Niveditha Gowda; ಗುಡ್ ನ್ಯೂಸ್ ನೀಡಿದ್ರಾ ಚಂದನ್ ಶೆಟ್ಟಿ, ನಿವೇದಿತಾ ಗೌಡ?

Published : Jan 09, 2023, 07:03 PM ISTUpdated : Jan 09, 2023, 10:05 PM IST
Niveditha Gowda; ಗುಡ್ ನ್ಯೂಸ್ ನೀಡಿದ್ರಾ ಚಂದನ್ ಶೆಟ್ಟಿ, ನಿವೇದಿತಾ ಗೌಡ?

ಸಾರಾಂಶ

ಗಾಯಕ, ಸಂಗೀತ ನಿರ್ದೇಶಕ ಚಂದನ್​ ಶೆಟ್ಟಿ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಕೊನೆಗೂ ಗುಡ್ ನ್ಯೂಸ್ ನೀಡಿದ್ದಾರೆ. ನಿವೇದಿತಾ ಮತ್ತು ಚಂದನ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಗಾಯಕ, ಸಂಗೀತ ನಿರ್ದೇಶಕ ಚಂದನ್​ ಶೆಟ್ಟಿ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಕೊನೆಗೂ ಗುಡ್ ನ್ಯೂಸ್ ನೀಡಿದ್ದಾರೆ. ನಿವೇದಿತಾ ಮತ್ತು ಚಂದನ್ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಬಹಿರಂಗ ಪಡಿಸಿದ್ದಾರೆ. ವಿಶೇಷ ವಿಡಿಯೋ ಮೂಲಕ ಚಂದನ್ ಮತ್ತು ನಿವಿ ದಂಪತಿ ಸುಳಿವು ನೀಡಿದ್ದಾರೆ. ನಿವೇದಿತಾ ಗೌಡ ಯಾವಾಗ ತಾಯಿ ಆಗುವುದು ಎನ್ನುವ ಪ್ರಶ್ನೆ ಯಾವಾಗಲೂ ಎದುರಾಗುತ್ತಿತ್ತು. ಕೊನೆಗೂ ನಿವಿ ಸಿಹಿ ಸುದ್ದಿ ನೀಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿರುವ ವಿಡಿಯೋದಲ್ಲಿ Fat + Her ಅಂದರೆ ಏನು ಎಂದು ನಿವೇದಿತಾ ಗೌಡಗೆ ಚಂದನ್​ ಶೆಟ್ಟಿ ಕೇಳಿದ್ದಾರೆ. ಅದಕ್ಕೆ ಉತ್ತರ 'ಫಾದರ್​'. ಹಾಗಾಗಿ ಚಂದನ್​ ಶೆಟ್ಟಿ ತಂದೆ ಆಗುತ್ತಿದ್ದಾರೆ ಎಂದು ಫ್ಯಾನ್ಸ್​ ಕಾಮೆಂಟ್ ಮಾಡುತ್ತಿದ್ದಾರೆ.  ಇಬ್ಬರ ವಿಡಿಯೋ ನೋಡಿ ಎಲ್ಲರೂ ಅಭಿನಂದನೆ ತಿಳಿಸುತ್ತಿ​ದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಅಂದಹಾಗೆ ನಿವೇದಿತಾ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. ಸದಾ ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಸದಾ ರೀಲ್ಸ್ ಮಾಡುವ ನಿವಿ ಆಗಾಗ ಪತಿ ಚಂದನ್ ಜೊತೆಯೂ ವಿಡಿಯೋದಲ್ಲಿ ಕಾಣಿಸಿಕೊಳ್ಳುತ್ತಾರೆ. ಅಂದಹಾಗೆ ನಿವೇದಿತಾ ಯೂಟ್ಯೂಬ್ ವಾಹಿನಿ ಕೂಡ ಹೊಂದಿದ್ದಾರೆ. ಅನೇಕ ಫಾಲೋವರ್ಸ್ ಹೊಂದಿರುವ ನಿವೇದಿತಾ ಅವರ ಹೊಸ ವಿಡಿಯೋ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. 

