಾಯಿ ಮುಖವನ್ನು ನೋಡಿ ನಿವಿ ಪ್ರೀತಿ ಒಪ್ಪಿಕೊಳ್ಳುತ್ತಾರೆ. 

ಮಕ್ಳು ಮಾಡ್ಕೊಂಡ್ರೆ ಅವ್ರೆ ನಂಗೆ ಊಟ ಮಾಡಿಸಬೇಕು; ತಾಯಿತನದ ಬಗ್ಗೆ ನಿವೇದಿತಾ ಗೌಡ ಶಾಕಿಂಗ್ ಹೇಳಿಕೆ

ಅಲ್ಲಿ ಶುರುವಾಯ್ತು ಮತ್ತೊಂದು ಸಮಸ್ಯೆ, ನಾಡಹಬ್ಬದ ಕಾರ್ಯಕ್ರಮದಲ್ಲಿ ಲಕ್ಷಾಂತರ ಜನರ ಭಾಗಿಯಾಗಿರುತ್ತಾರೆ ಅವರ ಮುಂದೆ ಇವರ ಪುಂಡಾಟಿಕೆ ಬೇಕಾ ಎಂದು ಅನೇಕರ ಆರೋಪ ಮಾಡಿದ್ದರು,ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಚಾಮುಂಡೇಶ್ವತಿ ತಾಯಿಯ ಸನ್ನಿಧಿಯಲ್ಲಿ ಈ ರೀತಿಯ ಎಂಗೇಜ್ ಮೆಂಟ್ ಸರಿಯಲ್ಲ, ಇನ್ನು ಆರು ತಿಂಗಳಲ್ಲಿ ಅವರಿಬ್ಬರಿಗೂ ಆ ತಾಯಿ ಶಿಕ್ಷೆ ನೀಡುತ್ತಾಳೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು ಅಲ್ಲಿದ್ದ ಜನರು. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Amruthadhaare: ಅಜ್ಜಿ-ಮೊಮ್ಮಕ್ಕಳ ಮಿಲನದ ಅಪೂರ್ವ ಮಿಲನ; ವೀಕ್ಷಕರು ನಿರೀಕ್ಷಿಸುತ್ತಿದ್ದ ಘಳಿಗೆ ಬಂತು, ಆದ್ರೆ...
ಬಿಗ್ ಬಾಸ್ 19 ವಿನ್ನರ್ ಹೆಸರು ಆನ್‌ಲೈನ್‌ನಲ್ಲಿ ಲೀಕ್? ಹರಿದಾಡುತ್ತಿದೆ ಸ್ಕ್ರೀನ್‌ಶಾಟ್