ಬಿರಿಯಾನಿಗೆ ಕಾಫಿ ಮಿಕ್ಸ್‌, ರಸ್ತೆಯಲ್ಲಿ 500 ರೂಪಾಯಿಗೆ ಜಗಳ: ನಿವೇದಿತಾ ಗೌಡ ವಿಡಿಯೋ ವೈರಲ್

ಅಂದಹಾಗೆ ನಿವೇದಿತಾ ಮತ್ತು ಚಂದನ್ ಇಬ್ಬರೂ‘ಬಿಗ್​ ಬಾಸ್​ ಕನ್ನಡ ಸೀಸನ್​ 5’ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದರು. ಆಗ ಇಬ್ಬರೂ ಮೊದಲ ಬಾರಿಗೆ ಪರಿಚಿತರಾಗಿದ್ದರು. ನಂತರ ಇಬ್ಬರ ನಡುವೆ ಪ್ರೀತಿ ಆಗಿ 2020ರ ಫೆಬ್ರವರಿಯಲ್ಲಿ ಹಸೆಮಣೆ ಏರಿದರು. ಮೂರು ವರ್ಷಗಳ ಬಳಿಕ ಈ ಜೋಡಿ ಗುಡ್​ ನ್ಯೂಸ್​ ನೀಡಿದೆ.

ಹೊಸ ವರ್ಷಕ್ಕೆ ಗೊಂಬೆ ಸರ್ಪ್ರೈಸ್: 'ಸೂತ್ರಧಾರಿ' ಹಾಡಿಗೆ ಸೊಂಟ ಬಳುಕಿಸಿದ ನಿವೇದಿತಾ

ಬಿಗ್​ ಬಾಸ್​ ಶೋನಲ್ಲಿ ನಿವೇದಿತಾ ವಿಶೇಷ ಶೈಲಿಯ ಮಾತಿನ ಮೂಲಕವೇ ಎಲ್ಲರ ಗಮನ ಸೆಳೆದಿದ್ದರು. ಬಿಗ್ ಬಾಸ್ ಬಳಿಕವೂ ಅನೇಕ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ.  ಬಿಗ್ ಬಾಸ್ ಬಳಿಕ ನಿವೇದಿತಾಗೆ‘ಗಿಚ್ಚಿ ಗಿಲಿ ಗಿಲಿ’ ಶೋ ಮತ್ತಷ್ಟು ಖ್ಯಾತಿ ತಂದುಕೊಟ್ಟಿತು. ಬಳಿಕ ಕಿರುತೆರೆಯ ಅನೇಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ನಿವೇದಿತಾ ಗೌಡ ಪ್ರೇಕ್ಷಕರ ಮನೆಮಾತಾಗಿದ್ದಾರೆ. ಚಂದನ್ ಶೆಟ್ಟಿ ಕೂಡ ಬೇಡಿಕೆಯ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಸದ್ಯ ತಾಯಿಯಾಗುತ್ತಿರುವ ಸಂಭ್ರಮದಲ್ಲಿರುವ ನಿವೇದಿತಾಗೆ ಅಭಿನಂದನೆಗಳ ಸುರಿಮಳೆಯೇ ಬರುತ್ತಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಸಮಾನ್ಯಳಲ್ಲಿ ಅಸಮಾನ್ಯ ಈ ಪುಟಾಣಿ: Naa Ninna Bidalaare ಹಿತಾ ನಿಬ್ಬೆರಗಾಗುವ ಫೋಟೋಶೂಟ್​!
Bigg Boss ಅಭಿಷೇಕ್​ಗೆ ದೊಡ್ಮನೆಯಿಂದ ಸಿಕ್ಕಿರೋ ಸಂಭಾವನೆ ಎಷ್ಟು? ಫ್ಯಾನ್ಸ್​ ನಿರೀಕ್ಷೆ ಸುಳ್ಳಾಗೋಯ್ತು!